ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಸ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆಯಾಗಿ (Marriage) 3 ವರ್ಷಗಳ ಬಳಿಕ ಪ್ರಿಯಾಂಕಾ ಚೋಪ್ರಾ ತಮ್ಮ ಮಗುವಿನ ಆಗಮನದ ನೀರಿಕ್ಷೆಯಲ್ಲಿದ್ದಾರೆ. ಪತಿ ನಿಕ್ ಜೋನಸ್ (Nick Jonas) ಜೊತೆ ಸೇರಿ ಅವರು ಈ ಖುಷಿಯ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಾಜಿ ವಿಶ್ವ ಸುಂದರಿ, ಬಾಲಿವುಡ್ನ ಮೋಸ್ಟ್ ಬ್ಯೂಟಿ, ಬ್ಯುಸಿ ನಟಿ ಪ್ರಿಯಾಂಕಾ ಚೋಪ್ರಾ ತಾಯಿ ಆಗ್ತಿದ್ದಾರೆ. ಹೌದು ಈ ವಿಷಯ ಕೇಳಿ ಎಲ್ಲರಿಗೂ ಕೊಂಚ ಅಚ್ಚರಿ (Surprised) ಆಗಿರುವುದು ನಿಜ. ಯಾಕೆಂದರೆ ಪ್ರಿಯಾಂಕಾ ಗರ್ಭಿಣಿ(Pregnant) ಆಗಿರುವ ಕುರಿತು ಎಲ್ಲೂ ಸುದ್ದಿನೇ ಆಗಿಲ್ಲ, ಆಕೆಯೂ ಸಹ ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ ಹೇಗೆ ಇದು ಅಂತ ಯೋಚಿಸುತ್ತಿದ್ದೀರಾ..? ಅದಕ್ಕೆಲ್ಲಾ ಇಲ್ಲಿದೆ ಉತ್ತರ.
ಏನಿದು ಸರೋಗಸಿ
ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯಿ ಮೂಲಕ ಮಗು ಪಡೆದುಕೊಂಡಿದ್ದಾರಂತೆ. ಈ ಮೂಲಕ ಮಗುವಿನ ತಾಯಿಯಾಗಿ ಬದುಕಿನ ಹೊಸ ಅಧ್ಯಾಯ ಶುರು ಮಾಡಿದ್ದಾರೆ. ತಂದೆ-ತಾಯಿಯಾಗಿರುವ ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ ಜೋಡಿಗೆ ಬಾಲಿವುಡ್ ಮತ್ತು ಹಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ಪ್ರಿಯಾಂಕ ಈ ವಿಷಯ ಹೇಳ್ತಿದ್ದಂಗೆ ಹಲವರು ಗೂಗಲ್ ಮಾಡಿ ನೋಡಿದ್ದಾರಂತೆ. ಏನಿದು ಸರೋಗಸಿ (ಬಾಡಿಗೆ ತಾಯಿ), ಇದರಿಂದ ಹೇಗೆ ಮಗು ಪಡೆಯಬಹುದು, ಹೇಗೆ ಸಾಧ್ಯ ಎಂತೆಲ್ಲಾ ಸರ್ಚ್ ಮಾಡಿದ್ದಾರಂತೆ.
ಬ್ರೇಕ್ಔಟ್ ಹುಡುಕಾಟ
ಬಾಲಿವುಡ್ನಲ್ಲಿ ಈ ಪ್ರಕರಣ ಮೊದಲೇನಲ್ಲ. ಈಗಾಗ್ಲೆ ಶಾರುಖ್ ಖಾನ್-ಗೌರಿ ಖಾನ್, ಅಮೀರ್ ಖಾನ್ ಮತ್ತು ಕಿರಣ್ ರಾವ್, ಕರಣ್ ಜೋಹರ್, ತುಷಾರ್ ಕಪೂರ್, ಶಿಲ್ಪಾ ಶೆಟ್ಟಿ, ಪ್ರೀತಿ ಜಿಂಟಾ ಇನ್ನೂ ಕೆಲವರು ಇದೇ ಮಾರ್ಗದ ಮೂಲಕ ಮಕ್ಕಳನ್ನು ಪಡೆದಿದ್ದಾರೆ. ಪ್ರಿಯಾಂಕಾ ಮತ್ತು ನಿಕ್ ಈ ವಿಷಯ ಘೋಷಿಸಿದ್ದಾಗಿನಿಂದ ಸುಮಾರು ಕಳೆದ 4 ಗಂಟೆಗಳಿಂದ ಗೂಗಲ್ನಲ್ಲಿ ಜನರು ಇದರ ಬಗ್ಗೆ ಹುಡುಕಾಟ ನಡೆಸಿದ್ದಾರಂತೆ.ಭಾರತೀಯರ ಆಸಕ್ತಿಯನ್ನು ಕೆರಳಿಸಿದ್ದು, ಕೆಲವು ಬ್ರೇಕ್ಔಟ್ ಹುಡುಕಾಟಗಳು ಹೊರಹೊಮ್ಮುತ್ತಿವೆ.
ಇದನ್ನೂ ಓದಿ: Priyanka Chopra: ಬದಲಾದ Surname ಕುರಿತ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟ ಪ್ರಿಯಾಂಕಾ ಚೋಪ್ರಾ
ಬಾಡಿಗೆ ತಾಯ್ತನ ಎಂದರೇನು
ಜನರು ಬಾಡಿಗೆ ತಾಯ್ತನದ ಅರ್ಥ ಹುಡುಕುತ್ತಿದ್ದಾರೆ, ಅದು ಹೇಗೆ ಕೆಲಸ ಮಾಡುತ್ತದೆ ಎಂದು ಗೂಗಲ್ ಟ್ರೆಂಡ್ಗಳು ಬಹಿರಂಗಪಡಿಸಿದೆ. ಹಿಂದಿ, ಬಂಗಾಳಿ ಮತ್ತು ತೆಲುಗು ಮುಂತಾದ ವಿವಿಧ ಭಾಷೆಗಳಲ್ಲಿ ಕಳೆದ ನಾಲ್ಕು ಗಂಟೆಗಳಲ್ಲಿ ಈ ಲೇಖನವನ್ನು ಬರೆಯುವ ಸಮಯವನ್ನು ಆಧರಿಸಿ, ವಿಷಯದ ಕುರಿತು Google ಟ್ರೆಂಡ್ಗಳಲ್ಲಿ ಕೆಲವು ಹುಡುಕಾಟಗಳು ಆಗಿದೆಯಂತೆ. ತೆಲುಗಿನಲ್ಲಿ ಬಾಡಿಗೆ ತಾಯ್ತನದ ಅರ್ಥ ಸರೋಗಸಿ ಹೇಗೆ ಕೆಲಸ ಮಾಡುತ್ತದೆ, ಹಿಂದಿಯಲ್ಲಿ ಬಾಡಿಗೆ ತಾಯ್ತನ ಎಂದರೇನು", "ಬಾಡಿಗೆ ತಾಯ್ತನ ಹೇಗೆ ಸಾಧ್ಯ” ಎಂದು ಬಂಗಾಳಿ ಭಾಷೆಯಲ್ಲಿ ಹುಡುಕಿದ್ದಾರೆ ಎಂದು ಗೂಗಲ್ ತಿಳಿಸಿದೆ.
ಕಾನೂನಿನ ನಿಯಮ
ಗೂಗಲ್ನಲ್ಲಿ ಹುಡುಕಲಾದ ಸಂಬಂಧಿತ ವಿಷಯಗಳಲ್ಲಿ ಹೆರಿಗೆ ಮತ್ತು ದತ್ತು ಫರ್ಟಿಲಿಟಿ ಮತ್ತು "ಟೆಸ್ಟ್ ಟ್ಯೂಬ್" ವಿಷಯಗಳ ಬಗ್ಗೆ ಸಹ ಜನರು ಹುಡುಕಿದ್ದಾರೆ. ಟೆಸ್ಟ್ ಟ್ಯೂಬ್ ಬೇಬೀಸ್, ಹೆರಿಗೆಯ ಮತ್ತೊಂದು ವಿಧಾನ ಇದು ಬಾಡಿಗೆ ತಾಯ್ತನದಿಂದ ಭಿನ್ನವಾಗಿದೆ. ಬಾಡಿಗೆ ತಾಯ್ತನ ಎಂದರೆ ಇದರಲ್ಲಿ ಮಗು ಬಯಸಿದ ತಂದೆ– ತಾಯಿಯಿಂದಲೇ ಪಡೆದ ಅಂಡಾಣು ಮತ್ತು ವೀರ್ಯಾಣುಗಳನ್ನು ಬಳಸಲಾಗುತ್ತದೆ. ಈ ವಿಧಾನದಲ್ಲಿ ಭ್ರೂಣ ಬೆಳೆಯಲು ಮಾತ್ರ ಬಾಡಿಗೆ ತಾಯಿಯ ಗರ್ಭಾಶಯ ಬಳಕೆಯಾಗುತ್ತದೆ. ಹೀಗಾಗಿ ಈ ರೀತಿ ಜನಿಸಿದ ಮಗುವಿನ ಜತೆ ಬಾಡಿಗೆ ತಾಯಿಯು ಯಾವುದೇ ವಂಶವಾಹಿ ಸಂಬಂಧ ಹೊಂದಿರುವುದಿಲ್ಲ. ಬಾಡಿಗೆ ತಾಯ್ತನ ಕಾನೂನಿನ ನಿಯಮಕ್ಕೆ ಒಳಪಟ್ಟಿರುತ್ತದೆ.
ಇದನ್ನೂ ಓದಿ: Priyanka Chopra: ಮೇರಿ ಕೋಮ್ ಪಾತ್ರದಲ್ಲಿ ಆ ನಟಿ ನಟಿಸಬೇಕಿತ್ತು ಎಂದ ಪ್ರಿಯಾಂಕಾ ಛೋಪ್ರಾ..! ಯಾಕೆ ಅಂತ ಇಲ್ಲಿದೆ ನೋಡಿ.
ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಪ್ರೀತಿ ಜಿಂಟಾ ಕೂಡ ಗೂಗಲ್ನಲ್ಲಿ ಇದರ ಬಗ್ಗೆ ಹುಡುಕಿದ್ದರಂತೆ. ಕಳೆದ ವರ್ಷ ನವೆಂಬರ್ನಲ್ಲಿ ಪ್ರೀತಿ ಜಿಂಟಾ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಟ್ವಿಟ್ಟರ್ನಲ್ಲಿ ತನ್ನ ಪತಿ ಜೀನ್ ಗುಡ್ನಫ್ನ ಫೋಟೊವನ್ನು ಕೂಡ ಹಂಚಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ