• Home
 • »
 • News
 • »
 • entertainment
 • »
 • PM Modi Wish: ಈ ಪ್ರಶಸ್ತಿಗೆ ನೀವು ಅರ್ಹರು, ಮೆಗಾ ಸ್ಟಾರ್ ಚಿರಂಜೀವಿ ಹೊಗಳಿದ ಪ್ರಧಾನಿ ಮೋದಿ

PM Modi Wish: ಈ ಪ್ರಶಸ್ತಿಗೆ ನೀವು ಅರ್ಹರು, ಮೆಗಾ ಸ್ಟಾರ್ ಚಿರಂಜೀವಿ ಹೊಗಳಿದ ಪ್ರಧಾನಿ ಮೋದಿ

ಮೆಗಾ ಸ್ಟಾರ್ ಚಿರಂಜೀವಿ ಹೊಗಳಿದ ಪ್ರಧಾನಿ ಮೋದಿ

ಮೆಗಾ ಸ್ಟಾರ್ ಚಿರಂಜೀವಿ ಹೊಗಳಿದ ಪ್ರಧಾನಿ ಮೋದಿ

ಮೆಗಾ ಸಾರ್ ಚಿರಂಜೀವಿ ಅವರಿಗೆ ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ-2022 ಪ್ರಶಸ್ತಿ ಲಭಿಸಿರುವ ಕಾರಣ, ಪ್ರಧಾನಿ ಮೋದಿ ಅವರು ಅಭಿನಂದನೆ ತಿಳಿಸಿದ್ದಾರೆ.

 • Share this:

  ತೆಲುಗು ನಟ, ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಅವರು ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ-2022  (Indian Film Personality-2022) ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ನಟ ಚಿರಂಜೀವಿ ತಮ್ಮ ಅದ್ಭುತ ನಟನೆ ಮೂಲಕ ಅಭಿಮಾನಿಗಳನ್ನು ಗಳಿಸಿದವರು. 40 ವರ್ಷಕ್ಕೂ (40 Years) ಹೆಚ್ಚು ಸಿನಿಮಾ ರಂಗಕ್ಕೆ ಜೀವನ ಮೀಸಲಿಟ್ಟ ಹೀರೋಗೆ ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ-2022 ಪ್ರಶಸ್ತಿ ಲಭಿಸಿದೆ. ಚಿಂರಜೀವಿಗೆ ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ಅಭಿಮಾನಿಗಳು (Fans) ಖುಷಿ ಪಟ್ಟಿದ್ದಾರೆ. ನಟನೂ ಸಹ ಖುಷಿ ಆಗಿದ್ದಾರೆ. 4 ದಶಕಗಳ ಕಾಲ ಸಿನಿಮಾ ರಂಗಕ್ಕೆ ಜೀವನ ಮೂಡಿಪಿಟ್ಟಿದ್ದಕ್ಕೆ ಈ ಗೌರವ ಸಂದಿದೆ. ಇನ್ನೂ ಸಹ ಚಿರಂಜೀವಿ ಅವರು ಸಿನಿಮಾಗಳಲ್ಲಿ ಬ್ಯುಸಿ ಆಗಿರುತ್ತಾರೆ. ಮೆಗಾ ಸ್ಟಾರ್ ಚಿರಂಜೀವಿ ಸಾಧನೆ ಪ್ರಧಾನಿ ಮೋದಿ (PM Modi) ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟ್ವಿಟ್ (Tweet) ಮೂಲಕ ಅಭಿನಂದನೆ ತಿಳಿಸಿದ್ದಾರೆ.


  ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ
  ಭಾನುವಾರ ಗೋವಾದಲ್ಲಿ 53ನೇ ಅಂತಾರಾಷ್ಟ್ರೀಯ ಭಾರತೀಯ ಸಿನಿಮೋತ್ಸವ ಪ್ರಾರಂಭವಾಗಿದೆ. ಅಲ್ಲಿ ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ಅವರು ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ-2022 ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ. ಸಿನಿಮಾ ರಂಗಕ್ಕೆ ಚಿರಂಜೀವಿ ಅವರ ಸೇವೆಯನ್ನು ನೋಡಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ನೆಚ್ಚಿನ ನಟನಿಗೆ ಈ ಪ್ರಶಸ್ತಿ ಬಂದಿರುವು ಅಭಿಮಾನಿಗಳ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ.


  ಪ್ರಧಾನಿ ಮೋದಿ ಅಭಿನಂದನೆ
  ಮೆಗಾ ಸಾರ್ ಚಿರಂಜೀವಿ ಅವರಿಗೆ ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ-2022 ಪ್ರಶಸ್ತಿ ಲಭಿಸಿರುವ ಕಾರಣ, ಪ್ರಧಾನಿ ಮೋದಿ ಅವರು ಅಭಿನಂದನೆ ತಿಳಿಸಿದ್ದಾರೆ. 'ನಟ ಚಿರಂಜೀವಿ ಅವರು ಗಮರ್ಹಾನ ವ್ಯಕ್ತಿ. ಅಗಾಧವಾದ ಕೆಲಸ, ವಿಭಿನ್ನವಾದ ಪಾತ್ರಗಳು ಹಾಗೂ ಅದ್ಭುತ ವ್ಯಕ್ತಿತ್ವದ ಕಾರಣದಿಂದಾಗಿ ಹಲವು ಪೀಳಿಗೆಯ ಅಭಿಮಾನಿಗಳು ಅವರನ್ನು ಪ್ರೀತಿಸುತ್ತಾರೆ. 2022ನೇ ಸಾಲಿನ ಭಾರತೀಯ ಸಿನಿಮಾ ವ್ಯಕ್ತಿ ಪ್ರಶಸ್ತಿಗೆ ಭಾಜನವಾಗಿರುವ ಚಿರಂಜೀವಿ ಅವರಿಗೆ ಅಭಿನಂದನೆಗಳು' ಎಂದು ಟ್ವೀಟ್ ಮಾಡಿದ್ದಾರೆ.


  ಇದನ್ನೂ ಓದಿ: Drishyam 2 Collection: ಬಾಲಿವುಡ್‍ನಲ್ಲಿ ದೃಶ್ಯಂ 2 ಹೊಸ ಸಂಚಲನ, ಮೂರೇ ದಿನಕ್ಕೆ 64 ಕೋಟಿ ಕಲೆಕ್ಷನ್!


  40 ವರ್ಷ ಸಿನಿಮಾ ರಂಗದಲ್ಲೇ ಬದುಕು
  ನಟ ಚಿರಂಜೀವಿ ಅವರು 4 ದಶಕಗಳ ಕಾಲ ಸಿನಿಮಾ ರಂಗವನ್ನು ಆಳಿದ್ದಾರೆ. 40ಕ್ಕೂ ಹೆಚ್ಚು ವರ್ಷಗಳಿಂದ ತಮ್ಮ ಜೀವನವನ್ನು ಸಿನಿಮಾಗಾಗಿ ಮೀಸಲಿಟ್ಟಿದ್ದಾರೆ. ಕೊಟ್ಟಿರುವ ಎಲ್ಲಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಭಿಮಾನಿಗಳಿಗೆ ಸ್ಪೂರ್ತಿ ಚಿಲುಮೆಯಾಗಿದ್ದಾರೆ ಚಿರಂಜೀವಿ. ಚಿರಂಜೀವಿ ಅವರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಈ ಪ್ರಶಸ್ತಿ ನೀಡಲಾಗಿದೆ.


  tollywood megastar chiranjeevi, pm modi wish to chiranjeevi, chiranjeevi named indian film personality of the year 2022, megastar chiranjeevi first movie, megastar chiranjeevi films, ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ-2022 ಪ್ರಶಸ್ತಿ ಮುಡಿಗೇರಿಸಿಕೊಂಡ ಮೆಗಾ ಸ್ಟಾರ್ ಚಿರಂಜೀವಿ, ಮೆಗಾಸ್ಟಾರ್ ಚಿರಂಜೀವಿ ಮೊದಲ ಚಿತ್ರ, ಮೆಗಾಸ್ಟಾರ್ ಚಿರಂಜೀವಿ ಚಲನಚಿತ್ರಗಳು, ಮೆಗಾ ಸ್ಟಾರ್ ಚಿರಂಜೀವಿ ಹೊಗಳಿದ ಪ್ರಧಾನಿ ಮೋದಿ, kannada news, karnataka news,
  ನಟ ಚಿರಂಜೀವಿ


  ಎಲ್ಲ ಪಾತ್ರಕ್ಕೂ ಸೈ
  ಮೆಗಾ ಸ್ಟಾರ್ ಚಿರಂಜೀವಿ ಅವರು 40 ಕ್ಕೂ ಹೆಚ್ಚು ವರ್ಷದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಬರೀ ನಟನೆಗೆ ಸೀಮಿತರಾಗದೇ ನಿರ್ಮಾಪಕರು ಸಹ ಆಗಿದ್ದಾರೆ. ಈ ಪ್ರಶಸ್ತಿ ಇವರಿಗೆ ದೊರೆತಿದ್ದು ಖುಷಿ ಆಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ.ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಪದ್ಮ ಭೂಷಣ, ನಂದಿ ಪ್ರಶಸ್ತಿ, ಫಿಲ್ಮ್ ಫೇರ್ ಗಳ ಸಾಲಿಗೆ ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ 2022 ಸೇರಿದೆ.


  tollywood megastar chiranjeevi, pm modi wish to chiranjeevi, chiranjeevi named indian film personality of the year 2022, megastar chiranjeevi first movie, megastar chiranjeevi films, ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ-2022 ಪ್ರಶಸ್ತಿ ಮುಡಿಗೇರಿಸಿಕೊಂಡ ಮೆಗಾ ಸ್ಟಾರ್ ಚಿರಂಜೀವಿ, ಮೆಗಾಸ್ಟಾರ್ ಚಿರಂಜೀವಿ ಮೊದಲ ಚಿತ್ರ, ಮೆಗಾಸ್ಟಾರ್ ಚಿರಂಜೀವಿ ಚಲನಚಿತ್ರಗಳು, ಮೆಗಾ ಸ್ಟಾರ್ ಚಿರಂಜೀವಿ ಹೊಗಳಿದ ಪ್ರಧಾನಿ ಮೋದಿ, kannada news, karnataka news,
  ನಟ ಚಿರಂಜೀವಿ


  ಇದನ್ನೂ ಓದಿ: Megastar Chiranjeevi: 'ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ-2022 ಪ್ರಶಸ್ತಿ' ಮುಡಿಗೇರಿಸಿಕೊಂಡ ಮೆಗಾ ಸ್ಟಾರ್ ಚಿರಂಜೀವಿ 


  ಎಲ್ಲೆಡೆ ನಟ ಚಿರಂಜೀವಿ ಅವರಿಗೆ ಶುಭಾಶಯಗಳ ಮಹಾ ಪೂರ ಹರಿದು ಬರುತ್ತಿದೆ.

  Published by:Savitha Savitha
  First published: