• Home
  • »
  • News
  • »
  • entertainment
  • »
  • Rhea Chakraborty: ಮತ್ತೆ ಪ್ರೇಮ ಪಾಶದಲ್ಲಿ ಸಿಲುಕಿದ ಸುಶಾಂತ್ ಪ್ರೇಯಸಿ ರಿಯಾ; ಯಾರು ಈ ಪ್ರಿಯಕರ?

Rhea Chakraborty: ಮತ್ತೆ ಪ್ರೇಮ ಪಾಶದಲ್ಲಿ ಸಿಲುಕಿದ ಸುಶಾಂತ್ ಪ್ರೇಯಸಿ ರಿಯಾ; ಯಾರು ಈ ಪ್ರಿಯಕರ?

ಸುಶಾಂತ್ ಜೊತೆ ರಿಯಾ ಚಕ್ರವರ್ತಿ

ಸುಶಾಂತ್ ಜೊತೆ ರಿಯಾ ಚಕ್ರವರ್ತಿ

ರಿಯಾ ಚಕ್ರವರ್ತಿ ಈಗ ಇನ್ನೊಬ್ಬರನ್ನು ಪ್ರೀತಿಸುತ್ತಿದ್ದಾರೆ ಅಂತ ಗುಸುಗುಸು ಮಾತುಗಳು ಹರಿದಾಡುತ್ತಿವೆ ಎಂದು ಸುದ್ದಿ ಮಾಧ್ಯಮ ವರದಿ ಮಾಡಿದೆ.

  • Share this:

ಬಾಲಿವುಡ್ (Bollywood Actor) ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರನ್ನು ಅಭಿಮಾನಿಗಳು ಇವತ್ತಿಗೂ ನೆನಪಿಸಿಕೊಳ್ಳುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಸುಶಾಂತ್ ಸಾವಿನ (Sushant Death) ನಂತರದಲ್ಲಿ ಒಂದು ಹೆಸರು ತುಂಬಾನೇ ಟಿವಿಯಲ್ಲಿ ನೋಡಿದ್ದು ಎಂದರೆ ಅದು ನಟಿ ರಿಯಾ ಚಕ್ರವರ್ತಿ(Rhea Chakraborty) ಅವರದ್ದು ಅಂತಾನೆ ಹೇಳಬಹುದು. ಅರೇ.. ಇವರ ಬಗ್ಗೆ ಈಗೇಕೆ ಮಾತು ಅಂತೀರಾ? ವಿಷಯ ಏನಪ್ಪಾ ಅಂದ್ರೆ ಈ ರಿಯಾ ಚಕ್ರವರ್ತಿ ಮತ್ತು ಬಂಟಿ ಸಜ್ದೇಹ್ (Bunty Sajdeh) ಇಬ್ಬರು ಡೇಟಿಂಗ್ (Dating) ಮಾಡುತ್ತಿದ್ದಾರೆ ಅನ್ನೋ ಗುಸುಗುಸು ಈಗ ಎಲ್ಲೆಡೆ ಹರಿದಾಡುತ್ತಿದೆ ಅಂತ ಹೇಳಬಹುದು.


ದಿವಂಗತ ನಟ ಸುಶಾಂತ್ ಅವರ ಸಾವಿನ ನಂತರದ ಕೆಲವು ವರ್ಷಗಳು ನಟಿ ರಿಯಾ ಚಕ್ರವರ್ತಿಗೆ ತುಂಬಾನೇ ಕಷ್ಟವಾಗಿದ್ದವು ಎಂದು ನಟಿ ಟ್ವೀಟ್ ನಲ್ಲಿ ಹಿಂದೊಮ್ಮೆ ಬಹಿರಂಗಪಡಿಸಿದ್ದರು.


ಎಸ್ಎಸ್ಆರ್ ಅವರ ಫಾಲೋವರ್ ಮತ್ತು ಕುಟುಂಬದ ಸದಸ್ಯರು ವಿವಿಧ ರೀತಿಯ ಆರೋಪಗಳನ್ನು ಮಾಡಿದರು ಮತ್ತು ದೂರುಗಳನ್ನು ಸಹ ನೀಡಿದರು.


ಜೈಲುವಾಸ, ಕೈ ತಪ್ಪಿದ ಸಿನಿಮಾ ಆಫರ್​ಗಳು


ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಸೇರಿದಂತೆ ಹಲವಾರು ಅಧಿಕಾರಿಗಳು ಈ ನಟಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ರಿಯಾ ವಾರಗಟ್ಟಲೇ ಜೈಲಿನಲ್ಲಿ ಕಳೆಯಬೇಕಾಗಿ ಬಂದದ್ದು ಮಾತ್ರವಲ್ಲದೆ, ಹಲವಾರು ಯೋಜನೆಗಳನ್ನು ಕೈಬಿಡಬೇಕಾಯಿತು.


Is Rhea Chakraborty dating Bunty Sajdeh stg mrq
ರಿಯಾ ಮತ್ತು ಸುಶಾಂತ್


ರಿಯಾ ಚಕ್ರವರ್ತಿ ಈಗ ಇನ್ನೊಬ್ಬರನ್ನು ಪ್ರೀತಿಸುತ್ತಿದ್ದಾರೆ ಅಂತ ಗುಸುಗುಸು ಮಾತುಗಳು ಹರಿದಾಡುತ್ತಿವೆ ಎಂದು ಸುದ್ದಿ ಮಾಧ್ಯಮ ವರದಿ ಮಾಡಿದೆ. ತನ್ನ ಪ್ರಿಯಕರ, ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ನಂತರ 2020 ರಿಂದ ವಿವಾದದಲ್ಲಿ ಸಿಲುಕಿರುವ ನಟಿ, ಪ್ರಸ್ತುತ ಬಂಟಿ ಸಜ್ದೇಹ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮೂಲಗಳು ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿವೆ.


ಕೆಲವು ವರ್ಷಗಳಿಂದ ನಟಿ ರಿಯಾಗೆ ಬಂಟಿ ಗೊತ್ತಂತೆ!


ಕೆಲವು ವರ್ಷಗಳ ಹಿಂದೆ, ಈ ನಟಿ ರಿಯಾ ಅವರು ಸಜ್ದೇಹ್ ಅವರ ಟ್ಯಾಲೆಂಟ್ ಏಜೆನ್ಸಿಯಲ್ಲಿ ಒಬ್ಬ ಕ್ಲೈಂಟ್ ಆಗಿ ಭೇಟಿ ನೀಡಿದ್ದರಂತೆ ಮತ್ತು ಮೂಲಗಳ ಪ್ರಕಾರ ಈ ಇಬ್ಬರೂ ಕೆಲವು ಸಮಯದಿಂದ ಪರಸ್ಪರ ಗೊತ್ತಿರುವವರೇ ಆಗಿದ್ದಾರೆ. ಆದಾಗ್ಯೂ, ಅವರು ಇತ್ತೀಚೆಗೆ ಮಾತ್ರ ಡೇಟಿಂಗ್ ಮಾಡಲು ಪ್ರಾರಂಭಿಸಿದರು, ಬಹುಶಃ ಈ ವರ್ಷದ ಆರಂಭದಲ್ಲಿ ಶುರುವಾಗಿರಬಹುದು ಅಂತ ಮೂಲಗಳು ತಿಳಿಸಿವೆ.


ಇದನ್ನೂ ಓದಿ: Sidharth Malhotra and Kiara Advani: ರೀಲ್​ನಲ್ಲಿ ಒಂದಾಗಲಿಲ್ಲ, ರಿಯಲ್​ನಲ್ಲಿ ಒಂದಾಗ್ತಿದ್ದಾರೆ ಈ ಜೋಡಿ


"ಅವರನ್ನು ಒಟ್ಟಿಗೆ ನೋಡುವುದು ಮತ್ತು ಸಂತೋಷವಾಗಿರುವುದನ್ನು ನೋಡುವುದು ತುಂಬಾ ಖುಷಿ ಕೊಡುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ರಿಯಾ ಏನೇ ಅನುಭವಿಸಿದರೂ, ಬಂಟಿ ಅವಳ ಬೆಂಬಲವಾಗಿ ನಿಂತಿದ್ದರು. ಜೀವನದಲ್ಲಿ ತುಂಬಾನೇ ನೋವಿನ ಸಂದರ್ಭದಲ್ಲಿ ಬಂಟಿ ರಿಯಾ ಜೊತೆಗೆ ಇದ್ದನು" ಎಂದು ಮೂಲವೊಂದು ಹಂಚಿಕೊಂಡಿದೆ.


Is Rhea Chakraborty dating Bunty Sajdeh stg mrq
ರಿಯಾ ಮತ್ತು ಬಂಟಿ


ರಿಯಾ ಚಕ್ರವರ್ತಿಯನ್ನು ಅನೇಕ ವಿಚಾರಣೆಗಳಲ್ಲಿ ಸಿಲುಕಿಸಿದಾಗ ಬಂಟಿಯನ್ನು ಸಹ ವಿಚಾರಣೆಗೆ ಕರೆಯಲಾಗಿತ್ತು ಎಂದು ಹೇಳಲಾಗುತ್ತಿದೆ.


2021 ರಲ್ಲಿ ಬಿಡುಗಡೆಯಾದ ಚೆಹ್ರೆ ಚಿತ್ರದ ನಟಿ ರಿಯಾ ಅಕ್ಟೋಬರ್ 7 ರಂದು ಬಂಟಿ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಾಣಿಸಿಕೊಂಡರು. "ಅವರಿಬ್ಬರು ಪ್ರಸ್ತುತ ಒಟ್ಟಿಗೆ ಇದ್ದಾರೆ ಮತ್ತು ಈ ಸುದ್ದಿಯನ್ನು ಗೌಪ್ಯವಾಗಿಡಲು ಬಯಸುತ್ತಾರೆ" ಎಂದು ಮೂಲಗಳು ತಿಳಿಸಿವೆ.


ಯಾರು ಈ ಬಂಟಿ ಸಜ್ದೇಹ್?


ಬಂಟಿ ಸಜ್ದೇಹ್ ಅವರು ಫ್ಯಾಷನ್ ಡಿಸೈನರ್ ಸೀಮಾ ಸಜ್ದೇಹ್ ಅವರ ಕಿರಿಯ ಸಹೋದರ. ಅವರು ಕಾರ್ನರ್ ಸ್ಟೋನ್ ಸ್ಪೋರ್ಟ್ ನ ಎಂಡಿ ಮತ್ತು ಸಿಇಒ ಸಹ ಆಗಿದ್ದಾರೆ ಮತ್ತು ಅವರು ರಿಯಾಲಿಟಿ ಸ್ಟಾರ್ ಎಂದು ಹೇಳಲಾಗುತ್ತದೆ.


ರಿಯಾ ಮತ್ತು ಬಂಟಿ


ವಿರಾಟ್ ಕೊಹ್ಲಿ, ಸಾನಿಯಾ ಮಿರ್ಜಾ, ಶುಭ್ಮನ್ ಗಿಲ್ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಅನೇಕ ಕ್ರೀಡಾಪಟುಗಳು ಈ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದಾರೆ.


ಇದನ್ನೂ ಓದಿ:   Malaika Arora: ಮಗನಿಗಾಗಿ ಒಂದಾದ್ರಾ ಬಾಲಿವುಡ್ ಜೋಡಿ? ಏರ್ಪೋರ್ಟ್​ನಲ್ಲಿ ಒಟ್ಟಿ ಕಾಣಿಸ್ಕೊಂಡ ಮಲೈಕಾ-ಅರ್ಬಾಜ್


ಬಂಟಿ ಈ ಹಿಂದೆ ನಟಿ ಸೋನಾಕ್ಷಿ ಸಿನ್ಹಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಅಂತ ವರದಿಗಳು ಹರಿದಾಡಿದ್ದವು.

Published by:Mahmadrafik K
First published: