ಬಾಲಿವುಡ್ ನಟ, ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ಅವರ ಮೇಲೆ ಸಾಲು ಸಾಲು ಮೀಟೂ ಆರೋಪಗಳು ಕೇಳಿಬರುತ್ತಿವೆ. ಸಿನಿಮಾಗಳಿಗಿಂತ ಹೆಚ್ಚಾಗಿ ಮೀಟೂ ವಿವಾದದಿಂದಾಗಿಯೇ ಸಾಜಿದ್ ಸುದ್ದಿಯಲ್ಲಿದ್ದಾರೆ. ಈ ಸಾಲಿಗೆ ಸದ್ಯ ಹೊಸ ಸೇರ್ಪಡೆ ಮಾಡೆಲ್ ಪೌಲಾ. 3 ವರ್ಷದ ಹಿಂದೆ ನಡೆದ ಒಂದು ಕಹಿ ಘಟನೆಯನ್ನು ಪೌಲಾ ಈಗ ನೆನಪಿಸಿ ಕಣ್ಣೀರುಹಾಕಿದ್ದಾರೆ. ಇದಾದ ಬೆನ್ನಲ್ಲೆ ಅರೆಸ್ಟ್ ಸಾಜಿದ್ ಖಾನ್ ಎಂಬ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡ್ ಸೃಷ್ಟಿಸಿದ್ದು, ಸಾಜಿದ್ ಬಂಧನಕ್ಕೆ ಒತ್ತಾಯಿಸಲಾಗುತ್ತಿದೆ. 2018ರಲ್ಲಿ ಮೀ ಟೂ ಹೆಚ್ಚು ಚರ್ಚೆಯಲ್ಲಿತ್ತು. ಈ ವೇಳೆಯೇ ಸಾಜಿದ್ ಸುದ್ದಿಯಲ್ಲಿದ್ದರು. ಇವರ ವಿರುದ್ಧ ಪತ್ರಕರ್ತೆ ಹಾಗೂ ಇಬ್ಬರು ನಟಿಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.
ಸದ್ಯ ಇನ್ಸ್ಟಾಗ್ರಾಂನಲ್ಲಿ ಪಾಲ್ ಅವರು 3 ವರ್ಷದ ಹಿಂದೆ ಏನು ನಡೆಯಿತು ಎಂಬುದನ್ನು ವಿವರಿಸಿದ್ದಾರೆ. 'ಮೀಟು ಚಳುವಳಿ ಪ್ರಾರಂಭವಾದಾಗ, ಅನೇಕ ಜನರು ಸಾಜಿದ್ ಖಾನ್ ಬಗ್ಗೆ ಮಾತನಾಡಿದ್ದರು. ಆದರೆ, ನನ್ನಿಂದ ಆ ಸಾಹಸ ತೋರಲಾಗಲಿಲ್ಲ. ಏಕೆಂದರೆ, ಉದ್ಯಮದಲ್ಲಿನ ಹಲವು ಕಲಾವಿದರಂತೆ ನಾನೂ ಕೂಡ ಯಾರೂ ಗಾಡ್ ಫಾದರ್ ಇಲ್ಲ ಹಾಗೂ ನನ್ನ ಕುಟುಂಬದ ಜವಾಬ್ದಾರಿಯೂ ಕೂಡ ನನ್ನ ಮೇಲಿತ್ತು. ಅದಕ್ಕಾಗಿ ಸುಮ್ಮನಿರಬೇಕಾಗಿತ್ತು.'
'ಪ್ರಸ್ತುತ ನನ್ನ ತಂದೆ-ತಾಯಿ ನನ್ನೊಂದಿಗೆ ಇಲ್ಲ. ನಾನು ಇದೀಗ ಕೇವಲ ನನಗೋಸ್ಕರ ಸಂಪಾದಿಸಬೇಕು. ಇಂತಹುದರಲ್ಲಿ ನಾನು ಸಾಹಸ ಮಾಡಿದ್ದೇನೆ. ನಾನು 17ನೇ ವಯಸ್ಸಿನವಳಾಗಿದ್ದಾಗ ಸಾಜಿದ್ ನನ್ನ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆ' ಎಂದಿದ್ದಾರೆ.
'ಸೌಂದರ್ಯ ಸ್ಪರ್ಧೆಯೊಂದರಲ್ಲಿ ಗೆದ್ದಿದ್ದಾಗ ನನ್ನನ್ನು ಸಾಜಿದ್ ಖಾನ್ ತಮ್ಮ ಮನೆಗೆ ಆಹ್ವಾನಿಸಿದ್ದರು. ಆಗಲೇ ಅವರ ಅಸಲಿ ಮುಖ ಬಯಲಾಗಿದ್ದು. ಅವರು ನನ್ನ ಪಕ್ಕ ಬಂದು ಕುಳಿತುಕೊಂಡರು. ನಿನಗೆ ಬಾಯ್ ಫ್ರೆಂಡ್ ಇದ್ದಾನಾ? ಸೆಕ್ಸ್ ಮಾಡಿದ್ದೀಯಾ ಎಂದು ಕೇಳಿದರು. ನಾನು ನರ್ವಸ್ ಆದೆ. ನಂತರ ಅವರು ನನ್ನ ಕಾಲನ್ನು ಸ್ಪರ್ಶಿಸಲು ಶುರು ಮಾಡಿದರು' ಎಂದು ಆ ಕಹಿ ಘಟನೆಯನ್ನು ಪೌಲಾ ನೆನಪಿಸಿಕೊಂಡಿದ್ದಾರೆ.
View this post on Instagram
🙏🏼 Before democracy dies and there is no freedom of speech anymore I thought I should speak !
'ಅಲ್ಲದೆ ನನ್ನಬಳಿ ಹೌಸ್ ಫುಲ್ ಚಿತ್ರದಲ್ಲಿ ಅವಕಾಶ ನೀಡುತ್ತೇನೆ. ನನ್ನ ಮುಂದೆ ಬೆತ್ತಲಾಗು ಎಂದರು. ಅಂದು ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿದ್ದರು. ಬೆಡ್ರೂಮ್ಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಲು ಹೇಳಿದರು. ಆಗ ಅವರ ಉದ್ದೇಶ ಏನು ಎಂಬುದು ಸ್ಪಷ್ಟವಾಗಿ ಅರ್ಥ ಆಗಿದ್ದರಿಂದ ಅದನ್ನು ಧಿಕ್ಕರಿಸಿ ಅಲ್ಲಿಂದ ಹೊರಟು ಬಂದೆ' ಎಂದಿದ್ದಾರೆ ಪೌಲಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ