news18-kannada Updated:August 31, 2020, 9:43 AM IST
ಇಂದ್ರಜಿತ್ ಲಂಕೇಶ್
ಬೆಂಗಳೂರು (ಆಗಸ್ಟ್ 31): ಕನ್ನಡದ ಕಲಾವಿದರು, ನಿರ್ದೇಶಕರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎನ್ನುವ ವಿಚಾರ ಇಡೀ ಕನ್ನಡ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಕೆಲ ಸ್ಟಾರ್ ನಟರು ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರೆ ಇನ್ನೂ ಕೆಲವರು ಆ ವಿಚಾರ ನನ್ನ ಗಮನಕ್ಕೆ ಬಂದಿದೆ ಎಂದಿದ್ದರುಷೃ. ಈ ಮಧ್ಯೆ, ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟರು ಡ್ರಗ್ಸ್ ತೆಗೆದುಕೊಳ್ಳುವುದನ್ನು ಕಣ್ಣಾರೆ ನೋಡಿದ್ದೇನೆ ಎಂದು ಹೇಳಿದ್ದರು. ಈ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಇಂದ್ರಜಿತ್ ಲಂಕೇಶ್ ವಿಚಾರಣೆಗೆ ಹಾಜರಾಗಲಿದ್ದು, ಮಹತ್ವದ ಹೇಳಿಕೆ ನೀಡುವ ಸಾಧ್ಯತೆ ಇದೆ.
ಮುಂಜಾನೆ 11:30 ರ ಸಮಯದಲ್ಲಿ ಸಿಸಿಬಿಗೆ ಕಚೇರಿಗೆ ಬರುವಂತೆ ಇಂದ್ರಿಜಿತ್ಗೆ ನೊಟೀಸ್ ನೀಡಲಾಗಿದೆ. ಡ್ರಗ್ಸ್ ಪಡೆಯೋರು ಯಾರ್ಯಾರು ಎನ್ನುವ ಲಿಸ್ಟ್ ನನ್ನ ಬಳಿ ಇದೆ. ಪೊಲೀಸರು ಭದ್ರತೆ ಕೊಡೋದು ಆದರೆ ಮಾಹಿತಿ ಕೊಡ್ತೀನಿ ಎಂದು ಎಂದು ಇಂದ್ರಜಿತ್ ಮಾಧ್ಯಮಗಳಲ್ಲಿ ಹೇಳಿದ್ದರು. ಈ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡುವಂತೆ ಅವರಿಗೆ ನೋಟೀಸ್ ನೀಡಿದ್ದರು.
ಸದ್ಯಮ ಇಂದ್ರಜಿತ್ ಲಂಕೇಶ್ ಹೇಳೋ ಮಾಹಿತಿಯಿಂದ ಯಾರಿಗೆಲ್ಲಾ ತೊಂದರೆ ಆಗುತ್ತೆ ಎನ್ನುವ ಚರ್ಚೆ ಜೋರಾಗಿದೆ. ಇಂದ್ರಜಿತ್ ಹೇಳೋ ಹೆಸರುಗಳಲ್ಲಿ ಬಿಗ್ ಸೆಲೆಬ್ರಿಟಿ ಗಳು ಇದ್ದಾರೆಯೇ? ಕನ್ನಡ ಚಿತ್ರದ ಯಾವೆಲ್ಲಾ ನಟ-ನಟಿಯರ ಹೆಸರನ್ನು ಅವರು ಹೇಳಬಹುದು? ಡ್ರಗ್ಸ್ ಜಾಲದಲ್ಲಿ ತೇಲಾಡುತ್ತಿರೋರ ಬಗ್ಗೆ ನಿಜವಾಗಿಯೂ ಇಂದ್ರಜಿತ್ ಲಂಕೇಶ್ಗೆ ಗೊತ್ತಾ? ಹೆಸರುಗಳು ಹೇಳುವುದರ ಜೊತೆಗೆ ಸಾಕ್ಷ್ಯಾಧಾರಗಳನ್ನೂ ಅವರು ನೀಡ್ತಾರಾ..? ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ.
Rachita Ram: ಸ್ಯಾಂಡಲ್ವುಡ್ಗೂ ಡ್ರಗ್ಸ್ ಮಾಫಿಯಾ ನಂಟು: ಪ್ರತಿಕ್ರಿಯೆ ನೀಡಿದ ರಚಿತಾ ರಾಮ್..!
ಇತ್ತೀಚೆಗೆ ಸ್ಯಾಂಡಲ್ವುಡ್ನ ಖ್ಯಾತ ನಟನೋರ್ವ ಮೃತಪಟ್ಟಿದ್ದರು. ಅವರ ಮರಣೋತ್ತರ ಪರೀಕ್ಷೆ ಏಕೆ ನಡೆದಿರಲಿಲ್ಲ ಎನ್ನುವ ಬಗ್ಗೆ ಇಂದ್ರಜಿತ್ ಲಂಕೇಶ್ ಹೇಳಿದ್ದರು. ಅದಕ್ಕೆ ಪೂರಕ ರೀತಿಯಲ್ಲಿ ಸಾಕ್ಷ್ಯ ಏನಾದರೂ ಅಧಿಕಾರಿಗಳಿಗೆ ನೀಡಬಹುದೆ ಎನ್ನುವ ಕುತೂಹಲ ಮೂಡಿದೆ.
Published by:
Rajesh Duggumane
First published:
August 31, 2020, 9:39 AM IST