Bhanu Athaiya - ಭಾರತದ ಮೊದಲ ಆಸ್ಕರ್ ವಿನ್ನರ್ ಭಾನು ಅಥೈಯ್ಯಾ ನಿಧನ

Bhanu Athaiya Death - 1983ರಲ್ಲಿ ಗಾಂಧಿ ಸಿನಿಮಾದ ವಸ್ತ್ರ ವಿನ್ಯಾಸಕ್ಕಾಗಿ ಆಸ್ಕರ್ ಪ್ರಶಸ್ತಿ ಪಡೆದು ಇತಿಹಾಸ ಸೃಷ್ಟಿಸಿದ್ದ ಭಾನು ಅಥೈಯ್ಯಾ ಅ. 15ರಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಇಂದೇ ಅವರ ಅಂತ್ಯಕ್ರಿಯೆ ಕೂಡ ನಡೆದಿದೆ.

news18
Updated:October 15, 2020, 8:23 PM IST
Bhanu Athaiya - ಭಾರತದ ಮೊದಲ ಆಸ್ಕರ್ ವಿನ್ನರ್ ಭಾನು ಅಥೈಯ್ಯಾ ನಿಧನ
ಭಾನು ಅಥೈಯ್ಯಾ
  • News18
  • Last Updated: October 15, 2020, 8:23 PM IST
  • Share this:
ಮುಂಬೈ(ಅ. 15): ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯ ಕಾಸ್ಟೂಮ್ ಡಿಸೈನರ್ ಭಾನು ಅಥೈಯ್ಯ ಅವರು ಇಹಲೋಕ ತ್ಯಜಿಸಿದ್ದಾರೆ. ಅವರು, ಮಲಗಿದ್ದಲ್ಲೇ ಇಂದು ಗುರುವಾರ ಕೊನೆಯುಸಿರೆಳೆದರು ಎಂದು ಅವರ ಮಗಳು ರಾಧಿಕಾ ಗುಪ್ತಾ ಮಾಹಿತಿ ನೀಡಿದ್ದಾರೆ. 91 ವರ್ಷದ ಭಾನು ಅಥೈಯ್ಯಾ ಒಬ್ಬ ಮಗಳನ್ನು ಅಗಲಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ಆಸ್ಕರ್ ಸೇರಿ ಹಲವು ಪ್ರಮುಖ ಪ್ರಶಸ್ತಿಗಳನ್ನ ಅವರು ಗೆದ್ದ ಸಾಧನೆ ಮಾಡಿದ್ದಾರೆ. 1983ರಲ್ಲಿ ರಿಚರ್ಡ್ ಆಟನ್​ಬರೋ ನಟನೆಯ ‘ಗಾಂಧಿ’ ಸಿನಿಮಾದಲ್ಲಿ ಅವರ ವಸ್ತ್ರ ವಿನ್ಯಾಸಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು.

ಭಾನು ಅಥೈಯ್ಯಾ ಅವರಿಗೆ ಬ್ರೈನ್ ಟ್ಯೂಮರ್ ಇರುವುದು ಎಂಟು ವರ್ಷಗಳ ಹಿಂದೆ ತಿಳಿದುಬಂದಿತ್ತು. ಕಳೆದ ಮೂರು ವರ್ಷಗಳಿಂದ ಅವರ ದೇಹದ ಒಂದು ಬದಿ ಪಾರ್ಶ್ವವಾಯುಗೊಂಡು ಹಾಸಿಗೆ ಹಿಡಿದಿದ್ದರೆನ್ನಲಾಗಿದೆ. ಇಂದು ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದಾರೆ. ಮುಂಬೈನ ಚಂದನವಾಡಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಇವತ್ತೇ ನಡೆದಿದೆ.

ಇದನ್ನೂ ಓದಿ: ಸಿನಿಮಾ ನಂಬಿ ಜೀವನ ಹಾಳು ಮಾಡಿಕೊಳ್ಳಬೇಡಿ: ಯುವಜನರಿಗೆ ಜಗ್ಗೇಶ್ ಕಿವಿಮಾತು

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 1929, ಏಪ್ರಿಲ್ 28ರಂದು ಜನಿಸಿದ್ದ ಭಾನು ಅಥೈಯ್ಯಾ 1956ರಲ್ಲಿ ಸಿಐಡಿ ಎಂಬ ಹಿಂದಿ ಸಿನಿಮಾಗೆ ಕಾಸ್ಟೂಮ್ ಡಿಸೈನ್ ಮಾಡುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಅವರ ಸಿನಿ ಪ್ರಯಾಣದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 1983ರಲ್ಲಿ ಗಾಂಧಿ ಸಿನಿಮಾದ ಅವರ ಕಾಸ್ಟೂಮ್ ವಿನ್ಯಾಸಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಅದೇ ವರ್ಷ ಅವರು ಬಾಫ್ತಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಲಗಾನ್ ಸಿನಿಮಾಕ್ಕೂ ಅವರು ವಸ್ತ್ರ ವಿನ್ಯಾಸ ಮಾಡಿದ್ದರು. ಆ ಚಿತ್ರದ ಕೆಲಸಕ್ಕೂ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತ್ತು. 2009ರಲ್ಲಿ ಫಿಲಂ ಫೇರ್ ಲೈಫ್​ಟೈಮ್ ಅಚೀವ್ಮೆಂಟ್ ಅವಾರ್ಡ್ ಲಭಿಸಿದೆ. 2004ರಲ್ಲಿ ಶಾರುಕ್ ಖಾನ್ ಅಭಿನಯದ ಸ್ವದೇಸ್ ಚಿತ್ರ ಅವರ ಕೊನೆಯ ಕೆಲಸವಾಗಿತ್ತು.
Published by: Vijayasarthy SN
First published: October 15, 2020, 8:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading