iಅಂತಾರಾಷ್ಟ್ರೀಯ ನಟ ಕಬೀರ್ (Kabir Bedi) ಬೇಡಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಇತ್ತೀಚಿಗಷ್ಟೆ ಮೈಸೂರಿನಲ್ಲಿ ಹಂಟರ್ ಚಿತ್ರಕ್ಕಾಗಿಯೇ ಕರ್ನಾಟಕಕ್ಕೆ (Karnataka) ಕಾಲಿಟ್ಟಿದ್ದರು. ಅದಾದ್ಮೇಲೆ ಇನ್ನೇನು ತಮ್ಮ ಈ ಚಿತ್ರದ ಬಗ್ಗೆ ಪ್ರೆಸ್ ಮೀಟ್ ಮಾಡಿ ಮಾತನಾಡಬೇಕು ಅನ್ನೋ ಮನಸ್ಥಿತಿಯಲ್ಲೂ ಇದ್ದರು. ಆದರೆ ಟೈಮ್ ಸಾಲದೇ ಇರೋ ಕಾರಣ, ಕಬೀರ್ ಬೇಡಿ ಮೈಸೂರಿನಲ್ಲಿ ಹಂಟರ್ ಸಿನಿಮಾದ ಚಿತ್ರೀಕರಣ ಮುಗಿಸಿ ಹೊರಟು ಹೋಗಿದ್ದರು. ಇವರು ಬಂದಿದ್ದಾರೆ ಅನ್ನೋ ಮಾಹಿತಿ ಕೂಡ (Media)ಮಾಧ್ಯಮಗಳಲ್ಲಿ ಬಂತು. ಆದರೆ ಈಗ ಕಬೀರ್ ಬೇಡಿ ಕನ್ನಡಕ್ಕೆ ಮತ್ತೆ ಬಂದಿದ್ದಾರೆ. ಈ ಸಲ ಇವರು ಸುಮ್ನೆ ಹೋಗಿಲ್ಲ. ಮಾಧ್ಯಮದ (Questions) ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ತಮ್ಮ ಎರಡನೇ ಚಿತ್ರದ ಕುರಿತು ಒಂದಿಷ್ಟು ಮಾಹಿತಿಯನ್ನೂ ಹಂಚಿಕೊಂಡು ಹೋಗಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಕನ್ನಡಕ್ಕೆ ಮತ್ತೆ ಬಂದ ಹಾಲಿವುಡ್ ನಟ ಕಬೀರ್ ಬೇಡಿ!
ಅಂತಾರಾಷ್ಟ್ರೀಯ ನಟ ಕಬೀರ್ ಬೇಡಿ ತಮ್ಮ ಕಂಠಿಸಿರಿಯಿಂದಲೇ ಸೆಳೆದು ಬಿಡುತ್ತಾರೆ. ಹಾಲಿವುಡ್ ಲುಕ್ ಇರೋದ್ರಿಂದ ಅವರ ಧ್ವನಿ ಅದಕ್ಕೆ ಪೂರಕವಾಗಿಯೇ ಇವೆ. ಹೀಗೆ ಎಲ್ಲರನ್ನ ಸೆಳೆಯ ಬಲ್ಲ ಕಬೀರ್ ಬೇಡಿ ಕನ್ನಡಕ್ಕೆ ಮತ್ತೆ ಬಂದಿರೋದೇ ವಿಶೇಷ ಎಂದೇ ಹೇಳಬಹುದು.
ಹಾಗೆ ಕನ್ನಡಕ್ಕೆ ಮತ್ತೆ ಬರಲು ಮನಸ್ಸು ಮಾಡಿರೋ ಈ ನಟನನ್ನ ಕರೆದು ತಂದವರು ಯಾರು ಗೊತ್ತೇ? ಹೌದು, ಅದೇ ಈ ಹಿಂದಿನ ಹಂಟರ್ ಸಿನಿಮಾದ ನಿರ್ಮಾಪಕ ತ್ರಿವಿಕ್ರಮ್ ಸಾಪಲ್ಯ ಅವರೇ ಈ ಕೆಲಸ ಮಾಡಿದ್ದಾರೆ. ಎಲ್ಲೆಡೆ ತಮ್ಮದೇ ಚಾಪು ಮೂಡಿಸಿರೋ ನಟ ಕಬೀರ್ ಬೇಡಿ ಇಂಗ್ಲೀಷ್ ನಲ್ಲಿಯೇ ತಮ್ಮ ಮಾತನ್ನ ಆರಂಭಿಸಿದ್ದರು.
ಕಬೀರ್ ಬೇಡಿ ಮತ್ತೆ ಕನ್ನಡಕ್ಕೆ ಬಂದ ಆ ಚಿತ್ರ ಯಾವುದು?
ಕಬೀರ್ ಬೇಡಿ ಮತ್ತೆ ಕನ್ನಡಕ್ಕೆ ಬಂದಿರೋ ಆ ಚಿತ್ರದ ಹೆಸರು ಕರಿ ಹೈದ..ಕರಿ ಅಜ್ಜ. ಈ ಚಿತ್ರ 800 ವರ್ಷದ ಹಿಂದಿನ ಕಥೆಯನ್ನ ಹೊಂದಿದೆ. ತುಳುನಾಡಿನ ಕೊರಗಜ್ಜನ ಜೀವನ ಚಿರಿತ್ರೆಯನ್ನೆ ಈ ಚಿತ್ರದಲ್ಲಿ ನೋಡಬಹುದು. ದೊಡ್ಡ ಬಜೆಟ್ ನಲ್ಲಿಯೇ ಬಿಗ್ ಸ್ಟಾರ್ಗಳ ಈ ಚಿತ್ರದ ಚಿತ್ರೀಕರಣ ಈಗಾಗಲೇ ಶುರು ಆಗಿದೆ.
ಇದನ್ನೂ ಓದಿ: Parvathamma Rajkumar Birthday: ಇಂದು ದೊಡ್ಮನೆ ಅಮ್ಮನ ಜನ್ಮ ದಿನ, ಪಾರ್ವತಮ್ಮ ಕುರಿತಾದ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳು!
ಕಬೀರ್ ಬೇಡಿ ಅಭಿನಯದ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನೆ ಮಾಡುತ್ತಿದ್ದಾರೆ. ಈ ಪಾತ್ರಕ್ಕೂ ಕಬೀರ್ ಬೇಡಿ ವ್ಯಕ್ತಿತ್ವಕ್ಕೂ ಹೋಲಿಕೆ ಆಗುತ್ತದೆ. ನೋಡಲು ಘನಗಂಭೀರವಾಗಿಯೇ ಕಾಣುವ ಕಬೀರ್ ಬೇಡಿ ಇಲ್ಲಿ ಒಬ್ಬ ಅರಸನ ಪಾತ್ರವನ್ನೆ ಮಾಡುತ್ತಿದ್ದಾರೆ. ಅದ್ಯಾರು ಗೊತ್ತೇ? ಇಲ್ಲಿದೆ ನೋಡಿ ಆ ಡಿಟೈಲ್ಸ್. ಇದನ್ನ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಕೊಟ್ಟಿದ್ದಾರೆ. ಅದು ಹೀಗಿದೆ.
ಉದ್ಯಾವರ ಅರಸು ಪಾತ್ರದಲ್ಲಿಯೇ ಕಬೀರ್ ಬೇಡಿ ಅಭಿನಯ!
ನಮ್ಮ ಚಿತ್ರದಲ್ಲಿ ಕಬೀರ್ ಬೇಡಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಉದ್ಯಾವರ ಅರಸು ಪಾತ್ರವನ್ನೆ ನಿರ್ವಹಿಸುತ್ತಿದ್ದಾರೆ ಎಂದು ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ನ್ಯೂಸ್-18 ಕನ್ನಡಕ್ಕೆ ಡಿಜಿಟಲ್ಗೆ ತಿಳಿಸಿದ್ದಾರೆ.
ಇನ್ನು ಈ ಚಿತ್ರದಲ್ಲಿ ಕಬೀರ್ ಬೇಡಿ ಅವರ ಜೊತೆಗೆ ಕನ್ನಡದ ನಟಿ ಶೃತಿ ಹಾಗೂ ಭವ್ಯ ನಟಿಸಿದ್ದಾರೆ. ಕೊರಗಜ್ಜನ ಜೀವನದ ಕಥೆಯನ್ನೆ ಹೇಳ್ತಿರೋ ಈ ಚಿತ್ರದಲ್ಲಿ ಕನ್ನಡದ ಈ ನಟಿಯರು ಪ್ರಮುಖ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ.
ಕಬೀರ್ ಬೇಡಿ ಕನ್ನಡದ ಕಾಂತಾರದ ಬಗ್ಗೆ ಏನ್ ಹೇಳಿದ್ರು?
ಹೌದು, ಕನ್ನಡದ ಕಬೀರ್ ಬೇಡಿ ಕನ್ನಡದ ಕಾಂತಾರ ಬಗ್ಗೆ ಮಾತನಾಡಿದ್ರು ಅನ್ನೋ ಸುದ್ದಿ ವೈರಲ್ ಆಗುತ್ತಿದೆ. ಈ ಒಂದು ವಿಷಯದ ಬಗ್ಗೆ ಕೇಳಿದ್ರೆ, ಡೈರೆಕ್ಟರ್ ಸುಧೀರ್ ಅತ್ತಾವರ್ ಬೇಸರ ಮಾಡಿಕೊಂಡಿದ್ದಾರೆ.
ನಮ್ಮ ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಕಬೀರ್ ಬೇಡಿ ಕಾಂತಾರ ಚಿತ್ರದ ಬಗ್ಗೆ ಮಾತನಾಡಿಲ್ಲ. ಅವರು ನಮ್ಮ ಕೊರಗಜ್ಜ ಚಿತ್ರದ ಕುರಿತು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಬೀರ್ ಬೇಡಿ ಅಸಲಿಗೆ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ್ದೇನು?
ಕಬೀರ್ ಬೇಡಿ ಪ್ರೆಸ್ ಮೀಟ್ನಲ್ಲಿ ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ಇಂಡಿಯನ್ ಸಿನಿಮಾದ ಕುರಿತು ಸಮಗ್ರವಾಗಿಯೇ ಮಾತನಾಡಿದ್ದಾರೆ. ಇಂಡಿಯನ್ ಸಿನಿಮಾದಲ್ಲಿ ಟೆಕ್ನಾಲಜಿ ಬೆಳೆದಿದೆ. ಆದರೂ ಜನ ಓಟಿಟಿಯಲ್ಲಿ ಚಿತ್ರ ನೋಡೋಕೆ ಬಯಸುತ್ತಿದ್ದಾರೆ.
ಇದನ್ನೂ ಓದಿ: Bond Ravi: ರತ್ನನ್ ಪ್ರಪಂಚದ ಉಡಾಳ್ ಬಾಬು ಈಸ್ ಬ್ಯಾಕ್, ಬಾಂಡ್ ರವಿ ಚಿತ್ರದಲ್ಲಿ ಪ್ರಮೋದ್ ಅಬ್ಬರ!
ಟೆಕ್ನಿಕಲಿ ಸೌಂಡ್ ಆಗಿರೋ ಸಿನಿಮಾಗಳನ್ನ ಥಿಯೇಟರ್ನಲ್ಲಿಯೇ ನೋಡಿದ್ರೆ ಚೆಂದ, ಅದರ ಅನುಭವವೇ ಅನನ್ಯ ಅನ್ನೋ ಅರ್ಥದಲ್ಲಯೇ ಕಬೀರ್ ಬೇಡಿ ಮಾತನಾಡಿದ್ದಾರೆ. ಇನ್ನುಳಿದಂತೆ ಕಬೀರ್ ಬೇಡಿ ಅದ್ಭುತ ಕಂಠಸಿರಿಯೊಂದಿಗೆ ಕೊರಗಜ್ಜನ ಸಿನಿಮಾ ಕುರಿತು ಒಂದಷ್ಟು ಮಾಹಿತಿ ಕೊಟ್ಟಿದ್ದಾರೆ.
ಉಳಿದಂತೆ ಕರಿ ಹೈದ ಕರಿ ಅಜ್ಜ ಸಿನಿಮಾ ಶೂಟಿಂಗ್ ಶುರು ಆಗಿದೆ. ಆ ವಿಚಾರ ಸೇರಿದಂತೆ ಕಬೀರ್ ಬೇಡಿ ಕನ್ನಡಕ್ಕೆ ಮತ್ತೆ ಬಂದ ವಿಷಯವನ್ನ ಈಗ ಸಿನಿಮಾ ತಂಡ ಪ್ರೆಸ್ ಮೀಟ್ ಮೂಲಕ ಹಂಚಿಕೊಂಡಿದೆ. ಇನ್ನಷ್ಟು ಮತ್ತಷ್ಟು ಮಾಹಿತಿ ಕೊಡ್ತಾ ಇರ್ತೀವಿ ವೇಟ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ