14 ವರ್ಷಕ್ಕೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ; ಅಮಿರ್ ಖಾನ್ ಮಗಳು
ವ್ಯಕ್ತಿಯೊಬ್ಬ ತನ್ನ ಮೇಲೆ ತಿಳಿದು ಈ ರೀತಿ ದೌರ್ಜನ್ಯ ಎಸಗುತ್ತಿದ್ದಾನೆ ಎಂಬ ಬಗ್ಗೆ ನನಗೆ ಅರ್ಥವಾಗಲಿಲ್ಲ. ಆತ ಉದ್ದೇಶಪೂರ್ವಕವಾಗಿಯೇ ಈ ಕಾರ್ಯ ನಡೆಸಿದ ಎಂದು ನನಗೆ ತಿಳಿಯಲು ವರ್ಷವೇ ಬೇಕಾಯಿತು.
ಬಾಲಿವುಡ್ನ ಪರ್ಫೆಕ್ಟ್ ನಟ ಅಮಿರ್ ಖಾನ್, ತನ್ನ ಸೃಜನಾತ್ಮಕ ಕಾರ್ಯದ ಮೂಲಕ ಗುರುತಿಸಿಕೊಂಡಿದ್ದ ಈನಟನ ಮಗಳು ಇರಾ ಖಾನ್. ಅಪ್ಪನಂತೆ ನೇರಮಾತಿನ ಇರಾ ಖಾನ್ ಇತ್ತೀಚೆಗಷ್ಟೇ ತನಗೆ ಇದ್ದ ಖಿನ್ನತೆ ಖಾಯಿಲೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಳು. ಇಂದು ಮತ್ತೆ ತನ್ನ ಜೀವನದಲ್ಲಿ ಆದ ಮತ್ತೊಂದು ಘಟನೆ ಬಗ್ಗೆ ಇರಾ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾಳೆ. ಹೌದು ಸ್ಟಾರ್ ನಟನ ಮಗಳಾಗಿದ್ದರೂ ಇರಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಈ ಬಗ್ಗೆ ಮಾತನಾಡಿರುವ ಇರಾ, ತಾನು 14ನೇ ವಯಸ್ಸಿನವಳಿದ್ದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಆ ವಯಸ್ಸಿನಲ್ಲಿ ಈ ಬಗ್ಗೆ ನನಗೆ ಅರ್ಥವಾಗಲಿಲ್ಲ ಎಂದು ತಿಳಿಸಿದ್ದಾಳೆ.
ವ್ಯಕ್ತಿಯೊಬ್ಬ ತನ್ನ ಮೇಲೆ ತಿಳಿದು ಈ ರೀತಿ ದೌರ್ಜನ್ಯ ಎಸಗುತ್ತಿದ್ದಾನೆ ಎಂಬ ಬಗ್ಗೆ ನನಗೆ ಅರ್ಥವಾಗಲಿಲ್ಲ. ಆತ ಉದ್ದೇಶಪೂರ್ವಕವಾಗಿಯೇ ಈ ಕಾರ್ಯ ನಡೆಸಿದ ಎಂದು ನನಗೆ ತಿಳಿಯಲು ವರ್ಷವೇ ಬೇಕಾಯಿತು. ಈ ಬಗ್ಗೆ ತಕ್ಷಣಕ್ಕೆ ನನ್ನ ಪೋಷಕರಿಗೆ ಮೇಲ್ ಬರೆದು ಪರಿಸ್ಥಿತಿ ತಿಳಿಸಿದೆ. ಇದಾದ ಬಳಿಕ ಈ ಆಘಾತದಿಂದ ಹೊರ ಬಂದೆ. ಈ ಪರಿಸ್ಥಿತಿಯಿಂದ ಹೊರ ಬಂದ ಬಳಿಕ ಈ ಬಗ್ಗೆ ಇದ್ದ ಹೆದರಿಕೆ ನನಗೆ ಹೊರಟುಹೋಯಿತು ಎಂದಿದ್ದಾಳೆ.
ಇದೇ ವೇಳೆ ಪೋಷಕರ ನಡುವಿನ ವಿಚ್ಛೇದನದ ಕುರಿತು ಕೂಡ ಮಾತನಾಡಿದ್ದಾಳೆ. ಇರಾ ಮತ್ತು ಆಕೆ ಸಹೋದರ ಜುನೈದ್ಗಾಗಿ ಯಾವಾಗಲೂ ಪೋಷಕರು ಬೆಂಬಲವಾಗಿ ನಿಂತಿದ್ದ ಕಾರಣ ಅವರ ವಿಚ್ಛೇದನ ತಮಗೆ ಆಘಾತ ನೀಡಲಿಲ್ಲ. ನಾನು ಚಿಕ್ಕವಳಿದ್ದಾಗ ಅವರು ಬೇರೆಯಾದರೂ ಆದರೆ ಅವರಿಬ್ಬರು ಸೌಹರ್ದಯುತವಾಗಿ ಇದ್ದಿದ್ದರಿಂದ ನನಗೆ ಅವರ ವಿಚ್ಛಾದನ ನೋವು ನೀಡಲಿಲ್ಲ. ನಾವು ಇಡೀ ಕುಟುಂಬದ ಸದಸ್ಯರು ಇಂದಿಗೂ ಸ್ನೇಹಿತರಂತೆ ಇದ್ದೇವೆ ಎಂದರು.
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ