Salman Khan: ಈ ನಟಿಯಿಂದಲೇ ಇನ್ನೂ ಸಲ್ಮಾನ್ ಖಾನ್ ಮದುವೆ ಆಗಿಲ್ವಂತೆ, ಯಾರು ಆ ನಟಿ..?

Salman Khan Marriage: ನಾನು ಮದುವೆ ಆಗದೆ ಇರೋದಕ್ಕೆ ಕಾರಣ ರೇಖಾ ಅಂತ ಹೇಳಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಬಾಲ್ಯದಿಂದಲೂ ರೇಖಾ ಅವರನ್ನ ಮದುವೆಯಾಗುವ ಆಸೆ ಇತ್ತಂತೆ. ಈ ಬಗ್ಗೆ ತಮ್ಮ ಗೆಳೆಯರ ಬಳಿ ಹಲವು ಬಾರಿ ಸಲ್ಮಾನ್ ಖಾನ್ ಹೇಳಿಕೊಂಡಿದ್ರಂತೆ. ಅಲ್ಲದೆ ರೇಖಾರಿಂದಾಗಿಯೇ ನಾನಿನ್ನು ಮದುವೆಯಾಗದೆ ಒಂಟಿಯಾಗಿದ್ದೇನೆ ಅಂತ ಸಲ್ಮಾನ್ ಹೇಳಿದ್ದಾರೆ

ಸಲ್ಮಾನ್ ಖಾನ್

ಸಲ್ಮಾನ್ ಖಾನ್

 • Share this:
  ಬಾಲಿವುಡ್ ನಲ್ಲಿ (Bollywood) ಸಾಕಷ್ಟು ಕುತೂಹಲ ಮೂಡಿಸಿರೋ ಪ್ರಶ್ನೆಗಳಲ್ಲಿ (Question) ಒಂದು ಅಂದ್ರೆ ಅದು ಸಲ್ಮಾನ್ ಖಾನ್ (Salman khan) ಮದುವೆ (Marriage) ಯಾವಾಗ ಅನ್ನೋದು. ಅದ್ರಲ್ಲೂ ಸಲ್ಮಾನ್ ಖಾನ್ ಅಭಿಮಾನಿಗಳು ಸಲ್ಮಾನ್ ಖಾನ್ ಯಾವಾಗ ಮದುವೆಯಾಗಿ, ತಮ್ಮ ಹೆಂಡತಿಯನ್ನ ನಮಗೆ ಪರಿಚಯ ಮಾಡ್ತಾರೆ ಅಂತ ಸದಾ ಕುತೂಹಲದಿಂದ ಕಾಯ್ತಾನೆ ಇದ್ದಾರೆ. ಮೊನ್ನೆ ಮೊನ್ನೆ 56ನೇ ವರ್ಷದ ಹುಟ್ಟು ಹಬ್ಬ(Birthday) ಆಚರಣೆ ಮಾಡಿಕೊಂಡಿರೋ ಸಲ್ಮಾನ್ ಖಾನ್ ಹೆಸರು ಯಾವುದಾದರೂ ನಟಿ ಮಣಿಯರೊಂದಿಗೆ (Actress) ಥಳುಕು ಹಾಕಿಕೊಂಡ್ರೆ ಸಾಕು ಸಲ್ಮಾನ್ ಇನ್ನೇನು ಮದುವೆ ಆಗೇ ಬಿಟ್ರು ಅಂತ ಅವರ ಅಭಿಮಾನಿಗಳು ಅಂದುಕೊಳ್ಳುತ್ತಾರೆ.. ಆದ್ರೆ ಇದುವರೆಗೂ ಮಾತ್ರ ಸಲ್ಮಾನ್ ಮದುವೆ ಯಾವಾಗ ಅನ್ನೋ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿಲ್ಲ.. ಆದ್ರೆ ಈಗ ಸ್ವತಃ ಸಲ್ಮಾನ್ ಖಾನ್ ನಾನಿನ್ನು ಯಾಕೆ ಮದುವೆ ಆಗಿಲ್ಲ.. ನಾನು ಸಿಂಗಲ್ ಆಗಿ ಇರೋದಕ್ಕೆ ಕಾರಣ ಯಾರು ಅನ್ನೋದನ್ನ ಬಹಿರಂಗಪಡಿಸಿದ್ದಾರೆ.

  ಸಲ್ಲು ಮದುವೆಯಾಗದಿರಲು ನಟಿ ರೇಖಾ ಕಾರಣವಂತೆ

  2014ರಲ್ಲಿ ಬಿಗ್ ಬಾಸ್ ಸೆಟ್ ನಲ್ಲಿ ನಟಿ ರೇಖಾ ಸೂಪರ್ ನಾನಿ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ರು.. ಈ ವೇಳೆ ಸಲ್ಮಾನ್ ಖಾನ್ ಮದುವೆ ಯಾಕೆ ಆಗಿಲ್ಲ.. ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆ ಬಗ್ಗೆ ಮಾತನಾಡಿರೋ ಸಲ್ಮಾನ್, ನಾನು ಮದುವೆ ಆಗದೆ ಇರೋದಕ್ಕೆ ಕಾರಣ ರೇಖಾ ಅಂತ ಹೇಳಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಬಾಲ್ಯದಿಂದಲೂ ರೇಖಾ ಅವರನ್ನ ಮದುವೆಯಾಗುವ ಆಸೆ ಇತ್ತಂತೆ. ಈ ಬಗ್ಗೆ ತಮ್ಮ ಗೆಳೆಯರ ಬಳಿ ಹಲವು ಬಾರಿ ಸಲ್ಮಾನ್ ಖಾನ್ ಹೇಳಿಕೊಂಡಿದ್ರಂತೆ. ಅಲ್ಲದೆ ರೇಖಾರಿಂದಾಗಿಯೇ ನಾನಿನ್ನು ಮದುವೆಯಾಗದೆ ಒಂಟಿಯಾಗಿದ್ದೇನೆ ಅಂತ ಸಲ್ಮಾನ್ ಹೇಳಿದ್ದಾರೆ.

  ಇದನ್ನೂ ಓದಿ:  ಕಿಸ್ಸಿಂಗ್​ ಫೋಟೋ ಬಗ್ಗೆ ಮನವಿ ಮಾಡಿದ ನಟಿ.. ಪ್ಲೀಸ್​ ಪೋಸ್ಟ್​​ ಮಾಡ್ಬೇಡಿ ಅಂದಿದ್ಯಾಕೆ ಜಾಕಲಿನ್​?

  ರೇಖಾಗಾಗಿ ಯೋಗ ಕ್ಲಾಸ್ ಗೆ ಸಲ್ಮಾನ್

  ಇನ್ನೂ ರೇಖಾ ಸಹ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ, ಆ ದಿನಗಳಲ್ಲಿ ರೇಖಾ ಮತ್ತು ಸಲ್ಮಾನ್ ಅಕ್ಕಪಕ್ಕದ ಮನೆಯವರು. ರೇಖಾ ಮಾರ್ನಿಂಗ್ ವಾಕ್ ಹೋಗುವುದನ್ನು ನೋಡಲು ಸಲ್ಮಾನ್ ಬೆಳಗ್ಗೆ 5.30ಕ್ಕೆ ಎದ್ದು ಹೋಗುತ್ತಿದ್ದರಂತೆ.  ಯೋಗ ತರಗತಿಗೂ ಸೇರಿಕೊಂಡಿದ್ದರಂತೆ ಸಲ್ಮಾನ್ ಖಾನ್.

  ಬಾಲಿವುಡ್ ನ ಹಲವು ನಟಿಯರ ಜೊತೆ ಸಲ್ಲು ಹೆಸರು

  ಇನ್ನೂ ಬಾಲಿವುಡ್ ನ ಸಾಕಷ್ಟು ನಟಿಯರ ಜೊತೆಗೆ ಸಲ್ಮಾನ್ ಹೆಸರು ಥಳುಕು ಹಾಕಿಕೊಂಡಿತ್ತು. ಅನೇಕ ನಟಿಯರ ಜೊತೆಯಲ್ಲಿ ಸಲ್ಮಾನ್ ಪ್ರೀತಿಯಲ್ಲಿಯೂ ಕೂಡ ಬಿದ್ದಿದ್ರು.. ಅಲ್ಲದೆ 1994ರಲ್ಲಿ ನಟಿ ಸಂಗೀತಾ ಬಿಜಲಾನಿ ಜತೆಗೆ ವೈವಾಹಿಕ ಜೀವನಕ್ಕೆ ಕಾಲಿಡೋದಕ್ಕೆ ಸಲ್ಮಾನ್ ಖಾನ್ ಎಲ್ಲಾ ಸಿದ್ಧತೆಗಳನ್ನ ನಡೆಸಿದ್ರಂತೆ. ಆದ್ರೆ ಸಂಗೀತಾ ಮತ್ತೊಬ್ಬರ ಜತೆಗೆ ಸಂಬಂಧ ಹೊಂದಿದ ಕಾರಣ ಮದುವೆಗೆ ಕೆಲವೇ ದಿನಗಳು ಇದ್ದಾಗ ಸಲ್ಮಾನ್ ಖಾನ್ ಆ ಮದುವೆಯನ್ನ ರದ್ದು ಮಾಡಿದ್ರಂತೆ..

  ಇನ್ನೂ ಇದಾದ ಬಳಿಕ ಸಲ್ಮಾನ್ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ರು.. ಐಶ್ವರ್ಯಾ ಅವರನ್ನ ಹುಚ್ಚನಂತೆ ಪ್ರೀತಿ ಮಾಡಿ ಆರಾಧಿಸುತ್ತಿದ್ದ ಸಲ್ಮಾನ್, ತಮ್ಮ ನಡೆಯಿಂದ ಐಶ್ವರ್ಯಾ ರೈ ಅವರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡಿದ್ರಂತೆ. ಹೀಗಾಗಿ ಐಶ್ವರ್ಯಾ ಸಲ್ಮಾನ್ ಖಾನ್ ಗೆ ಗುಡ್ ಬೈ ಹೇಳಿ, ಅಭಿಷೇಕ್ ಬಚ್ಚನ್ ಅವರನ್ನ ಮದುವೆಯಾಗಿ ಆರಾಧ್ಯಳ ತಾಯಿಯಾಗಿದ್ದಾರೆ.

  ಐಶ್ವರ್ಯಾ ಬಳಿಕ ಕತ್ರಿನಾ ಕೈಫ್ ಜೊತೆಗೂ ಸಲ್ಲುಗೆ ಪ್ರೀತಿ ಚಿಗುರಿತ್ತು ಎಂಬ ಮಾತಿದೆ. ಆದರೆ ಅವರಿಬ್ಬರ ಪ್ರೇಮ್ ಕಹಾನಿ ಕೂಡ ಹೆಚ್ಚು ದಿನ ಬಾಳಿಕೆ ಬರಲಿಲ್ಲ. ಸಲ್ಲು ಹಾಗೂ ಕ್ಯಾಟ್ ನಡುವೆ ರಣಬೀರ್ ಕಪೂರ್ ಎಂಟ್ರಿಯಾದ ಕಾರಣ , ಕತ್ರೀನಾ ಜೊತೆಗಿನ ಸಲ್ಲು ಸಂಬಂಧ ಮುರಿದು ಬಿತ್ತು ಎನ್ನಲಾಗುತ್ತಿದೆ. ಸದ್ಯ ಕತ್ರೀನಾ- ವಿಕ್ಕಿ ಕೌಶಲ್ ಜೊತೆಗೆ ಮದುವೆ ಆಗಿದ್ದಾರೆ. ಇದರ ನಡುವೆ ಸಲ್ಮಾನ್ ಲೂಲಿಯಾ ಅನ್ನೋ ನಟಿ ಕಂ ಮಾಡೆಲ್ ಜೊತೆಗೆ ಲಿವಿಂಗ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಅನ್ನೋ ಮಾತುಗಳು ಬಾಲಿವುಡ್ ಅಂಗಳದಲ್ಲಿದೆ.

  ಇದನ್ನೂ ಓದಿ: ಊಫ್​​... ಇಷ್ಟು ಹಾಟ್​ ಫೋಟೋ ನೋಡಿದ್ರೆ ಅಷ್ಟೇ... ದಿಶಾ ಸಾಕು ಈ ಆಟ ಅಂತಿದ್ದಾರೆ ಫ್ಯಾನ್ಸ್​!

  ಸಲ್ಮಾನ್ ಮುಂದಿನ ಚಿತ್ರಗಳು

  ಸಲ್ಮಾನ್ ಖಾನ್ ಅವರ ಕೆಲಸದ ಬಗ್ಗೆ ಹೇಳುವುದಾದರೆ,  ಅವರು ಪೂಜಾ ಹೆಗ್ಡೆ ಅವರೊಂದಿಗೆ 'ಕಭಿ ಈದ್ ಕಭಿ ದೀಪಾವಳಿ' ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರೊಂದಿಗೆ 'ಕಿಕ್ 2' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟೇ ಅಲ್ಲ, ಸಲ್ಮಾನ್ ಖಾನ್ ಅಮೀರ್ ಖಾನ್ ಅವರ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರದಲ್ಲಿಯೂ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಖಾನ್ ಸದ್ಯ 'ಟೈಗರ್ 3' ಚಿತ್ರೀಕರಣದಲ್ಲಿದ್ದು, ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದೆ.
  Published by:ranjumbkgowda1 ranjumbkgowda1
  First published: