Dr Rajkumar: ಡಾ. ರಾಜ್‌ಕುಮಾರ್ ಸಂಭಾವನೆ ಬಗ್ಗೆ ನಿಮಗೆಷ್ಟು ಗೊತ್ತು? 'ಬಂಗಾರದ ಮನುಷ್ಯ'ನಿಗೆ ಸಿಕ್ಕ ಹಣವೆಷ್ಟು?

ಪ್ರತಿ ಸಿನಿಮಾ ಹಿಟ್ (Hit) ಆದಾಗ ಆ ಸಿನಿಮಾ ನಟರ ಸಂಭಾವನೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತದೆ. ಅಷ್ಟು ಕೋಟಿ, ಇಷ್ಟು ಕೋಟಿ ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಾರೆ. ಆದರೆ ಭಾರತೀಯ ಚಿತ್ರರಂಗದ ದಂತಕಥೆ, ಕನ್ನಡ ಕಣ್ಮಣಿ, ನಟ ಸಾರ್ವಭೌಮ, ಹಿಟ್‌ ಮೇಲೆ ಹಿಟ್ ಚಿತ್ರಗಳನ್ನು ಕೊಟ್ಟ ಡಾ. ರಾಜ್‌ಕುಮಾರ್ (Dr Rajkumar) ಅವರ ಸಂಭಾವನೆ (Salary) ಎಷ್ಟಿತ್ತು? ಹಿಟ್‌ ಚಿತ್ರಗಳನ್ನು ಕೊಟ್ಟಾಗ ಅವರಿಗೆ ಸಿಕ್ಕಿದ ಹಣವೆಷ್ಟು? ಈ ಬಗ್ಗೆ ನಿಮಗೆ ಗೊತ್ತಾ? ಹಾಗಿದ್ರೆ ಇಲ್ಲಿದೆ ಓದಿ ಅಣ್ಣಾವ್ರ ಸ್ಯಾಲರಿಯ ಸೀಕ್ರೆಟ್…

ನಟ ಸಾರ್ವಭೌಮ ಡಾ. ರಾಜ್‌ಕುಮಾರ್

ನಟ ಸಾರ್ವಭೌಮ ಡಾ. ರಾಜ್‌ಕುಮಾರ್

  • Share this:
ವಿಶ್ವದಲ್ಲೇ ಕನ್ನಡ ಚಿತ್ರರಂಗ (Kannada Film Industry) ಸದ್ದು ಮಾಡುತ್ತಿದೆ. ಕೆಜಿಎಫ್‌ ಚಾಪ್ಟರ್‌ 2 (KGF Chapter 2) ಎಂಬ ಸಿನಿಮಾ (Cinema) ಅಬ್ಬರಿಸುತ್ತಿದ್ದು, ವಿಶ್ವದ ಜನರೆಲ್ಲರೂ ಕನ್ನಡ ಚಿತ್ರರಂಗದ ಬಗ್ಗೆ ಮತ್ತೆ ಹೊಗಳುತ್ತಿದ್ದಾರೆ. ಇದರೊಂದಿಗೆ ನಟ ಯಶ್ (Actor Yash) ಸಂಭಾವನೆ ಬಗ್ಗೆಯೂ ಚರ್ಚೆಯಾಗುತ್ತಿದೆ. ಇನ್ನು ಪ್ರತಿ ಸಿನಿಮಾ ಹಿಟ್ (Hit) ಆದಾಗ ಆ ಸಿನಿಮಾ ನಟರ ಸಂಭಾವನೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತದೆ. ಅಷ್ಟು ಕೋಟಿ, ಇಷ್ಟು ಕೋಟಿ ಅಂತ ಅಭಿಮಾನಿಗಳು ಮಾತನಾಡಿಕೊಳ್ಳುತ್ತಾರೆ. ಆದರೆ ಭಾರತೀಯ ಚಿತ್ರರಂಗದ ದಂತಕಥೆ, ಕನ್ನಡ ಕಣ್ಮಣಿ, ನಟ ಸಾರ್ವಭೌಮ, ಹಿಟ್‌ ಮೇಲೆ ಹಿಟ್ ಚಿತ್ರಗಳನ್ನು ಕೊಟ್ಟ ಡಾ. ರಾಜ್‌ಕುಮಾರ್ (Dr Rajkumar) ಅವರ ಸಂಭಾವನೆ (Salary) ಎಷ್ಟಿತ್ತು? ಹಿಟ್‌ ಚಿತ್ರಗಳನ್ನು ಕೊಟ್ಟಾಗ ಅವರಿಗೆ ಸಿಕ್ಕಿದ ಹಣವೆಷ್ಟು? ಈ ಬಗ್ಗೆ ನಿಮಗೆ ಗೊತ್ತಾ? ಹಾಗಿದ್ರೆ ಇಲ್ಲಿದೆ ಓದಿ ಅಣ್ಣಾವ್ರ ಸ್ಯಾಲರಿಯ ಸೀಕ್ರೆಟ್…

200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕರಾಗಿದ್ದ ರಾಜ್

ಡಾ. ರಾಜ್‌ಕುಮಾರ್ ನಟಿಸಿದ ಸಿನಿಮಾಗಳ ಸಂಖ್ಯೆ 200ಕ್ಕೂ ಹೆಚ್ಚು. ಅದು ಭಾರತೀಯ ಚಿತ್ರರಂಗದ ಮಟ್ಟಿದೆ ದಾಖಲೆ. ಅದರಲ್ಲೂ ಆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರೇ ನಾಯಕರು ಎನ್ನುವುದು ಸಾರ್ವಕಾಲಿಕ ದಾಖಲೆ. ಇನ್ನೂ ವಿಶೇಷ ಏನೆಂದರೆ ಅವರು ನಟಿಸಿದ್ದ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹೆಚ್ಚಿನವು ಸೂಪರ್ ಹಿಟ್, ಉಳಿದವುಗಳು ನಿರ್ಮಾಪಕರಿಗೆ ನಷ್ಟ ಮಾಡದ ಚಿತ್ರಗಳೇ!

5 ಸಾವಿರದಿಂದ 10 ಸಾವಿರ ಸಂಭಾವನೆ!

ಡಾ.ರಾಜ್ ಸಂಭಾವನೆಯ ಬಗ್ಗೆ ಮಾತನಾಡಿದ್ದ ಬಗ್ಗೆ ಹಿರಿಯ ಕಲಾವಿದ  ನಾಗೇಶ್ ಎಂಬವರು ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ್ದಾರೆ. ಆಗ ರಾಜ್ ಅವರು ಒಂದು ಚಿತ್ರಕ್ಕೆ 5,000 ರೂ ಪಡೆಯುತ್ತಿದ್ದರು. 10,000ಕ್ಕೆ ಸಂಭಾವನೆ ಏರಿಕೆಯಾಗಲು ಅವರು 10 ಚಿತ್ರಗಳನ್ನು ಮಾಡಬೇಕಾಯಿತು. ಈಗ ಒಬ್ಬ ಹೀರೋ ಒಂದು ಚಿತ್ರದ ನಂತರ ಕೋಟಿ ರೂ ಪಡೆಯುತ್ತಾರೆ. ಆಗ ಹಾಗಿರಲಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Dr Rajkumar: ಕೊನೆಗೂ ಈಡೇರಲೇ ಇಲ್ಲ ಡಾ. ರಾಜ್‌ಕುಮಾರ್ ಅವರ ಆ ಒಂದು ಕನಸು! ಈಗಲೂ ಕಣ್ಣೀರಿಡುತ್ತಾರೆ ಸ್ವಗ್ರಾಮದ ಜನ

 10 ಸಿನಿಮಾಗಳ ಬಳಿಕ 10 ಸಾವಿರ ಸಂಭಾವನೆ!

ಆಗ ಡಾ.ರಾಜ್ 5,000 ಪಡೆಯುತ್ತಿದ್ದುದು ಸಂಪೂರ್ಣ ಚಿತ್ರಕ್ಕೆ. ಈಗಿನ ಕಲಾವಿದರು ಪ್ರತಿ ದಿನ ಇಷ್ಟು ಮೊತ್ತ ಪಡೆಯುತ್ತಾರೆ. ಆಗ ಸುಮಾರು 9 ತಿಂಗಳು ಚಿತ್ರದ ಕೆಲಸಗಳು ನಡೆದರೆ ಅಷ್ಟಕ್ಕೂ ಸೇರಿಸಿ ಡಾ.ರಾಜ್ 5,000 ಪಡೆಯುತ್ತಿದ್ದರು. ಆದರೆ ಡಾ.ರಾಜ್ ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿರುತ್ತಿದ್ದರು. ಕಾರಣ, ಅವರಿಗೆ ಅಷ್ಟು ಬೇಡಿಕೆ ಇತ್ತು ಎಂದು ಬೆಂಗಳೂರು ನಾಗೇಶ್ ವಿವರಿಸಿದ್ದಾರೆ.

ಬಂಗಾರದ ಮನುಷ್ಯ ಸಿನಿಮಾಗೆ ರಾಜ್ ಪಡೆದ ಹಣವೆಷ್ಟು?

ಬಂಗಾರದ ಮನುಷ್ಯ ಯಾರಿಗೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ದಿನ ಪ್ರದರ್ಶನ ಕಂಡ, ಅತಿ ಹೆಚ್ಚು ಲಾಭ ಗಳಿಸಿದ, ಅತೀ ಹೆಚ್ಚು ದಾಖಲೆ ಮಾಡಿದ ಸಿನಿಮಾಗಳಲ್ಲಿ ಇದೂ ಒಂದು. 1971 ರಲ್ಲಿ ಬಿಡುಗಡೆಯಾದ ಈ ಸಿನಿಮಾದ ನಿರ್ದೇಶಕ ಸಿದ್ದಲಿಂಗಯ್ಯ. ಈ ಸಿನಿಮಾದಲ್ಲಿ ರಾಜೀವನಾಗಿ ರಾಜ್ ಅಭಿನಯಿಸಿದ್ದರೆ, ಅವರಿಗೆ ಜೋಡಿಯಾಗಿದ್ದವರು ಭಾರತಿ.. ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಎರಡು ವರ್ಷ ಪ್ರದರ್ಶನಗೊಂಡ ಚಿತ್ರ ಹಲವು ದಾಖಲೆ ಬರೆಯಿತು. ಆದರೆ ಆ ಸಿನಿಮಾದಲ್ಲೂ ರಾಜ್‌ಕುಮಾರ್ ಪಡೆದಿದ್ದು ಸ್ವಲ್ಪ ಹಣ ಅಷ್ಟೇ.

ಇದನ್ನೂ ಓದಿ: Rajkumar: ಅಂದು ಅಣ್ಣಾವ್ರನ ಕಂಡು ಓಡಿ ಬಂದಿದ್ರಂತೆ ಅಮಿತಾಭ್​ ಬಚ್ಚನ್​! ಹೀಗಿತ್ತು ಡಾ. ರಾಜ್​-ಬಿಗ್​ ಬಿ ಒಡನಾಟ

'ಬಂಗಾರದ ಮನುಷ್ಯ'ನಿಗಾಗಿ ರಾಜ್ ಪಡೆದಿದ್ದು 30 ಸಾವಿರ!

ಹೌದು ಇಂಥದ್ದೊಂದು ವಿಚಾರ ಹೇಳಿದವರು ಡಾ. ರಾಜ್ ಪತ್ನಿ, ಹಿರಿಯ ನಿರ್ಮಾಪಕಿ, ದಿ. ಪಾರ್ವತಮ್ಮ. ಖ್ಯಾತ ಲೇಖಕ ಜೋಗಿಯವರ 'ನಾನು ಪಾರ್ವತಿ' ಪುಸ್ತಕದಲ್ಲಿ ಈ ಬಗ್ಗೆ ದಾಖಲಿಸಿದ್ದಾರೆ. 'ಬಂಗಾರದ ಮನುಷ್ಯ' ಸಿನಿಮಾಕ್ಕಾಗಿ ರಾಜ್ 30 ಸಾವಿರ ಸ್ಯಾಲರಿ ಪಡೆದಿದ್ದರು ಅಂತ ಪಾರ್ವತಮ್ಮ ಹೇಳಿದ್ದರು.
Published by:Annappa Achari
First published: