Big Boss: ಕಮಲ್​ ಹಾಸನ್​ ಜಾಗಕ್ಕೆ ಬಂದ್ರು ಸ್ಟಾರ್​ ನಟ, ತಮಿಳು ಬಿಗ್​ ಬಾಸ್ ಹೊಸ​ ಹೋಸ್ಟ್​ ಇವ್ರೇ ನೋಡಿ..

ತಮಿಳಿನಲ್ಲಿ ಕಮಲ್​ ಹಾಸನ್ (Kamal Haasan)​ ಬಿಗ್​ ಬಾಸ್​ ಶೋ ಹೋಸ್ಟ್​ ಆಗಿದ್ದರು. ಇದೀಗ ಈ ಜವಾಬ್ದಾರಿಯಿಂದ ನಟ ಕಮಲ್​ ಹಾಸನ್​ ಹಿಂದೆ ಸರಿದಿದ್ದಾರೆ. ಇವರ ಜಾಗಕ್ಕೆ ಯಾವ ನಟ ಬರುತ್ತಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.

ಕಮಲ್​ ಹಾಸನ್​

ಕಮಲ್​ ಹಾಸನ್​

  • Share this:
ಬಿಗ್​ಬಾಸ್ (Big Boss)​.. ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ (Reality Show). ಈ ಕಾರ್ಯಕ್ರಮ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಒಂದೇ ಮನೆಲಿ 12 ರಿಂದ 13 ಸೆಲೆಬ್ರಿಟಿ (Celebrity)ಗಳು 100 ದಿನ ಜೊತೆಯಾಗಿರುಗ ಈ ಶೋ, ನೋಡೋಕೆ ಒಂದು ಥ್ರಿಲ್ (Thrill)​. ಎಲ್ಲ ಭಾಷೆಗಳಲ್ಲೂ ಬಿಗ್​ ಬಾಸ್​ ಶೋ ಬಂದಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ (Kiccha Sudeep)​ ಅವರು ನಿರೂಪಕರಾಗಿದ್ದರೆ, ಹಿಂದಿಯಲ್ಲಿ ಬಜರಂಗಿ ಭಾಯ್​​ಜಾನ್​ ಸಲ್ಮಾನ್​ ಖಾನ್ (Salman Khan)​ ಬಿಗ್​ ಬಾಸ್​​ ನಡೆಸಿಕೊಡುತ್ತಾರೆ. ಇನ್ನೂ ತೆಲುಗಿನಲ್ಲಿ ನಾಗಾರ್ಜುನ (Nagarajuna) ಅವರು ಈ ರಿಯಾಲಿಟಿ ಶೋ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇತ್ತ ತಮಿಳಿನಲ್ಲಿ ಕಮಲ್​ ಹಾಸನ್ (Kamal Haasan)​ ಬಿಗ್​ ಬಾಸ್​ ಶೋ ಹೋಸ್ಟ್​ ಆಗಿದ್ದರು. ಇದೀಗ ಈ ಜವಾಬ್ದಾರಿಯಿಂದ ನಟ ಕಮಲ್​ ಹಾಸನ್​ ಹಿಂದೆ ಸರಿದಿದ್ದಾರೆ. ಇವರ ಜಾಗಕ್ಕೆ ಯಾವ ನಟ ಬರುತ್ತಾರೆ ಎಂಬ ಕುತೂಹಲ ಹೆಚ್ಚಾಗಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.

ಕಮಲ್ ಜಾಗಕ್ಕೆ ಬಂದ್ರು ಸ್ಟಾರ್​ ನಟ ಸಿಂಬು!

ಕಮಲ್​ ಹಾಸನ್​ ಜಾಗಕ್ಕೆ ಅವರ ಪುತ್ರಿ ಶ್ರುತಿ ಹಾಸನ್​ ಬರಲಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಸುದ್ದಿಯೂ ಸುಳ್ಳಾಗಿದೆ. ಕಮಲ್​ ಜಾಗಕ್ಕೆ ತಮಿಳಿನ ಸೂಪರ್​ ಸ್ಟಾರ್​ ಬಂದಿದ್ದಾರೆ. ತಮಿಳು ಬಿಗ್​ ಬಾಸ್​ ಅಲ್ಟಿಮೇಟ್​ ಅನ್ನು ಇವರೇ ಹೋಸ್ಟ್​ ಮಾಡಲಿದ್ದಾರೆ. ಹೌದು, ತಮಿಳು ಸ್ಟಾರ್​ ನಟ ಸಿಂಬು ಬಿಗ್​ ಬಾಸ್​ ಶೋ ಹೋಸ್ಟ್​ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನೂ ಇವರೇ ಫೈನಲ್​ ಆಗಿದ್ದಾರೆ ಎಂಬ ಮಾತುಗಳ ಸಹ ಕೇಳಿ ಬರುತ್ತಿವೆ. ಈ ಮೊದಲು ತಮಿಳು ನಟ ಶರತ್​ ಕುಮಾರ್​ ಬಿಗ್​ ಬಾಸ್​ ನಡೆಸಿಕೊಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದಾದ ಬಳಿಕ ಶ್ರುತಿ ಹಾಸನ್​ ಅವರ ಹೆಸರು ಸಹ ಕೇಳಿಬಂದಿತ್ತು. ಇದೀಗ ನಟ ಸಿಂಬು ಬಿಗ್​ ಬಾಸ್​ ನಡೆಸಿಕೊಡುವುದು ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Big Boss ನಿರೂಪಣೆಗೆ ಈ ಸ್ಟಾರ್ ನಟ ಗುಡ್‌ ಬೈ, ಹಾಗಿದ್ರೆ ಇನ್ಯಾರು ಬರ್ತಾರೆ!

ಸಿಂಬು ನಿರೂಪಕರಾಗಿರುವ ಪ್ರೋಮೋ ರಿಲೀಸ್​ ಸಾಧ್ಯತೆ!

ಸಿಂಬು ಬಿಗ್‌ಬಾಸ್ ಕಾರ್ಯಕ್ರಮದ ನಿರೂಪಕರಾಗಿ ಬರುತ್ತಿರುವ ಪ್ರೊಮೋ ಇಂದು ಬಿಡುಗಡೆ ಆಗುವ ಸಾಧ್ಯತೆ ಇದೆ. ಸಿಂಬು(Simbu) ಒಳ್ಳೆಯ ಮಾತುಗಾರರಾಗಿದ್ದು ಶೋ ಅನ್ನು ಚೆನ್ನಾಗಿ, ಆಸಕ್ತಿದಾಯಕವಾಗಿ ನಡೆಸಿಕೊಂಡು ಹೋಗಲಿದ್ದಾರೆ ಎಂಬ ನಿರೀಕ್ಷೆ ಆಯೋಜಕರದ್ದು. ಇನ್ನೂ ಸಿಂಬು ಅಭಿಮಾನಿಗಳ ಬಳಗವೂ ದೊಡ್ಡದಿದೆ. ಚಿಕ್ಕವಯಸ್ಸಿನಿಂದಲೂ ಚಿತ್ರರಂಗದಲ್ಲಿರುವ ಸಿಂಬು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಈ ಬಿಗ್​ಬಾಸ್​ ಶೋ ಹೋಸ್ಟ್​ ಸಿಂಬು ಎಂದು ತಿಳಿದ ಅಭಿಮಾನಿಗಳು ಫುಲ್ ಥ್ರಿಲ್​ ಆಗಿದ್ದಾರೆ.

ಇದನ್ನೂ ಓದಿ: `ಪುಷ್ಪ’ ಮುಡಿಗೆ ಫಾಲ್ಕೆ ಗೌರವ, ರಣವೀರ್ ಸಿಂಗ್​ಗೂ ಪ್ರಶಸ್ತಿ! ಲಿಸ್ಟ್ ಇಲ್ಲಿದೆ..

ನಿರೂಪಣೆ ಮಾಡಲ್ವಂತೆ ಕಮಲ್​ ಹಾಸನ್​!

ತಮಿಳು ಬಿಗ್​ ಬಾಸ್​ ನಿರೂಪಕನ ಸ್ಥಾನಕ್ಕೆ ವಿದಾಯ ಹೇಳಲು ಕಮಲ್​ ಹಾಸನ್​ ತೀರ್ಮಾನಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕಮಲ್​ ಹಾಸನ್​ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ, ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲದೇ ನಿರ್ದೇಶನ, ನಿರ್ಮಾಣ, ರಾಜಕೀಯ ರಂಗದಲ್ಲೂ ಕಮಲ್​ ಹಾಸನ್​ ಬ್ಯುಸಿ.  ಇದೆಲ್ಲದರ ನಡುವ ಬಿಗ್​ ಬಾಸ್​ ತಮಿಳು ಅಲ್ಟಿಮೇಟ್​ ಕಾರ್ಯಕ್ರಮದ ನಿರೂಪಣ ಮಾಡುತ್ತಿದ್ದರು. ಇದು ತಮಿಳು ಬಿಗ್​ಬಾಸ್ ಒಟಿಟಿ ವರ್ಷನ್​, ಆದರೆ, ಈಗ ಅವರು ಈ ಶೋ ನಿರೂಪಣೆಯಿದ ಹೊರಬುರುವುದಾಗಿ ತಿಳಿಸಿದ್ದಾರೆ.

ವಿಕ್ರಮ್’​ ಸಿನಿಮಾ ಕೆಲಸದಲ್ಲಿ ತೊಡಗಿಕೊಂಡಿರುವ ಕಮಲ್​!

ಕಮಲ್​ ಹಾಸನ್​ ಅವರು ಬಹುನಿರೀಕ್ಷಿತ ‘ವಿಕ್ರಮ್​’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಲೋಕೇಶ್​ ಕನಗರಾಜ್​ ಚಿತ್ರಕ್ಕೆ ಆ್ಯಕ್ಷ ನ್​ ಕಟ್​ ಹೇಳುತ್ತಿದ್ದಾರೆ. ಬಿಗ್​ ಬಾಸ್​ನಿಂದಾಗಿ ಈ ಸಿನಿಮಾದ ಶೂಟಿಂಗ್​ ಮತ್ತು ಇತರೆ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಇವರು ಬಿಗ್​ ಬಾಸ್​ ತಮಿಳು ಅಲ್ಟಿಮೇಟ್​ ಶೋ ನಿಂದ ಹೊರಬರಲು ತೀರ್ಮಾನಿಸಿದ್ದಾರೆ.

Published by:Vasudeva M
First published: