• Home
  • »
  • News
  • »
  • entertainment
  • »
  • Adam Levine: ಪತ್ನಿಗೆ ತಿಳಿಯದಂತೆ ಇನ್ನೊಂದು ಸಂಬಂಧ ಇಟ್ಕೊಂಡಿದ್ರಾ ಗಾಯಕ ಆಡಮ್ ಲೆವಿನ್? ಇಲ್ಲಿದೆ ಮಾಹಿತಿ

Adam Levine: ಪತ್ನಿಗೆ ತಿಳಿಯದಂತೆ ಇನ್ನೊಂದು ಸಂಬಂಧ ಇಟ್ಕೊಂಡಿದ್ರಾ ಗಾಯಕ ಆಡಮ್ ಲೆವಿನ್? ಇಲ್ಲಿದೆ ಮಾಹಿತಿ

ಆಡಮ್ ಲೆವಿನ್ ಮತ್ತು ಬೆಹತಿ ಪ್ರಿನ್ಸ್ಲೂ

ಆಡಮ್ ಲೆವಿನ್ ಮತ್ತು ಬೆಹತಿ ಪ್ರಿನ್ಸ್ಲೂ

ಮರೂನ್ 5 ಪಾಪ್ ರಾಕ್ ಬ್ಯಾಂಡ್‌ ಗಾಯಕ, ನಟ ಆಡಮ್ ಲೆವಿನ್ ತಮ್ಮ ಗರ್ಭಿಣಿ ಪತ್ನಿ ಬೆಹತಿ ಪ್ರಿನ್ಸ್ಲೂಗೆ ಮೋಸ ಮಾಡಿರುವುದರ ಬಗ್ಗೆ ವರದಿಯಾಗಿದೆ. ಇನ್‌ಸ್ಟಾಗ್ರಾಮ್ ಮಾಡೆಲ್ ಸಮ್ನರ್ ಸ್ಟ್ರೋಹ್ ಎಂಬಾಕೆ ಮರೂನ್ 5 ಪಾಪ್ ರಾಕ್‌ ಬ್ಯಾಂಡ್‌ನ ಪ್ರಮುಖ ಗಾಯಕನೊಂದಿಗೆ ಸಂಬಂಧವಿದೆ ಎಂದು ಹೇಳಿಕೊಂಡಿದ್ದು ಇಂಟರ್ನೆಟ್‌ನಲ್ಲಿ ಹೆಚ್ಚು ಸುದ್ದಿಯಾಗುತ್ತಿದೆ.

ಮುಂದೆ ಓದಿ ...
  • Share this:

ಅಮೇರಿಕನ್ ಸಂಗೀತಗಾರ, ನಟ ಆಡಮ್ ಲೆವಿನ್ (Adam Levine) ತಮ್ಮ ಗರ್ಭಿಣಿ ಪತ್ನಿ ಬೆಹತಿ ಪ್ರಿನ್ಸ್ಲೂಗೆ ಮೋಸ ಮಾಡಿರುವುದರ ಬಗ್ಗೆ ವರದಿಯಾಗಿದೆ. ಇನ್‌ಸ್ಟಾಗ್ರಾಮ್ ಮಾಡೆಲ್ ಸಮ್ನರ್ ಸ್ಟ್ರೋಹ್ (Sumner Stroh )ಎಂಬಾಕೆ ಮರೂನ್ 5 ಪಾಪ್ ರಾಕ್‌ ಬ್ಯಾಂಡ್‌ನ ಪ್ರಮುಖ ಗಾಯಕನೊಂದಿಗೆ ಸಂಬಂಧವಿದೆ ಎಂದು ಹೇಳಿಕೊಂಡಿದ್ದು ಇಂಟರ್ನೆಟ್‌ನಲ್ಲಿ ಹೆಚ್ಚು ಸುದ್ದಿಯಾಗುತ್ತಿದೆ. ಸ್ಟ್ರೋಹ್ ಇನ್‌ಸ್ಟಾದಲ್ಲಿ 3,40,000 ಫಾಲೋವರ್ಸ್ ಹೊಂದಿದ್ದು, ಟಿಕ್‌ಟಾಕ್‌ನಲ್ಲಿ 3,20,000 ಫಾಲೋವರ್ಸ್ ಅನ್ನು ಹೊಂದಿದ್ದಾರೆ. ವಿಕ್ಟೋರಿಯಾ ಸೀಕ್ರೇಟ್ ಮಾಡೆಲ್ ಸ್ಟ್ರೋಹ್, ತಾನು, ವಿವಾಹವಾಗಿರುವ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವೆ ಎಂಬುದಾಗಿ ಟಿಕ್‌ಟಾಕ್ ವಿಡಿಯೋದಲ್ಲಿ (Video) ಹಂಚಿಕೊಂಡಿದ್ದಾರೆ.


ಮರೂನ್ 5 ಪ್ರಾಯೋಗಿಕವಾಗಿ ಖ್ಯಾತಿ ಹೊಂದಿರುವ ಸಂಗೀತ ಬ್ಯಾಂಡ್ ಆಗಿದೆ. ಹಾಗಾಗಿ ಆಡಮ್ ಲೆವಿನ್ ಯಾರೆಂಬುದು ಎಲ್ಲರಿಗೂ ತಿಳಿದಿದೆ. ಆಡಮ್ ಹಾಗೂ ನಾನು ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಪರಸ್ಪರ ಬಲ್ಲೆವು ಎಂದಿದ್ದಾರೆ. ಕೆಲವು ತಿಂಗಳ ಹಿಂದೆ ಆಡಮ್‌ನೊಂದಿಗೆ ಮಾತು ನಿಲ್ಲಿಸಿರುವ ಮಾಡೆಲ್, ತನ್ನ ಜೀವನದಲ್ಲಿ ಆತ ಹೇಗೆ ಮರಳಿ ಪ್ರವೇಶ ಮಾಡಿದ್ದಾನೆ ಎಂಬುದನ್ನು ತಿಳಿಸಿದ್ದಾರೆ.


ಆಡಮ್ ಅನ್ನೇ ನಂಬಿದ್ದ ಇನ್‌ಸ್ಟಾಗ್ರಾಮ್ ಮಾಡೆಲ್
ಸ್ಟ್ರೋಹ್ ತನ್ನ ಹಾಗೂ ಆಡಮ್ ಸಂಬಂಧ ಒಂದು ವರ್ಷದವರೆಗೆ ನಡೆಯಿತು ಎಂದು ತಿಳಿಸಿದ್ದು, ಆ ಸಮಯದಲ್ಲಿ ನಾನು ಯುವತಿಯಾಗಿದ್ದೆ ಮತ್ತು ಆತನನ್ನು ನಂಬಿದ್ದೆ, ಹಾಗಾಗಿ, ‘ದ ವಾಯ್ಸ್’ ಗೀತೆಯ ತರಬೇತುದಾರ ನನ್ನನ್ನು ಶೋಷಿಸಿದ್ದು ಕುಶಲತೆಯಿಂದ ಬಳಸಿಕೊಂಡಿದ್ದಾರೆ ಎಂದು ಮಾಡೆಲ್ ಸ್ಟ್ರೋಹ್ ಆರೋಪಿಸಿದ್ದಾರೆ.


ಆಡಮ್ ತನ್ನ ಹುಟ್ಟಲಿರುವ ಮಗುವಿಗೆ ಹೆಸರನ್ನಿಡಲು ಬಯಸಿರುವುದಾಗಿ ಕೂಡ ಆಕೆಗೆ ಸಂದೇಶ ಕಳುಹಿಸಿದ್ದಾನೆ ಎಂದು ಸ್ಟ್ರೋಹ್ ತಿಳಿಸಿದ್ದಾರೆ. ನನಗೆ ಹುಟ್ಟಲಿರುವ ಮಗು ಗಂಡಾಗಿದ್ದರೆ ಅವನಿಗೆ ಸಮ್ನರ್ ಎಂದು ಹೆಸರಿಡುತ್ತೇನೆ. ನಿನ್ನ ಅಭಿಪ್ರಾಯವೇನು? ಹೀಗೆ ಆಡಮ್ ಸ್ಟ್ರೋಹ್‌ಗೆ ಸಂದೇಶ ಕಳುಹಿಸಿದ್ದಾನೆ ಎಂದು ಮಾಡೆಲ್ ಹೇಳಿದ್ದಾರೆ.


ಇದನ್ನೂ ಓದಿ:  Viral Post: ಈ ವ್ಯಕ್ತಿ ಬರೋಬ್ಬರಿ 53 ಮಹಿಳೆಯರನ್ನು ಮದ್ವೆಯಾಗಿದ್ದಾನಂತೆ! ಇದಕ್ಕೆ ಕಾರಣ ಕೂಡ ಇದೆಯಂತೆ


ಈ ಸಂದೇಶದಿಂದ ತಾನು ಖಿನ್ನತೆಗೆ ಒಳಗಾಗಿರುವುದಾಗಿ ಸ್ಟ್ರೋಹ್ ಹೇಳಿದ್ದು, ನಾನು ನರಕದಲ್ಲಿ ಇದ್ದರೆ ಒಳ್ಳೆಯದಿತ್ತು ಎಂದು ನನಗನಿಸಿದೆ ಎಂದಿದ್ದಾರೆ. ನನ್ನ ನೈತಿಕತೆಗಳು ಅರಿವಿಲ್ಲದೆ ರಾಜಿಯಾಗುತ್ತಿವೆ ಎಂದಾಕೆ ಬರೆದುಕೊಂಡಿದ್ದು ಆಡಮ್ ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಇನ್ನಷ್ಟು ಮಾಹಿತಿ ನೀಡುವುದು ನನಗೆ ಸರಿಕಾಣಿಸುತ್ತಿಲ್ಲ ಎಂದು ಸ್ಟ್ರೋಹ್ ಹೇಳಿದ್ದಾರೆ.


ಇಷ್ಟು ದಿನ ನಿಜ ಸಂಗತಿ ಮುಚ್ಚಿಟ್ಟಿದ್ದೇಕೆ?
ತಾನೊಬ್ಬ ಮಾಡೆಲ್ ಆಗಿರುವುದರಿಂದ ಈ ಆರೋಪಗಳನ್ನು ಸಾಮಾಜಿಕ ತಾಣದ ಮುಂದೆ ಇಡಲು ನಾನು ಬಯಸಲಿಲ್ಲ. ನಾನು ಮಾಡುವ ಕೆಲಸ, ನನ್ನ ಸಂಪಾದನೆ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಮಾಡೆಲ್ ಆಗಿರುವುದರ ಮೇಲೆ ಹೇಳಿಕೆಗಳು ಪರಿಣಾಮ ಬೀರುವುದರಿಂದ ಇದುವರೆಗೆ ಸುಮ್ಮನಿದ್ದೆ ಎಂದು ಸ್ಟ್ರೋಹ್ ಹೇಳಿದ್ದಾರೆ.


ಹಾಗಾದರೆ ಈಗ ನಾನೇಕೆ ಆಡಮ್ ಮತ್ತು ನನ್ನ ಸಂಬಂಧದ ಕುರಿತು ಹೇಳಿಕೊಳ್ಳುತ್ತಿದ್ದೇನೆ ಎಂಬುದು ನಿಮ್ಮಲ್ಲಿ ಪ್ರಶ್ನೆಯನ್ನುಂಟು ಮಾಡಬಹುದು. ಸ್ಟ್ರೋಹ್ ಸಂಬಂಧಿಕರೊಬ್ಬರು ಈ ಸಂಬಂಧವನ್ನು ಜಗಜ್ಜಾಹೀರು ಮಾಡುವುದಾಗಿ ಬೆದರಿಕೆ ಹಾಕಿದ ನಂತರ ನಾನೇ ತಿಳಿಸುವುದು ಸೂಕ್ತ ಎಂದು ಭಾವಿಸಿ ಹೀಗೆ ಮಾಡಿರುವುದಾಗಿ ಸ್ಟ್ರೋಕ್ ತಿಳಿಸಿದ್ದಾರೆ.


ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎಂಬ ಗೊಂದಲದಲ್ಲಿ ನಾನಿರುವೆ ನನ್ನನ್ನು ಬೆಂಬಲಿಸುವ ಸ್ನೇಹಿತರಿಲ್ಲ ಎಂದು ಸ್ಟ್ರೋಹ್ ಹೇಳಿಕೊಂಡಿದ್ದಾರೆ.


ಸ್ನೇಹಿತರು ಕೂಡ ಹೃದಯ ಹೀನರು
ನಾನು ನನ್ನ ವಿಶ್ವಾಸಾರ್ಹ ಸ್ನೇಹಿತರಿಗೆ ಕೆಲವೊಂದು ಸ್ಕ್ರೀನ್‌ಶಾಟ್ ಕಳುಹಿಸಿದ್ದೆ, ಆದರೆ ಅವರಲ್ಲಿ ಕೆಲವರು ಅದನ್ನು ಹಣಕ್ಕಾಗಿ ಟ್ಯಾಬ್ಲಾಯ್ಡ್‌ಗೆ ಮಾರಲು ಯತ್ನಿಸಿದರು ಎಂಬುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ:  Weird Laws: ಪುರುಷರ-ಮಹಿಳೆಯರ ಒಳ ಉಡುಪುಗಳನ್ನು ಒಟ್ಟಿಗೆ ಒಣಗಿಸುವಂತಿಲ್ಲ, ಇಲ್ಲಿದೆ ವಿಚಿತ್ರ ಕಾನೂನುಗಳು


ಈ ವಿಡಿಯೋ ಕುರಿತು ಆಡಮ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆಡಮ್ ಹಾಗೂ ಪ್ರಿನ್ಸ್ಲೂ 2014 ರಿಂದ ಸತಿಪತಿಗಳಾಗಿದ್ದಾರೆ. 2016 ರಲ್ಲಿ ತಮ್ಮ ಮೊದಲ ಮಗು ಡಸ್ಟಿ ರೋಸ್ ಅನ್ನು ಬರಮಾಡಿಕೊಂಡರು. 2018 ರಲ್ಲಿ ದಂಪತಿಗಳು ಜಿಯೋ ಗ್ರೇಸ್ ಹೆಸರಿನ ಮುದ್ದು ಮಗಳ ತಂದೆ ತಾಯಿಯಾದರು.

Published by:Ashwini Prabhu
First published: