Sudeep: ಕಿಚ್ಚ ಸುದೀಪ್​ ಸಾಧನೆಗೆ ಅಂಚೆ ಇಲಾಖೆಯಿಂದ ಗೌರವ; ವಿಶೇಷ ಅಂಚೆ ಲಕೋಟೆ ಬಿಡುಗಡೆಗೆ ಸಿದ್ಧತೆ

ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡುವ ಕುರಿತು ಮಾತನಾಡಲು ಅಂಚೆ ಇಲಾಖೆಯ ಅಧೀಕ್ಷರಾದ ಮಾದೇಶ್ ಅವರು ಕಿಚ್ಚ ಸುದೀಪ್ ಅವರ ಮನೆಗೆ ಆಗಮಿಸಿ ಅವರಿಂದ NOC ಪಡೆದಿದ್ದಾರೆ.

ಸುದೀಪ್​ ಸಾಧನೆಗೆ ವಿಶೇಷ ಗೌರವ

ಸುದೀಪ್​ ಸಾಧನೆಗೆ ವಿಶೇಷ ಗೌರವ

  • News18
  • Last Updated :
  • Share this:
ಅಭಿನವ ಚಕ್ರವರ್ತಿ ಸುದೀಪ್ (Kichcha Sudeep)​ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದಿದೆ. ಕನ್ನಡಲ್ಲಿ ಅಷ್ಟೇ ಅಲ್ಲ ತೆಲುಗು ಹಾಗೂ ಬಾಲಿವುಡ್ (Bollywood)​ನಲ್ಲೂ ಕಿಚ್ಚ ಸುದೀಪ್​ ಉತ್ತಮ ಹೆಸರು ಮಾಡಿದ್ದಾರೆ. ಈ ಸಾಧನೆಗಾಗಿ ಅವರಿಗೆ ಅನೇಕರಿಂದ ಗೌರವ, ಸನ್ಮಾನಗಳು ಸಿಕ್ಕಿವೆ. ಇದೀಗ ಕಿಚ್ಚ ಸುದೀಪ್​ ಅವರ ಸಾಧನೆಯನ್ನು ಗುರುತಿಸಲು ಭಾರತೀಯ ಅಂಚೆ (Indian Post) ಇಲಾಖೆಯಿಂದ ‘ವಿಶೇಷ ಅಂಚೆ ಲಕೋಟೆ’ ಬಿಡುಗಡೆ ಮಾಡಲಾಗುತ್ತಿದೆ. ಇದು ಅವರ ಅಭಿಮಾನಿಗಳಿಗೆ (Fans) ಹೆಮ್ಮೆ ತರಲಿದೆ.

ಅಂಚೆ ಇಲಾಖೆಯಿಂದ ಸುದೀಪ್​ಗೆ​ ಸಿಕ್ಕ ಗೌರವ

ಭಾರತ ಸರ್ಕಾರದ ಅಂಚೆ ಇಲಾಖೆಯು ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಅಥವಾ ವ್ಯಕ್ತಿಗಳ ಸಾಧನೆಗಳನ್ನು ನೂರಾರು ವರ್ಷ ದಾಖಲೆಯಾಗಿ ಉಳಿಸಬೇಕೆಂಬ ಕಾರಣಕ್ಕೆ ಈ  ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡುತ್ತದೆ. ಈ ಲಿಸ್ಟ್​ ನಮ್ಮ ಸ್ಯಾಂಡಲ್​ವುಡ್​ ನಟ ಸುದೀಪ್​ ಅವರು ಸೇರಿಕೊಂಡಿರೋದು ನಿಜಕ್ಕೂ ಹೆಮ್ಮೆ ಹಾಗೂ ಸಂತಸದ ವಿಚಾರವಾಗಿದೆ.

25 ವರ್ಷಗಳ ಸುದೀಪ್​ ಸಿನಿ ಜರ್ನಿ 

25 ವರ್ಷಗಳ ಸಿನಿ ಜರ್ನಿಯನ್ನು ಪೂರ್ಣಗೊಳಿಸಿರುವ ರಾಷ್ಟ್ರತಾರೆ ಸುದೀಪ್ ಅವರ ಸಾಧನೆಯನ್ನು ಸಹ ಭಾರತೀಯ ಅಂಚೆ ಇಲಾಖೆ ದಾಖಲೆ ಮಾಡುತ್ತಿದೆ. ಆ ನಿಮಿತ್ತ ಇಂದು ಅಂಚೆ ಇಲಾಖೆಯ ಅಧೀಕ್ಷರಾದ ಶ್ರೀ ಮಾದೇಶ್ ಅವರು ಕಿಚ್ಚ ಸುದೀಪ್ ಅವರ ಮನೆಗೆ ಆಗಮಿಸಿ ಅವರಿಂದ NOC ಯನ್ನು ಪಡೆದರು ಮತ್ತು ಬಿಡುಗಡೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.ಶೀಘ್ರದಲ್ಲೇ ಅಂಚೆ ಲಕೋಟೆ ಬಿಡುಗಡೆ

ಈ ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವು ಶೀಘ್ರದಲ್ಲಿಯೇ ನೆರವೇರಲಿದೆ. ಕಿಚ್ಚ ಸುದೀಪ್ ಅವರ ಸಾಧನೆಗಳನ್ನು ಗುರುತಿಸಿ ವಿಶೇಷ ಅಂಚೆ ಲಕೋಟೆ ಮೂಲಕ ಗೌರವ ಸಲ್ಲಿಸುತ್ತಿರುವ ಭಾರತೀಯ ಅಂಚೆ ಇಲಾಖೆಯನ್ನು ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಮತ್ತು ಕನ್ನಡ ಮನಸುಗಳು ಸಾಮಾಜಿಕ ಜಾಲತಾಣದಲ್ಲಿ ಹೃದಯತುಂಬಿ ಶ್ಲಾಘಿಸುತ್ತಿದ್ದಾರೆ.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಭಂಡಾರಿ ನಿರ್ದೇಶನದ ಪ್ರೇಮದ ಕಾದಂಬರಿ ಮೂಲಕ ಕಿರುತೆರೆಗೆ ಸುದೀಪ್ ಪದಾರ್ಪಣೆ ಮಾಡಿದರು. ತಾಯವ್ವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸುದೀಪ್ ಪ್ರವೇಶಿಸಿದರು. ತದನಂತರ ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸ್ಪರ್ಶ(1999) ಚಿತ್ರಕ್ಕಾಗಿ ಬಣ್ಣ ಹಚ್ಚಿದರು. 2001 ರಲ್ಲಿ ತೆರೆಗೆ ಬಂದ ಹುಚ್ಚ ಸಿನಿಮಾ ಸುದೀಪ್ ಗೆ ಬಿಗ್ ಬ್ರೇಕ್ ನೀಡಿತು.


ನಿರ್ದೇಶನದಲ್ಲೂ ಸೈ ಎನಿಸಿಕೊಂಡ ಸುದೀಪ್​


ಸುದೀಪ್ ಕೇವಲ ನಟ ಮಾತ್ರ ಅಲ್ಲ. ಪ್ರತಿಭಾವಂತ ನಿರ್ದೇಶಕ ಕೂಡ ಆಗಿದ್ದಾರೆ. ಇವರು ನಿರ್ದೇಶಿಸಿದ ಮೈ ಆಟೋಗ್ರಾಫ್, ವೀರ ಮದಕರಿ, ಕೆಂಪೇಗೌಡ, ಮಾಣಿಕ್ಯ ಚಿತ್ರಗಳು ಭರ್ಜರಿ ಪ್ರದರ್ಶನಗೊಂಡಿವೆ.


ಪರ ಭಾಷೆಗಳಲ್ಲೂ ಮಿಂಚಿದ ಕೆಂಪೇಗೌಡಕನ್ನಡ ಚಿತ್ರರಂಗ ಮಾತ್ರವಲ್ಲದೆ ಪರಭಾಷಾ ಚಿತ್ರಗಳಲ್ಲಿಯೂ ಮಿಂಚಿದ್ದಾರೆ ಕಿಚ್ಚ ಸುದೀಪ್. ಹಿಂದಿಯಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಫೂಂಕ್', ತೆಲುಗಿನ 'ಈಗ', 'ಬಾಹುಬಲಿ' ಹಾಗೂ ತಮಿಳಿನ 'ಪುಲಿ' ಚಿತ್ರಗಳಲ್ಲಿ ಸುದೀಪ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿಯೂ ಸುದೀಪ್ ಸಕ್ರಿಯರಾಗಿದ್ದಾರೆ. 2001 ರಲ್ಲಿ ಪ್ರಿಯಾ ಅವರನ್ನ ಸುದೀಪ್ ಕೈ ಹಿಡಿದರು. ಈ ದಂಪತಿಗೆ ಓರ್ವ ಪುತ್ರಿ ಇದ್ದಾಳೆ. 

ಸೆಪ್ಟೆಂಬರ್​ 2 ರಂದು ನಟ ಕಿಚ್ಚ ಸುದೀಪ್ ಹುಟ್ಟಿದ ಹಬ್ಬಕ್ಕೂ  ಕಾಮನ್​ ಡಿಪಿ ಟ್ರೆಂಡ್ ಒಂದನ್ನು ಮಾಡಲಾಗಿದೆ. ಸ್ಯಾಂಡಲ್​ವುಡ್ ನಟ ಶಿವರಾಜ್ ಕುಮಾರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಕಾಮನ್ ಡಿಪಿಯನ್ನು ಶೇರ್ ಮಾಡಿದ್ದು ಇದು ವೈರಲ್ ಆಗಿದೆ.

Published by:Pavana HS
First published: