ಕೊನೆಗೂ ಹಸೆಮಣೆ ಏರೋಕೆ ಸಜ್ಜಾದ Shamita Shetty, ಶಿಲ್ಪಾ ಶೆಟ್ಟಿ ತಂಗಿ ವರಿಸೋ ವರನ್ಯಾರು ಗೊತ್ತಾ?

Shamita Shetty Marriage: ಶಮಿತಾ ಶೆಟ್ಟಿ ಜನಪ್ರಿಯ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿ. ಬಹುತಾರಾಗಣವುಳ್ಳ ಬ್ಲಾಕ್ ಬಸ್ಟರ್ ಚಿತ್ರವಾಗಿದ್ದ ಮೊಹಬ್ಬತೇ ಚಿತ್ರದ ಮೂಲಕ ಅವರು ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರ 2000ರಲ್ಲಿ ತೆರೆಕಂಡಿತ್ತು. ಈ ಪ್ರಥಮ ಚಿತ್ರದಲ್ಲೇ ಅವರು ಐಐಎಫ್‍ಎನ ಅತ್ಯುತ್ತಮ ಫಿಮೇಲ್ ಡೆಬ್ಯೂ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದರು.

ಶಮಿತಾ ಶೆಟ್ಟಿ-ರಾಕೇಶ್ ಬಾಪಟ್​

ಶಮಿತಾ ಶೆಟ್ಟಿ-ರಾಕೇಶ್ ಬಾಪಟ್​

  • Share this:
ಬಿ-ಟೌನ್ (B Town) ಅಂಗಳದಲ್ಲಿ ಜನಪ್ರಿಯ ಕಲಾವಿದರು (Actors) ಸೀನಿದರೂ ಸುದ್ದಿಯಾಗುವ ಸಂದರ್ಭದಲ್ಲಿ ಮದುವೆಯ (Wedding) ಹಂತದ ಮಾತುಕತೆಗಳೇನಾದರೂ ನಡೆದರೆ ಸುಮ್ಮನಿರಲಾದೀತೆ..? ಹೀಗೊಂದು ಬಿಸಿಬಿಸಿಯಾದ ಮದುವೆಯ ಬಗ್ಗೆ ಗುಸುಗುಸು ಪ್ರಾರಂಭವಾಗಿದೆ. ಈ ಬಾರಿ ಶಮಿತಾ ಶೆಟ್ಟಿ (Shamita Shetty) ಹಾಗೂ ಅವರ ಬಾಯ್ ಫ್ರೆಂಡ್ (Boyfriend)  ಮದುವೆಯಾಗಲಿದ್ದಾರೆಯೆ ಎಂಬ ಪ್ರಶ್ನೆ ಮೂಡಿದೆ.ಜನಪ್ರಿಯ ಟಿವಿ ಸರಣಿಯಾದ ಬಿಗ್ ಬಾಸ್ 15ರ (Bigboos) ಕ್ವೀನ್ ಆಗಿರುವ ಶಮಿತಾ ಶೆಟ್ಟಿ ಟಿವಿ ಸರಣಿಯ ನಿಮಿತ್ತ ದೀರ್ಘ ಕಾಲದಿಂದ ದೂರವಾಗಿದ್ದ ತಮ್ಮ ಬಾಯ್ ಫ್ರೆಂಡ್ ಅನ್ನು ಅಂತಿಮವಾಗಿ ಸೇರಿಕೊಂಡಿದ್ದಾರೆ. ಇತ್ತೀಚೆಗೆ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು ಅದರಲ್ಲಿ ಅವರು ದೀರ್ಘ ಕಾಲದ ಬಳಿಕ ಮತ್ತೆ ಸಂಬಂಧದಲ್ಲಿ ಮರಳಿ ಬಂದಿದ್ದಕ್ಕೆ ಅವರು ಅತ್ಯಂತ ಸಂತಸವಾಗಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ, ತಾವು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಒಂಟಿಯಾಗಿದ್ದು ತದನಂತರ ಬಂದೊದಗಿದ ಕೋವಿಡ್ ಸಂದರ್ಭದಲ್ಲಿ ಸಂಬಂಧದ ಮಹತ್ವದ ಬಗ್ಗೆ ಅರಿವು ಮೂಡಿರುವುದಾಗಿ ಹೇಳಿಕೊಂಡಿದ್ದಾರೆ.

ಇನ್ನು ಮದುವೆಯ ವಿಷಯದ ಬಗ್ಗೆ ಕೇಳಿದಾಗ ಅವರು,ಸಧ್ಯದ ರಾಕೇಶ್​ ಜೊತೆಗೆಇನ ಸಂಬಂಧ ಭವಿಷ್ಯದಲ್ಲಿ ಯಾವ ರೀತಿ ಬದಲಾಗಲಿದೆ ಅಥವಾ ಮುಂದುವರೆಯಲಿದೆ ಎಂಬುದನ್ನ ನೋಡಿ, ಖಂಡಿತವಾಗಿಯೂ ಮದುವೆಯಾಗಿ ಸೆಟಲ್​  ಆಗಬೇಕು ಎಂದಿರುವೆ ಎಂದಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ನಾನು ಒಬ್ಬಂಟಿಗಳಾಗಿದ್ದೆ ಹಾಗೂ ಒಂಟಿತನವು ನನ್ನನ್ನು ಆವರಿಸಿತ್ತು. ನಾನು ದೀರ್ಘ ಕಾಲದಿಂದ ಒಂಟಿಯಾಗಿರುವೆ ಹಾಗೂ ನಾನು ನನ್ನದೇ ಆದ ಸಿದ್ಧಾಂತಗಳ ಮೇಲೆ ಬದುಕಲು ಇಷ್ಟಪಡುವೆ. ಆದರೆ ನನ್ನ ಸಂಗಾತಿಯನ್ನು ಖಂಡಿತವಾಗಿಯೂ ಈ ಸಮಯದಲ್ಲಿ ಮಿಸ್ ಮಾಡಿಕೊಂಡಿದ್ದೇನೆ" ಎಂದು ಈ ಕುರಿತು ಮಾಧ್ಯಮವೊಂದಕ್ಕೆ ಅವರು  ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ನ್ಯೂ ಗರ್ಲ್​ಫ್ರೆಂಡ್​ ಜೊತೆ ಕೈ ಕೈ ಹಿಡಿದು ಸುತ್ತಾಡ್ತಿರೋ ಹೃತಿಕ್​​.. ಕ್ಯಾಮರಾ ಕಂಡು ಹಿಂಗಾ ಮಾಡೋದು?

ನಂತರ, "ಸದ್ಯ ನನಗೆ ಒಬ್ಬ ಜೊತೆಗಾರನಿರುವುದು ನನಗೆ ತುಂಬ ಸಂತಸ ನೀಡಿದೆ. ನೋಡೋಣ ಇದು ಹೇಗೆ ಮುಂದುವರೆಯುತ್ತದೆ ಎಂದು. ಆದರೆ, ಖಂಡಿತ ನಾನು ಸೆಟಲ್ ಆಗಿ ಕೆಲಸ ಮಾಡಲು ಹಾಗೂ ನನ್ನ ಮಕ್ಕಳನ್ನು ಪಡೆಯಲು ಇಷ್ಟಪಡುತ್ತೇನೆ. ನಾನು ಮಾಡಬೇಕಾದ ಕೆಲಸ ಇನ್ನೂ ಇದೆ" ಎಂದು ಹೇಳಿದ್ದಾರೆ.

ತನ್ನ ಜೊತೆಗಾರನಾಗಿರುವ ರಾಕೇಶ್ ಕುರಿತು ಅವರು  ಮಾತನಾಡಿದ್ದು. ಅವರಿಬ್ಬರೂ ಭೇಟಿಯಾಗಿದ್ದು ಬಿಗ್ ಬಾಸ್ ಒಟಿಟಿಯ ಗೇಮ್ ಶೋ ಕಾರ್ಯಕ್ರಮದ ಮೂಲಕ, ಹಾಗಾಗಿ ವಾಸ್ತವಿಕ ನೆಲೆಗಟ್ಟಿನಲ್ಲಿ ರಾಕೇಶ್‌ನನ್ನು ಇನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ ಹಾಗೂ ಅವರು ರಾಕೇಶ್ ಅವರೊಂದಿಗೆ ಭವಿಷ್ಯದಲ್ಲಿ ಉತ್ತಮ ಸಂಬಂಧದ ಆಶಾಭಾವನೆಯನ್ನೂ ವ್ಯಕ್ತಪಡಿಸಿದ್ದಾರೆ.

ಕರಣ್ ಜೋಹರ್ ಅವರು ನಿರೂಪಕರಾಗಿದ್ದ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮದಲ್ಲಿ ಶಮಿತಾ ಅವರು ರಾಕೇಶ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಇಬ್ಬರಲ್ಲೂ ಪ್ರೀತಿ ಉಂಟಾಗಿ ಇಂದಿಗೂ ಆ ಪ್ರೀತಿ ಗಟ್ಟಿಯಾಗಿ ಮುಂದುವರೆದಿದೆ. ಬಿಗ್ ಬಾಸ್ 15 ಫೈನಲ್ ಶೋನಲ್ಲಿ ರಾಕೇಶ್ ಅವರು ಶಮಿತಾ ಅವರಿಗೆ ಪ್ರೋತ್ಸಾಹ ನೀಡಲು ಬಂದಿದ್ದರು. ಫೈನಲ್ ಶೋನಲ್ಲಿ ಶಮಿತಾ ಶೆಟ್ಟಿ ಹಾಗೂ ರಾಕೇಶ್ ಇಬ್ಬರೂ ಜೊತೆಗೂಡಿ ರೋಮ್ಯಾಂಟಿಕ್ ಗೀತೆಯೊಂದಕ್ಕೆ ಹೆಜ್ಜೆ ಹಾಕಿದ್ದರು.

ಶಮಿತಾ ಶೆಟ್ಟಿ ಜನಪ್ರಿಯ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಸಹೋದರಿ. ಬಹುತಾರಾಗಣವುಳ್ಳ ಬ್ಲಾಕ್ ಬಸ್ಟರ್ ಚಿತ್ರವಾಗಿದ್ದ ಮೊಹಬ್ಬತೇ ಚಿತ್ರದ ಮೂಲಕ ಅವರು ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರ 2000ರಲ್ಲಿ ತೆರೆಕಂಡಿತ್ತು. ಈ ಪ್ರಥಮ ಚಿತ್ರದಲ್ಲೇ ಅವರು ಐಐಎಫ್‍ಎನ ಅತ್ಯುತ್ತಮ ಫಿಮೇಲ್ ಡೆಬ್ಯೂ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದರು.

ಇದನ್ನೂ ಓದಿ: ಡ್ರೆಸ್​ ಯಾವುದಾದ್ರೇನು, ಡಿಪ್ಪಿ ತೊಟ್ರೆ ಅದಕ್ಕೂ ಒಂದು ಕಳೆ ಅಲ್ವಾ? ದೀಪಿಕಾ ಸಖತ್ ಹಾಟ್​​ ಮಗಾ!

ತದನಂತರ ಅವರು ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅಂತಿಮವಾಗಿ ಅವರು ಖತರೋಂಕೆ ಖಿಲಾಡಿ, ಬಿಗ್ ಬಾಸ್ 15, ಬಿಗ್ ಬಾಸ್ ಒಟಿಟಿಗಳಂತಹ ಕೆಲವು ರಿಯಾಲಿಟಿ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು .
Published by:Sandhya M
First published: