news18-kannada Updated:May 30, 2020, 7:06 PM IST
ಕಬೀರ್ ಸಿಂಗ್
ಶಾಹೀದ್ ಕಪೂರ್ ನಟನೆಯ ಕಬೀರ್ಸಿಂಗ್ ಸಿನಿಮಾದಿಂದ ಪ್ರೇರಿತನಾಗಿ ಮೂಳೆ ತಜ್ಞನೆಂದು ಹೇಳಿಕೊಂಡು ಮಹಿಳೆಯರಿಗೆ ವಂಚಿಸುತ್ತಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಆನಂದ್ ಕುಮಾರ್ (31) ಡೇಟಿಂಗ್ ವೆಬ್ಸೈಟ್ ಮೂಲಕ ಮೂಳೆ ತಜ್ಞನೆಂದು ಹೇಳಿಕೊಂಡು ಪರಿಚಯವಾದ ಮಹಿಳೆಯರಿಂದ ಹಣ ವಸೂಲಿ ಮಾಡುತ್ತಿದ್ದ. ತನ್ನ ಹೆಸರನ್ನು ಡಾ. ರೋಹಿತ್ ಗುಜ್ರಾಲ್ ಎಂದು ಹೆಸರು ಬದಲಾಯಿಸಿಕೊಂಡು ಕೆಲ ಮಹಿಳಾ ವೈದ್ಯರ ಜೊತೆ ಚಾಟಿಂಗ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಆನಂದ್ ಕುಮಾರ್ ಚಾಟ್ ಮಾಡುತ್ತಿದ್ದ ನೆಪದಲ್ಲಿ ತನ್ನ ಬ್ಯಾಂಕ್ ಖಾತೆಗೆ ಸಾವಿರ ರೂಪಾಯಿ ಜಮಾ ಮಾಡಿದರೆ ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದ. ಹಣ ನೀಡದಿದ್ದರೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸುತ್ತಿದ್ದ. ಇದೀಗ ಆರೋಪಿ ಆನಂದ್ ಕುಮಾರ್ ಪೋಲಿಸರ ಅತಿಥಿಯಾಗಿದ್ದಾನೆ. ಆತನ ಜೊತೆಗೆ ಪ್ರಿಯಂ ಯಾದವ್ ಎಂಬಾತನನ್ನು ಕೂಡ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಆನಂದ್ ಕುಮಾರ್ ಈವೆಂಟ್ ಮ್ಯಾನೆಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಸಾಕಷ್ಟು ಜನರ ಪರಿಚಯವು ಆತನಿಗಿತ್ತು. ನಟ-ನಟಿಯಾಗಬೇಕೆಂದುಕೊಂಡಿದ್ದ ಅನೇಕ ಹುಡುಗ-ಹುಡುಗಿರ ಸಂಪರ್ಕವಿತ್ತು. ಹಾಗಾಗಿ ಕೆಲ ಯುವಕರ ಫೋಟೋವನ್ನು ತೆಗೆದುಕೊಂಡು ಪ್ರೊಫೈಲ್ ಪಿಕ್ ಮಾಡಿಕೊಂಡು ಡೇಟಿಂಗ್ ವೈಬ್ಸೈಟ್ನಲ್ಲಿ ಇಂತಹ ಮೋಸದ ಕೃತ್ಯವನ್ನು ಮಾಡುತ್ತಿದ್ದ.
ಶಾಹಿದ್ ಕಪೂರ್ ಕಬೀರ್ ಸಿಂಗ್ ಸಿನಿಮಾದಲ್ಲಿ ಮೂಳೆ ತಜ್ಞನಾಗಿ ಕಾಣಿಸಿಕೊಂಡಿದ್ದರು. ಅದರಿಂದ ಪ್ರೇರಿತನಾಗಿ ಈ ಕೆಲಸಕ್ಕೆ ಕೈ ಹಾಕಿದ್ದಾನೆಂದು ತಿಳಿದುಬಂದಿದೆ. ಆರಂಭದಲ್ಲಿ ಮಹಿಳೆಯ ಮೊಬೈಲ್ ನಂಬರ್ ತೆಗೆದುಕೊಂಡು ನಂತರ ಚಾಟ್, ವಾಯ್ಸ್ ಕರೆ, ವಿಡಿಯೋ ಕರೆ ಮಾಡುತ್ತಾನೆ. ನಂತರ ಮಹಿಳೆಯರಿಗೆ ಮದುವೆ ಆಗುತ್ತೇನೆ ಎಂದು ನಂಬಿಸಿ ಖಾಸಗಿ ಫೋಟೋ ಕಳುಹಿಸುವಂತೆ ಕೇಳುತ್ತಾನೆ. ಆನಂತರ ಹಣ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.
ಕಳೆದ ನಾಲ್ಕು ತಿಂಗಳಿನಿಂದ ಆರೋಪಿ ಆನಂದ್ ಈ ಕೆಲಸವನ್ನು ಮಾಡುತ್ತಿದ್ದು, ಸುಮಾರು 5 ಲಕ್ಷ ರೂಪಾಯಿಯನ್ನು ದೋಚಿದ್ದಾನೆ.
Mitron: ಭಾರತೀಯ ಟಿಕ್ಟಾಕ್ ಎಂದೇ ಜನಪ್ರಿಯತೆ ಪಡೆದ ‘ಮಿತ್ರೋ‘ ಆ್ಯಪ್ಗೆ ಪಾಕಿಸ್ತಾನಿ ಕೋಡ್!
First published:
May 30, 2020, 7:06 PM IST