News18 India World Cup 2019

ವೈರಲ್ ಆಯ್ತು ನಟಿ ಪ್ರಿಯಾಂಕಾ ಚೋಪ್ರಾ ನಿಶ್ಚಿತಾರ್ಥದ ಉಂಗುರದ ಫೋಟೋ

news18
Updated:August 16, 2018, 10:04 PM IST
ವೈರಲ್ ಆಯ್ತು ನಟಿ ಪ್ರಿಯಾಂಕಾ ಚೋಪ್ರಾ ನಿಶ್ಚಿತಾರ್ಥದ ಉಂಗುರದ ಫೋಟೋ
news18
Updated: August 16, 2018, 10:04 PM IST
-ನ್ಯೂಸ್ 18 ಕನ್ನಡ

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್ ಜೋನಸ್ ನಿಶ್ಚಿತಾರ್ಥದ ಬಗ್ಗೆ ಈ ಹಿಂದೆ ಹಲವು ಬಾರಿ ಸುದ್ದಿಯಾಗಿತ್ತು. ಲಂಡನ್​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ತಾರಾ ಜೋಡಿಗಳು ಎಲ್ಲೂ ಫೋಟೋಗಳನ್ನು ಹಂಚಿಕೊಂಡಿರಲಿಲ್ಲ. ಹಾಗೆಯೇ ಪಿಗ್ಗಿ ಕೂಡ ನಿಶ್ಚಿತಾರ್ಥದ ಉಂಗುರವನ್ನು ಮಾಧ್ಯಮಗಳಿಂದ ಮರೆಮಾಚಿದ್ದರು. ಆದರೆ ಇದೀಗ ನಟಿ ರವೀನಾ ಟಂಡನ್​ ಹಂಚಿಕೊಂಡಿರುವ ಫೋಟೋ ಒಂದರಿಂದ ಪಿಗ್ಗಿಯ ಎಂಗೆಜ್ಮೆಂಟ್ ಉಂಗುರವ​ನ್ನು ನೋಡುವ ಅವಕಾಶ ಅಭಿಮಾನಿಗಳಿಗೆ ಲಭಿಸಿದೆ.

ಪ್ರಿಯಾಂಕಾ ಚೋಪ್ರಾ ಜೊತೆಯಾಗಿರುವ ಫೋಟೊವನ್ನು ರವೀನಾ ಟಂಡನ್​ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ರವೀನಾ ಹೆಗಲ ಮೇಲೆ ಕೈ ಹಾಕಿರುವ ಪಿಗ್ಗಿಯು ನಿಶ್ಚಿತಾರ್ಥದ ಉಂಗುರವನ್ನು ಮೊದಲ ಬಾರಿಗೆ ತೋರಿಸಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಿಯಾಂಕಾಗೆ ಶುಭಾಯಶಯದ ಮಹಾಪೂರ ಹರಿದು ಬರುತ್ತಿದೆ.
Loading...

A post shared by Raveena Tandon (@officialraveenatandon) on

ಸಲ್ಮಾನ್ ಖಾನ್ ಅಭಿನಯದ 'ಭಾರತ್'​ ಚಿತ್ರದಿಂದ ಪ್ರಿಯಾಂಕಾ ಹೊರ ಬರಲು ಮದುವೆ ನಿಶ್ಚಿತವಾಗಿರುವುದು ಕಾರಣ ಎನ್ನಲಾಗಿತ್ತು. ಪಿಗ್ಗಿ ಮತ್ತು ನಿಕ್ ಮದುವೆಯು ಅಕ್ಟೋಬರ್​ನಲ್ಲಿ ನಡೆಯಲಿದೆ. ಸದ್ಯ ಹಾಲಿವುಡ್​ನ 'ಕ್ವಾಂಟಿಕೊ' ಸಿರೀಸ್ ಮತ್ತು ಫರ್ಹಾನ್ ಅಖ್ತರ್​ ನಾಯಕನಾಗಿರುವ 'ಸ್ಕೈ ಈಸ್ ಪಿಂಕ್' ಚಿತ್ರದಲ್ಲಿ ಪ್ರಿಯಾಂಕಾ ಅಭಿನಯಿಸುತ್ತಿದ್ದಾರೆ.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...