Aishwarya Rai: `ಇರುವರ್’ ಚಿತ್ರದಲ್ಲಿ ನಟಿ ಐಶ್ವರ್ಯಾ ರೈ ಪಾತ್ರ ನೋಡಿ ಜಯಲಲಿತಾ ಆಗ ಹೇಳಿದ್ದೇನು ಗೊತ್ತೇ?

‘ಇರುವರ್’ ಚಿತ್ರದಲ್ಲಿ ಐಶ್ವರ್ಯಾ ರೈ ಮಾಡಿದ ಪಾತ್ರವು ಜಯಲಲಿತಾ ಅವರಿಗೆ ತುಂಬಾನೇ ಇಷ್ಟವಾಗಿತ್ತಂತೆ

ಇರುವರ್’ ಚಿತ್ರದ ಪೋಸ್ಟರ್

ಇರುವರ್’ ಚಿತ್ರದ ಪೋಸ್ಟರ್

  • Share this:
ನಟಿ ಐಶ್ವರ್ಯಾ ರೈ (Aishwarya Rai) ಸಿನೆಮಾ ಚಿತ್ರರಂಗಕ್ಕೆ ಮೊದಲ ಬಾರಿ ಎಂಟ್ರಿ ನೀಡಿದ್ದೆ 1997 ರಲ್ಲಿ ಬಿಡುಗಡೆಯಾದ ‘ಇರುವರ್’ ಚಿತ್ರದ ಮೂಲಕ ಎಂದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ.ಸಂತೋಷ್ ಶಿವನ್ ಚಿತ್ರೀಕರಿಸಿದ ಮಣಿರತ್ನಂ (Directed by Mani Ratnam) ನಿರ್ದೇಶನದ ಮತ್ತು ಎ.ಆರ್.ರಹಮಾನ್(AR Rahman) ಅವರ ಸಂಗೀತದೊಂದಿಗೆ ಬಿಡುಗಡೆಯಾದಂತಹ ‘ಇರುವರ್’ (Iruvar) ಚಿತ್ರವು ನಿನ್ನೆಗೆ ಬಿಡುಗಡೆಯಾಗಿ ಸರಿಯಾಗಿ 25 ವರ್ಷವಾಯಿತು ಎಂದು ಹೇಳಿದರೆ ತಪ್ಪಾಗುವುದಿಲ್ಲ.

25 ನೇ ವಾರ್ಷಿಕೋತ್ಸವ
ಈ ಚಿತ್ರವು ಬಿಡುಗಡೆಯ ನಂತರ ಆಗ ತುಂಬಾನೇ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಿತ್ತು ಮತ್ತು 2012 ರಲ್ಲಿ ಬ್ರಿಟಿಷ್ ಫಿಲ್ಮ್ ಇನ್ಸ್ಟಿಟ್ಯೂಟ್ ಮಾಡಿದ 1000 ಶ್ರೇಷ್ಠ ಚಿತ್ರಗಳಲ್ಲಿ ಇದನ್ನು ಸಹ ಪಟ್ಟಿ ಮಾಡಲಾಗಿತ್ತು. ಈ ಚಿತ್ರವು ಎಂ.ಜಿ. ರಾಮಚಂದ್ರನ್, ಕೆ. ಕರುಣಾನಿಧಿ ಮತ್ತು ಜೆ. ಜಯಲಲಿತಾ ಎಂಬ ಮೂವರು ತಮಿಳುನಾಡಿನ ಮುಖ್ಯಮಂತ್ರಿಗಳ ಜೀವನದಿಂದ ಪ್ರೇರಿತವಾದ ಕಥಾ ಹಂದರವನ್ನು ಹೊಂದಿತ್ತು. ಈ ಚಿತ್ರವು ಜನವರಿ 14, 2022 ರಂದು ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತದೆ. ಈ ಚಿತ್ರವು ಐಶ್ವರ್ಯಾ ಅವರ ಸಿನೆಮಾ ವೃತ್ತಿ ಜೀವನಕ್ಕೆ ದಾರಿ ಮಾಡಿಕೊಟ್ಟಿತು ಎಂದು ಹೇಳಬಹುದು.

‘ಇರುವರ್’ ಚಿತ್ರದಲ್ಲಿ ಐಶ್ವರ್ಯಾ ರೈ ಮಾಡಿದ ಪಾತ್ರವು ಜಯಲಲಿತಾ ಅವರಿಗೆ ತುಂಬಾನೇ ಇಷ್ಟವಾಗಿತ್ತಂತೆ ಮತ್ತು ಒಂದು ಟಾಕ್ ಶೋ ನಲ್ಲಿ ಜಯಲಲಿತಾ ಅವರನ್ನು ಪರದೆಯ ಮೇಲೆ ಅವರ ಪಾತ್ರವನ್ನು ಮಾಡಲು ಯಾರು ಸೂಕ್ತ ನಟಿ ಎಂದು ಕೇಳಿದ ಪ್ರಶ್ನೆಗೆ, ಅವರು “ನನ್ನ ಜೀವನದ ಮೇಲೆ ಚಿತ್ರ ಮಾಡುವುದು ನನಗೆ ಇಷ್ಟವಿಲ್ಲ, ಈಗಾಗಲೇ ಇರುವರ್ ಚಿತ್ರ ನೋಡಿದ್ದೇನೆ, ನನ್ನ ರಾಜಕಾರಿಣಿ ಆಗುವ ದಿನಗಳ ಮುಂಚಿನ ಜೀವನದ ಪಾತ್ರವನ್ನು ಮಾಡಲು ಐಶ್ವರ್ಯಾ ರೈ ಸೂಕ್ತ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದರು.

ಇದನ್ನೂ ಓದಿ: ಮತ್ತೊಂದು ಇಂಟರ್​ನ್ಯಾಷನಲ್​ ಸಿನಿಮಾದಲ್ಲಿ ಐಶ್ವರ್ಯಾ ರೈ: 10 ವರ್ಷದ ಬಳಿಕ ಹಾಲಿವುಡ್​ಗೆ ರೀ ಎಂಟ್ರಿ!

ವಿಮರ್ಶಾತ್ಮಕ ಪ್ರತಿಕ್ರಿಯೆ
ಆದರೆ ರಾಜಕಾರಿಣಿ ಆದ ನಂತರದ ನನ್ನ ಜೀವನವನ್ನು ನಟಿಸುವುದು ಯಾರಿಗಾದರೂ ಸ್ವಲ್ಪ ಕಷ್ಟ ಆಗಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದ್ದರಂತೆ.ಅನೇಕ ವರ್ಷಗಳ ನಂತರ, ನಟಿ ಕಂಗನಾ ರನೌತ್ ಅವರು ‘ತಲೈವಿ’ ಚಿತ್ರದಲ್ಲಿ ಜಯಲಲಿತಾ ಅವರ ಪಾತ್ರವನ್ನು ನಿರ್ವಹಿಸಿದರು, ಇದು ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಬಿಡುಗಡೆಯಾಯಿತು ಮತ್ತು ವಿಮರ್ಶಾತ್ಮಕ ಪ್ರತಿಕ್ರಿಯೆಯನ್ನು ಗಳಿಸಿತು ಎಂದು ಹೇಳಬಹುದು.

ಐಶ್ವರ್ಯಾ ರೈ ಅವರನ್ನು ಮಣಿರತ್ನಂ ಗೆ ಛಾಯಾಗ್ರಾಹಕ ರಾಜೀವ್ ಮೆನನ್ ಅವರು ಪರಿಚಯಿಸಿದರು. ರಾಜೀವ್ ಅವರೊಂದಿಗೆ ಹಲವಾರು ಜಾಹೀರಾತುಗಳಲ್ಲಿ ಐಶ್ವರ್ಯಾ ರೈ ಅವರು ಕೆಲಸ ಮಾಡಿದ್ದರು ಎಂದು ಹೇಳಲಾಗುತ್ತಿತ್ತು. ಒಂದು ಮನೋರಂಜನೆ ಮಾಧ್ಯಮಕ್ಕೆ ನೀಡಿದ ಹಳೆಯ ಸಂದರ್ಶನದಲ್ಲಿ, ಐಶ್ವರ್ಯಾ ಅವರು “ನಾನು ಮೂರು ಅಥವಾ ನಾಲ್ಕು ಚಲನಚಿತ್ರಗಳಲ್ಲಿ ನಟಿಸಿದ ನಂತರವೇ ಹಿಂದಿ ಚಲನಚಿತ್ರೋದ್ಯಮದಲ್ಲಿ ಜನರು ತಮ್ಮ ಬಗ್ಗೆ ಗಮನ ಹರಿಸಲು ಪ್ರಾರಂಭಿಸಿದರು” ಎಂದು ಹೇಳಿದರು.

ನಿರ್ದೇಶಕರಿಗೆ ಧನ್ಯವಾದ
ಆ ಸಮಯದಲ್ಲಿ ನನ್ನ ಪ್ರತಿಭೆಯನ್ನು ಗಮನಿಸಿದ್ದಕ್ಕಾಗಿ ಮತ್ತು ನನ್ನನ್ನು ನಟಿ ಪಾತ್ರಗಳಿಗೆ ಸೂಕ್ತ ಎಂದು ಪರಿಗಣಿಸದಿದ್ದಕ್ಕಾಗಿ ನನ್ನ ಎಲ್ಲಾ ನಿರ್ದೇಶಕರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಹೇಳಿದ್ದರು.

ಇದನ್ನೂ ಓದಿ: Aish- Abhi ಫೋಟೋ ವೈರಲ್ : ಇದು ಅಸಲಿಯಲ್ಲ ನಕಲಿ ಎಂದು ಕೈ ಮುಗಿದ ಅಭಿಷೇಕ್

"ಮಣಿರತ್ನಂ ಅವರೇ ಸ್ವತಃ ಆರಂಭದಲ್ಲಿಯೇ ನನ್ನ ಮೇಲೆ ನಂಬಿಕೆ ಹೊಂದಿದ್ದರು ಮತ್ತು ಇರುವರ್ ಚಿತ್ರದಲ್ಲಿ ನನಗೆ ಒಂದು ಪಾತ್ರವನ್ನು ನೀಡಿದ್ದರು, ಇದು ನನ್ನ ಆತ್ಮವಿಶ್ವಾಸ, ನನ್ನ ನಂಬಿಕೆ ಮತ್ತು ನಟನೆಯ ವಿದ್ಯಾರ್ಥಿಯಾಗಿ ಕಲಿಯಲು ನನ್ನ ಆಸಕ್ತಿಯನ್ನು ಹೆಚ್ಚಿಸಿತು" ಎಂದು ಹೇಳಿದ್ದರು. ಐಶ್ವರ್ಯಾ ಅವರು ಮೊದಲಿನಂತೆ ಆಗಾಗ್ಗೆ ಚಿತ್ರಗಳಲ್ಲಿ ಈಗ ಕೆಲಸ ಮಾಡುವುದಿಲ್ಲ, ಆದರೆ ಮಣಿರತ್ನಂ ಅವರ ಎರಡು ಭಾಗಗಳ ಐತಿಹಾಸಿಕ ಚಿತ್ರವಾದ ‘ಪೊನ್ನ್ಯಿನ್ ಸೆಲ್ವನ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಮಣಿರತ್ನಂ ಅವರ ಗುರು ಮತ್ತು ರಾವಣ್ ಚಿತ್ರದಲ್ಲಿ ಸಹ ನಟಿಸಿದ್ದಾರೆ.
Published by:vanithasanjevani vanithasanjevani
First published: