ಬಾಲಿವುಡ್ನ ಕ್ಯೂಟ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಹೋಳಿ ಹಬ್ಬವನ್ನು (Holi Festival) ಆಚರಿಸಿದ್ದಾರೆ. ವಿಶೇಷ ಏನೆಂದರೆ ಈ ಬಾರಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ (Nick Jonas) ನಟಿ ಪ್ರೀತಿ ಝಿಂಟಾ ಜೊತೆ ಸೇರಿಕೊಂಡು ಬಣ್ಣದ (Colors) ಹಬ್ಬವನ್ನು ಸಂಭ್ರಮಿಸಿದ್ದಾರೆ. ನಟಿ ಪ್ರೀತಿ ಝಿಂಟಾ ಅವರು ಪತಿ ಹಾಗೂ ಸ್ನೇಹಿತರ (Friends) ಜೊತೆ ಸೇರಿಕೊಂಡು ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಸ್ ಅವರ ಲಾಸ್ ಏಂಜಲೀಸ್ (LA) ಮನೆಯಲ್ಲಿ ಹಬ್ಬ ಆಚರಿಸಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಸೇರಿ ಸ್ನೇಹಿತರ ಜೊತೆ ಬಣ್ಣದ ಆಟ ಆಡಿದ ಫೋಟೋ (Photo) ಕೂಡಾ ಶೇರ್ ಮಾಡಿದ್ದಾರೆ. ಡ್ಯಾನ್ಸಿಂಗ್ (Dancing) ಮತ್ತು ಫುಡ್ (Food) ಎಂದು ನಟಿ ಬರೆದಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೊತೆಗಿನ ಕಳೆದ ವರ್ಷದ ಹೋಳಿ ಆಚರಣೆಯ ಫೋಟೋ ಕೂಡಾ ಶೇರ್ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆಲ್ಲರಿಗೂ ಹಬ್ಬದ ಶುಭಾಶಯ (Wishes) ತಿಳಿಸಿದ್ದಾರೆ.
ಪ್ರೀತಿ ಝಿಂಟಾ ವಿಡಿಯೋವನ್ನು ಕೂಡಾ ಶೇರ್ ಮಾಡಿದ್ದಾರೆ. ವಿನ್ಯಾಸಕರಾದ ಫಲ್ಗುಣಿ ಹಾಗೂ ಶೇನ್ ಪಿಕಾಕ್ ಕೂಡಾ ಇದ್ದರು. ಎಲ್ಲರಿಗೂ ಹ್ಯಾಪಿ ಹೋಳಿ. ಇದೊಂದು ಸೂಪರ್ ಸಂಡೇ. ಈ ಪಾರ್ಟಿಗಾಗಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಇಬ್ಬರಿಗೂ ಥ್ಯಾಂಕ್ಯೂ ಎಂದು ಬರೆದಿದ್ದಾರೆ.
ನಿಮ್ಮೊಂದಿಗೆ ಹೋಳಿ ಆಚರಣೆ ಸುಂದರವಾಗಿತ್ತು. ಮಳೆ ಬರುತ್ತಿತ್ತು, ಸದ್ಯ ಬಿಸಿಲಿರಲಿಲ್ಲ. ರುಚಿಕರವಾದ ಆಹಾರ ಮತ್ತು ಡ್ಯಾನ್ಸ್ ನಂತರ ನಾನಿಂದು ರಾತ್ರಿ ಮಗುವಿನಂತೆ ನಿದ್ರಿಸುತ್ತಿದ್ದೇನೆ ಎಂದು ಬರೆದಿದ್ದಾರೆ.
View this post on Instagram
ನಿಕ್ ಪ್ರಿಯಾಂಕಾ ಚೋಪ್ರಾ ಅವರನ್ನು ಓಡಿಸಿಕೊಂಡು ಬಂದು ಬಣ್ಣ ಎಸೆಯುವುದನ್ನು ಇಲ್ಲಿ ಕಾಣಬಹುದು. ವಾಟರ್ ಬಲೂನ್ ಎಸೆಯಲು ಓಡಿ ಬರುತ್ತಿರುವುದನ್ನು ಕಾಣಬಹುದಾಗಿದೆ. ಇಬ್ಬರೂ ಬಣ್ಣದ ನೀರಿನಲ್ಲಿ ನೆನೆದಿದ್ದರು.
ಇದನ್ನೂ ಓದಿ: Nayanthara: ಮಗುವನ್ನೆತ್ತಿ ನಗು ನಗುತ್ತಾ ಪೋಸ್ ಕೊಟ್ಟ ನಯನತಾರಾ! ಅವಳಿ ಮಕ್ಕಳ ಜೊತೆ ಏಪೋರ್ಟ್ನಲ್ಲಿ ಸೌತ್ ಜೋಡಿ
2018 ರಲ್ಲಿ ರಾಜಸ್ಥಾನದ ಅದ್ಧೂರಿ ಕಾರ್ಯಕ್ರಮದಲ್ಲಿ ವಿವಾಹವಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್, ಕಳೆದ ವರ್ಷ ಜನವರಿಯಲ್ಲಿ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ಗೆ ಪೋಷಕರಾದರು. ಮೊದಲ ಮಗಳನ್ನು ಬಾಡಿಗೆ ಮೂಲಕ ಸ್ವಾಗತಿಸಿದರು. ಅವರು ಕಳೆದ ವರ್ಷ ತಮ್ಮ ಮೊದಲ ಹೋಳಿಯನ್ನು ಕುಟುಂಬವಾಗಿ ಆಚರಿಸಿದರು.
ತಮ್ಮ LA ಮ್ಯಾನ್ಷನ್‌ನಲ್ಲಿ ಹಬ್ಬದ ಆಚರಣೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದರು. ಪ್ರಿಯಾಂಕಾ ಮತ್ತು ನಿಕ್ ಇತ್ತೀಚೆಗೆ ಪ್ಯಾರಿಸ್ ಫ್ಯಾಶನ್ ವೀಕ್ 2023 ಗಾಗಿ ಫ್ರಾನ್ಸ್‌ನಲ್ಲಿದ್ದರು. ಪ್ರಿಯಾಂಕಾ ಮುಂದಿನ ಸಿಟಾಡೆಲ್ ಪ್ರೈಮ್ ವಿಡಿಯೋ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಿಯಾಂಕಾ ಚೋಪ್ರಾ ಜೋನಸ್ ತನ್ನ ಅಂತರರಾಷ್ಟ್ರೀಯ ಪ್ರಾಜೆಕ್ಟ್ಗಳ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಏಪ್ರಿಲ್ 28 ರಂದು ಪ್ರೈಮ್ ವಿಡಿಯೋದಲ್ಲಿ 'ಸಿಟಾಡೆಲ್' ರಿಲೀಸ್ ಆಗುವ ಬಗ್ಗೆ ನಟಿ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. ಹಾಲಿವುಡ್‌ನಲ್ಲಿ ವೃತ್ತಿಜೀವನವನ್ನು ಮಾಡುವ ಮೊದಲು ಬಾಲಿವುಡ್ನಲ್ಲಿ ದೀರ್ಘಕಾಲ ಕೆಲಸ ಮಾಡಿದ್ದಾರೆ ಪ್ರಿಯಾಂಕ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ