ಲಂಡನ್ ಇಂಡಿಯನ್​ ಸಿನಿಮೋತ್ಸವದಲ್ಲಿ ಇರ್ಫಾನ್​ ಖಾನ್​ಗೆ ಸ್ಪೆಷಲ್​ ಐಕಾನ್​ ಪ್ರಶಸ್ತಿ

news18
Updated:July 1, 2018, 3:01 PM IST
ಲಂಡನ್ ಇಂಡಿಯನ್​ ಸಿನಿಮೋತ್ಸವದಲ್ಲಿ ಇರ್ಫಾನ್​ ಖಾನ್​ಗೆ ಸ್ಪೆಷಲ್​ ಐಕಾನ್​ ಪ್ರಶಸ್ತಿ
news18
Updated: July 1, 2018, 3:01 PM IST
ನ್ಯೂಸ್​ 18 ಕನ್ನಡ

ತನ್ನ ಅದ್ಭುತ ಮತ್ತು ಪ್ರಬುದ್ಧ ನಟನೆಗೆ ಹೆಸರಾಗಿರುವ ಬಾಲಿವುಡ್​ ನಟ ಇರ್ಫಾನ್​ ಖಾನ್ ಲಂಡನ್​ನ ಬಾಗ್ರಿಯಲ್ಲಿ ನಡೆದ ಲಂಡನ್​ ಇಂಡಿಯನ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಸ್ಪೆಷಲ್ ಐಕಾನ್​ ಅವಾರ್ಡ್​ಗೆ ಭಾಜನರಾಗಿದ್ದಾರೆ.

ಲೈಫ್​ ಆಫ್​ ಪೈ, ಸ್ಲಂಡಾಗ್​ ಮಿಲಿಯನೇರ್​, ಮುಂಬೈ ಮೇರಿ ಜಾನ್​, ನ್ಯೂಯಾರ್ಕ್​ ಮುಂತಾದ ಸಿನಿಮಾಗಳ ಅಭಿನಯದ ಮೂಲಕ ಪ್ರೇಕ್ಷಕರನ್ನು ಸೆಳೆದಿರುವ ಇರ್ಫಾನ್ ನ್ಯೂರೋಎಂಡೋಕ್ರೈನ್​ ಟ್ಯೂಮೆರ್​ಗೆ​ ಲಂಡನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ, ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸದೆ ಖಾಸಗಿಯಾಗಿ ಸ್ವೀಕರಿಸಿದ್ದಾರೆ.

ಇರ್ಫಾನ್​ ಖಾನ್​ ಮಾತ್ರವಲ್ಲದೆ, ನಟ ಮನೋಜ್​ ಭಾಜಪಯೀ ಕೂಡ ಐಕಾನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಂತಹ ಅದ್ದೂರಿ ಮತ್ತು ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಉಳಿದಂತೆ, ಬಾಲಿವುಡ್ ನಟಿ ರಿಚಾ ಚಡ್ಡಾಗೆ ಔಟ್​ಸ್ಟಾಂಡಿಂಗ್​ ಅಚೀವ್​ಮೆಂಟ್​ ಪ್ರಶಸ್ತಿ, ಮೃಣಾಲ್​ ಠಾಕೂರ್​ಗೆ ಬೆಸ್ಟ್​ ನ್ಯೂಕಮರ್​ ಅವಾರ್ಡ್ ಪ್ರಶಸ್ತಿಗಳು ಲಭಿಸಿವೆ.
First published:July 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...