ಅಮ್ಮ ನನ್ನನ್ನು ಕರೆಯುತ್ತಿದ್ದಾಳೆ.. ಇರ್ಫಾನ್ ಖಾನ್​​ ಕೊನೆಯ ಮಾತುಗಳನ್ನು ನೆನಪಿಸಿಕೊಂಡ ಹೆಂಡತಿ ಸುತಾಪ ಸಿಖ್ದರ್

Irrfan Khan: ಇರ್ಫಾನ್​ ಖಾನ್​ ಕೊನೆಯ ಕ್ಷಣದಲ್ಲಿ ತನ್ನ ತಾಯಿಯನ್ನು ನೆನೆಪಿಸಿಕೊಳ್ಳುತ್ತಿದ್ದರು. ‘ಅಮ್ಮ ನನ್ನನ್ನು ಕರೆಯುತ್ತಿದ್ದಾಳೆ, ನನ್ನ ಪಕ್ಕದಲ್ಲಿ ಕೂತಿದ್ದಾಳೆ. ನನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾಳೆ ಎಂದು ಮಾತನಾಡುತ್ತಿದ್ದರು ಎಂದು ಹೆಂಡತಿ ಸುತಾಪ ಸಿಖ್ದರ್​ ಹೇಳಿದ್ದಾರೆ.

news18-kannada
Updated:May 1, 2020, 2:19 PM IST
ಅಮ್ಮ ನನ್ನನ್ನು ಕರೆಯುತ್ತಿದ್ದಾಳೆ.. ಇರ್ಫಾನ್ ಖಾನ್​​ ಕೊನೆಯ ಮಾತುಗಳನ್ನು ನೆನಪಿಸಿಕೊಂಡ ಹೆಂಡತಿ ಸುತಾಪ ಸಿಖ್ದರ್
ಇರ್ಫಾನ್​ ಖಾನ್,ಸುತಾಪ ಸಿಖ್ದರ್
  • Share this:
ಬಾಲಿವುಡ್​ ಖ್ಯಾತ ನಟ ಇರ್ಫಾನ್​ ಖಾನ್​ ಬುಧವಾರದಂದು ನಿಧನರಾಗಿದ್ದರು. ಅವರು ಕೊನೆಯ ಕ್ಷಣದಲ್ಲಿ ಏನು ಹೇಳುತ್ತಿದ್ದರು? ಯಾರ ಬಗ್ಗೆ ಮಾತನಾಡುತ್ತಿದ್ದರು? ಇವೆಲ್ಲವನ್ನು ಇರ್ಫಾನ್​ ಅವರ ಹೆಂಡತಿ ಸುತಾಪ ಸಿಖ್ದರ್​ ಹೇಳಿದ್ದಾರೆ.

ಇರ್ಫಾನ್​ ಖಾನ್​ ಕೊನೆಯ ಕ್ಷಣದಲ್ಲಿ ತನ್ನ ತಾಯಿಯನ್ನು ನೆನೆಪಿಸಿಕೊಳ್ಳುತ್ತಿದ್ದರು. ‘ಅಮ್ಮ ನನ್ನನ್ನು ಕರೆಯುತ್ತಿದ್ದಾಳೆ, ನನ್ನ ಪಕ್ಕದಲ್ಲಿ ಕೂತಿದ್ದಾಳೆ. ನನ್ನನ್ನು ಕರೆದುಕೊಂಡು ಹೋಗಲು ಬಂದಿದ್ದಾಳೆ ಎಂದು ಮಾತನಾಡುತ್ತಿದ್ದರು ಎಂದು ಹೆಂಡತಿ ಸುತಾಪ ಸಿಖ್ದರ್​ ಹೇಳಿದ್ದಾರೆ.

ಇರ್ಫಾನ್​ ಸಾಯುವುದಕ್ಕೆ ನಾಲ್ಕು ದಿನಗಳ ಮುಂಚೆ ತನ್ನ ತಾಯಿ ಸಯಿದಾ ಬೇಗಂ ಅವರನ್ನು ಕಳೆದುಕೊಂಡಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ರಾಜಸ್ಥಾನದ ಸ್ವಗೃಹದಲ್ಲಿ ಮೃತರಾದರು. ತಾಯಿ ಸಾವನ್ನಪ್ಪಿದ ದಿನ ಇರ್ಫಾನ್​​ ಮುಂಬೈ ಉಳಿದಿದ್ದರು. ಲಾಕ್​ಡೌನ್​ನಿಂದಾಗಿ ತಾಯಿ ಅಂತ್ಯ ಸಂಸ್ಕಾರಕ್ಕೆ ಹೋಗಲಾರದೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಅಂತ್ಯ ಸಂಸ್ಕಾರ ವೀಕ್ಷಿಸಿದ್ದರು. ಈ ಘಟನೆಯ ನಾಲ್ಕು ದಿನಗಳ ಬಳಿಕ ಇರ್ಫಾನ್​ ಕೂಡ ಇಹಲೋಕ ತ್ಯಜಿಸಿದ್ದಾರೆ.

ಇರ್ಫಾನ್​ ಸಾವು ಬಾಲಿವುಡ್​ಗೆ ಭಾರೀ ನಷ್ಟವನ್ನು ಉಂಟು ಮಾಡಿದೆ. ಬಾಲಿವುಡ್​ ಖ್ಯಾತ ನಟನನ್ನು ಕಳೆದುಕೊಂಡ ದುಖಃದಲ್ಲಿದೆ. ಹೀಗಿರುವಾಗ ಮತ್ತೊರ್ವ ಖ್ಯಾತ ನಟ ರಿಷಿ ಕಪೂರ್​ (ಮಾ.30) ಸಾವನಪ್ಪಿದ್ದಾರೆ. ಸಿನಿ ಪರದೆಯ ಮೇಲೆ ಎಲ್ಲರನ್ನು ನಗಿಸುತ್ತಿದ್ದ ಶೇಷ್ಠ ನಟರಿಬ್ಬರನ್ನು ಬಾಲಿವುಡ್​ ಕಳೆದುಕೊಂಡಿದೆ.

ಸಚಿನ್ ಶಿಸ್ತು, ಕೊಹ್ಲಿ ಆಕ್ರಮಣಶೀಲತೆ, ಧೋನಿ ಶಾಂತ ಸ್ವಭಾವ ನನಗಿಷ್ಟ; ಪ್ರಿಯಂ ಗರ್ಗ್​
First published: May 1, 2020, 2:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading