ಕಾಫಿ ವಿದ್ ಕರಣ್ ಸೀಸನ್ 7 ನಲ್ಲಿ (Koffee With Karan Season 7) ನಟ ಟೈಗರ್ ಶ್ರಾಫ್ ತಮ್ಮ ಹೀರೋಪಂಥಿ ಚಿತ್ರದ ಸಹನಟಿ ಕೃತಿ ಸೇನಾನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಕರಣ್ ಟೈಗರ್‌ಗೆ ರಿಲೇಶನ್‌ಶಿಪ್ ಕುರಿತಾಗಿ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಬಾಗಿ -2 ಸಹ ನಟಿ ದಿಶಾ ಪಾಟ್ನಿ (Disha Patani) ಅವರೊಂದಿಗೆ ಟೈಗರ್ ರಿಲೇಶನ್‌ಶಿಪ್ ನಲ್ಲಿ (Relationship) ಇದ್ದಾರೆಯೇ ಅವರೊಂದಿಗೆ ಬಹಳ ಸಮಯಗಳಿಂದ ಟೈಗರ್ ಡೇಟಿಂಗ್ ಮಾಡುತ್ತಿದ್ದುದು ನಿಜವೇ ಮೊದಲಾದ ನೇರ ಪ್ರಶ್ನಾವಳಿಗಳನ್ನು ಕರಣ್ (Karan) ಕೇಳಿದ್ದು, ಬಾಗಿ ನಟ ಕೂಡ ಪ್ರಶ್ನೆಗಳಿಗೆ ನೇರವಾಗಿಯೇ ಉತ್ತರಿಸಿದ್ದಾರೆ ಹಾಗೂ ತಾವು ಇನ್ನೂ ಸಿಂಗಲ್ ಆಗಿರುವುದಾಗಿ ಬಹಿರಂಗಪಡಿಸಿದ್ದು, ಸಂಗಾತಿಗಾಗಿ ಹುಡುಕಾಡುತ್ತಿದ್ದೇನೆ ಎಂಬುದಾಗಿಯೂ ತಿಳಿಸಿದ್ದಾರೆ.
ದಿಶಾರನ್ನು ಟೈಗರ್ ಡೇಟಿಂಗ್ ಮಾಡುತ್ತಿದ್ದಾರೆಯೇ?
ನಿಮ್ಮ ರಿಲೇಶನ್‌ಶಿಪ್ ಸ್ಟೇಟಸ್ ಕುರಿತಾಗಿ ಹೇಳಿ ಟೈಗರ್, ನೀವು ದಿಶಾರೊಂದಿಗೆ ಡೇಟಿಂಗ್‌ನಲ್ಲಿದ್ದೀರಾ ಎಂಬ ಕರಣ್ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಟೈಗರ್, ನಾನು ದಿಶಾ ಯಾವಾಗಲೂ ಇರುವಂತೆಯೇ ಉತ್ತಮ ಸ್ನೇಹಿತರು ಎಂದಿದ್ದಾರೆ. ಅದಕ್ಕೆ ಕರಣ್ ಮುಂದಿನ ಸವಾಲನ್ನು ಎಸೆದಿದ್ದು, ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂಬ ಸಾಲನ್ನು ನೀವಿನ್ನು ಬಳಸುವಂತಿಲ್ಲ ಟೈಗರ್, ಹೀಗೆ ನಾವು ಒಳ್ಳೆಯ ಸ್ನೇಹಿತರು ಎಂಬುದಾಗಿ ಯಾರೂ ಹೇಳುವುದಿಲ್ಲ ಎಂದು ತಿಳಿಸುವ ಕರಣ್ ತಮ್ಮ ಮಾತನ್ನು ಮುಂದುವರಿಸುತ್ತಾ, ಮುಂಬೈಯ ಹೆಸರಾಂತ ಬಾಸ್ಟಿಯನ್ ರೆಸ್ಟೋರೆಂಟ್‌ನಲ್ಲಿ ಪ್ರತಿ ಭಾನುವಾರ ನಿಮ್ಮನ್ನು ಹಾಗೂ ದಿಶಾರನ್ನು ನಾವು ಜೊತೆಯಾಗಿ ನೋಡಿದ್ದೇವೆ. ಒಂದರ್ಥದಲ್ಲಿ ನೀವಿಬ್ಬರೂ ಪ್ರತಿ ಭಾನುವಾರ ಇಲ್ಲಿಗೆ ಭೇಟಿ ನೀಡುತ್ತೀರಿ.
ಇದನ್ನೂ ಓದಿ: Tiger Shroff: ದಿಶಾ ಜೊತೆ ಬ್ರೇಕಪ್ ಆಗಿ ಇನ್ನೂ ತಿಂಗಳಾಗಿಲ್ಲ, ಶ್ರದ್ಧಾ ಕಪೂರ್ ಇಷ್ಟ ಎಂದ ಟೈಗರ್ ಶ್ರಾಫ್
ಅದಕ್ಕೆ ಉತ್ತರಿಸಿದ ಟೈಗರ್ ಒಂದೇ ರೀತಿಯ ತಿನಿಸನ್ನು ಸೇವಿಸಲು ನಾವು ಇಷ್ಟಪಡುತ್ತೇವೆ ಎನ್ನುತ್ತಾರೆ. ಇದಕ್ಕೆ ಕೃತಿ ಕೂಡ ತಮ್ಮ ಅನಿಸಿಕೆಯನ್ನು ಸೇರಿಸುತ್ತಾ ನಿಮ್ಮಿಬ್ಬರಲ್ಲಿ ತುಂಬಾ ಸಾಮ್ಯತೆ ಇದೆ ಎಂದು ಹೇಳಿದಾಗ ಟೈಗರ್ ಅದನ್ನು ಒಪ್ಪುತ್ತಾರೆ.
ದಿಶಾ – ಟೈಗರ್ ಬ್ರೇಕಪ್ ಸುದ್ದಿ ನಿಜವೇ?
ಅಲ್ಲಿಗೆ ಬಿಡದ ಕರಣ್ ಇನ್ನೊಮ್ಮೆ ಪ್ರಸ್ತುತ ರಿಲೇಶನ್‌ಶಿಪ್ ಕುರಿತು ಟೈಗರ್ ಅನ್ನು ಕೇಳುತ್ತಾರೆ. ನನ್ನ ಪ್ರಶ್ನೆ ಅದಲ್ಲ. ನೀವು ದಿಶಾರನ್ನು ಇದೀಗ ಡೇಟಿಂಗ್ ಮಾಡುತ್ತಿದ್ದೀರಾ ಏಕೆಂದರೆ ಬ್ರೇಕಪ್ ಸುದ್ದಿ ಹರಿದಾಡುತ್ತಿದೆ ಎಂಬುದಾಗಿ ಟೈಗರ್ ಅನ್ನು ಕರಣ್ ಕೇಳುತ್ತಾರೆ. ಇದಕ್ಕೆ ಟೈಗರ್ ನಗುತ್ತಾ ಓಹ್ ಹೌದಾ, ಬಹಳ ಕಾಲದಿಂದಲೂ ನಮ್ಮ ಸುತ್ತ ಸುದ್ದಿಗಳು ಹರಿದಾಡುತ್ತಲೇ ಇದೆ. ನಾವು ಒಳ್ಳೆಯ ಸ್ನೇಹಿತರು ಎಂಬುದನ್ನು ಇಬ್ಬರೂ ನಿರ್ವಹಿಸುತ್ತಲೇ ಬಂದಿದ್ದೇವೆ ಹಾಗಾಗಿಯೇ ಇಂದಿಗೂ ನಾವು ಹಾಗೆಯೇ ಇದ್ದೇವೆ. ಹಾಗಾದರೆ ನೀವು ಸಿಂಗಲ್ ಆಗಿರುವಿರಿ ಎಂದು ಕರಣ್ ಮತ್ತೊಮ್ಮೆ ಟೈಗರ್ ಅನ್ನು ಪ್ರಶ್ನಿಸುತ್ತಾರೆ. ಹೌದು ಹಾಗೆಂದೇ ನಾನು ಭಾವಿಸುತ್ತೇನೆ ಎಂದು ಟೈಗರ್ ಉತ್ತರಿಸುತ್ತಾರೆ.
ಸ್ಟೂಡೆಂಟ್ ಆಫ್ ದ ಇಯರ್ 2 ನ ನಟನಿಗೆ ಮತ್ತೊಂದು ಸವಾಲೆಸೆದ ಕರಣ್, ಸುತ್ತಲೂ ಯಾರಾದರೂ ಈ ಅವಕಾಶಕ್ಕಾಗಿ ಕಾಯುತ್ತಿದ್ದಾರೆಯೇ ಎಂದು ಹಾಸ್ಯಭರಿತರಾಗಿ ಕೇಳುತ್ತಾರೆ. ಅದಕ್ಕೆ ಉತ್ತರಿಸಿದ ಟೈಗರ್ ನಾನು ಸಿಂಗಲ್ ಆಗಿರುವುದರಿಂದ ಅವಕಾಶಕ್ಕಾಗಿ ನಾನು ಅತ್ತಿತ್ತ ನೋಡುತ್ತಿದ್ದೇನೆ ಎಂದು ಪ್ರತಿಯಾಗಿ ಹೇಳುತ್ತಾರೆ.
ಶ್ರದ್ಧಾ ಕಪೂರ್ ನನ್ನ ಕ್ರಶ್ ಎಂದ ಟೈಗರ್
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಉದಾಹರಣೆಯನ್ನು ಉಲ್ಲೇಖಿಸಿ ನೀವು ಕುಳಿತಿರುವುದು ಯಾವುದೇ ವಿಚಾರವನ್ನು ಬಹಿರಂಗಪಡಿಸುವ ಸೋಫಾದಲ್ಲಿ ನೀವು ಕುಳಿತಿದ್ದೀರಿ ಹಾಗಾಗಿ ಯಾರಾದರೂ ಕ್ರಶ್ ಇದ್ದರೆ ಹೇಳಿ ಎಂದು ಟೈಗರ್‌ಗೆ ಕರಣ್ ದುಂಬಾಲು ಬೀಳುತ್ತಾರೆ. ಇದಕ್ಕೆ ಟೈಗರ್ ಕ್ರಶ್ ಅಂದರೆ ಬಾಗಿ ಸಹನಟಿ ಶ್ರದ್ಧಾ ಕಪೂರ್ ಎಂದು ಉತ್ತರಿಸುತ್ತಾರೆ. ಶ್ರದ್ಧಾರ ಮೇಲೆ ನನಗೆ ಒಂದು ರೀತಿಯ ಪ್ರೀತಿ ವ್ಯಾಮೋಹ ಇದೆ ಆಕೆ ಅದ್ಭುತ ನಟಿ ಮತ್ತು ಒಳ್ಳೆಯ ಸಹನಟಿ ಎಂದು ಹೊಗಳಿದ್ದಾರೆ.
ಇದನ್ನೂ ಓದಿ: Michael Jackson: ಡ್ರಗ್ಸ್ ಪಡೆಯೋಕೆ 19 ಫೇಕ್ ಐಡಿ ಮಾಡ್ಕೊಂಡಿದ್ರು ಮೈಕಲ್ ಜಾಕ್ಸನ್
ದಿಶಾ ಹಾಗೂ ಟೈಗರ್ ಮೊದಲ ಬಾರಿಗೆ ಮ್ಯೂಸಿಕ್ ವಿಡಿಯೋ ಬೆಫಿಕ್ರಾದಲ್ಲಿ ಜೊತೆಯಾಗಿ ನಟಿಸಿದ್ದರು. ತದನಂತರ 2018 ರಲ್ಲಿ ಬಾಗಿ -2 ಎಂಬ ಆ್ಯಕ್ಷನ್ ಹಿಟ್ ಚಿತ್ರದಲ್ಲಿ ನಟಿಸಿದರು. ದಿಶಾ ಟೈಗರ್ ಅವರೊಂದಿಗೆ ಬಾಗಿ 3 ಯ ಡು ಯು ಲವ್ ಮಿ ಹಾಡಿನಲ್ಲಿ ತೆರೆ ಹಂಚಿಕೊಂಡಿದ್ದಾರೆ. ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರದಲ್ಲಿ ಟೈಗರ್ ತಂದೆ ಜಾಕಿಶ್ರಾಫ್ ಅವರೊಂದಿಗೆ ದಿಶಾ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ