ಟೀಂ ಇಂಡಿಯಾ ಹಾಗೂ ಐಪಿಎಲ್ ನಲ್ಲಿ (IPL) ಪಂಜಾಬ್ ಪರ ಓಪನರ್ ಆಗಿ ಕಣಕ್ಕಿಳಿಯುವ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ (Shikhar Dhawan) ಕಡೆಯಿಂದ ಇದೀಗ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಆನ್ ಫಿಲ್ಡ್ ನಲ್ಲಿ ಹೆಚ್ಚು ಅಬ್ಬರಿಸುವ ಮೂಲಕ ಸುದ್ದಿಯಾಗುತ್ತಿದ್ದ ಅವರು ಇದೀಗ ಬೇರಯದೇ ವರದಿಯಿಂದ ಸದ್ದು ಮಾಡುತ್ತಿದ್ದಾರೆ. ಹೌದು, ಗಬ್ಬರ್ ಸಿಂಗ್ ಇದೀಗ ಸದ್ದಿಲ್ಲದೇ ಬಾಲಿವುಡ್ಗೆ (Bolllywood) ಎಂಟ್ರಿ ನೀಡುತ್ತಿದ್ದಾರೆ. ಅಚ್ಚರಿ ಪಡೆಬೇಡಿ, ಇದು ನಿಜ ಶಿಖರ್ ಧವನ್ ಹಿಂದಿ (Hindi) ಚಿತ್ರವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದಾಗಿ ವರದಿಯಾಗಿದೆ. ಈ ಮಾಹಿತಿ ಅಂತೂ ಧವನ್ ಅಭಿಮಾನಿಗಳಿಗೆ ಈ ಬಾರಿ ಡಬಲ್ ಧಮಾಕಾ ಎಂಬಂತಾಗಿದೆ. ಏಕೆಂದರೆ ಈಗಾಗಲೇ ಒಂದು ಚಿತ್ರದಲ್ಲಿ ನಟಿಸಿದ್ದು, ಇನ್ನೊಂದು ಬಿಗ್ ಬಜೇಟಡ್ ಚಿತ್ರದಲ್ಲಿ ಅವರು ನಟಿಸುವುದಾಗಿ ತಿಳಿದುಬಂದಿದೆ.
ಶೂಟಿಂಗ್ ಮುಗಿಸಿದ ಶಿಖರ್ ಧವನ್:
ಇನ್ನು, ಕ್ರಿಕೆಟಿಗ ಶಿಖರ್ ಧವನ್ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಅಲ್ಲದೇ ತಮ್ಮ ಮೊದಲ ಸಿನಿಮಾದ ಶೂಟಿಂಗ್ ಸಹ ಮುಗಿಸಿರುವುದಾಗಿ ವರದಿಯಾಗಿದೆ. ಆದರೆ ಅವರು ಅಭಿನಯಿಸಿರುವ ಚಿತ್ರದ ಹೆಸರಾಗಲಿ, ಅದರ ಪಾತ್ರವರ್ಗವಾಗಲಿ ಯಾವುದೆಂದು ಈವರೆಗೂ ತಿಳಿದುಬಂದಿಲ್ಲ. ಇದಲ್ಲದೇ ಈ ಚಿತ್ರವು ಇದೇ ವರ್ಷದಲ್ಲಿ ಬಿಡುಗಡೆಯಾಗಲಿದೆಯಂತೆ. ಹೀಗಾಗಿ ಈ ಕುರಿತಾದ ಅಧಿಕೃತ ಘೋಷನೇಯೊಂದೆ ಬಾಕಿ ಉಳಿದಿದೆ. ಇನ್ನು, ಈ ಚಿತ್ರದ ಬಿಡುಗಡೆಯ ನಂತರ ಗಬ್ಬರ್ ಸಿಂಗ್ ಬಾಲಿವುಡ್ ನ ಇನ್ನೊಂದು ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುವುದಾಗಿ ವರದಿಗಳು ಬಂದಿದ್ದು, ಧವನ್ ಅಭಿಮಾನಿಗಳಿಗೆ ಸಂತಸ ತಂದಿದೆ.
ಪ್ರಮುಖ ಪಾತ್ರದಲ್ಲಿ ಗಬ್ಬರ್ ಸಿಂಗ್:
ಈಗಾಗಲೇ ತಮ್ಮ ಮೊದಲ ಚಿತ್ರದ ಶೂಟಿಂಗ್ ಅನ್ನು ಶಿಖರ್ ಧವನ್ ಮುಗಿಸಿರುವುದಾಗಿ ತಿಳಿದುಬಂದಿದೆ. ಆದರೆ ಮೂಲಗಳಿಂದ ತಿಳಿದುಬಂದಂತೆ, ಧವನ್ ಈ ಚಿತ್ರದಲ್ಲಿ ಕೇವಲ ಅತಿಥಿ ಪಾತ್ರದಲ್ಲಿ ನಟಿಸುತ್ತಿಲ್ಲವಂತೆ. ಬದಲಿಗೆ ಅವರ ಪಾತ್ರವು ಚಿತ್ರದಲ್ಲಿ ಪ್ರಮುಖವಾಗಿದ್ದು, ಮೊದಲಿನಿಂದ ಕೊನೆಯವರೆಗೂ ಅವರು ಇರಲಿದ್ದಾರೆ ಎಂದು ಹೇಳಲಾಗಿದೆ.ಹೀಗಾಗಿ ಧವನ್ ಅಭಿನಯದ ಚಿತ್ರದ ಮೇಲೆ ಈಗಾಗಲೇ ನಿರೀಕ್ಷೆಗಳು ಹೆಚ್ಚಿವೆ.
ಇದನ್ನೂ ಓದಿ: Kannadathi Serial: ಹರ್ಷ-ಭುವಿ ಮದುವೆ ನೋಡೋಕೆ ಅಮ್ಮಮ್ಮ ಇರಲ್ವಾ? ಕನ್ನಡತಿಯಲ್ಲಿ ಹೊಸ ಟ್ವಿಸ್ಟ್
ಅಕ್ಷಯ್ ಜೊತೆ ಕಾಣಿಸಕೊಂಡಿದ್ದ ಧವನ್:
ಇನ್ನು, ಕೆಲ ದಿನಗಳ ಹಿಂದೆ ಶಿಖರ್ ಧವನ್ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಕಾಣಿಸಿಕೊಂಡಿದ್ದರು. ಹೀಗಾಗಿ ಅನೇಕರು ಧವನ್ ಅಕ್ಷಯ್ ಜೊತೆ ಸಿನಿಮಾ ಮಾಡುತ್ತಿದ್ದು, ಅವರು ರಾಮ್ ಸೇತು ಚಿತ್ರದಲ್ಲಿ ನಟಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಧವನ್ ರಾಮ್ ಸೇತು ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡುತ್ತಿಲ್ಲ ಎಂದು ತಿಳಿದುಬಂದಿದೆ. ರಾಮ್ ಸೇತು ಚಿತ್ರದಲ್ಲಿ ನಾಯಕ ನಟನಾಗಿ ಅಕ್ಷಯ್ ಕುಮಾರ್ ಕಾಣಿಸಿಕೊಂಡರೆ, ನಟಿಯಾಗಿ ಜಾಕ್ವೇಲಿನ್ ಫರ್ನಾಂಡಿಸ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅಭಿಷೇಕ್ ಶರ್ಮಾ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇದನ್ನೂ ಓದಿ: Actress Death: ಗೀತಾ, ದೊರೆಸಾನಿ ಧಾರಾವಾಹಿಗಳಲ್ಲಿ ಮಿಂಚಿದ್ದ ನಟಿ ದುರ್ಮರಣ! ಫ್ಯಾಟ್ ಸರ್ಜರಿ ವೇಳೆ ಚೇತನಾ ರಾಜ್ ಸಾವು
ಆರೆಂಜ್ ಕ್ಯಾಪ್ ರೇಸ್ ನಲ್ಲಿ ಗಬ್ಬರ್:
ಪ್ರಸ್ತುತ ಐಪಿಎಲ್ 2022ರ 15ನೇ ಆವೃತ್ತಿಯು ನಡೆಯುತ್ತಿದ್ದು, ಇದರಲ್ಲಿ ಧವನ್ ಪಂಜಾಬ್ ಕಿಂಗ್ಸ್ ಪರ ಆಟವಾಡುತ್ತಿದ್ದಾರೆ. ಈ ಬಾರಿ ಅವರು ಉತ್ತಮ ಪ್ರದರ್ಶನ ತೋರುತ್ತಿದ್ದು, ಆರೆಂಜ್ ಕ್ಯಾಪ್ ರೇಸ್ ನಲ್ಲಿದ್ದಾರೆ. ಹೌದು, ಧವನ್ ಈವರೆಗೆ ಒಟ್ಟು 13 ಪಂದ್ಯಗಳನ್ನಾಡಿದ್ದು, ಇದರಲ್ಲಿ 38.27 ಎವರೇಜ್ ಮೂಲಕ 421 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್ ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಇನ್ನು, ಪಂಜಾಬ್ ಕಿಂಗ್ಸ್ ತಂಡವು ಸಹ ಈ ಬಾರಿ ಪ್ಲೇ ಆಫ್ ರೇಸ್ ನಲ್ಲಿದ್ದು, ಆಡಿರುವ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 7ರಲ್ಲಿ ಸೋತಿದೆ. 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ