Brahmastra: ಬ್ರಹ್ಮಾಸ್ತ್ರ ಚಿತ್ರಕ್ಕೆ ಸಿಕ್ತು ಭರ್ಜರಿ ಓಪನಿಂಗ್; ಬದಲಾಯ್ತಾ ಬಾಲಿವುಡ್‌ ಸಿನಿಮಾಗಳ ಅದೃಷ್ಟ?

ಆಯಾನ್ ನಿರ್ದೇಶನದ ಮತ್ತು ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಅವರು ಅಭಿನಯಿಸಿದ ‘ಬ್ರಹ್ಮಾಸ್ತ್ರ’ ಚಿತ್ರ ನಿನ್ನೆ (ಸೆಪ್ಟೆಂಬರ್ 9) ಬೆಳಿಗ್ಗೆ ತೆರೆಗೆ ಅಪ್ಪಳಿಸಿದ್ದು, ಇದುವರೆಗಿನ ಟ್ರೆಂಡ್ ಹೇಳುತ್ತಿರುವ ಕತೆಗಳನ್ನು ನೋಡುತ್ತಿದ್ದರೆ, ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಒಂದನೇ ದಿನ ಐತಿಹಾಸಿಕ ಆರಂಭ ಪಡೆದಿದೆ. 

ಬ್ರಹ್ಮಾಸ್ತ್ರ

ಬ್ರಹ್ಮಾಸ್ತ್ರ

  • Share this:
ಬಾಲಿವುಡ್ ನ ಸಿನೆಮಾಗಳು (Bollywood Movies) ಅಷ್ಟು ಚೆನ್ನಾಗಿ ದುಡ್ಡು ಮಾಡುತ್ತಿಲ್ಲ, ದಕ್ಷಿಣ ಭಾರತದ ಚಿತ್ರಗಳ ಮುಂದೆ ಇವುಗಳ ಆಟ ಏನು ನಡಿತಿಲ್ಲಾ ಅಂತೆಲ್ಲಾ ಮಾತುಗಳು ಹರಿದಾಡುತ್ತಿದ್ದುದ್ದನ್ನು ನಾವೆಲ್ಲಾ ಕೇಳಿಯೇ ಇರುತ್ತೇವೆ. ಆದರೆ ಈಗ ಒಂದು ಸುದ್ದಿ ಹೊರ ಬಿದ್ದಿದ್ದು, ಬಾಲಿವುಡ್ ಗೆ ಇದು ಒಂದು ರೀತಿಯಲ್ಲಿ ಒಳ್ಳೆಯ ಸುದ್ದಿ. ಆಯಾನ್ ನಿರ್ದೇಶನದ ಮತ್ತು ನಟ ರಣಬೀರ್ ಕಪೂರ್ (Ranbir Kapoor) ಮತ್ತು ನಟಿ ಆಲಿಯಾ ಭಟ್ (Alia Bhatt) ಅವರು ಅಭಿನಯಿಸಿದ ‘ಬ್ರಹ್ಮಾಸ್ತ್ರ’ ಚಿತ್ರ ನಿನ್ನೆ (ಸೆಪ್ಟೆಂಬರ್ 9) ಬೆಳಿಗ್ಗೆ ತೆರೆಗೆ ಅಪ್ಪಳಿಸಿದ್ದು, ಇದುವರೆಗಿನ ಟ್ರೆಂಡ್ ಹೇಳುತ್ತಿರುವ ಕತೆಗಳನ್ನು ನೋಡುತ್ತಿದ್ದರೆ, ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ (Box Office) ಒಂದನೇ ದಿನ ಐತಿಹಾಸಿಕ ಆರಂಭ ಪಡೆದಿದೆ. 

ಬಹು ನಿರೀಕ್ಷಿತ ಸಿನೆಮಾದಲ್ಲಿ ಯಾರ‍್ಯಾರು ನಟಿಸಿದ್ದಾರೆ
ಹಲವು ವರ್ಷಗಳ ಕಾಲ ನಿರ್ಮಾಣದಲ್ಲಿದ್ದ ಅಯಾನ್ ಮುಖರ್ಜಿ ಅವರ ‘ಬ್ರಹ್ಮಾಸ್ತ್ರ’ ಚಿತ್ರವು ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿತ್ತು.  ಬಾಲಿವುಡ್ ನ ಅವನತಿಯ ನಡುವೆ ಎಲ್ಲರ ಕಣ್ಣುಗಳು ಈಗ ‘ಬ್ರಹ್ಮಾಸ್ತ್ರ’ ಚಿತ್ರದ ಮೇಲೆ ಬಿದ್ದಿವೆ ಎಂದು ಹೇಳಬಹುದು. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರೊಂದಿಗೆ ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್, ತೆಲುಗು ಚಿತ್ರೋದ್ಯಮದ ನಟ ನಾಗಾರ್ಜುನ, ಮೌನಿ ರಾಯ್ ಮತ್ತು ಡಿಂಪಲ್ ಕಪಾಡಿಯಾ ಅವರು ನಟಿಸಿದ್ದಾರೆ.

ಇದನ್ನೂ ಓದಿ: Actor Diganth: ಎಡಗೈ ಅಪಘಾತಕ್ಕೆ ಕಾರಣ ಅಂತವ್ರೆ ದೂದ್ ಪೇಡ ದಿಗಂತ್ !

ಮೊದಲನೆಯ ದಿನದ ಪ್ರದರ್ಶನದ ಬಗ್ಗೆ ಚಿತ್ರ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆಗಳು ಹರಿದು ಬರುತ್ತಿವೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಸಹ ಈ ಚಿತ್ರಕ್ಕೆ ದೊಡ್ಡ ಥಂಬ್ಸ್ ಅಪ್ ನೀಡಿದ್ದಾರೆ.

ಬಾಕ್ಸ್ಆಫೀಸ್ ನಲ್ಲಿ ಐತಿಹಾಸಿಕ ಆರಂಭ ಪಡಿಯುತ್ತಾ ಸಿನೆಮಾ
‘ಬ್ರಹ್ಮಾಸ್ತ್ರ’ ಚಿತ್ರದ ಬಗ್ಗೆ ಹರಿದಾಡುತ್ತಿರುವ ಆರಂಭಿಕ ಪ್ರವೃತ್ತಿಗಳ ಪ್ರಕಾರ ‘ಬ್ರಹ್ಮಾಸ್ತ್ರ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಐತಿಹಾಸಿಕ ಆರಂಭವನ್ನು ಪಡೆದಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಚಿತ್ರ ಬಿಡುಗಡೆಯಾದ ಮೊದಲ ದಿನವೇ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 32 ರಿಂದ 34 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಸಂಖ್ಯೆಗಳು ಅಗಾಧವಾಗಿದ್ದು ಮಾತ್ರವಲ್ಲದೇ, ಗಲ್ಲಾಪೆಟ್ಟಿಗೆಯಲ್ಲಿ ಈಗಾಗಲೇ ಅನೇಕ ದಾಖಲೆಗಳನ್ನು ಮುರಿದಿವೆ ಮತ್ತು ಹೊಸ ದಾಖಲೆಯನ್ನು ಸಹ ಸೃಷ್ಟಿಸಿದೆ

ದಕ್ಷಿಣ ಭಾರತದಲ್ಲಿಯೂ ಸದ್ದು ಮಾಡ್ತಿರೋ ಸಿನೆಮಾ 
ರಾತ್ರಿ ಪ್ರದರ್ಶನದ ಸಮಯದಲ್ಲಿ ವಾಕ್-ಇನ್ ಹೆಚ್ಚಾದರೆ ‘ಬ್ರಹ್ಮಾಸ್ತ್ರ’ ಚಿತ್ರದ ಒಂದನೇ ದಿನದ ಹಣ ಗಳಿಕೆ ಇನ್ನೂ ಹೆಚ್ಚಾಗುತ್ತವೆ ಎಂದು ನಿರೀಕ್ಷಿಸಲಾಗುತ್ತಿದೆ. ಈ ಚಿತ್ರ ಬರೀ ಹಿಂದಿ ಮಾತಾಡುವ ರಾಜ್ಯಗಳಲ್ಲಿ ಜೋರಾಗಿ ಹಣ ಮಾಡುವದು ಮಾತ್ರವಲ್ಲದೇ, ದಕ್ಷಿಣ ಭಾರತದಲ್ಲಿಯೂ ಸಹ ಅದ್ಭುತಗಳನ್ನು ಮಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಅದರ ಕ್ರೇಜ್ ಈಗಾಗಲೇ ‘ಆರ್‌ಆರ್‌ಆರ್’, ಕೆಜಿಎಫ್: ಚಾಪ್ಟರ್ 2 ಮತ್ತು ಪುಷ್ಪಾದಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ಹಿಂದಿಕ್ಕಿದೆ ಎಂದು ಸ್ವಲ್ಪ ಸಮಯದ ಹಿಂದೆ ಬಂದ ಒಂದು ವರದಿಯಲ್ಲಿ ತಿಳಿಸಲಾಗಿತ್ತು. ಬಿಡುಗಡೆಗೂ ಮುನ್ನ, ಈ ಚಿತ್ರವು ವಿವಾದಗಳಲ್ಲಿ ಸಿಲುಕಿತ್ತು ಮತ್ತು ನೆಟ್ಟಿಗರಿಂದ ಬಹಿಷ್ಕಾರವನ್ನು ಸಹ ಆಕರ್ಷಿಸಿತ್ತು.

ಇದನ್ನೂ ಓದಿ: Yogita Bihani: ವಿಕ್ರಮ್ ವೇದಾ ಚಿತ್ರದ ಸಹನಟಿಯನ್ನು ಹಾಡಿ ಹೊಗಳಿದ ಸೈಫ್ ಅಲಿ ಖಾನ್

ಕೊಯಿಮೊಯಿ ಡಾಟ್ ಕಾಂ ಅವರು ಸಹ ‘ಬ್ರಹ್ಮಾಸ್ತ್ರ’ ಚಿತ್ರವನ್ನು ವೀಕ್ಷಿಸಿದರು ಮತ್ತು ಅದಕ್ಕೆ 4 ಸ್ಟಾರ್ ರೇಟಿಂಗ್ ನೀಡಿದ್ದಾರೆ. ಇನ್ನೂ ಚಿತ್ರದ ಬಗ್ಗೆ ಹೇಳಬೇಕು ಎಂದರೆ "ಶಿವ ಎಂಬ ಡಿಜೆ ಪಾತ್ರದಲ್ಲಿ ನಟ ರಣಬೀರ್ ಕಪೂರ್ ಅವರು ನಟಿಸಿದ್ದಾರೆ. ಇದು ರಣಬೀರ್ ಮತ್ತು ಆಲಿಯಾ ಅವರ ಚಿತ್ರಕ್ಕೆ ಇದು ಕೇವಲ ಆರಂಭವಷ್ಟೆ ಆಗಿದೆ ಎಂದು ನಾವು ಹೇಳಬೇಕು, ಏಕೆಂದರೆ ಇದು ಇನ್ನೂ ತುಂಬಾ ದಿನಗಳವರೆಗೆ ಪ್ರದರ್ಶನ ಕಂಡು ಇನ್ನೂ ಹೆಚ್ಚು ಹೆಚ್ಚು ಹಣ ಗಳಿಸಬೇಕಿದೆ ಎಂದು ಪ್ರೇಕ್ಷಕರು ಹೇಳುತ್ತಾರೆ.
Published by:Ashwini Prabhu
First published: