ಕ್ಯಾನ್ಸರ್​ನಿಂದ ಬಳಲುತ್ತಿರುವ ನಟ ಇರ್ಫಾನ್ ಖಾನ್​ ಲೇಟೆಸ್ಟ್​ ಫೋಟೋ ವೈರಲ್​

zahir | news18
Updated:July 16, 2018, 10:55 PM IST
ಕ್ಯಾನ್ಸರ್​ನಿಂದ ಬಳಲುತ್ತಿರುವ ನಟ ಇರ್ಫಾನ್ ಖಾನ್​ ಲೇಟೆಸ್ಟ್​ ಫೋಟೋ ವೈರಲ್​
zahir | news18
Updated: July 16, 2018, 10:55 PM IST
-ನ್ಯೂಸ್​ 18 ಕನ್ನಡ

'ನ್ಯೂರೋ ಎಂಡೋಕ್ರೈನ್ ಟ್ಯೂಮರ್' ಕಾಯಿಲೆಯಿಂದ ಬಳಲುತ್ತಿರುವ ಬಾಲಿವುಡ್ ನಟ ಇರ್ಫಾನ್ ಖಾನ್ ಲಂಡನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದೆರೆಡು ತಿಂಗಳಿಂದ ವಿದೇಶದಲ್ಲಿರುವ ಅವರು 'ಕಾರ್ವಾನ್' ಚಿತ್ರದ ಪೋಸ್ಟರನ್ನು  ಟ್ವಿಟರ್​ನಲ್ಲಿ ಹಂಚಿಕೊಂಡು ಇತ್ತೀಚೆಗೆ ಯುವ ನಟ-ನಟಿಯರಿಗೆ ಶುಭಕೋರಿದ್ದರು.

ಆದರೆ, ಆರೋಗ್ಯದ ಬಗ್ಗೆ ಎಲ್ಲೂ ಅವರು ಮಾಹಿತಿ ಹಂಚಿಕೊಂಡಿಕೊಂಡಿರಲಿಲ್ಲ. ಇದರ ನಡುವೆ ಬಾಲಿವುಡ್​ ನಟನ ಬಗ್ಗೆ ಹಲವು ಊಹಪೋಹಾಗಳು ಸಾಮಾಜಿಕ ತಾಣದಲ್ಲಿದ್ದು ಹರಿದಾಡಿದ್ದು ಆತಂಕಕ್ಕೆ ಕಾರಣವಾಗಿತ್ತು. ಅಭಿಮಾನಿಗಳಿಗೆ ತಮ್ಮ ಆರೋಗ್ಯದ ಸ್ಥಿತಿಗತಿ ಬಗ್ಗೆ ತಿಳಿಯುವಂತೆ ನಟ ಇರ್ಫಾನ್ ಖಾನ್ ಹೊಸ ಫೋಟೋವೊಂದನ್ನು  ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.ಈ ಫೋಟೋದಲ್ಲಿ ಸ್ವಲ್ಪ ಬಳಲಿದಂತೆ ಕಾಣುವ ಇರ್ಫಾನ್ ಖಾನ್, ನಗುಮುಖದೊಂದಿಗೆ ಕಾಣಿಸಿರುವುದು ಅಭಿಮಾನಿಗಳಿಗೆ ಸಮಾಧಾನ ತಂದಿದೆ. ಕಿವಿಗೆ ಇಯರ್​ಫೋನ್ ಹಾಕಿ ಕೆಲಸದಲ್ಲಿ ನಿರತರಾಗಿರುವ ಪ್ರತಿಭಾವಂತ ನಟನ ಈ ಫೋಟೋ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿರುವುದನ್ನು ಸೂಚಿಸಿದಂತಿದೆ.

ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುವ ಅಪರೂಪದ ಕ್ಯಾನ್ಸರ್ ರೋಗದಿಂದ ಬಾಲಿವುಡ್ ನಟ ಬಳಲುತ್ತಿದ್ದಾರೆ.  ಇರ್ಫಾನ್ ಖಾನ್ ಅಭಿನಯಿಸಿದ ಕೊನೆಯ ಸಿನಿಮಾ 'ಕಾರ್ವಾನ್'  ಶೀಘ್ರದಲ್ಲೇ ತೆರೆಗೆ ಬರಲಿದೆ.
First published:July 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...