ಮನೆಯಲ್ಲಿ ತಾಯಂದಿರು ಮಕ್ಕಳು ಏನೇ ತಪ್ಪು ಮಾಡಿದರೂ ಸಹಿಸಿಕೊಳ್ಳುತ್ತಾರೆ. ಅದೇ ಅವರು ಕನ್ನಡ ಧಾರಾವಾಹಿ(Kannada Serials) ನೋಡುವಾಗ ಚಾನೆಲ್ ಚೇಂಜ್(Channel Change) ಮಾಡಿದರೆ ಕಥೆ ಮುಗಿದಂತೆ. ಹೌದು, ಸಿನಿಮಾ(Movie)ಗಳಿಗಿಂತ ಧಾರವಾಹಿಗಳು ನಮ್ಮಜೀವನಕ್ಕೆ ಹತ್ತಿರವಾಗುತ್ತವೆ. ಮಹಿಳೆಯ(Women)ರಿಗಂತು ಸೀರಿಯಲ್ ಅಂದರೆ ಎಲ್ಲಿಲ್ಲದ ಪ್ರೀತಿ. ಪ್ರತಿ ದಿನ ಪ್ರಸಾರವಾಗುವ ಧಾರಾವಾಹಿಗಳನ್ನು ನೋಡಿ, ಅದರಳೊಗೆ ಮುಳುಗಿಹೋಗುತ್ತಾರೆ. ಪ್ರತಿ ದಿನ ಊಟ(Food) ಮಾಡುವುದನ್ನು ಬೇಕಾದರೆ ಮರೆಯುತ್ತಾರೆ. ಆದರೆ ಸೀರಿಯಲ್ ನೋಡುವುದನ್ನ ಎಂದಿಗೂ ಮರೆಯುವುದಿಲ್ಲ. ಅದೇ ರೀತಿ ಎಷ್ಟೋ ಮಂದಿ ನಾವು ಧಾರಾವಾಹಿಗಳಲ್ಲಿ ನಟಿಸಿ(Acting) ಹೆಸರು ಮಾಡಬೇಕು ಅಂದುಕೊಂಡಿರುತ್ತೀರಾ? ಆದರೆ ಹೇಗೆ ಆ ಫೀಲ್ಡ್ಗೆ ಹೋಗಬೇಕು? ಯಾರನ್ನು ಸಂಪರ್ಕಿಸಬೇಕು ಎಂಬುಂದು ಗೊತ್ತಿರಲ್ಲ. ಹೀಗಾಗಿ ಅದೆಷ್ಟೋ ಜನರ ಈ ಕನಸು(Dream) ಇಂದಿಗೂ ಕನಸಾಗಿಯೇ ಉಳಿದಿದೆ. ಸೀರಿಯಲ್ನಲ್ಲಿ ಮಿಂಚಿ ಫೇಮಸ್(Famous) ಆಗಬೇಕು ಅಂದುಕೊಂಡು ದಾರಿ ಕಾಣದೆ ಸುಮ್ಮನಾಗಿದ್ದೀರಾ? ಕನ್ನಡ ಧಾರಾವಾಹಿಗಳ ಬಗ್ಗೆ ನಿಮಗೆಷ್ಟು ಗೊತ್ತು? ಕನ್ನಡ ಧಾರಾವಾಹಿಗಳ ಟೀಂ ಹೇಗೆ ಕೆಲಸ ಮಾಡುತ್ತಾ ಅಂತ ಗೊತ್ತಾ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ನೋಡಿ..
ಧಾರಾವಾಹಿಗಳಲ್ಲಿ ನಟಿಸಲು ಪ್ರಭಾವಿತರ ಸಹಾಯ ಬೇಡ
ನಿಮಗೆ ಧಾರಾವಾಹಿಯಲ್ಲಿ ನಟಿಸುವ ಆಸೆ ಇದೆ. ಆದರೆ ನಿಮ್ಮ ಹಿಂದೆ ಯಾವ ಪ್ರಭಾವಿ ವ್ಯಕ್ತಿಗಳ ಸಪೋರ್ಟ್ ಇಲ್ಲ ಅಂತ ಕಂಗಾಲಾಗಿದ್ದೀರಾ? ಈ ರೀತಿ ಯೋಚನೆ ಮಾಡುವುದನ್ನು ನಿಲ್ಲಿಸಿ. ಇದು ಎಲ್ಲ ಕಡೆ ಈ ರೀತಿ ವರ್ಕ್ ಆಗುವುದಿಲ್ಲ ನಿಮಗೆ ಟ್ಯಾಲೆಂಟ್ ಇದ್ದರೆ ಸಾಕು. ನಿಮ್ಮನ್ನು ಸೆಲೆಕ್ಟ್ ಮಾಡುತ್ತಾರೆ. ಯಾರ ಇನ್ಫ್ಲೂಯನ್ಸ್ ಇಲ್ಲದೆಯೂ ನೀವು ಧಾರಾವಾಹಿಗಳಲ್ಲಿ ನಟಿಸಬಹುದು.
ಇದನ್ನು ಓದಿ : ನೀವು ನೋಡಿರದ ಸೌತ್ ಇಂಡಿಯನ್ ನಟಿಯರ ಬ್ಯಾಲದ ಫೋಟೋಗಳು ಇಲ್ಲಿವೆ..
ನಿಮಗೆ ಆಸಕ್ತಿ ಇದ್ದರೆ ಅವರೇ ಕೊಡ್ತಾರೆ ಟ್ರೈನಿಂಗ್
ನಿಮಗ ನಟನೆ ಗೊತ್ತಿಲ್ಲ. ಆದರೂ ಧಾರಾವಾಹಿಗಳಲ್ಲಿ ನಟಿಸಬೇಕೆಂಬ ಆಸೆ ಇದ್ಯಾ? ಹಾಗಿದ್ರೆ ಚಿಂತೆ ಬಿಡಿ. ನಿಮ್ಮ ಮುಖ ಸ್ಕ್ರೀನ್ ಮೇಲೆ ಅಂದವಾಗಿ ಕಾಣತ್ತೆ ಅಂದರೆ ಸಾಕು , ನೀವು ಸೆಲೆಕ್ಟ್ ಆದಂತೆ. ನಿಮ್ಮನ್ನು ಸೆಲೆಕ್ಟ್ ಮಾಡಿ ಅವರೇ 1 ರಿಂದ 2 ತಿಂಗಳು ಕಾಲ ಟ್ರೈನಿಂಗ್ ಕೊಡುತ್ತಾರೆ. ರಂಗಭೂಮಿ ಕಲಾವಿದರಿಂದ ನಿಮಗೆ ಟ್ರೈನಿಂಗ್ ಕೊಡಿಸಿ, ನೀವು ರೆಡಿಯಾದ ಬಳಿಕವೇ ಧಾರಾವಾಹಿ ಚಿತ್ರೀಕರಣವನ್ನು ಶುರುಮಾಡುತ್ತಾರೆ.
ಧಾರಾವಾಹಿಯಲ್ಲಿ ನಟಿಸಲು ಏನು ಮಾಡಬೇಕು?
ಇದು ಬಹಳ ಮುಖ್ಯ. ಗುರಿ ಗೊತ್ತಿದ್ದು ಮುಟ್ಟುವ ದಾರಿ ಗೊತ್ತಿಲ್ಲ ಅಂದರೆ ಕಷ್ಟ. ಹೀಗೆ ಆಸಕ್ತಿ ಇದ್ದು ಧಾರಾವಾಹಿ ಸೇರಲು ಆಗುತ್ತಿಲ್ವಾ. ಹೀಗೆ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಎಲ್ಲಾ ಚಾನೆಲ್ಗಳ ಅಧಿಕೃತ ಪೇಜ್ಗೆ ಬಂದು ಅಲ್ಲಿ ನಿಮ್ಮ ಬಯೋಡೇಟಾವನ್ನು ಪರ್ಸೆನಲ್ ಮೆಸೇಜ್ ಮಾಡಿ. ಇದಕ್ಕಾಗಿ ನಿಮ್ಮ ನಾಲ್ಕು ಫೋಟೋ ಹಾಗೂ ನಿಮ್ಮ ನಟನೆಯ ಕಿರು ವಿಡಿಯೋವೊಂದನ್ನು ಕಳುಹಿಸಿ. ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೆ ಸಾವಿರಾರು ಮಂದಿ ಮೆಸೇಜ್ ಮಾಡುತ್ತಾರೆ, ನಮ್ಮ ಮೆಸೇಜ್ ಯಾರು ನೋಡ್ತಾರೆ ಅಂದುಕೊಳ್ಳಬೇಡಿ. ಪ್ರತಿ ಚಾನೆಲ್ನಲ್ಲೂ ತಮ್ಮ ಅಧಿಕೃತ ಖಾತೆಗಳಿಗೆ ಬರುವ ಪ್ರತಿಯೊಂದು ಮೆಸೇಜ್ ಅನ್ನು ಚೆಕ್ ಮಾಡಲೆಂದು ಒಬ್ಬರನ್ನು ಕೆಲಸಕ್ಕೆ ನೇಮಿಸುರುತ್ತಾರೆ.
ಅದರಳೊಗೆ ಇದನ್ನು ಓದಿ : ಜಿಮ್ನಲ್ಲಿ ಸಖತ್ ಬೆವರಿಳಿಸುತ್ತಿದ್ದಾರೆ `ಬ್ರಹ್ಮಗಂಟು’ ಬೆಡಗಿ!
ಈ ಕೆಳಗಿನ ಚಾನೆಲ್ಗಳ ಅಧಿಕೃತ ಅಕೌಂಟ್ಗಳಿಗೆ ನಿಮ್ಮ ಬಯೋಡೇಟಾ ಕಳಿಸಿದರೆ, ನಿಮ್ಮ ಟ್ಯಾಲೆಂಟ್ ಮತ್ತು ಲುಕ್ ಅವರಿಗೆ ಇಷ್ಟವಾದರೆ ನೀವು ಖಂಡಿತಾ ಟಿವಿ ದುನಿಯಾದ ಸ್ಟಾರ್ ಗಳಾಗಬಹುದು
- Colours Kannada : ಈ ಚಾನೆಲ್ನಲ್ಲಿ
ಹೊಸ ಮುಖಗಳಿಗೆ ಹೆಚ್ಚು ಅವಕಾಶಗಳನ್ನು ನೀಡುತ್ತಾ ಬಂದಿದ್ದಾರೆ. ನೀವು ಇಲ್ಲಿ ನಿಮ್ಮ ಬಯೋಡೇಟಾಗಳನ್ನು ಕಳುಹಿಸಬಹುದು
- Zee Kannada : ಜೀ ಕನ್ನಡ ಚಾನೆಲ್ನಲ್ಲಿ ಬರುವ
ಎಲ್ಲಾ ಸೀರಿಯಲ್ಗಳು ಬಹಳ ಜನಪ್ರಿಯ. ನೀವು ಈ ಚಾನೆಲ್ನ ಸೀರಿಯಲ್ನಲ್ಲಿ ನಟಿಸ ಬೇಕೆಂದ್ರೆ ಅರ್ಜಿ ಕಳುಹಿಸಿ
- Star Suvarna : ಈ ಚಾನೆಲ್ಗಳಲ್ಲಿ
ಅತಿ ಹೆಚ್ಚು ರಿಯಾಲಿಟಿ ಶೋಗಳನ್ನು ಮಾಡಲಾಗುತ್ತೆ. ಹತ್ತಾರು ಹೊಸ ಧಾರಾವಾಹಿಗಳು ಈ ಚಾನೆಲ್ನಲ್ಲಿ ಪ್ರಸಾರವಾಗುತ್ತಿದೆ.
- Udaya Tv :
ಉದಯ ಟಿವಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ನಾವು ಚಿಕ್ಕವರಿದ್ದಾಗಿನಿಂದಲೂ ಈ ಚಾನೆಲ್ ನೋಡಿಕೊಂಡು ಬೆಳೆದವರು. ಈ ಚಾನೆಲ್ನ ಸೀರಿಯಲ್ ನಟಿಸಬೇಕೆಂಬ ಆಸೆ ಇದ್ದರೆ ನಿಮ್ಮ ಬಯೋಡೇಟಾ ಕಳುಹಿಸಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ