Prabhu Deva: ಸಾಧಕರ ಸೀಟ್ ಮೇಲೆ ಇಂಡಿಯನ್ ಮೈಕಲ್ ಜಾಕ್ಸನ್!

ಸಾಧಕರ ಸೀಟ್ ಮೇಲೆ ಇಂಡಿಯನ್ ಮೈಕಲ್ ಜಾಕ್ಸನ್

ಸಾಧಕರ ಸೀಟ್ ಮೇಲೆ ಇಂಡಿಯನ್ ಮೈಕಲ್ ಜಾಕ್ಸನ್

ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭು ದೇವ ಸತತ ನೃತ್ಯ, ಸತತ ಶ್ರಮ, ಸತತ ಅಭ್ಯಾಸ, ಹೀಗೆ ಸಾಕಷ್ಟು ಪರಿಶ್ರಮಪಟ್ಟು ಈ ಮಟ್ಟಕ್ಕೆ ಬೆಳೆದಿದ್ದಾರೆ. ಕನ್ನಡ ನಾಡಿನ ಕುವರ ಅನ್ನೋದು ಕೂಡ ಅಷ್ಟೇ ಹೆಮ್ಮೆ ಪಡುವೆ ವಿಷಯವೇ ಆಗಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:
  • published by :

ಇಂಡಿಯನ್ ಮೈಕಲ್ ಜಾಕ್ಸನ್ (Weekend with Ramesh Show) ಯಾರು? ಈ ಪ್ರಶ್ನೆಗೆ ಉತ್ತರ ಒಂದೇ ಇದೆ. ಅದು ಪ್ರಭು ದೇವ ಅನ್ನೋದು ಗೊತ್ತೇ ಇದೆ. ಪ್ರಭು ದೇವ ಡ್ಯಾನ್ಸ್‌ ವಿಷಯದಲ್ಲಿ ಸಾಧನೆ ಮಾಡಿದ್ದಾರೆ. ಕರ್ನಾಟಕದ (Prabhu Deva in Weekend with Ramesh) ಮೂಲಕ ಪ್ರಭು ದೇವ ಇಡೀ ಇಂಡಿಯಾದಲ್ಲಿಯೇ ಹೆಸರುವಾಸಿ ಆಗಿದ್ದಾರೆ. ಕನ್ನಡದಲ್ಲಿ ಮಿಂಚದೇ ಹೋದ್ರೂ ಪಕ್ಕದ ತಮಿಳು ಚಿತ್ರರಂಗದಲ್ಲಿ ಪ್ರಭು (Indian Michael Jackson Prabhu Deva) ದೇವ ಹೊಳೆದಿದ್ದಾರೆ. ದೂರದ ಮುಂಬೈಯಲ್ಲಿ ಪ್ರಭು ದೇವ ಹೆಸರಿದೆ. ಇಂತಹ ಪ್ರಭು ದೇವ ಅವರನ್ನ ಸಾಧಕರ ಸೀಟ್‌ನಲ್ಲಿ ನೋಡಲು ಅದೆಷ್ಟು (Weekend with Ramesh Season-5) ಜನ ಕಾದಿದ್ದಾರೋ ಗೊತ್ತಿಲ್ಲ.


ಆದರೆ ವೀಕೆಂಡ್ ವಿತ್ ರಮೇಶ್ ಶೋದಲ್ಲಿ ಪ್ರಭು ದೇವ ಅವರ ಸಾಧನೆಯ ಹಾದಿಯ ಚಿತ್ರಣ ಈ ವಾರ ಸಿಗೋದು ಗ್ಯಾರಂಟಿ.


Indian Michael Jackson Prabhu Deva in Weekend with Ramesh Season-5
ವೀಕೆಂಡ್ ವಿಥ್ ರಮೇಶ್ ಈ ವಾರದ ಸಾಧಕ ಇವರೇ ನೋಡಿ


ವೀಕೆಂಡ್ ವಿಥ್ ರಮೇಶ್ ಈ ವಾರದ ಸಾಧಕ ಇವರೇ ನೋಡಿ


ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭು ದೇವ ಸತತ ನೃತ್ಯ, ಸತತ ಶ್ರಮ, ಸತತ ಅಭ್ಯಾಸ, ಹೀಗೆ ಸಾಕಷ್ಟು ಪರಿಶ್ರಮಪಟ್ಟು ಈ ಮಟ್ಟಕ್ಕೆ ಬೆಳೆದಿದ್ದಾರೆ. ಕನ್ನಡ ನಾಡಿನ ಕುವರ ಅನ್ನೋದು ಕೂಡ ಅಷ್ಟೇ ಹೆಮ್ಮೆ ಪಡುವೆ ವಿಷಯವೇ ಆಗಿದೆ.




ಮೂಗೂರು ಸುಂದರಂ ಅವರ ಪುತ್ರ ಪ್ರಭು ದೇವ ಈಗ ಇಂಡಿಯನ್ ಮೈಕಲ್ ಜಾಕ್ಸನ್ ಅಂತಲೇ ಕರೆಸಿಕೊಳ್ಳುತ್ತಾರೆ. ಮೂಗೂರು ಸುಂದರಂ ಕೂಡ ಒಬ್ಬ ಹೆಸರಾಂತ ಕೋರಿಯೋಗ್ರಾಫರ್ ಅನ್ನೋದು ಗೊತ್ತೇ ಇದೆ. ತಂದೆಯಿಂದಲೇ ನೃತ್ಯದ ಸ್ಪೂರ್ತಿ ಪಡೆದ ಪ್ರಭು ದೇವ ಮುಂದೆ ಭರತನಾಟ್ಯಂ ಕೂಡ ಅಭ್ಯಾಸ ಮಾಡಿದರು.


ಸಾಧಕರ ಸೀಟ್ ಮೇಲೆ ಇಂಡಿಯನ್ ಮೈಕಲ್ ಜಾಕ್ಸನ್


ಹಾಗೆ 1994 ರಲ್ಲಿ ತೆರೆ ಕಂಡಿದ್ದ ತಮಿಳಿನ ಕಾದಲನ್ ಸಿನಿಮಾ ಮೂಲಕ ಹಲ್‌ಚಲ್ ಎಬ್ಬಿಸಿದರು. ಈ ಚಿತ್ರದ ಡ್ಯಾನ್ಸ್ ಈಗಲೂ ಒಂದು ಕ್ರೇಜ್ ಉಳಿಸಿಕೊಂಡಿದೆ. ಅಲ್ಲಿಂದ ತಿರುಗಿ ನೋಡದ ಪ್ರಭು ದೇವ ಕೋರಿಯೋಗ್ರಾಫರ್ ಆಗಿ ಮಾತ್ರ ಉಳಿಯಲಿಲ್ಲ. ಪ್ರಭು ದೇವ ಮುಂದೆ ಸಿನಿಮಾ ಡೈರೆಕ್ಷನ್ ಮಾಡಿದರು.


ಇದಾದ್ಮೇಲೆ ಸಿನಿಮಾ ಪ್ರೋಡ್ಯೂಸ್ ಕೂಡ ಮಾಡಿದರು. ಹಂತ ಹಂತವಾಗಿ ಬೆಳೆದ ಪ್ರಭು ದೇವ ಬಾಲಿವುಡ್‌ನಲ್ಲೂ ಹೆಸರು ಮಾಡಿದರು. ಎರಡು ನ್ಯಾಷನಲ್ ಅವಾರ್ಡ್ ಕೂಡ ಪಡೆದರು. 2019 ರಲ್ಲಿ ನೃತ್ಯ ಲೋಕಕ್ಕೆ ಕೊಟ್ಟ ವಿಶೇಷ ಕೊಡುಗೆಗಾಗಿಯೆ ಪದ್ಮಶ್ರೀ ಪ್ರಶಸ್ತಿಯನ್ನ ಕೂಡ ಪಡೆದರು.


ವೀಕೆಂಡ್ ವಿತ್ ರಮೇಶ್ ಸೀಟ್‌ಲ್ಲಿ ಪ್ರಭು ದೇವ


ಹೀಗೆ ಸಾಧನೆಯ ಹಾದಿಯನ್ನ ಸಾಗಿ ಬಂದ ಪ್ರಭು ದೇವ ಈ ವಾರ ವೀಕೆಂಡ್ ವಿಥ್ ರಮೇಶ್ ಶೋಗೆ ಬರ್ತಿದ್ದಾರೆ. ಇವರ ಆಗಮನಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ಸೀಜನ್‌ನಿಂದಲೂ ಸುದ್ದಿ ಇದ್ದೇ ಇತ್ತು. ಪ್ರಭು ದೇವ ವೀಕೆಂಡ್ ವಿಥ್ ರಮೇಶ್‌ಗೆ ಬಂದೇ ಬರ್ತಾರೆ ಅನ್ನೋ ಬಲವಾದ ಸುದ್ದಿಗಳೂ ಹರಿದಾಡಿದ್ದವು.


ಆದರೆ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭು ದೇವ ಈ ವಾರ ವೀಕೆಂಡ್ ವಿಥ್ ರಮೇಶ್ ಶೋಗೆ ಬರೋದು ಪಕ್ಕಾ ಆಗಿದೆ. ಇನ್ನೇನೂ ವೀಕೆಂಡ್ ವಿತ್ ರಮೇಶ್ ಶೋದ 5ನೇ ಸೀಸನ್‌ನ ಎರಡನೇ ಅತಿಥಿಯಾಗಿ ಪ್ರಭು ದೇವ ಬರ್ತಿದ್ದಾರೆ.


Indian Michael Jackson Prabhu Deva in Weekend with Ramesh Season-5
ಸಾಧಕರ ಸೀಟ್ ಮೇಲೆ ಇಂಡಿಯನ್ ಮೈಕಲ್ ಜಾಕ್ಸನ್


ವೀಕೆಂಡ್ ವಿಥ್ ರಮೇಶ್ ಶೋ ಪ್ರಭು ದೇವ ಪ್ರೋಮೋ ಯಾವಾಗ?


ವಾರದ ಆರಂಭದಲ್ಲಿಯೇ ಶೋದ ಪ್ರೋಮೋ ಬರುತ್ತದೆ. ಅದೇ ರೀತಿ ಪ್ರಭು ದೇವ ಅವರ ವೀಕೆಂಡ್ ವಿಥ್ ರಮೇಶ್ ಶೋದ ಪ್ರೋಮೋ ರಿಲೀಸ್ ಆಗಲಿದೆ. ಪ್ರಭು ದೇವ ಅವರ ಬಗ್ಗೆ ಸಾಕಷ್ಟು ವಿಷಯಗಳಿವೆ. ಯಾರಿಗೂ ಗೊತ್ತಿರದ ಸಾಕಷ್ಟು ವಿಚಾರಗಳೂ ಇವೆ.


ಇದನ್ನೂ ಓದಿ: Marathi Sari Cinema: ಕನ್ನಡದ ದಿಯಾ ಚಿತ್ರದ ಮರಾಠಿ ಸರಿ ಸಿನಿಮಾ ಟೀಸರ್ ಹೇಗಿದೆ? ಇಲ್ಲಿದೆ ನೋಡಿ ರಿವ್ಯೂ


ಇವುಗಳು ಸೇರಿದಂತೆ ಪ್ರಭು ದೇವ ಅವರ ಸಕ್ಸಸ್‌ಫುಲ್ ಜರ್ನಿಯ ಚಿತ್ರಣವನ್ನ ವೀಕೆಂಡ್ ವಿಥ್ ರಮೇಶ್ ಶೋದಲ್ಲಿ ಎರಡು ಎಪಿಸೋಡ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಶನಿವಾ ಮತ್ತು ಭಾನುವಾರ ಎರಡು ದಿನ ಪ್ರಭು ದೇವ ಅವರ ಸಂಚಿಕೆ ಪ್ರಸಾರವಾಗಲಿದೆ.

top videos
    First published: