Irrfan Khan: 'ಅಂಗ್ರೇಜಿ ಮೀಡಿಯಮ್​' ಚಿತ್ರದ ಟ್ರೈಲರ್​ ಬಿಡುಗಡೆಗೂ ಮುನ್ನ ಇರ್ಫಾನ್​ ಖಾನ್​ ಹಂಚಿಕೊಂಡ ವಿಶೇಷ ವಿಡಿಯೋ ಇಲ್ಲಿದೆ..!

Angrezi Medium Trailer: ನಟ ಇರ್ಫಾನ್​ ಖಾನ್​ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವುದು ಗೊತ್ತೇ ಇದೆ. ಹೀಗಿರುವಾಗಲೇ ಅವರು ತಮ್ಮ ಟ್ವಿಟರ್​ನಲ್ಲಿ ಒಂದು ವಿಡಿಯೋವನ್ನು ಹಚಿಕೊಂಡಿದ್ದಾರೆ. 'ನಮಸ್ತೆ ಭಾಯೋ ಔರ್​ ಬೆಹೆನೋ.. ನಿಮ್ಮೊಂದಿಗೆ ನಾನಿದ್ದೇನೆ ಹಾಗೂ ಇಲ್ಲ... ನನ್ನ ದೇಹದಲ್ಲಿ ಇಷ್ಟವಿಲ್ಲದ ಅತಿಥಿಗಳು' ಇದ್ದಾರೆ ಎಂದು ಹೇಳಿದ್ದಾರೆ.

ನಟ ಇರ್ಫಾನ್​ ಖಾನ್​

ನಟ ಇರ್ಫಾನ್​ ಖಾನ್​

  • Share this:
ಬಾಲಿವುಡ್​ನ ಖ್ಯಾತ ನಟ ಇರ್ಫಾನ್​ ಖಾನ್​ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಿದ್ದರು. ಅಲ್ಲಿಂದ ಬಂದ ಕೂಡಲೇ ಅವರು ತಮ್ಮ ಹೊಸ ಸಿನಿಮಾ 'ಅಂಗ್ರೇಜಿ ಮೀಡಿಯಮ್​' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

'ಅಂಗ್ರೇಜಿ ಮೀಡಿಯಮ್​' ಚಿತ್ರದ ಟ್ರೈಲರ್​ ಇಂದು ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಇರ್ಫಾನ್​ ತಮ್ಮ ಟ್ವಿಟರ್​ನಲ್ಲಿ ಒಂದು ವಿಡಿಯೋವನ್ನು ಹಚಿಕೊಂಡಿದ್ದಾರೆ. 'ನಮಸ್ತೆ ಭಾಯೋ ಔರ್​ ಬೆಹೆನೋ.. ನಿಮ್ಮೊಂದಿಗೆ ನಾನಿದ್ದೇನೆ ಹಾಗೂ ಇಲ್ಲ... ನನ್ನ ದೇಹದಲ್ಲಿ ಇಷ್ಟವಿಲ್ಲದ ಅತಿಥಿಗಳು' ಇದ್ದಾರೆ ಎಂದು ಹೇಳಿದ್ದಾರೆ.

As we embark on the journey to release #AngreziMedium, here’s a small note for you allhttps://t.co/Sr0Pp1x3dv #AngreziMedium trailer out tomorrow!ಇರ್ಫಾನ್​ ಅವರು ಕೊಟ್ಟಿರುವ ಸಂದೇಶವನ್ನು ಕೇಳಿದವರು ನೊಂದುಕೊಳ್ಳುವುದಂತೂ ಖಂಡಿತ. ಅವರ ಆರೋಗ್ಯದ ಕುರಿತು ಭಾವುಕರಾಗಿ ಮಾತನಾಡಿರುವ ಇರ್ಫಾನ್​, ನನ್ನ ದೇಹದಲ್ಲಿರುವ ಇಷ್ಟವಿಲ್ಲದ ಅತಿಥಿಗಳು ನನ್ನನ್ನು ತುಂಬಾ ಬ್ಯುಸಿಯಾಗಿಡುತ್ತಾರೆ. ನಾನು ನಿಮಗೆ ಈ ಕುರಿತು ಹೇಳುತ್ತಿರುತ್ತೇನೆ ಎಂದು ಇರ್ಫಾನ್​ ಕೊಟ್ಟಿರುವ ಸಂದೇಶದಲ್ಲಿದೆ.ಇನ್ನು ಇರ್ಫಾನ್​ ಖಾನ್​ ಅವರ ಈ ಭಾವನಾತ್ಮಕ ವಿಡಿಯೋ ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ. ಇರ್ಫಾನ್​ ಖಾನ್​ (ನ್ಯೂರೋ ಎಂಡೋಕ್ರೈನ್ ಟ್ಯೂಮರ್) ಕ್ಯಾನ್ಸರ್​ನಿಂದ ಬಳಲುತ್ತಿದ್ದು, 2017ರಿಂದ ಇದಕ್ಕೆ ಇರ್ಫಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ತಮ್ಮ ಆರೋಗ್ಯದ ಕುರಿತಾಗಿ ಆಗಾಗ ಇರ್ಫಾನ್​ ಖಾನ್​ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ: Love Aaj Kal Kissing Scene: ಸಾರಾ ಅಲಿ ಖಾನ್​-ಕಾರ್ತಿಕ್​ ಆರ್ಯನ್​ರ ಕಿಸ್ಸಿಂಗ್​ ದೃಶ್ಯಕ್ಕೆ ಬಿತ್ತು ಕತ್ತರಿ..!

ಇರ್ಫಾನ್​ ಖಾನ್​ರ 'ಅಂಗ್ರೇಜಿ ಮೀಡಿಯಮ್​' ಸಿನಿಮಾದಲ್ಲಿ ಕರೀನಾ ಕಪೂರ್​ ಸಹ ನಟಿಸುತ್ತಿದ್ದಾರೆ. ಈ ಬಗ್ಗೆ ಇರ್ಫಾನ್​ ಖಾನ್ ಹಂಚಿಕೊಂಡಿರುವ ವಿಡಿಯೋದಲ್ಲಿ ಕರೀನಾ ಚಿತ್ರೀಕರಣದ ಸೆಟ್​ನಲ್ಲಿರುವ ಚಿತ್ರಗಳಿವೆ. ಈ ಸಿನಿಮಾ ಇದೇ ವರ್ಷ ಮಾರ್ಚ್​ 20ಕ್ಕೆ ರಿಲೀಸ್​ ಆಗಲಿದೆ.

Golden Star Ganesh Wedding Anniversary: ವಿಶೇಷ ದಿನದಂದು ಹೆಂಡತಿ ಜೊತೆಗಿನ ಮೊದಲ ಭೇಟಿ ನೆನೆದ ಗೋಲ್ಡನ್​ ಸ್ಟಾರ್​ ಗಣೇಶ್​..!


 

First published: