777 Charlie: ಚಾರ್ಲಿ ಈ ಇಂಗ್ಲಿಷ್ ಸಿನಿಮಾದಿಂದ ಕದ್ದ ಕತೆಯಾ? ಸಿನಿಮಾ ಬಗ್ಗೆ ಗೊತ್ತಿಲ್ಲ, ಟ್ರೇಲರ್ ಮಾತ್ರ ಸಖತ್ ಕಾಪಿ! ವಿಡಿಯೋ ನೋಡಿ

Sandalwood: ಹೌದು, ಆರ್​ ಮಾಧವನ್​ ಎನ್ನುವ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋವೊಂದನ್ನು ಹಾಕಿದ್ದು, ಅದರಲ್ಲಿ ಹಾಲಿವುಡ್​ ಚಿತ್ರ ಟೋಗೋ ಹಾಗೂ 777 ಚಾರ್ಲಿ ಚಿತ್ರವನ್ನು ಕಂಪೇರ್ ಮಾಡಿ ಎಡಿಟ್​ ಮಾಡಿ ಹಾಕಿದ್ದಾರೆ.

777 ಚಾರ್ಲಿ ಸಿನಿಮಾ

777 ಚಾರ್ಲಿ ಸಿನಿಮಾ

  • Share this:
ರಕ್ಷಿತ್ ಶೆಟ್ಟಿ (Rakshit Shetty) ನಟನೆ ಜೊತೆ ನಿರ್ದೇಶನದಲ್ಲೂ ಸೈ ಎನಿಸಿಕೊಂಡವರು. ಸ್ಯಾಂಡಲ್​ವುಡ್​  (Sandalwood) ನಲ್ಲಿ ತಮ್ಮದೇ ಆದ ಟ್ರೆಂಡ್ (Trend) ಸೃಷ್ಟಿ ಮಾಡಿದವರು ಎಂದರೆ ತಪ್ಪಾಗಲಾರದು. ರಕ್ಷಿತ್ ಶೆಟ್ಟಿ ಅಭಿನಯಕ್ಕೆ ಮಾರು ಹೋಗದವರು ಯಾರೂ ಇಲ್ಲ. ವಿಭಿನ್ನ ಮ್ಯಾನರಿಸಂ, ಕಿಕ್ ಕೊಡುವ ಡೈಲಾಗ್ಸ್ ರಕ್ಷಿತ್ ಶೆಟ್ಟಿ ಅವರ ಟ್ರೇಡ್ ಮಾರ್ಕ್ (Trade Mark) ಎನ್ನಬಹುದು. ತುಘಲಕ್'ನಿಂದ ತಮ್ಮ ಸಿನಿಮಾ ಜರ್ನಿ ಆರಂಭಿಸಿ ಈಗ '777 ಚಾರ್ಲಿ'(777 Charlie)ಗ ಬಂದು ನಿಂತಿದ್ದಾರೆ. 777 ಚಾರ್ಲಿ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದೆ. ಕರ್ನಾಟಕದ ಪ್ರತಿಯೊಬ್ಬರು ಸಹ ಅದನ್ನು ಬಹಳ ಇಷ್ಟಪಟ್ಟಿದ್ದು, ಸೋಷಿಯಲ್ ಮೀಡಿಯಾ (Social media)  ತುಂಬಾ ಅದರದ್ದೆ ಹವಾ ಇದೆ.

ಟ್ರೇಲರ್​ನ ಸಣ್ಣ ತುಣುಕುಗಳನ್ನು ವಾಟ್ಸ್​ಅಪ್​ ಸ್ಟೇಟಸ್​ ಹಾಕಿಕೊಳ್ಳುವುದು, ಚಾರ್ಲಿ ಫೋಟೋ ಡಿಪಿ ಮಾಡಿಕೊಳ್ಳುವುದು ಹೀಗೆ ಜನರಿಗೆ ಈ ಚಿತ್ರ ಟ್ರೇಲರ್ ಯಾವ ಮಟ್ಟಿಗೆ ಇಷ್ಟವಾಗಿದೆ ಎಂದರೆ ವರ್ಣಿಸುವುದು ಅಸಾಧ್ಯ. ಆದರೆ ಈಗೊಂದು ವಿಡಿಯೋ ಓಡಾಡುತ್ತಿದ್ದು, ಅದರಲ್ಲಿ ಚಾರ್ಲಿ ಟ್ರೇಲರ್ ಹಾಲಿವುಡ್​ ಚಿತ್ರದ ಕಾಪಿಯ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಆರ್​.ಮಾಧವನ್​ ಯೂಟ್ಯೂಬ್​ ಚಾನೆಲ್​ನಲ್ಲಿದೆ ವಿಡಿಯೋ

ಹೌದು, ಆರ್​ ಮಾಧವನ್​ ಎನ್ನುವ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋವೊಂದನ್ನು ಹಾಕಿದ್ದು, ಅದರಲ್ಲಿ ಹಾಲಿವುಡ್​ ಚಿತ್ರ ಟೋಗೋ ಹಾಗೂ 777 ಚಾರ್ಲಿ ಚಿತ್ರವನ್ನು ಕಂಪೇರ್ ಮಾಡಿ ಎಡಿಟ್​ ಮಾಡಿ ಹಾಕಿದ್ದಾರೆ. ಈ ಟ್ರೇಲರ್​ನ ಫ್ರೇಮ್​ ಟೋಗೋ ಚಿತ್ರದ್ದು ಎಂದು ಚಾನೆಲ್​ನಲ್ಲಿ ತೋರಿಸಿದ್ದು, ಅದರಲ್ಲಿ ಎರಡು ಚಿತ್ರದ ಫ್ರೇಮ್​ಗಳನ್ನು ಒಟ್ಟಿಗೆ ಎಡಿಟ್​ ಮಾಡಿ ಹಾಕಲಾಗಿದೆ.  ಸದ್ಯ ಈ ವಿಡಿಯೋವನ್ನು 17 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದು, ಹಲವಾರು ಜನರು ಕಾಮೆಂಟ್​ ಸಹ ಮಾಡಿದ್ದಾರೆ.


ಕೆಲವರು ಈ ಎರಡು ಚಿತ್ರಗಳು ಬೇರೆ ಬೇರೆ, ಅದರ ಕಥೆಯೇ ಬೇರೆ ಆಗಿದೆ ಹಾಗೆಯೇ 777 ಚಾರ್ಲಿ ಕಥೆ ಕೂಡ ಬೇರೆ ಎಂದು ವಾದಿಸಿದ್ದಾರೆ. ಇನ್ನು ಕೆಲವರು ಕನ್ನಡ ಸಿನಿಮಾ ಹಾಲಿವುಡ್ ರೇಂಜ್​ನಲ್ಲಿ ಆಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.  ಇನ್ನು ಒಬ್ಬರು ನಾನು ಟ್ಯಾಗೋ ಸಿನಿಮಾವನ್ನು ನೋಡಿದ್ದೇನೆ, ಅದಕ್ಕೂ ಚಾರ್ಲಿಗೂ ಏನು ಸಂಬಂಧವಿಲ್ಲ, ಎಲ್ಲೂ ಸಣ್ಣ ಪುಟ್ಟ ಹೋಲಿಕೆ ಇರಬಹುದು ಅಷ್ಟೇ ಎಂದಿದ್ದಾರೆ.

ಹಾಗೆಯೇ ಮತ್ತೊಬ್ಬರು ಟ್ಯಾಗೋ ಚಿತ್ರ 2019ರಲ್ಲಿ ಬಿಡುಗಡೆಯಾಗಿದ್ದು, ಆದರೆ 77 ಚಾರ್ಲಿ 2018ರಲ್ಲಿ ಆರಂಭವಾಗಿತ್ತು ಎಂದು ಹೇಳಿದ್ದಾರೆ. ಇನ್ನು ಆರ್​ ಮಾಧವನ್ ಹೆಸರಿನ ಈ ಯೂಟ್ಯೂಬ್​ ಚಾನೆಲ್​ ಜನರ ಯಾವುದೇ ಕಾಮೆಂಟ್​ಗಳಿಗೆ ಪ್ರತಿಕ್ರಿಯೆ ನೀಡಿಲ್ಲ.

ಅಭಿಮಾನಿಗಳಲ್ಲಿ ಹೆಚ್ಚಿದೆ ನಿರೀಕ್ಷೆ

777 ಚಾರ್ಲಿ ಟ್ರೇಲರ್ ನೋಡಿದ ಅಭಿಮಾನಿಗಳು ಈ ಚಿತ್ರ ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೇ ರಕ್ಷಿತ್ ಶೆಟ್ಟಿ ಜೀವನದಲ್ಲಿ ಸಹ ಮೈಲುಗಲ್ಲಾಗಲಿದೆ ಎನ್ನುತ್ತಿದ್ದಾರೆ. ಕೇವಲ ಟ್ರೇಲರ್ ಮೂಲಕವೇ ಕಿಚ್ಚು ಹಚ್ಚುತ್ತಿರುವ ಈ ಚಿತ್ರ, ಅಭಿಮಾನಿಗಳ ನಿರೀಕ್ಷೆಯನ್ನು ಸಹ ಮೀರುತ್ತದೆ ಎಂದರೆ ತಪ್ಪಲ್ಲ.

ಇನ್ನು ಕಿರಣ್ ರಾಜ್ ನಿರ್ದೇಶನದ ಈ ಚಿತ್ರ ಒಂದು ಸುಂದರವಾದ ಕಥಾ ಹಂದರವನ್ನು ಹೊಂದಿದ್ದು, ಶ್ವಾನ ಮತ್ತು ಮನುಷ್ಯನ ನಡುವಿನ ಸಂಬಂಧವನ್ನು ಸಾರಿ ಹೇಳುತ್ತದೆ. ಈ ಕಥೆ ತುಂಬಾ ಎಮೋಷನಲ್ ಆಗಿದ್ದು, ಜನರ ಮನಸ್ಸಿಗೆ ಹತ್ತಿರವಾಗುತ್ತದೆ ಎನ್ನುತ್ತಾರೆ ನಿರ್ಮಾಪಕರು.

ಈ ಚಿತ್ರ 2018ರಲ್ಲಿ ಆರಂಭವಾಗಿದ್ದು, ಆದರೆ ತಯರಾಗಲು ಸುಮಾರು 4 ವರ್ಷ ತೆಗೆದುಕೊಂಡಿದೆ. ಇನ್ನು ಈ ಚಿತ್ರದ ವಿಶೇಷತೆ ಎಂದರೆ ಶ್ವಾನದ ಅದ್ಭುತ ಪ್ರದರ್ಶನ ಎನ್ನಬಹುದು. ಇದರಲ್ಲಿ ಪ್ರಮುಖ ಪಾತ್ರ ಶ್ವಾನದ್ದೇ ಆಗಿರುವುದರಿಂದ, ಅದರ ಮೂಡ್ಗೆ ತಕ್ಕ ಹಾಗೆ ಶೂಟಿಂಗ್ ಮಾಡಬೇಕಿತ್ತು, ಹಾಗಾಗಿ ಚಿತ್ರ ಸ್ವಲ್ಪ ತಡವಾಯಿತು ಎಂದು ತಂಡ ಹೇಳಿದೆ.
Published by:Sandhya M
First published: