Viral Video: ವಿಮಾನ ಸಿಬ್ಬಂದಿಗಳಿಂದ ನಿಲ್ದಾಣದಲ್ಲಿ ಬುಟ್ಟ ಬೊಮ್ಮ ಹಾಡಿಗೆ ಸಖತ್ ಡ್ಯಾನ್ಸ್!

Butta Bomma: ಇಂಡಿಗೋ ಏರ್​ಲೈನ್ಸ್​​ ಸಿಬ್ಬಂದಿಗಳು ಮುಖಕ್ಕೆ ಮಾಸ್ಕ್​ ಹಾಗೂ ಗ್ಲೌಸ್​​ ಧರಿಸಿ ‘ಬುಟ್ಟ ಬೊಮ್ಮ’ ಎಂದು ಸ್ಟೆಪ್​​ ಹಾಕಿದ್ದಾರೆ. ಈ ವಿಡಿಯೋ ನೋಡಿ ಅನೇಕರು ಕಾಮೆಂಟ್​ ಬರೆದಿದ್ದಾರೆ. ಅದರಲ್ಲೊಬ್ಬರು ಕರೋನಾ ಸಾಂಕ್ರಾಮಿಕ ರೋಗದ ಮಧ್ಯೆ ಇಂತಹ ಅದ್ಭುತ ಹಾಡಿಗೆ ಹೆಜ್ಜೆ ಹಾಕುತ್ತಿರುವ ಇಂಡಿಗೋ ಏರ್​ಲೈನ್ಸ್​​ ಸಿಬ್ಬಂದಿಗಳ ನೃತ್ಯವನ್ನು ನೋಡುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ಬರೆದುಕೊಂಡಿದ್ದಾರೆ.

news18-kannada
Updated:July 20, 2020, 9:25 PM IST
Viral Video: ವಿಮಾನ ಸಿಬ್ಬಂದಿಗಳಿಂದ ನಿಲ್ದಾಣದಲ್ಲಿ ಬುಟ್ಟ ಬೊಮ್ಮ ಹಾಡಿಗೆ ಸಖತ್ ಡ್ಯಾನ್ಸ್!
‘ಬುಟ್ಟ ಬೊಮ್ಮ’ ಹಾಡಿಗೆ ಹೆಜ್ಜೆ ಹಾಕುತ್ತಿರುವ ಇಂಡಿಗೋ ಏರ್​ಲೈನ್ಸ್​​ ಸಿಬ್ಬಂದಿಗಳು
  • Share this:
ಇತ್ತೀಚೆಗೆ ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್​ ಹಾಗೂ ಕನ್ನಡತಿ ಪೂಜಾ ಹೆಗ್ಡೆ ನಟಿಸಿದ ‘ಅಲಾ ವೈಕುಠಂಪುರಲೋ’ ಸಿನಿಮಾ ಟಾಲಿವುಡ್​ನಲ್ಲಿ ಭಾರೀ ಹಿಟ್​ ಆಗಿತ್ತು. ಈ ಸಿನಿಮಾದಲ್ಲಿನ ‘ಬುಟ್ಟ ಬೊಮ್ಮ’ ಹಾಡು ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಟಿಕ್​ಟಾಕ್​, ಫೇಸ್​​​ಬುಕ್​, ಇನ್​ಸ್ಟಾಗ್ರಾಂ ಹೀಗೆ ನಾನಾ ಸೋಷಿಯಲ್​ ಮೀಡಿಯಾದಲ್ಲಿ ಅಲ್ಲು ಅರ್ಜುನ್​ ಅಭಿಮಾನಿಗಳು ಈ ಹಾಡಿಗೆ ಹೆಜ್ಜೆ ಹಾಕುವ ವಿಡಿಯೋವನ್ನು ಹರಿಬಿಟ್ಟಿದ್ದರು. ಅಷ್ಟೇ ಏಕೆ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್​ ವಾರ್ನರ್​ ಕೂಡ ತನ್ನ ಪತ್ನಿ ಮತ್ತು ಮಕ್ಕಳ ಜೊತೆ ಸೇರಿಕೊಂಡು ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಕೊರೋನಾ ಸೋಂಕಿತ ವೈದ್ಯರ ತಂಡ ‘ಬುಟ್ಟ ಬೊಮ್ಮ’ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿದ್ದರು. ಇದೀಗ ಇಂಡಿಗೋ ಏರ್​ಲೈನ್ಸ್​​​​ ಸಿಬ್ಬಂದಿ ಈ ಹಾಡಿಗೆ ಹೆಜ್ಜೆ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಭುವನೇಶ್ವರದ ಇಂಡಿಗೋ ಏರ್​ಲೈನ್ಸ್​​ ಸಿಬ್ಬಂದಿ ‘ಬುಟ್ಟ ಬೊಮ್ಮ’ ಹಾಡಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋವನ್ನು ಜೆ ಶ್ರೀನಿವಾಸ್​ ಕುಮಾರ್​ ಎಂಬವರು ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ನಟ ಅಲ್ಲು ಅರ್ಜುನ್​ ಅವರಿಗೆ ಟ್ಯಾಗ್​ ಮಾಡಿದ್ದಾರೆ.


ಇಂಡಿಗೋ ಏರ್​ಲೈನ್ಸ್​​ ಸಿಬ್ಬಂದಿಗಳು ಮುಖಕ್ಕೆ ಮಾಸ್ಕ್​ ಹಾಗೂ ಗ್ಲೌಸ್​​ ಧರಿಸಿ ‘ಬುಟ್ಟ ಬೊಮ್ಮ’ ಎಂದು ಸ್ಟೆಪ್​​ ಹಾಕಿದ್ದಾರೆ. ಈ ವಿಡಿಯೋ ನೋಡಿ ಅನೇಕರು ಕಾಮೆಂಟ್​ ಬರೆದಿದ್ದಾರೆ. ಅದರಲ್ಲೊಬ್ಬರು ಕರೋನಾ ಸಾಂಕ್ರಾಮಿಕ ರೋಗದ ಮಧ್ಯೆ ಇಂತಹ ಅದ್ಭುತ ಹಾಡಿಗೆ ಹೆಜ್ಜೆ ಹಾಕುತ್ತಿರುವ ಇಂಡಿಗೋ ಏರ್​ಲೈನ್ಸ್​​ ಸಿಬ್ಬಂದಿಗಳ ನೃತ್ಯವನ್ನು ನೋಡುವುದು ನಿಜಕ್ಕೂ ಸಂತೋಷದ ಸಂಗತಿ ಎಂದು ಬರೆದುಕೊಂಡಿದ್ದಾರೆ.

ಸರ್​ಪ್ರೈಸ್​ ಎಂದ ನಟ ಅಲ್ಲು ಅರ್ಜುನ್​!

ಇಂಡಿಗೋ ಏರ್​ಲೈನ್ಸ್​ ಸಿಬ್ಬಂದಿಗಳು ಹೆಜ್ಜೆ ಹಾಕಿರುವ ವಿಡಿಯೋವನ್ನು ಕಂಡು ನಟ ಅಲ್ಲು ಅರ್ಜುನ್​ ಟ್ವೀಟ್​ ಮಾಡಿದ್ದಾರೆ.  ‘ಈ ಕಡಿಮೆ ಅವಧಿಯಲ್ಲಿ ಎಂತಹ ಸರ್​​ಪ್ರೈಸ್​ ನೀಡಿದ್ದೀರಿ. ಧನ್ಯವಾದಗಳು’, ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ

ಇನ್ನು ‘ಬುಟ್ಟ ಬೊಮ್ಮ’ ಹಾಡು ಯ್ಯೂಟೂಬ್​ನಲ್ಲಿ ಹೆಚ್ಚು ವೀಕ್ಷಣೆ ಕಂಡ ಹಾಡುಗಳಲ್ಲಿ ಒಂದಾಗಿದ್ದು, ಅನೇಕರು ಈ ಹಾಡಿಗೆ ಮನಸೋತಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಇಂದಿಗೂ ರಾರಾಜಿಸುತ್ತಿದೆ.
Published by: Harshith AS
First published: July 20, 2020, 9:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading