ಕುಟುಂಬಕ್ಕಾಗಿ ಗ್ಲಾಮರ್​ ತೊರೆದಿದ್ದ ಸಮಂತಾ ಈಗ ಮತ್ತೆ ಹಾಟ್​ ಸೀನ್​ಗಳಿಗೆ ರೆಡಿ? ಇಲ್ಲಿದೆ ಉತ್ತರ

ಇನ್​ಸ್ಟಾಗ್ರಾಂನಲ್ಲಿ ಹಾಕುತ್ತಿರುವ ಫೋಟೋಗಳನ್ನು ನೋಡಿದ ಅನೇಕರು ಸಮಂತಾ ಮತ್ತೆ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ. ಕೆಲ ನಿರ್ದೇಶಕರು ಕೂಡ ಈಗ ಸಮಂತಾಗೆ ಗ್ಲಾಮ್​ ಪಾತ್ರ ನೀಡುವ ಆಲೋಚನೆಯಲ್ಲಿದ್ದಾರಂತೆ!

Rajesh Duggumane | news18
Updated:March 1, 2019, 4:09 PM IST
ಕುಟುಂಬಕ್ಕಾಗಿ ಗ್ಲಾಮರ್​ ತೊರೆದಿದ್ದ ಸಮಂತಾ ಈಗ ಮತ್ತೆ ಹಾಟ್​ ಸೀನ್​ಗಳಿಗೆ ರೆಡಿ? ಇಲ್ಲಿದೆ ಉತ್ತರ
ಸಮಂತಾ ಅಕ್ಕಿನೇನಿ
  • News18
  • Last Updated: March 1, 2019, 4:09 PM IST
  • Share this:
ನಟಿ ಸಮಂತಾ ಅಕ್ಕಿನೇನಿ 2017ರಲ್ಲಿ ನಾಗ ಚೈತನ್ಯ ಅವರನ್ನು ವರಿಸಿದ್ದರು. ಇದಾದ ನಂತರ ಸಮಂತಾ ಚಿತ್ರರಂಗದಿಂದ ಅತರ ಕಾಯ್ದುಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಮೂಲಕ ಈ ವಿಚಾರವನ್ನು ಸುಳ್ಳು ಎಂಬುದನ್ನು ಸಾಬೀತು ಮಾಡಿದರು ಸಮಂತಾ. ಮದುವೆಯಾದ ನಂತರ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿರಬಹುದು. ಆದರೆ, ಯಾವ ಚಿತ್ರಗಳಲ್ಲೂ ಮೊದಲಿನಷ್ಟು ಗ್ಲಾಮರಸ್​​ ಆಗಿ ಕಾಣಿಸಿಕೊಂಡಿರಲಿಲ್ಲ. ಈಗ ಸಮಂತಾ ಮತ್ತೆ ಈ ರೀತಿ ಪಾತ್ರಗಳನ್ನು ಮಾಡಲು ಸಿದ್ಧರಾಗಿದ್ದಾರಂತೆ! ಹೀಗೊಂದು ವದಂತಿ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಷ್ಟಕ್ಕೂ, ಈ ವಿಚಾರ ಚರ್ಚೆಗೆ ಬರಲು ಒಂದು ಕಾರಣವಿದೆ. ಇತ್ತೀಚೆಗೆ ಸಮಂತಾ ಕೆಲ ಫೋಟೋಶೂಟ್​ನಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ವಿಶೇಷತೆ ಏನಿದೆ ಎಂದು ನೀವು ಪ್ರಶ್ನಿಸಬಹದು. ಅದಕ್ಕೆ ಇಲ್ಲಿದೆ ಉತ್ತರ. ಸಮಂತಾ ಇಷ್ಟು ದಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಫೋಟೋಗಳನ್ನು ಪೋಸ್ಟ್​ ಮಾಡುತ್ತಿದ್ದರು. ಆದರೆ, ಈಗ ಅವರು ನಡೆಸಿರುವ ಫೋಟೋಶೂಟ್​ಗಳು ತುಂಬಾ ಹಾಟ್​ ಆಗಿದೆ. ಇದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ವಿವಾಹದ ನಂತರ ಸಮಂತಾ ಯಾವುದೇ ಹಾಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅಂಥ ಆಫರ್​ಗಳು ಬಂದಿದ್ದರೂ, ಅದನ್ನು ಅವರು ರಿಜೆಕ್ಟ್​ ಮಾಡಿದ ಉದಾಹರಣೆಗಳೂ ಇವೆ. ‘ರಂಗಸ್ಥಲಂ’ ಚಿತ್ರದಲ್ಲಿ ಸಮಂತಾ ಲಿಪ್​ಲಾಕ್ ಮಾಡಿದ್ದ ದೃಶ್ಯ ತುಂಬಾನೇ ಸುದ್ದಿಯಾಗಿತ್ತು. ಸ್ವತಃ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸಮಂತಾ, ಕ್ಯಾಮರಾ ಟೆಕ್ನಿಕ್ ಉಪಯೋಗಿಸಿ ಆ ರೀತಿ ಕಾಣುವಂತೆ ಮಾಡಲಾಗಿತ್ತು ಎಂದಿದ್ದರು.

ಇದನ್ನೂ ಓದಿ: ಸಮಂತಾ ವಿಷಯದಲ್ಲಿ 'ಯೂ ಟರ್ನ್'​ ಹೊಡೆದ ನಾಗ ಚೈತನ್ಯ..!

ಇನ್​ಸ್ಟಾಗ್ರಾಂನಲ್ಲಿ ಹಾಕುತ್ತಿರುವ ಫೋಟೋಗಳನ್ನು ನೋಡಿದ ಅನೇಕರು ಸಮಂತಾ ಮತ್ತೆ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ. ಕೆಲ ನಿರ್ದೇಶಕರು ಕೂಡ ಈಗ ಸಮಂತಾಗೆ ಗ್ಲಾಮ್​ ಪಾತ್ರ ನೀಡುವ ಆಲೋಚನೆಯಲ್ಲಿದ್ದಾರಂತೆ! ಸಮಂತಾ ಈ ಆಫರ್​ಗಳನ್ನು ಒಪ್ಪಿಕೊಳ್ಳುತ್ತಾರಾ ಅಥವಾ ತಿರಸ್ಕರಿಸುತ್ತಾರೆ ಎಂಬುದಕ್ಕೆ ಸಮಯವೇ ಉತ್ತರಿಸಬೇಕು.

ಸಮಂತಾ ನಟನೆಯ ‘ಮಜಿಲಿ’ ಹಾಗೂ ‘ಸೂಪರ್​ ಡಿಲಕ್ಸ್’​ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ‘ಮಜಿಲಿ’ ಚಿತ್ರದಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ‘ಓ ಬೇಬಿ ಎಂಥ ಸಖತ್​ ಉನ್ನಾವೆ’ ಹಾಗೂ ತಮಿಳಿನ ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ.

ಇದನ್ನೂ ಓದಿ: ಹಾಟ್​ ಜೋಡಿ ಸಮಂತಾ-ನಾಗಚೈತನ್ಯ ಕ್ರೇಜಿ​ ಫೋಟೋಶೂಟ್​ನ ಚಿತ್ರಗಳು..!
First published:March 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ