Viral| ನುಸ್ರತ್ ಜಹಾನ್ ಯಶ್‌ದಾಸ್ ಗುಪ್ತಾರನ್ನು ವಿವಾಹವಾಗಿದ್ದಾರೆಯೇ? ನಟಿಯ ಪೋಸ್ಟ್ ಏನು ಹೇಳುತ್ತದೆ?

ನುಸ್ರತ್ ಆಗಸ್ಟ್​ನಲ್ಲಿ ಯಶ್‍ದಾಸ್ ಗುಪ್ತಾ ಅವರ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಈ ಪೋಟೋಗಳು, ಆಕೆ ಯಶ್‍ದಾಸ್ ಗುಪ್ತಾ ಅವರನ್ನು ಮದುವೆಯಾಗಿದ್ದಾರೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

ನುಸ್ರತ್ ಜಹಾನ್.

ನುಸ್ರತ್ ಜಹಾನ್.

  • Share this:
ನಟಿ – ರಾಜಕಾರಣಿ ನುಸ್ರತ್ ಜಹಾನ್ (Nusrat Jahan), ಸಾಮಾಜಿಕ ಜಾಲತಾಣದಲ್ಲಿ (Social Media) ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ವಿಜಯ ದಶಮಿ ಹಬ್ಬದ ಶುಭಾಶಯ ಕೋರಿದ್ದು, ಆ ಫೋಟೋ, ಆಕೆ ಯಶ್‍ದಾಸ್ ಗುಪ್ತಾ (Yash Dasgupta) ಅವರನ್ನು ಮದುವೆಯಾಗಿ ದ್ದಾರೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ನಟಿ ನುಸ್ರತ್ ಜಹಾನ್ , ವಿಜಯದಶಮಿಯ (Vijayadashami) ಪ್ರಯುಕ್ತ ಶುಕ್ರವಾರ ಸಾಮಾಜಿಕ ಜಾಲತಾಣ ದಲ್ಲಿ ಚಿತ್ರ ಒಂದನ್ನು ಹಂಚಿಕೊಂಡಿದ್ದರು. ಆ ಚಿತ್ರದಲ್ಲಿ, ವಿವಾಹಿತ ಬಂಗಾಳಿ ಮಹಿಳೆಯರು ಧರಿಸುವ , ಶಾಖಾ ಪೋಲಾ, ಬಿಪ್ಪು ಮತ್ತು ಹವಳದ ಬಳೆಗಳನ್ನು ನುಸ್ರತ್ ಧರಿಸಿರುವುದನ್ನು ಕಾಣಬಹುದು. ಅವರು ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ (Social Media) ಮಾಡುವ ಮೂಲಕ ತನ್ನ ಅಭಿಮಾನಿಗಳಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು.

ನುಸ್ರತ್ ಆಗಸ್ಟ್​ನಲ್ಲಿ ಯಶ್‍ದಾಸ್ ಗುಪ್ತಾ ಅವರ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಈ ಪೋಟೋಗಳು, ಆಕೆ ಯಶ್‍ದಾಸ್ ಗುಪ್ತಾ ಅವರನ್ನು ಮದುವೆಯಾಗಿದ್ದಾರೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.



ಈ ಚಿತ್ರವನ್ನು ಹಂಚಿಕೊಳ್ಳುತ್ತಾ ಆಕೆ, "ಶುಭೋ ಬೋಜೊಯರ್ ಪ್ರತೀತಿ ಶುಭೇಚ್ಚ ಓ ಅಭಿನಂದನ್ ( ಶುಭ ವಿಜಯದ ಶುಭಾಶಯ ಮತ್ತು ಅಭಿನಂದನೆ)" ಎಂದು ಬರೆದುಕೊಂಡಿದ್ದರು. ಆ ಫೋಟೋದಲ್ಲಿ ಅವರು ಬಿಳಿ ಮತ್ತು ಕೆಂಪು ವರ್ಣದ ಸೀರೆ,  ಒಂದು ಕೆಂಪು ಹಣೆ ಬೊಟ್ಟು ಮತ್ತು ಬೈತಲೆಯಲ್ಲಿ ಸಿಂಧೂರ ಹಾಗೂ ಕೈಗಳಲ್ಲಿ ಕೆಂಪು ಮತ್ತು ಬಿಳಿ ಬಳೆಗಳನ್ನು ಧರಿಸಿರುವುದನ್ನು ಕಾಣಬಹುದು.

ಈ ಮೊದಲು , ನುಸ್ರತ್ ಮತ್ತು ಯಶ್ ಅವರ ಹಬ್ಬದ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ತೃಣಮೂಲ್ ಎಂಪಿ ನುಸ್ರತ್ ಆತನ ತೊಡೆಯ ಮೇಲೆ ಕುಳಿತುಕೊಂಡು ಪೋಸ್ ನೀಡಿದ್ದರು.ಈ ಜೋಡಿ ಫೋಟೋಶೂಟ್‍ಗಾಗಿ ಹಲವಾರು ರೋಮ್ಯಾಂಟಿಕ್ ಕ್ಷಣಗಳನ್ನು ಸೃಷ್ಟಿಸಿದ್ದರು.

ಇದನ್ನೂ ಓದಿ: Mahesh Babuಗೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಈ ಖ್ಯಾತ ಡೈರೆಕ್ಟರ್​? ಯಾರು ಗೊತ್ತಾ?

ಅದೇ ರೀತಿ ಕೆಲವು ದಿನಗಳ ಹಿಂದೆ, ನುಸ್ರತ್ ಅವರ ಗಂಡು ಮಗುವಿನ ತಂದೆಯ ಹೆಸರು ದೇಬಶಿಶ್ ದಾಸ್ ಗುಪ್ತಾ ಎಂದು ಬರೆದಿರುವ ಜನ್ಮ ಪ್ರಮಾಣ ಪತ್ರದ ಫೋಟೋ ಕೂಡ ವೈರಲ್ ಆಗಿತ್ತು. ಯಶ್ ದಾಸ್‍ಗುಪ್ತಾ ಅವರಿಗೆ ದೇಬಶಿಶ್ ದಾಸ್‍ಗುಪ್ತಾ ಎಂಬ ಇನ್ನೊಂದು ಹೆಸರು ಇದೆ ಎಂಬುವುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ನುಸ್ರತ್ ಜಹಾನ್ ಅವರು ತಮ್ಮ ಗಂಡು ಮಗುವಿಗೆ ಇಶಾನ್ ಜೆ ದಾಸ್‍ಗುಪ್ತಾ ಎಂಬ ಹೆಸರನ್ನು ಇಟ್ಟಿದ್ದಕ್ಕಾಗಿ ಹಲವಾರು ಪ್ರಶ್ನೆಗಳನ್ನು ಎದುರಿಸಬೇಕಾಯಿತು.

ನುಸ್ರತ್ ಅವರು, ಹಿಂದಿನ ಪತಿ ನಿಖಿಲ್ ಜೈನ್ ಜೊತೆಗಿನ ಮದುವೆ ಅನೂರ್ಜಿತ ಎಂದು ಘೋಷಣೆ ಆದ ಬಳಿಕ , ಆತನಿಂದ ಸಾರ್ವಾಜನಿಕವಾಗಿಯೇ ಪ್ರತ್ಯೇಕವಾಗಿದ್ದರು. ನಿಖಿಲ್ ಜೈನ್ ಜೊತೆಗಿನ ವಿವಾಹವು ಭಾರತೀಯ ಕಾನೂನಿನ ಅಡಿಯಲ್ಲಿ ಯಾವತ್ತೂ ಮಾನ್ಯತೆ ಹೊಂದಿರಲಿಲ್ಲ ಮತ್ತು ಅದರ ನೋಂದಾವಣಿ ಕೂಡ ಆಗಿರಲಿಲ್ಲ, ಹಾಗಾಗಿ ಅಧಿಕೃತವಾಗಿ ವಿಚ್ಛೇದನೆ ಪಡೆಯುವ ಅಗತ್ಯ ಇಲ್ಲ ಎಂದು ನುಸ್ರತ್ ಜಹಾನ್ ಹೇಳಿದ್ದರು.

ಇದನ್ನೂ ಓದಿ: Hindi Bigboss: ಸಲ್ಮಾನ್​ ಖಾನ್​ ಜೊತೆ ತುಳು ಭಾಷೆಯಲ್ಲಿ ಮಾತನಾಡಿದ ಶಮಿತಾ ಶೆಟ್ಟಿ

ಪತಿಯಿಂದ ಪ್ರತ್ಯೇಕ ಆದ ಬಳಿಕ, 31 ವರ್ಷ ವಯಸ್ಸಿನ ಈ ನಟಿ ಮತ್ತು ರಾಜಕಾರಣಿ, ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣೆ ಅಭ್ಯರ್ಥಿ ಆಗಿದ್ದ ಯಶ್ ದಾಸ್‍ಗುಪ್ತಾ ಜೊತೆ ಡೇಟಿಂಗ್ ಆರಂಭಿಸಿದ್ದರು. ಅಸಲಿಗೆ , ನುಸ್ರತ್ ಅವರು ಪತಿಯಿಂದ ದೂರವಾಗಲು ಯಶ್ ಕಾರಣ ಎಂಬ ಊಹಾಪೋಹಗಳು ಕೂಡ ಎದ್ದಿದ್ದವು. ನುಸ್ರತ್ ಅವರು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲೂ ಯಶ್ ಅವರೇ , ಸದಾ ಬೆಂಗಾವಲಾಗಿ ಇದ್ದದ್ದು, ಸಾರ್ವಜನಿಕರಲ್ಲಿ ಇನ್ನಷ್ಟು ಕುತೂಹಲ ಕೆರಳಿಸಿತ್ತು.
Published by:MAshok Kumar
First published: