ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಪಾತ್ರದಲ್ಲಿ ಉರಿ ಖ್ಯಾತಿಯ ವಿಕ್ಕಿ ಕೌಶಲ್​

ಈ ವರ್ಷದ ಮೋಸ್ಟ್ ಡಿಸೈರೆಬಲ್ ಮೆನ್ ಆಗಿ ಕೂಡ ಆಯ್ಕೆಯಾದ ವಿಕ್ಕಿ ಕೌಶಲ್ ಸ್ಟಾರ್ ನಟನಾಗುವ ಮಟ್ಟಕ್ಕೆ ಬೆಳೆದಿದ್ದು `ಉರಿ- ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದಿಂದ. ಈಗ ವಿಕ್ಕಿ ಕೌಶಲ್ ಮುಂದಿನ ಚಿತ್ರ `ಸ್ಯಾಮ್. ಮೇಘನಾ ಗುಲ್ಜಾರ್​ ಅವರ ಈ ಸಿನಿಮಾದಲ್ಲಿ ವಿಕ್ಕಿ  ಫೀಲ್ಡ್ ಮಾರ್ಷಲ್ ಸ್ಯಾಮ್​ ಮಾಣೆಕ್ ಶಾ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

Anitha E | news18
Updated:June 28, 2019, 5:58 PM IST
ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಪಾತ್ರದಲ್ಲಿ ಉರಿ ಖ್ಯಾತಿಯ ವಿಕ್ಕಿ ಕೌಶಲ್​
ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಹಾಗೂ ನಟ ವಿಕ್ಕಿ ಕೌಶಲ್​
  • News18
  • Last Updated: June 28, 2019, 5:58 PM IST
  • Share this:
ವಿಕ್ಕಿ ಕೌಶಲ್ ಸದ್ಯ ಬಾಲಿವುಡ್‍ನ ಬಹುಬೇಡಿಕೆಯ ನಟ. ಈಗ ವಿಕ್ಕಿ ಕೌಶಲ್ ಮುಂದಿನ ಚಿತ್ರ `ಸ್ಯಾಮ್'. ಮೇಘನಾ ಗುಲ್ಜಾರ್​ ಅವರ ಈ ಸಿನಿಮಾದಲ್ಲಿ ವಿಕ್ಕಿ  ಫೀಲ್ಡ್ ಮಾರ್ಷಲ್ ಸ್ಯಾಮ್​ ಮಾಣೆಕ್ ಶಾ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.

ಮೇಘನಾ ಗುಲ್ಜಾರ್​ ಈ ಚಿತ್ರದ ಫಸ್ಟ್‍ಲುಕ್ ಬಿಡುಗಡೆ ಮಾಡಿದ್ದು, ಇದು ಈಗ ಟ್ರೆಂಡಿಂಗ್​ನಲ್ಲಿದೆ.  ಫೀಲ್ಡ್ ಮಾರ್ಷಲ್ ಸ್ಯಾಮ್​ ಮಾಣೆಕ್ ಶಾ ಅವರು 1914 ಏ. 3ರಂದು ಪಂಜಾಬ್​ನ ಅಮೃತಸರದಲ್ಲಿ ಜನಿಸಿದ್ದು, 1932ರಲ್ಲಿ ಸೇನೆಗೆ ಸೇರಿದರು. ನಂತರ ಎರಡನೇ ವಿಶ್ವ ಯುದ್ಧದಲ್ಲೂ ಬ್ರಿಟಿಷ್​ ಇಂಡಿಯನ್​ ಆರ್ಮಿಪರವಾಗಿ ಅವರು ಹೋರಾಡಿದ್ದರು. ಅಲ್ಲದೆ 1971ರಲ್ಲಿ ನಡೆ ಇಂಡೊ-ಪಾಕ್​ ನಡುವಿನ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದ್ದರು. ಈ ಯುದ್ಧದಿಂದಾಗಿ ಇವರಿಗೆ ಸ್ಯಾಮ್​ ಬಹದ್ದೂರ್​ ಎಂಬ ಬಿರುದು ಸಿಕ್ಕಿತ್ತು.

The swashbuckling general & the first Field Marshal of India- SAM MANEKSHAW. I feel honoured & proud of getting a chance to unfold his journey on-screen. Remembering him on his death anniversary & embracing the new beginnings with @meghnagulzar and @RonnieScrewvala.@RSVPMovies pic.twitter.com/ozyUO69wKV
1973ರಲ್ಲಿ ಫೀಲ್ಡ್​ ಮಾರ್ಷಲ್​ ರ‍್ಯಾಂಕ್​ ನೀಡಿ ಗೌರವಿಸಲಾಯಿತು. ಸ್ವತಂತ್ರ ಭಾರತದಲ್ಲಿ ಅದೇ ಮೊದಲ ಬಾರಿಗೆ ನಿವೃತ್ತಿ ನಂತರ ಓರ್ವ ಸೇನೆಯ ಅಧಿಕಾರಿಗೆ ಈ ರ‍್ಯಾಂಕ್ ನೀಡಲಾಗಿತ್ತು.

ಈ ವರ್ಷದ ಮೋಸ್ಟ್ ಡಿಸೈರೆಬಲ್ ಮೆನ್ ಆಗಿ ಕೂಡ ಆಯ್ಕೆಯಾದ ವಿಕ್ಕಿ ಕೌಶಲ್ ಸ್ಟಾರ್ ನಟನಾಗುವ ಮಟ್ಟಕ್ಕೆ ಬೆಳೆದಿದ್ದು `ಉರಿ- ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾದಿಂದ. 'ಉರಿ' ಸಿನಿಮಾಗಿಂತಲೂ ಮೊದಲು 'ಸಂಜು' ಚಿತ್ರದಲ್ಲಿ ರಣ್‍ಬೀರ್ ಕಪೂರ್ ಆತ್ಮೀಯ ಗೆಳೆಯನ ಪಾತ್ರದಲ್ಲೂ ಗಮನ ಸೆಳೆದಿದ್ದ ವಿಕ್ಕಿ ಕೌಶಲ್ ಈಗ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ವೀರ 'ಉದ್ಧಮ್ ಸಿಂಗ್' ಬಯೋಪಿಕ್‍ನಲ್ಲಿ ನಟಿಸುತ್ತಿದ್ದಾರೆ.DBoss Darshan: 'ರಾಬರ್ಟ್'​ ಚಿತ್ರೀಕರಣದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ದರ್ಶನ್​
First published:June 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ