Ranu Mondal New Viral Video: ಜಾನೇ ಮೇರಿ ಜಾನೇ ಮನ್.. ಮತ್ತೆ ಸೆನ್ಸೆಶನ್ ಕ್ರಿಯೇಟ್ ಮಾಡಿದ ರಾನು ಮೊಂಡಲ್

ರಾನು ಮೊಂಡಲ್ ಜಾನೇ ಮೇರಿ ಜಾನೇ ಮನ್ ಹಾಡು ಯುಟ್ಯೂಬ್ ನಲ್ಲಿ ಸೆಪ್ಟೆಂಬರ್ 29ರಂದು ಅಪ್ಲೋಡ್ ಮಾಡಲಾಗಿದೆ.

ಗಾಯಕಿ ರಾನು ಮೊಂಡಲ್

ಗಾಯಕಿ ರಾನು ಮೊಂಡಲ್

  • Share this:
ನವದೆಹಲಿ: ರಾತ್ರೋ ರಾತ್ರಿ ಸ್ಟಾರ್ ಪಟ್ಟ ಪಡೆದ ಗಾಯಕಿ ರಾನು ಮೊಂಡಲ್ (Singer Ranu Mondal) ಅವರ ಮತ್ತೊಂದು ವಿಡಿಯೋ ಇಂಟರ್ ನೆಟ್ ನಲ್ಲಿ ಸೆನ್ಸೆಶನ್ ಕ್ರಿಯೇಟ್ ಮಾಡಿದ್ದಾರೆ. ಎಲ್ಲೆಡೆ ವೈರಲ್ ಆಗಿರುವ ಜಾನೇ ಮೇರಿ ಜಾನೇ ಮನ್ ಹಾಡು ಹಾಡುವ ಮೂಲಕ ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿದೆ. ಇದಕ್ಕೂ ಮೊದಲು 'ಮಾಣಿಕ್ ಮಗೆ ಹಿತೆ' ವಿಡಿಯೋ ವೈರಲ್ ಆಗಿದೆ. ಯುಟ್ಯೂಬ್ ರೊಂಧನ್ ಪೊರಿಚೋಯ್ ನಲ್ಲಿ ರಾನು ಮೊಂಡಲ್ ಹಾಡಿದ 15 ಸೆಕೆಂಡ್ ಹಾಡು ಸಖತ್ ವೈರಲ್ ಆಗಿದೆ. ಕೆಂಪು ಬಣ್ಣದ ಟೀಶರ್ಟ್ ಮತ್ತು ಸ್ಕರ್ಟ್ ಧರಿಸಿ ರಾನು ಫುಲ್ ಜೋಶ್ ನಲ್ಲಿ ಹಾಡಿದ್ದಾರೆ.

ಬಚಪನ್ ಕಾ ಪ್ಯಾರಾ ರಿಮಿಕ್ಸ್

ಕಳೆದ ಕೆಲ ದಿನಗಳಿಂದ 'ಬಚಪನ್ ಕಾ ಪ್ಯಾರಾ' (Bachpan Ka Pyaar' in New Viral Video) ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಹುತೇಕ ಎಲ್ಲ ಸೆಲೆಬ್ರಿಟಿಗಳು ಈ ಹಾಡಿಗೆ ಡಬ್‍ಮ್ಯಾಶ್ ಮಾಡುತ್ತಿದ್ದಾರೆ. ಇನ್ನು ಗಾಯಕ ಬಾದ್ ಶಾ ಸಹ ಈ ಹಾಡನ್ನು ರಿಮಿಕ್ಸ್ ಮಾಡಿ, ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಸದ್ಯ ಬಾದ್ ಶಾ ರಿಮಿಕ್ಸ್ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗಿದ್ದು, ಶೇರ್ ಮಾಡಿಕೊಳ್ಳುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ರಾನು ಮೊಂಡಲ್ ಜಾನೇ ಮೇರಿ ಜಾನೇ ಮನ್ ಹಾಡು ಯುಟ್ಯೂಬ್ ನಲ್ಲಿ ಸೆಪ್ಟೆಂಬರ್ 29ರಂದು ಅಪ್ಲೋಡ್ ಮಾಡಲಾಗಿದೆ.ರೈಲ್ವೇ ನಿಲ್ದಾಣದಲ್ಲಿ ಹಾಡುತ್ತಿದ್ದ ರಾನು ಮೊಂಡಲ್

ಪಶ್ಚಿಮ ಬಂಗಾಳದ ರಾಣಾಘಾಟ್ ರೈಲ್ವೇ ನಿಲ್ದಾಣದಲ್ಲಿ ಗಾಯಕಿ ಲತಾ ಮಂಗೇಶ್ಕರ್ ಹಾಡಿರುವ ಏಕ್ ಪ್ಯಾರ ಕಾ ನಗಮಾ ಹಾಡು ಹಾಡಿದ್ದರು. 2019ರಲ್ಲಿ ಫೇಸ್‍ಬುಕ್ ನಲ್ಲಿ ರಾನು ಮೊಂಡಲ್ ಹಾಡನ್ನು ಪ್ರಯಾಣಿಕರೊಬ್ಬರು ಹಂಚಿಕೊಂಡಿದ್ದಾರೆ. ರಾನು ಮೊಂಡಲ್ ಇಂಪಾದ ಧ್ವನಿ ಕೇಳುಗರನ್ನು ರಂಜಿಸಿತ್ತು. ನಂತರ ಖಾಸಗಿ ವಾಹಿನಿಯ ಸಿಂಗಿಂಗ್ ರಿಯಾಲಿಟಿ ಶೋಗೆ ಆಹ್ವಾನಿಸಲಾಗಿತ್ತು. ಇದಾದ ಬಳಿಕ ಸಂಗೀತ ನಿರ್ದೇಶಕ ಹಿಮೇಶ್ ರೆಶ್ಮಿಯಾ ತಮ್ಮ ಹ್ಯಾಪಿ ಹಾಡಿ ಆ್ಯಂಡಿ ಚಿತ್ರದಲ್ಲಿ ರಾನು ಮೊಂಡಲ್ ಗೆ ಅವಕಾಶ ನೀಡಿದ್ದರು. ಈ ಹಾಡು ಸಹ ರಾನು ಮೊಂಡಲ್ ಜೀವನವನ್ನು ಬದಲಿಸಿತ್ತು.

ಇದನ್ನೂ ಓದಿ:  Explained: ಈರುಳ್ಳಿ ಬೆಲೆ 50, ಟೊಮಾಟೊ 45: ಅಡುಗೆ ವಸ್ತುಗಳ ಬೆಲೆ ಏರಿಕೆಗೆ ಕಾರಣವೇನು?

ರಾನು ಮೊಂಡಲ್ ಮೇಕಪ್

ರಾನು ಮೊಂಡಲ್ ಫೇಮಸ್ ಆಗುತ್ತಿದ್ದಂತೆ ಹಲವು ಕಾರ್ಯಕ್ರಮಗಳಿಗೆ ವಿಶೇಷ ಆಹ್ವಾನಿತರಾಗಿದ್ದರು. ಈ ವೇಳೆ ರಾನು ಮೊಂಡಲ್ ಮೇಕ್ ಓವರ್ ಸಲೂನ್ ಶಾಪ್ ಉದ್ಘಾಟನೆಗೆ ತೆರಳಿದ್ದರು. ಈ ಕಾರ್ಯಕ್ರಮದಲ್ಲಿ ರಾನು ಹಾಕಿದ್ದ ಮೇಕಪ್ ಫೋಟೋ ಹೆಚ್ಚು ವೈರಲ್ ಆಗಿದ್ದವು. ಒಂದೆರಡು ಹಾಡು ಮತ್ತು ಟಿವಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ರಾನು ಬದಲಾಗಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದರು. ಸೆಲ್ಫಿ ಕೇಳಲು ಬಂದ ಅಭಿಮಾನಿಯ ಜೊತೆಯಲ್ಲಿ ರಾನು ಮೊಂಡಲ್ ನಡೆದುಕೊಂಡ ರೀತಿ ನೆಟ್ಟಿಗರನ್ನು ಕೆರಳಿಸಿತ್ತು.

ಇದನ್ನೂ ಓದಿ: Ranu Mondal: ಹೇಗಿದ್ದರು..ಹೇಗಾದರು: ರಾನು ಮಂಡಲ್ ಹೊಸ ಅವತಾರ ನೋಡಿ ನೆಟ್ಟಿಗರು ಶಾಕ್..!

ಇಂಗ್ಲಿಷ್ ಮಾತನಾಡಿದ ಟ್ರೋಲ್ ಆಗಿದ್ದ ರಾನು

ಖ್ಯಾತ ಪತ್ರಕರ್ತೆ ಬರ್ಖಾ ದತ್ ಅವರ ಕಾರ್ಯಕ್ರಮದಲ್ಲಿ ರಾನು ಕಾಣಿಸಿಕೊಂಡಿದ್ದರು. ಸಂದರ್ಶನದ ಬಳಿಕ ರಾನು ಅವರನ್ನು ವೇದಿಕೆಯಲ್ಲಿ ಹಾಡಲು ಕೇಳಿಕೊಂಡಿದ್ದರು. 'ಹಿಮೇಶ್ ರೇಶಮ್ಮಿಯಾ ಅವರೊಂದಿಗೆ ಹಾಡಿದ ಹಾಡನ್ನು ನಾನು ಹಾಡಬೇಕೇ?' ಎಂದಾಗ ಅದೇ ಆಗಬಹುದು ಎಂದು ನಿರೂಪಕಿ ಹೇಳಿದರು. ಕೆಲ ನಿಮಿಷಗಳ ಕಾಲ ಹಾಡನ್ನು ಯೋಚಿಸಿದ ರಾನು, 'ಓ ದೇವರೇ, ನಾನು ಮರೆತಿದ್ದೇನೆ' ಎಂದು ಹೇಳಿದ್ದಾರೆ. ರಾನು ಅವರ ಇಂಗ್ಲಿಷ್‍ನ ತಪ್ಪುಗಳನ್ನೇ ಬಳಸಿಕೊಂಡ ಟ್ರೋಲಿಗರು ಇದೀಗ ಇಂಟರ್ ನೆಟ್ ಸ್ಟಾರ್ ರನ್ನು ಗೇಲಿ ಮಾಡಿದ್ದರು.
Published by:Mahmadrafik K
First published: