news18-kannada Updated:August 16, 2020, 12:56 PM IST
ಕಾಜಲ್ ಅಗರ್ವಾಲ್
ಅನೇಕ ಹೀರೋಯಿನ್ಗಳು ಅದ್ದೂರಿಯಾಗಿ ವಿವಾಹವಾಗುತ್ತಾರೆ. ಮದುವೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸುತ್ತಾರೆ. ಆದರೆ, ಇನ್ನೂ ಕೆಲ ಹೀರೋಯಿನ್ಗಳು ಪ್ರೀತಿಯಲ್ಲಿರುವ ವಿಚಾರವಾಗಲೀ ಅಥವಾ ಮದುವೆಯಾದ ವಿಚಾರವಾಗಲಿ ಎಲ್ಲಿಯೂ ಹೇಳಿಕೊಳ್ಳುವುದೇ ಇಲ್ಲ. ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಎರಡನೇ ಸಾಲಿಗೆ ಸೇರ್ಪಡೆಯಾಗಿದ್ದಾರೆ!
ಹಾಗಿದ್ರೆ, ಕಾಜಲ್ ಅಗರ್ವಾಲ್ ವಿವಾಹ ಆಗಿ ಬಿಟ್ಟಿತೇ? ಇಲ್ಲ. ಕಾಜಲ್ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.
ಕೆಲ ತಿಂಗಳ ಹಿಂದೆ ನಟಿ ಕಾಜಲ್ ಅಗರ್ವಾಲ್ ಶೀಘ್ರವೇ ವಿವಾಹವಾಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈಗಾಗಲೇ ಹುಡುಗನೋರ್ವನನ್ನು ನೋಡಿದ್ದು, ಶೀಘ್ರವೇ ವಿವಾಹ ಆಗಲಿದ್ದಾರೆ ಎನ್ನಲಾಗಿತ್ತು. ಈಗ ಕೇಳಿ ಬರುತ್ತಿರುವ ಲೇಟೆಸ್ಟ್ ವಿಚಾರ ಎಂದರೆ ಕಾಜಲ್ ರಹಸ್ಯವಾಗಿ ಎಂಗೇಜ್ಮೆಂಟ್ ಆಗಿದ್ದಾರಂತೆ.
ಎಂಗೇಜ್ಮೆಂಟ್ಗೆ ಕಾಜಲ್ ಆತ್ಮೀಯ ಗೆಳೆಯ ಬೆಲ್ಲಮಕೊಂಡ ಶ್ರೀನಿವಾಸ್ ಕೂಡ ಎಂಗೇಜ್ಮೆಂಟ್ನಲ್ಲಿ ಭಾಗಿಯಾಗಿದ್ದರು. ಹೀಗಾಗಿ, ಈ ಸುದ್ದಿ ಹೊರ ಬಂದಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಕಾಜಲ್ ಮದುವೆ ಆಗುತ್ತಿರುವ ಹುಡುಗನ ಹೆಸರು ಗೌತಮ್ ಎನ್ನಲಾಗಿದೆ. ಗೌತಮ್ ಸಿನಿಮಾ ಇಂಡಸ್ಟ್ರಿಯವರಲ್ಲ. ಅವರು, ತಮ್ಮದೇ ಉದ್ಯಮ ಹೊಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: SP Balasubramaniam: ಬೇಗ ಗುಣಮುಖರಾಗಿ ಎಸ್.ಪಿ.ಬಿ.; ಒಂದೇ ಧ್ವನಿಯಲ್ಲಿ ಪ್ರಾರ್ಥಿಸುತ್ತಿದೆ ಸಂಗೀತ ಕ್ಷೇತ್ರ!
ಸಿನಿಮಾ ವಿಚಾರಕ್ಕೆ ಬರುವುದಾದರೆ ಕಾಜಲ್ ಅಗರ್ವಾಲ್ ಕೈಯಲ್ಲಿ ನಾಲ್ಕೈದು ಚಿತ್ರಗಳಿವೆ. ಕೊರೋನಾ ವೈರಸ್ ಇರುವುದರಿಂದ ಸಿನಿಮಾದ ಶೂಟಿಂಗ್ ಕೆಲಸಗಳು ಬಾಕಿ ಉಳಿದಿವೆ.
Published by:
Rajesh Duggumane
First published:
August 16, 2020, 12:56 PM IST