Happy Birthday Amitabh Bachchan: ಇಳಿವಯಸ್ಸಿನಲ್ಲೂ ಯುವಕನಂತೆ ಆರ್ಭಟಿಸುವ ನಟ ಬಿಗ್ ಬಿ ಬಗ್ಗೆ ತಿಳಿಯದ ಕುತೂಹಲಕಾರಿ ಸಂಗತಿಗಳು!

ಸಿನಿಮಾಗಳಲ್ಲಿ ಅಮಿತಾಭ್​ ಬಚ್ಚನ್ ಅವರು ಧೂಮಪಾನ ಮಾಡಿರುವುದನ್ನು ನೋಡಿರಬಹುದು. ಆದರೆ, ಅವರು ನಿಜ ಜೀವನದಲ್ಲಿ ಸಿಗರೇಟ್​ ಸೇದುವುದಿಲ್ಲವಂತೆ. ಇನ್ನು ಮದ್ಯಪಾನದ ವಿಷಯಕ್ಕೆ ಬಂದರೆ ಅದರಿಂದಲೂ ದೂರ ಇರುತ್ತಾರಂತೆ ಅಮಿತಾಭ್​.

ಅಮಿತಾಬ್​​ ಬಚ್ಚನ್​​

ಅಮಿತಾಬ್​​ ಬಚ್ಚನ್​​

 • Share this:
  ಮೇ 11, 1973 ರಂದು ಇಡೀ ದೇಶ, ಪ್ರಪಂಚ ಬಾಲಿವುಡ್‍ನ ದೇವಮಾನವ (Bollywood Demy god Amitabh Bachchan) ಆದ ಅಮಿತಾಭ್‌ ಬಚ್ಚನ್‌ರನ್ನು ನೋಡಿತು. ಅಂದಿನಿಂದ ಇಂದಿನವರೆಗೂ ಅಂದರೆ ಸುಮಾರು ಐದು ದಶಕಗಳ ಕಾಲ ಅಮಿತಾಭ್‌ ಬಚ್ಚನ್ ತಮ್ಮ ಪ್ರತಿಭೆ, ಕೌಶಲ್ಯ ನಟನೆ ಮೂಲಕ ಪ್ರತಿ ಮನೆ ಮಾತಾಗಿದ್ದಾರೆ. ಖ್ಯಾತ ಕವಿ ಹರಿವಂಶ್ ರೈ ಬಚ್ಚನ್ ಅವರ ಪುತ್ರ, ಅಮಿತಾಭ್‌ಗೆ ಆ್ಯಂಗ್ರಿ ಯಂಗ್ ಮ್ಯಾನ್, ಬಾಲಿವುಡ್‌ನ ಶೆಹೆನ್ಶಾ, ಸ್ಟಾರ್ ಆಫ್ ದಿ ಮಿಲೇನಿಯಂ, ಮತ್ತು ಅತ್ಯಂತ ಜನಪ್ರಿಯವಾದ ಬಿಗ್ ಬಿ ಎಂಬ ಬಿರುದುಗಳನ್ನು ನೀಡಿ ಇಂದಿಗೂ ಆರಾಧಿಸಲಾಗುತ್ತಿದೆ.

  ಇಂದು, ಬಿಗ್ ಬಿ 79ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಇಳಿವಯಸ್ಸಿನಲ್ಲೂ 70ರ ದಶಕದ ಆ್ಯಂಗ್ರಿ ಯಂಗ್ ಮ್ಯಾನ್‍ನಂತೆಯೇ ಅವರು ಕೆಲಸ ಮಾಡುತ್ತಿದ್ದಾರೆ. ಈ ದಿನದಂದು ಅವರಿಗೆ ಯಾವ ಬಿರುದು ಪ್ರಶಸ್ತಿಗಳು ಲಭಿಸಿವೆ ಮತ್ತು ಅಮಿತಾಭ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಕೆಲವು ವಿಷಯಗಳು ಇಲ್ಲಿವೆ.

  1. ಅಮಿತಾಭ್‌ ಎಡಗೈ ಮತ್ತು ಬಲಗೈಯನ್ನು ಸಮಾನವಾಗಿ ಬಳಸುತ್ತಾರೆ. ಅಂದರೆ ಬರೆಯುವುದಕ್ಕೆ ಎರಡೂ ಕೈ ಬಳಸುತ್ತಾರೆ.

  2. ಬಿಗ್ ಬಿ ಬಾಲಿವುಡ್‍ಗೆ ಬರುವ ಮೊದಲು ಮತ್ತೊಬ್ಬ ಅಪ್ರತಿಮ ನಟ ಮೆಹಬೂಬ್ ಅಲಿ ಬಳಿ ಸಹಾಯ ಮತ್ತು ಆಶ್ರಯ ಪಡೆದಿದ್ದರು.

  3. ಅಮಿತಾಭ್‌ 1995 ರಲ್ಲಿ ಮಿಸ್ ವರ್ಲ್ಡ್‌ ಬ್ಯೂಟಿ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿದ್ದರು.

  4. ಬಿಗ್ ಬಿ ಚಿತ್ರೋದ್ಯಮದಲ್ಲಿ ಹೆಚ್ಚು ದ್ವಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟ. ವಾಸ್ತವವಾಗಿ, ಮಹಾನ್ ಎಂಬ ಸಿನಿಮಾದಲ್ಲಿ ಮೂರು ಪಾತ್ರಗಳನ್ನು ನಿರ್ವಹಿಸಿದ್ದಾರೆ.

  5. ಬಾಕ್ಸಾಫೀಸ್ ಅನ್ನು ಧೂಳೆಬ್ಬಿಸಿದ್ದ ಕೂಲಿ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಬಚ್ಚನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  6. ಬಿಗ್ ಬಿ ವ್ಯಾನಿಟಿ ವ್ಯಾನ್ ಅನ್ನು ಹೊಂದಿದ ಉದ್ಯಮದ ಮೊದಲ ನಟ, ಇದನ್ನು ಅವರಿಗೆ ನಿರ್ದೇಶಕ -ನಿರ್ಮಾಪಕ ಮನಮೋಹನ್ ದೇಸಾಯಿ ಉಡುಗೊರೆಯಾಗಿ ನೀಡಿದರು.

  7. ಲಂಡನ್‍ನ ಮೇಡಂ ಟುಸ್ಸಾಡ್ಸ್‌ನಲ್ಲಿ ಮೇಣದ ಪ್ರತಿಮೆ ಹೊಂದಿರುವ ಮೊದಲ ಏಷ್ಯನ್ ನಟ ಬಿಗ್ ಬಿ.

  8. ಬಾಲಿವುಡ್‍ಗೆ ಪ್ರವೇಶಿಸುವ ಮೊದಲು, ಅವರು ಆಲ್ ಇಂಡಿಯಾ ರೇಡಿಯೋಗೆ ರೇಡಿಯೋ ಜಾಕಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಆಕಾಶವಾಣಿ ಇವರನ್ನು ತಿರಸ್ಕರಿಸಿತು. ಮೂಲಗಳ ಪ್ರಕಾರ, 'ನಮಸ್ಕಾರ' ಪದವನ್ನು ತಪ್ಪಾಗಿ ಉಚ್ಚರಿಸಿದ ಕಾರಣ ತಿರಸ್ಕೃತರಾದರು ಎಂದು ತಿಳಿದು ಬಂದಿದೆ.

  9. ಬಾಲಿವುಡ್‍ಗೆ ಬಂದ ನಂತರ, ಜಂಜೀರ್ ಬಿಡುಗಡೆಗೂ ಮುನ್ನ 12 ಸಿನಿಮಾಗಳ ನೆಲ ಕಚ್ಚಿದವು. ವರದಿಗಳ ಪ್ರಕಾರ, ಈ ಚಲನಚಿತ್ರವು, 1973ರಲ್ಲಿ, 17.46 ಕೋಟಿ, ಅಂದರೆ 2016 ಕ್ಕೆ ಹೋಲಿಸಿದರೆ 564 ಕೋಟಿ ರೂ. ಗಳನ್ನು ಗಳಿಸಿತು.

  10. ಎರಡು ಯಶಸ್ವಿ ದಶಕಗಳ ನಂತರ, ಬಿಗ್ ಬಿ ವೃತ್ತಿಜೀವನವು ಮತ್ತೆ 90ರ ದಶಕದಲ್ಲಿ ಕುಸಿಯಿತು, ನಂತರ ಯಶ್ ಚೋಪ್ರಾ ರಕ್ಷಣೆಗೆ ಬಂದು ಮೊಹಬ್ಬತೀನ್‍ನಲ್ಲಿ ಅವರಿಗೆ ಅವಕಾಶ ನೀಡಿದರು. ಇದು ಅವರ ವೃತ್ತಿಜೀವನವನ್ನು ಮತ್ತೆ ಉತ್ತೇಜಿಸಿತು.

  11. ಅವರ ಚಲನಚಿತ್ರ ವೃತ್ತಿಜೀವನವು ಮೃಣಾಲ್ ಸೇನ್ ಅವರ ಭುವನ್ ಶೋಮ್‍ನಿಂದ ಆರಂಭವಾಯಿತು, ಇದರಲ್ಲಿ ಅವರು ಕೇವಲ ನಿರೂಪಕರಾಗಿ ತಮ್ಮ ಧ್ವನಿಯನ್ನು ನೀಡಿದರು.

  ಇದನ್ನು ಓದಿ: Happy Birthday Amitabh Bachchan: 79ನೇ ವಸಂತಕ್ಕೆ ಕಾಲಿಟ್ಟ ಅಮಿತಾಭ್​ ಬಚ್ಚನ್​: ಆರೋಗ್ಯಕ್ಕಾಗಿ ಸಿಹಿ-ಮಾಂಸಾಹಾರದಿಂದ ದೂರ ಇರ್ತಾರಂತೆ ಬಿಗ್ -ಬಿ

  ಧೂಮಪಾನ- ಮದ್ಯಪಾನ ಮಾಡುವುದಿಲ್ಲ

  ಸಿನಿಮಾಗಳಲ್ಲಿ ಅಮಿತಾಭ್​ ಬಚ್ಚನ್ ಅವರು ಧೂಮಪಾನ ಮಾಡಿರುವುದನ್ನು ನೋಡಿರಬಹುದು. ಆದರೆ, ಅವರು ನಿಜ ಜೀವನದಲ್ಲಿ ಸಿಗರೇಟ್​ ಸೇದುವುದಿಲ್ಲವಂತೆ. ಇನ್ನು ಮದ್ಯಪಾನದ ವಿಷಯಕ್ಕೆ ಬಂದರೆ ಅದರಿಂದಲೂ ದೂರ ಇರುತ್ತಾರಂತೆ ಅಮಿತಾಭ್​.

  ಟೀ- ಕಾಫಿ ಸಹ ಕುಡಿಯೋದಿಲ್ಲ ಅಮಿತಾಭ್​

  ಮದ್ಯಪಾನ, ಧೂಮಪಾನದ ಜೊತೆಗೆ ಕಾಫಿ ಹಾಗೂ ಟೀ ಸಹ ಕುಡಿಯೋದಿಲ್ಲವಂತೆ. ಅವರಿಗೆ ಟೀ- ಕಾಫಿ ಇಷ್ಟವಿಲ್ಲವಂತೆ. ತುಂಬಾ ವರ್ಷಗಳ ಮೊದಲು ಅವರು ಕಾಫಿ ಇಷ್ಟಪಡುತ್ತಿದ್ದರಂತೆ. ಆದರೆ ಕೆಲ ಸಮಯದಿಂದ ಅದನ್ನೂ ಅವರು ಬಿಟ್ಟಿದ್ದಾರಂತೆ. ಕಾಫಿಯಲ್ಲಿರುವ ಕೆಫಿನ್​ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ.
  Published by:HR Ramesh
  First published: