• Home
  • »
  • News
  • »
  • entertainment
  • »
  • Chhello Show: ಆಸ್ಕರ್ ಎಂಟ್ರಿ ಪಡೆದ ಛೆಲ್ಲೋ ಶೋ ಬಾಲನಟ ಕ್ಯಾನ್ಸರ್​ಗೆ ಬಲಿ

Chhello Show: ಆಸ್ಕರ್ ಎಂಟ್ರಿ ಪಡೆದ ಛೆಲ್ಲೋ ಶೋ ಬಾಲನಟ ಕ್ಯಾನ್ಸರ್​ಗೆ ಬಲಿ

ಆಸ್ಕರ್​ಗೆ ಎಂಟ್ರಿ ಪಡೆದ ಭಾರತದ ಛೆಲ್ಲೋ ಶೋ ಸಿನಿಮಾದಲ್ಲಿ ಅಭಿನಯಿಸಿದ ಬಾಲ ಕಲಾವಿದನನ್ನು ಕ್ಯಾನ್ಸರ್ ಬಲಿ ಪಡೆದಿದೆ.

ಆಸ್ಕರ್​ಗೆ ಎಂಟ್ರಿ ಪಡೆದ ಭಾರತದ ಛೆಲ್ಲೋ ಶೋ ಸಿನಿಮಾದಲ್ಲಿ ಅಭಿನಯಿಸಿದ ಬಾಲ ಕಲಾವಿದನನ್ನು ಕ್ಯಾನ್ಸರ್ ಬಲಿ ಪಡೆದಿದೆ.

ಆಸ್ಕರ್​ಗೆ ಎಂಟ್ರಿ ಪಡೆದ ಭಾರತದ ಛೆಲ್ಲೋ ಶೋ ಸಿನಿಮಾದಲ್ಲಿ ಅಭಿನಯಿಸಿದ ಬಾಲ ಕಲಾವಿದನನ್ನು ಕ್ಯಾನ್ಸರ್ ಬಲಿ ಪಡೆದಿದೆ.

  • Share this:

ಛೆಲ್ಲೋ ಶೋ (Chhello Show) ಭಾರತದಿಂದ ಆಸ್ಕರ್​​ಗೆ (Oscars) ಎಂಟ್ರಿ ಪಡೆದ ಸಿನಿಮಾ. ಈ ಸಿನಿಮಾದಲ್ಲಿ (Cinema) ನಟಿಸಿ ಪ್ರೇಕ್ಷಕರ ಮನಸು ಗೆದ್ದಿದ್ದ ಬಾಲ ಕಲಾವಿದ ರಾಹುಲ್ (Rahul) ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾರೆ. ಛೆಲ್ಲೋ ಅಥವಾ ಲಾಸ್ಟ್ ಫಿಲ್ಮ್ ಶೋನ ಬಾಲನಟ ರಾಹುಲ್ ಕೋಲಿ ಅವರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಬಾಲ ಕಲಾವಿದ (Child Artist) ಸಾಯುವ ಮೊದಲು ಪದೇ ಪದೇ ಜ್ವರದಿಂದ ಬಳಲುತ್ತಿದ್ದರು ಎಂದು ರಾಹುಲ್ ಅವರ ತಂದೆ ಹೇಳಿದ್ದಾರೆ. ಅಕ್ಟೋಬರ್ 14 ರಂದು ಚಿತ್ರ ಬಿಡುಗಡೆಯಾದಾಗ ಕುಟುಂಬವು ಒಟ್ಟಿಗೆ ಛೆಲೋ ಶೋ ಅನ್ನು ವೀಕ್ಷಿಸಲಿದೆ ಎಂದು ಅವರು ಬಹಿರಂಗಪಡಿಸಿದರು. ರಾಹುಲ್‌ಗೆ ಹತ್ತು ವರ್ಷ ವಯಸ್ಸಾಗಿತ್ತು. ಭಾರತದ (India) ಆಸ್ಕರ್ ಪ್ರವೇಶ, ಛೆಲೋ ಶೋನಲ್ಲಿ ಪ್ರಮುಖ ಪಾತ್ರವನ್ನು (Main Role) ವಹಿಸಿದ್ದರು. ಅವರು ಲ್ಯುಕೇಮಿಯಾದಿಂದ ಬಳಲುತ್ತಿದ್ದರು.


ರಕ್ತವಾಂತಿ ಮಾಡಿದ್ದ ರಾಹುಲ್


ವರದಿಗಳ ಪ್ರಕಾರ ರಾಹುಲ್ ಅವರ ತಂದೆ ರಾಮು ಕೊಲಿ (Ramu Koli) ಈ ಬಗ್ಗೆ ಪ್ರತಿಕ್ರಿಯಿಸಿ, ಅಕ್ಟೋಬರ್ 2ರಂದು ರಾಹುಲ್ ಬೆಳಗಿನ ಉಪಹಾರ ಸೇವಿಸಿದ. ಆಮೇಲೆ ನಿರಂತರ ಜ್ವರ ಕಾಣಿಸಿಕೊಂಡಿತ್ತು. ಮೂರು ಬಾರಿ ರಾಹುಲ್ ರಕ್ತವಾಂತಿ ಮಾಡಿದ್ದ. ನಂತರ ಮಗ ಕೊನೆ ಉಸಿರೆಳೆದಿದ್ದಾನೆ ಎಂದು ಹೇಳಿದ್ದಾರೆ.


ನಮ್ಮ ಕುಟುಂಬ ಅತ್ಯಂತ ದುಃಖದಲ್ಲಿದೆ. ಆದರೆ ನಾವು ಖಂಡಿತವಾಗಿಯೂ ಸಿನಿಮಾ ಬಿಡುಗಡೆಯ ದಿನ ಕುಟುಂಬ ಸಮೇತರಾಗಿ ಸಿನಿಮಾ ನೋಡುತ್ತೇವೆ. ರಾಹುಲ್ ಅಂತಿಮ ವಿಧಿ ವಿಧಾನಗಳನ್ನು ಮುಗಿಸಬೇಕಿದೆ ಎಂದಿದ್ದಾರೆ.


ಇದನ್ನೂ ಓದಿ: Oscars 2023: ಗುಜರಾತಿ ಸಿನಿಮಾ 'ಛೆಲ್ಲೊ ಶೋ' ಆಸ್ಕರ್ 2023ಕ್ಕೆ ಭಾರತದ ಅಧಿಕೃತ ಪ್ರವೇಶ


ತನ್ನದೇ ಸಿನಿಮಾ ನೋಡೋಕೆ ಕಾಯುತ್ತಿದ್ದ ರಾಹುಲ್


ಜಮ್ನಗರದಲ್ಲಿರುವ ಹಪಾ ಗ್ರಾಮದಲ್ಲಿ ರಾಹುಲ್ ಅವರ ಕುಟುಂಬ ಶ್ರದ್ಧಾಂಜಲಿ ಸಭೆ ನಡೆಸಿದೆ. ರಾಹುಲ್ ತನ್ನ ಸಿನಿಮಾ ನೋಡಲು ಭಾರೀ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಎಂದು ಅವನ ತಂದೆ ರಾಮು ಅವರು ಹೇಳಿದ್ದಾರೆ. ರಾಮು ಅವರು ವೃತ್ತಿಯಲ್ಲಿ ಆಟೋ ರಿಕ್ಷಾ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ.


ಎಲ್ಲವೂ ಬದಲಾಗುತ್ತೆ ಎಂದು ತಂದೆಗೆ ಧೈರ್ಯ ತುಂಬಿದ್ದ


ಮಧ್ಯಮ ವರ್ಗದ ಜೀವನ ಸಾಗಿಸುತ್ತಿದ್ದ ರಾಹುಲ್ ಹಾಗೂ ಅವರ ಕುಟುಂಬ ತಂದೆಯ ಆಟೋ ಡ್ರೈವರ್ ಕೆಲಸದಿಂದಲೇ ಜೀವನ ಸಾಗಿಸುತ್ತಿತ್ತು. ಸಿನಿಮಾದಲ್ಲಿ ನಟಿಸಿದ್ದ ರಾಹುಲ್ ಅ.14ರಂದು ಸಿನಿಮಾ ರಿಲೀಸ್ ಆದ ನಂತರ ತಮ್ಮ ಬದುಕು ಬದಲಾಗುತ್ತದೆ ಎಂದು ಹೇಳಿದ್ದರು ಎಂದು ಅವರ ತಂದೆ ನೆನಪಿಸಿಕೊಂಡು ಭಾವುಕರಾಗಿದ್ದಾರೆ.


ಗುಜರಾತಿ ಸಿನಿಮಾ


ಆಸ್ಕರ್​​​ಗೆ ಎಂಟ್ರಿ ಕೊಡುವ ವಿಚಾರದಲ್ಲಿ ದೊಡ್ಡ ದೊಡ್ಡ ಸಿನಿಮಾಗಳ ಹೆಸರು ಕೇಳಿ ಬಂದಿದ್ದರೂ ಕೊನೆಗೆ ಗುಜರಾತಿ ಸಿನಿಮಾ ಛೆಲ್ಲೊ ಶೋ ಅಧಿಕೃತ ಎಂಟ್ರಿ ಎಂದು ಘೋಷಣೆಯಾದಾಗ ಎಲ್ಲ ಗಾಸಿಪ್​​ಗೆ ತೆರೆ ಬಿದ್ದಿತ್ತು. ಅಕ್ಟೋಬರ್ 14, 2022 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.


ಇದನ್ನೂ ಓದಿ: Chhello Show: ಆಸ್ಕರ್​ಗೆ ಎಂಟ್ರಿ ಕೊಟ್ಟ ಸಿನಿಮಾ ಎಡಿಟಿಂಗ್ ಮಾಡಿದ್ದು ಕರ್ನಾಟಕದ ಯುವಕ!


ಈ ಸಿನಿಮಾ 2021 ರಲ್ಲಿ ಟ್ರಿಬೆಕಾ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಅಕ್ಟೋಬರ್ 2021 ರಲ್ಲಿ, ಛೆಲ್ಲೊ ಶೋ 66 ನೇ ವಲ್ಲಾಡೋಲಿಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಸ್ಪೈಕ್ ಅನ್ನು ಗೆದ್ದುಕೊಂಡಿತು. ಸಿನಿಮಾ ಬಗ್ಗೆ ಭಾರೀ ಕುತೂಗಲವಿತ್ತು. ಆದರೆ ಅದರ ಮಧ್ಯೆಯೇ ಸಿನಿಮಾದಲ್ಲಿ ನಟಿಸಿದ್ದ ಬಾಲಕನ ಸಾವು ಎಲ್ಲರಿಗೂ ಶಾಕ್ ಕೊಟ್ಟಿದೆ.

Published by:Divya D
First published: