news18-kannada Updated:February 14, 2020, 7:12 AM IST
ನಾರಯಣ ಮೂರ್ತಿ ಮತ್ತು ಸುಧಾಮೂರ್ತಿ
ಬೆಂಗಳೂರು(ಫೆ.14): ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಮತ್ತವರ ಪತ್ನಿ ಸುಧಾಮೂರ್ತಿಯವರ ಜೀವನ ಕಥೆ ಸಿನಿಮಾ ಆಗುತ್ತಿರುವುದು ಗೊತ್ತಿರುವ ಸಂಗತಿ. ಈ ಸಿನಿಮಾ ನೋಡಲು ಸಾವಿರಾರು ಜನ ಕಾಯುತ್ತಿದ್ದಾರೆ. ಇದೀಗ ಖುಷಿ ವಿಚಾರವೆಂದರೆ ಸದ್ಯದಲ್ಲೇ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿಯವರ ಬಯೋಪಿಕ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ನಂತರ ಆದಷ್ಟೂ ಬೇಗ ಸಿನಿಮಾ ತೆರೆ ಮೇಲೆ ಬರಲಿದೆಯಂತೆ.
ಬಾಲಿವುಡ್ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶನದ ಜೊತೆಗೆ ಅಶ್ವಿನಿ ಅಯ್ಯರ್ ತಿವಾರಿ ನಿರ್ಮಾಣದ ಜವಾಬ್ದಾರಿಯೂ ಹೊತ್ತಿದ್ಧಾರೆ. ಅಶ್ವಿನಿ ಜೊತೆ ನಿತೇಶ್ ತಿವಾರಿ ಮತ್ತು ಮಹಾವೀರ್ ಜೈನ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಕೆಲಸಗಳು ಪ್ರಾರಂಭವಾಗಿವೆ ಎಂದು ಹೇಳಲಾಗುತ್ತಿದೆ.
ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಭೇಟಿ ಆಗಿದ್ದು, ಒಬ್ಬನ್ನೊಬ್ಬರು ಇಷ್ಟಪಟ್ಟಿದ್ದರು, ನಾರಯಣ ಮೂರ್ತಿ ಬಳಿ ಏನು ಇಲ್ಲದಿದ್ದರೂ ಅವರನ್ನು ಸುಧಾ ಮೂರ್ತಿ ಒಪ್ಪಿದ್ದು, ಇಬ್ಬರೂ ವಿವಾಹವಾಗಿದ್ದು, ನಂತರ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದು ಎಲ್ಲವೂ ರೋಚಕ. ಅಶ್ವಿನಿ ಸಿದ್ಧಪಡಿಸುವ ಚಿತ್ರದಲ್ಲಿ ಪ್ರೇಮಕಥೆ ಹೈಲೈಟ್ ಆಗಲಿದೆಯಂತೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಸಿದ್ಧಗೊಳ್ಳಲಿದೆ ನಾರಾಯಣ ಮೂರ್ತಿ-ಸುಧಾ ಮೂರ್ತಿ ಜೀವನ ಕುರಿತ ಚಿತ್ರ!
ಈ ಮಧ್ಯೆಯೇ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿಯವರ ಪಾತ್ರಗಳಲ್ಲಿ ಯಾರೂ ನಟಿಸಬಹುದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ನೆಟ್ಟಿಗರು ಯಾವ ಸ್ಟಾರ್ ನಟರು ಈ ಚಿತ್ರದಲ್ಲಿ ನಟಿಸಲಿದ್ಧಾರೆ ಎಂಬ ಚರ್ಚೆ ಶುರು ಮಾಡಿದ್ದರೂ ಇಲ್ಲಿಯವರೆಗೂ ನಿರ್ದೇಶಕಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
First published:
February 14, 2020, 7:12 AM IST