Mouni Roy: ವ್ಹಾ.. ವ್ಹಾ.. ಸಖತ್ ಕಲರ್​​ಫುಲ್​​ ಕೆಜಿಎಫ್​ ಬೆಡಗಿಯ ಅರಿಶಿನ ಶಾಸ್ತ್ರ, ಮೈಚಳಿ ಬಿಟ್ಟು ಕುಣಿದ ಮೌನಿ ರಾಯ್​!

ಅರಿಶಿನ ಶಾಸ್ತ್ರದಲ್ಲಿ ಮೌನಿ ಬಿಳಿ ಬಣ್ಣದ ದಿರಿಸು ಧರಿಸಿ ಮಿಂಚಿದ್ದು, ಸೂರಜ್ ಕೂಡ ಮ್ಯಾಚಿಂಗ್ ಉಡುಗೆಯ ಮೂಲಕ ಮಿಂಚಿದ್ದಾರೆ.ಇನ್ನೂಅನೇಕ ಗಣ್ಯರು ಇವರ ಮೆಹಂದಿ ಶಾಸ್ತ್ರದಲ್ಲಿ ಭಾಗಿಯಾಗಿದ್ದರು.

ಮೌನಿ ರಾಯ್​

ಮೌನಿ ರಾಯ್​

  • Share this:
ಬಾಲಿವುಡ್ ಕಿರುತೆರೆಯಲ್ಲಿ ನಾಗಿಣಿ ಎಂದೇ ಖ್ಯಾತಿವೊಂದಿರುವ ಮೌನಿ ರಾಯ್ ಅರಿಶಿನ ಶಾಸ್ತ್ರ ಅದ್ದೂರಿಯಾಗಿ ನಡೆದಿದೆ. ಮೌನಿ ರಾಯ್(Mouni Roy)​... ಹಿಂದಿ(Hindi) ಕಿರುತೆರೆಯಲ್ಲಿ ತಮ್ಮದೇ ಆದ ಹೊಸ ಚಾಪು ಮೂಡಿಸಿದ ನಟಿ.. ಆದರೆ ಕೆಜಿಎಫ್(KGF)​ ಸಿನಿಮಾ ಇವರಿಗೆ ಹೊಸದೊಂದು ಇಮೇಜ್​ ತಂದುಕೊಟ್ಟಿತ್ತು. ಕೆಜಿಎಫ್​ ಸಿನಿಮಾದಲ್ಲಿ ಐಟಂ ಸಾಂಗ್​(Item Song)ಗೆ ರಾಕಿಂಗ್​ ಸ್ಟಾರ್​ ಯಶ್(Rocking Star Yash)​ ಜೊತೆ ಸೊಂಟ ಬಳುಕಿಸಿದ್ದರು. ಇದಾದ ಬಳಿಕ ಮೌನಿ ರಾಯ್​ ದೇಶದ ಮೂಲೆ ಮೂಲೆಯಲ್ಲಿ ಈಕೆಯ ಹೆಸರು ಕೇಳ ತೊಡಗಿತು. ಇತ್ತೀಚೆಗೆ ಅವರ ಮದುವೆ ವಿಚಾರದ ಬಗ್ಗೆ ಸಾಕಷ್ಟು ವರದಿಗಳು ಹರಿದಾಡಿದ್ದವು. ಬಾಯ್​ಫ್ರೆಂಡ್​ ಸೂರಜ್​ ನಂಬಿಯಾರ್​(Suraj Nambiar) ಜತೆ ಮೌನಿ ರಾಯ್​ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಇದೀಗ ಸದ್ದಿಲ್ಲದೆ ಅವರ ವಿವಾಹದ ಕಾರ್ಯಕ್ರಮಗಳು ಶುರುವಾಗಿದೆ. ಇಂದು ನಡೆಯುವ ವಿವಾಹದಲ್ಲಿ ಗೆಳೆಯ ಸೂರಜ್ ನಂಬಿಯಾರ್ ಅವರನ್ನು ಮೌನಿ ವರಿಸಲಿದ್ದಾರೆ. ನಿನ್ನೆ ಅರಿಶಿನ ಶಾಸ್ತ್ರ ನೆರವೇರಿದ್ದು, ಅದರ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನೂ ಮೌನಿ ಅಥವಾ ಸೂರಜ್ (Suraj Nambiar) ಅಧಿಕೃತವಾಗಿ ಚಿತ್ರಗಳನ್ನುನ ಹಂಚಿಕೊಂಡಿಲ್ಲ. ಬದಲಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇತರರು ಹಂಚಿಕೊಂಡಿದ್ದ ಚಿತ್ರಗಳು ಮೌನಿ ಅಭಿಮಾನಿ ಬಳಗಕ್ಕೆ ಲಭ್ಯವಾಗಿದ್ದು, ಸದ್ಯ ಸಖತ್ ಸದ್ದು ಮಾಡುತ್ತಿದೆ. ಅರಿಶಿನ ಶಾಸ್ತ್ರ ಹಾಗೂ ಮೆಹಂದಿ ಶಾಸ್ತ್ರದ ಚಿತ್ರಗಳು ಹಾಗೂ ವಿಡಿಯೋಗಳು ಲಭ್ಯವಾಗಿವೆ.

ಮಸ್​ ಎಂಜಾಯ್​ ಮಾಡಿದ ಮೌನಿ ರಾಯ್​!

ಅರಿಶಿನ ಶಾಸ್ತ್ರದಲ್ಲಿ ಮೌನಿ ಬಿಳಿ ಬಣ್ಣದ ದಿರಿಸು ಧರಿಸಿ ಮಿಂಚಿದ್ದು, ಸೂರಜ್ ಕೂಡ ಮ್ಯಾಚಿಂಗ್ ಉಡುಗೆಯ ಮೂಲಕ ಮಿಂಚಿದ್ದಾರೆ.ಇನ್ನೂಅನೇಕ ಗಣ್ಯರು ಇವರ ಮೆಹಂದಿ ಶಾಸ್ತ್ರದಲ್ಲಿ ಭಾಗಿಯಾಗಿದ್ದರು. ಜೊತೆಗೆ ಮೌನಿ ರಾಯ್​ ಮೈಚಳಿ ಬಿಟ್ಟು ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಿದ್ದಾರೆ. ಬಿಳಿ ಬಣ್ಣದ ಸೀರೆ ಸಂಪೂರ್ಣ ಹಳದಿಯಾಗಿತ್ತು. ಅದೇ ಸೀರೆಯಲ್ಲಿ ಸೊಂಟ ಬಳುಕಿಸಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.ಇದನ್ನು ಓದಿ : ಮದುವೆ ಬಗ್ಗೆ ಕೊನೆಗೂ ಬಾಯ್ಬಿಟ್ಟ ಕೆಜಿಎಫ್ ಬೆಡಗಿ, ಇವ್ರೆ ನಮ್​ ಹುಡ್ಗ ಎಂದು ನಾಚಿ ನೀರಾದ ಮೌನಿ!

ಗೋವಾದಲ್ಲಿ ನಡೀತಿದೆ ಅದ್ಧೂರಿ ವಿವಾಹ!

2004ರಲ್ಲಿ ತೆರೆಗೆ ಬಂದ ‘ರನ್​’ ಸಿನಿಮಾದಲ್ಲಿ ಮೌನಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದರು. ಈ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಜನವರಿ 27ರಂದು ಮೌನಿ ಅವರು ಗೋವಾದಲ್ಲಿ ಮದುವೆ ಆಗುತ್ತಿದ್ದಾರೆ. ಗೋವಾದಲ್ಲಿ ಸಮಂತಾ ಮತ್ತು ನಾಗಚೈತನ್ಯ ಮದುವೆ ಆದ ಸ್ಥಳದಲ್ಲಿಯೇ ಮದುವೆ ಆಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೊರೋನಾ ​ಕಾರಣ ಕೇವಲ ಕುಟುಂಬದವರು ಹಾಗೂ ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಲಿದ್ದಾರಂತೆ. ಇದಾದ ಬಳಿಕ ಮುಂಬೈನಲ್ಲಿ ಆರತಕ್ಷತೆ ನಡೆಯಲಿದೆ ಎಂಬ ಗಾಸಿಪ್​ಗಳು ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ.ಈ ಹಿಂದೆ ಮೌನಿ ರಾಐ್​ ಮದುವೆಯ ಕುರಿತು ಯಾವುದೇ ಮಾಹಿತಿ ತಿಳಿಸಿರಲಿಲ್ಲ. ಅದಾಗ್ಯೂ ಅವರ ಮದುವೆ ಜನವರಿ ಅಂತ್ಯಕ್ಕೆ ನಡೆಯಲಿದೆ ಎಂದು ಬಿಟೌನ್​ನಲ್ಲಿ ಸುದ್ದಿಯಾಗಿತ್ತು.

ಇದನ್ನು ಓದಿ : `ಕನ್ನಡತಿ’ ಸೀರಿಯಲ್​ ಬಿಟ್ಟಿದ್ದೇ ಈ ಸಿನಿಮಾ ಮಾಡೋಕ್ಕಂತೆ.. ರಮೋಲಾ ಫಸ್ಟ್​ ಮೂವಿ ಶೂಟಿಂಗ್ ಸ್ಟಾರ್ಟ್​!

ಮೌನಿ ಕೈ ಹಿಡಿಯುತ್ತಿರುವ ವರನಾರು?

ಮೌನಿ ರಾಯ್​ ಮದುವೆ ಆಗುತ್ತಿರುವ  ಸೂರಜ್ ​ಅವರು ಉದ್ಯಮಿ ಆಗಿದ್ದು, ದುಬೈನಲ್ಲಿ ಸೆಟಲ್​ ಆಗಿದ್ದಾರೆ. ಮೌನಿ ಅವರು ಈ ಹುಡುಗನ ಬಗ್ಗೆ ಮೌನ ವಹಿಸಿದ್ದಾರೆ.‌ ಹೆಚ್ಚಾಗಿ ಏನನ್ನೂ ಮಾತನಾಡಿಲ್ಲ. ಇಬ್ಬರೂ ಅನೇಕ ವರ್ಷಗಳಿಂದ ಡೇಟ್​ಮಾಡುತ್ತಿದ್ದಾರೆ. ಇವರ ಫೋಟೋಗಳು ಸೋಶಿಯಲ್​ಮೀಡಿಯಾದಲ್ಲಿ ವೈರಲ್​ಆಗಿದ್ದವು. 2018ರಲ್ಲಿ ತೆರೆಗೆ ಬಂದ ‘ಗೋಲ್ಡ್​’ ಸಿನಿಮಾ ಅವರು ನಾಯಕಿಯಾಗಿ ಮೌನಿ ರಾಯ್​ ನಟಿಸಿದ್ದರು. ಅದೇ ವರ್ಷ ‘ಕೆಜಿಎಫ್​’ ಹಿಂದಿ ವರ್ಷನ್​ನ ‘ಗಲಿ ಗಲಿ..’ ಹಾಡಿಗೆ ಮೌನಿ ಹೆಜ್ಜೆ ಹಾಕಿದರು.
Published by:Vasudeva M
First published: