IPL 2020: ಈಸಲ ಕಪ್​ ನಮ್ದೇ ಅನ್ನೋ ಆರ್​ಸಿಬಿ ಹುರುಪನ್ನು ಡಬಲ್​ ಮಾಡಲಿದ್ದಾರೆ ಕಿಚ್ಚ ಸುದೀಪ್​-ರಚಿತಾ?

Kichcha Sudeep - Rachita Ram: ಈ ಬಾರಿ ಏನೇ ಆದರೂ ಕಪ್​ ಗೆಲ್ಲಲೇ ಬೇಕು ಎನ್ನುವ ಛಲಕ್ಕೆ ಆರ್​ಸಿಬಿ ತಂಡ ಬಿದ್ದಿದೆ. ಈ ಹುರುಪನ್ನು ​ಮತ್ತಷ್ಟು ಹೆಚ್ಚಿಸುವ ಕೆಲಸವನ್ನು ಕಿಚ್ಚ ಸುದೀಪ್​ ಹಾಗೂ ರಚಿತಾರಾಮ್ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಸುದೀಪ್​-ರಚಿತಾ ರಾಮ್​

ಸುದೀಪ್​-ರಚಿತಾ ರಾಮ್​

 • Share this:
  ​ಯಾವಾಗ 2020ರ ಐಪಿಎಲ್ ಆರಂಭವಾಗುತ್ತದೆ ಎನ್ನುವ ವಿಚಾರ ಬಹಿರಂಗವಾಗಿತ್ತೋ ಆಗಿನಿಂದಲೇ ಈ ಸಲ ಕಪ್​ ನಮ್ಮದೇ ಎನ್ನುತ್ತಿದ್ದಾರೆ ಆರ್​​ಸಿಬಿ ಅಭಿಮಾನಿಗಳು. ಈ ಬಾರಿಯ ಆರ್​ಸಿಬಿ ತಂಡದ ಜೋಶ್​ ಹೆಚ್ಚಿಸಲು ಕಿಚ್ಚ ಸುದೀಪ್​ ಹಾಗೂ ರಚಿತಾ ರಾಮ್​ ಬರುತ್ತಿದ್ದಾರಂತೆ. ಅರ್ಥಾತ್​ ಈ ಬಾರಿ ಬೆಂಗಳೂರು ತಂಡದ ರಾಯಭಾರಿಗಳಾಗಿ ಇಬ್ಬರೂ ಆಯ್ಕೆ ಆಗುತ್ತಿದ್ದಾರೆ ಎನ್ನಲಾಗಿದೆ.

  ಈ ಬಾರಿ ದುಬೈನಲ್ಲಿ ಐಪಿಎಲ್​ ನಡೆಯುತ್ತಿದೆ. ಇಷ್ಟು ವರ್ಷ ಐಪಿಎಲ್​ ಆಡಿದ ಹೊರತಾಗಿಯೂ ಆರ್​ಸಿಬಿಗೆ ಕಪ್​ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಏನೇ ಆದರೂ ಕಪ್​ ಗೆಲ್ಲಲೇ ಬೇಕು ಎನ್ನುವ ಛಲಕ್ಕೆ ಆರ್​ಸಿಬಿ ತಂಡ ಬಿದ್ದಿದೆ. ಈ ಹುರುಪನ್ನು ​ಮತ್ತಷ್ಟು ಹೆಚ್ಚಿಸುವ ಕೆಲಸವನ್ನು ಕಿಚ್ಚ ಸುದೀಪ್​ ಹಾಗೂ ರಚಿತಾರಾಮ್ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ.

  ಇದನ್ನೂ ಓದಿ: ಹಿಂದಿ ಭಾಷೆಯ ವಿರೋಧಿ ಅಲ್ಲ, ಕನ್ನಡಿಗರು ಕನ್ನಡಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂದ ಸ್ಯಾಂಡಲ್​ವುಡ್​ ನಿರ್ದೇಶಕ..!

  ಸದ್ಯ ಈ ವಿಚಾರ ಇನ್ನೂ ಅಧಿಕೃತವಾಗಿಲ್ಲ. ಹಾಗಂತ ಇದನ್ನು ಅಲ್ಲಗಳೆಯುವಂತಲೂ ಇಲ್ಲ. ಏಕೆಂದರೆ ಸುದೀಪ್​ ಈ ಮೊದಲಿನಿಂದಲೂ ಕ್ರಿಕೆಟ್​ ಪ್ರೇಮಿ. ಸಿನಿಮಾ ರಂಗದಲ್ಲಿರುವವರನ್ನೆಲ್ಲರೂ ಒಂದುಗೂಡಿಸಿ ಕ್ರಿಕೆಟ್​ ಪಂದ್ಯ ನಡೆಸಿದ್ದಾರೆ. ಹೀಗಾಗಿ, ಅವರಿಗೆ ಇಂಥ ಅವಕಾಶ ಸಿಕ್ಕರೆ ಅವರು ಅದರನ್ನು ಖಂಡಿತವಾಗಿಯೂ ಅಲ್ಲಗಳೆಯುವುದಿಲ್ಲ. ಇನ್ನು, ರಚಿತಾರಾಮ್​ ಕನ್ನಡದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದವರು. ಅವರಿಗೆ ಈಗ ಇಂಥ ಅವಕಾಶ ಬಂದರೆ ಅದನ್ನು ಒಪ್ಪಿಕೊಳ್ಳದೆ ಇರುವುದಿಲ್ಲ ಎನ್ನಲಾಗುತ್ತಿದೆ.

  ಮೊದಲ ಆವೃತ್ತಿಯಲ್ಲಿ ಬಾಲಿವುಡ್​ ನಟಿ ಕತ್ರಿನಾ ಕೈಫ್​ ಆರ್​ಸಿಬಿ ತಂಡಕ್ಕೆ ರಾಯಭಾರಿ ಆಗಿದ್ದರು. ನಂತರ ಚಿತ್ರರಂಗದಲ್ಲಿ ಬ್ಯುಸಿ ಆದ್ದರಿಂದ ಅವರು ಹಿಂದೆ ಸರಿದಿದ್ದರು. ಕರ್ನಾಟಕದವರೇ ಆದ ದೀಪಿಕಾ ಪಡುಕೋಣೆ ಆರ್​ಸಿಬಿ ತಂಡಕ್ಕೆ ಚಿಯರ್​ ಹೇಳಿದ್ದರು. ನಟಿ ರಮ್ಯಾ, ಪುನೀತ್​ ರಾ​ಜ್​ಕುಮಾರ್, ಗಣೇಶ್​ ಕೂಡ ಆರ್​ಸಿಬಿ ತಂಡದ ರಾಯಭಾರಿ ಆಗಿದ್ದರು/
  Published by:Rajesh Duggumane
  First published: