• Home
 • »
 • News
 • »
 • entertainment
 • »
 • The Vaccine War: ಬರ್ತ್​ಡೇ ದಿನ ಗುಡ್ ನ್ಯೂಸ್ ಕೊಟ್ಟ ವಿವೇಕ್ ಅಗ್ನಿಹೋತ್ರಿ! ಸಿನಿಮಾ ಅನೌನ್ಸ್

The Vaccine War: ಬರ್ತ್​ಡೇ ದಿನ ಗುಡ್ ನ್ಯೂಸ್ ಕೊಟ್ಟ ವಿವೇಕ್ ಅಗ್ನಿಹೋತ್ರಿ! ಸಿನಿಮಾ ಅನೌನ್ಸ್

ದಿ ವ್ಯಾಕ್ಸಿನ್ ವಾರ್

ದಿ ವ್ಯಾಕ್ಸಿನ್ ವಾರ್

ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಮುಂದಿನ ಚಿತ್ರ ಯಾವುದು ಎಂದು ಅನೌನ್ಸ್ ಮಾಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರು ದಿ ವ್ಯಾಕ್ಸಿನ್ ವಾರ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

 • Share this:

  ವಿವಾದಗಳಿಂದ ಸುತ್ತುವರೆದಿರುವ ನಿರ್ದೇಶಕ-ನಿರ್ಮಾಪಕ ಮತ್ತು ಕಥೆಗಾರ ವಿವೇಕ್ ಅಗ್ನಿಹೋತ್ರಿ ಇಂದು ತಮ್ಮ 48 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿವೇಕ್ ಅಗ್ನಿಹೋತ್ರಿಯವರ (Vivek Agnihotri) 'ದಿ ಕಾಶ್ಮೀರ್ ಫೈಲ್ಸ್'  (The Kashmir Files) ದೊಡ್ಡ ಯಶಸ್ಸನ್ನು ಪಡೆದಿತ್ತು. ಕಾಶ್ಮೀರಿ ಪಂಡಿತರ ಜೀವನವನ್ನು ಆಧರಿಸಿದ ಈ ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಾಕಷ್ಟು ಪ್ರೀತಿ ಪಡೆಯಿತು. ಅದಾದ ನಂತರ ವಿವೇಕ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ಯಾವುದು ಎಂದು ಕುತೂಹಲ ಮೂಡಿಸಿತ್ತು. ಅವರ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಮುಂದಿನ ಚಿತ್ರ (Next Film) ಯಾವುದು ಎಂದು ಅನೌನ್ಸ್ ಮಾಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರು ದಿ ವ್ಯಾಕ್ಸಿನ್ ವಾರ್ (The Vaccine War) ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.


  ಸೂಪರ್ ಹಿಟ್ ಆಗಿದ್ದ ದಿ ಕಾಶ್ಮೀರ್ ಫೈಲ್ಸ್
  ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ದಿ ಕಾಶ್ಮೀರ್ ಫೈಲ್ಸ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ತೋರಿಸಲಾಗಿತ್ತು. ಈ ಸಿನಿಮಾ ಸರಿ ಇಲ್ಲ ಎಂದು ಕೆಲವರು ವದಂತಿ ಹಬ್ಬಿಸಿದ್ರು. ಆದ್ರೆ, ಸಿನಿಮಾ ಸೂಪರ್ ಹಿಟ್ ಆಗಿ ಪ್ರದರ್ಶನ ಕಂಡಿತ್ತು. ಜನ ಮೆಚ್ಚಿಕೊಂಡಿದ್ರು. ಹಾಕಿದ ಬಂಡವಾಳಕ್ಕಿಂತ ಭಾರೀ ಹೆಚ್ಚು ಲಾಭ ಗಳಿಸಿತ್ತು. ವಿವೇಕ್ ಅಗ್ನಿಹೋತ್ರಿ ಅವರು ನಿರ್ದೇಶನವನ್ನು ಮೆಚ್ಚಿಕೊಂಡಿದ್ರು.


  ಮುಂದಿನ ಸಿನಿಮಾ ಯಾವುದೆಂಬ ಕುತೂಹಲ


  ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ದಿ ಕಾಶ್ಮೀರ್ ಫೈಲ್ಸ್ ನಂತಹ ಸಿನಿಮಾದ ನಂತರ, ಯಾವ ಚಿತ್ರ ನಿರ್ದೇಶನ ಮಾಡ್ತಾರೆ ಅನ್ನೋ ಕುತೂಹಲ ಹೆಚ್ಚಾಗಿತ್ತು. ಅದಕ್ಕೆ ಈಗ ತೆರೆ ಬಿದ್ದಿದೆ. ಅವರ ಹುಟ್ಟು ಹಬ್ಬದಂದೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ತಮ್ಮ ಮುಂದಿನ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ.


  ಇದನ್ನೂ ಓದಿ: Vivek Agnihotri: 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹುಟ್ಟುಹಬ್ಬ, ವಿವಾದಗಳ ಮೆಟ್ಟಿ ನಿಂತ ನಿರ್ಮಾಪಕ! 


  ದಿ ವ್ಯಾಕ್ಸಿನ್ ವಾರ್


  ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ದಿ ವ್ಯಾಕ್ಸಿನ್ ವಾರ್ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ವ್ಯಾಕ್ಸಿನ್ ಬಾಟಲ್ ಮೇಲೆ ಈ ಚಿತ್ರದ ಹೆಸರನ್ನು ಬರೆಯಲಾಗಿದೆ. ಚಿತ್ರದ ಹೆಸರಿನ ಕೆಳಗೆ ಭಾರತದ ಬಾವುಟದ ಚಿತ್ರ ಇದೆ. ಕೋವಿಡ್ 19 ರ ವೇಳೆ ನಡೆದ ದುರಂತವನ್ನು ತೋರಿಸಬಹುದು ಎಂದು ಹೇಳಲಾಗ್ತಿದೆ. ಆದ್ರೆ ಆ ಬಗ್ಗೆ ಇನ್ನೂ ಮಾಹಿತಿ ಹಂಚಿಕೊಂಡಿಲ್ಲ.


  Indian film director film producer Vivek Agnihotri Announce next movie The Vaccine War
  ವಿವೇಕ್ ಅಗ್ನಿಹೋತ್ರಿ


  11 ಭಾಷೆಗಳಲ್ಲಿ, ಆಗಸ್ಟ್ 15 ರಂದು ರಿಲೀಸ್
  ದಿ ವ್ಯಾಕ್ಸಿನ್ ವಾರ್ ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಲಾಗಿದೆ. ಚಿತ್ರವನ್ನು ಆಗಸ್ಟ್ 15 ರಂದು ರಿಲೀಸ್ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೇ 11 ಭಾಷೆಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಹಿಂದಿ, ಇಂಗ್ಲಿಷ್, ಕನ್ನಡ, ತೆಲುಗು, ಮಲಯಾಳಂ, ಮರಾಠಿ, ಭೋಜ್ ಪುರಿ, ಮೊದಲಾದ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ.


  Indian film director film producer Vivek Agnihotri Announce next movie The Vaccine War
  ವಿವೇಕ್ ಅಗ್ನಿಹೋತ್ರಿ


  ದಿ ಕಾಶ್ಮೀರ್ ಫೈಲ್ಸ್ ಚಿತ್ರ ನಿರ್ಮಾಣ ಮಾಡಿದ್ದ ಪಲ್ಲವಿ ಜೋಶಿ ಹಾಗೂ ಅಭಿಷೇಕ್ ಅಗರ್‍ವಾಲ್ ಅವರೇ ದಿ ವ್ಯಾಕ್ಸಿನ್ ವಾರ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ರೇಕ್ಷಕರು ಚಿತ್ರಕ್ಕಾಗಿ ಕಾಯ್ತಾ ಇದ್ದಾರೆ.


  ಇದನ್ನೂ ಓದಿ: Bigg Boss Kannada: ನೀವು ಸತ್ತ ಕುದುರೆ ತರ, ಆರ್ಯವರ್ಧನ್-ರೂಪೇಶ್ ರಾಜಣ್ಣ ಮಧ್ಯೆ ಜೋರು ಜಗಳ! 


  ವಿವೇಕ್ ಅಗ್ನಿಹೋತ್ರಿ ಅವರು ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು ಧಾರಾವಾಹಿಗಳ ನಿರ್ದೇಶನ ಮಾಡಿದ್ದಾರೆ. ಇವರು ನಿರ್ಮಿಸಿದ ಧಾರಾವಾಹಿಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಅಭಿಮಾನಿಗಳು ಮೆಚ್ಚಿಕೊಂಡಿದ್ರು. 2005 ರಲ್ಲಿ ಬಿಡುಗಡೆಯಾದ 'ಚಾಕೊಲೇಟ್' ಚಿತ್ರದ ಮೂಲಕ ವಿವೇಕ್ ಅಗ್ನಿಹೋತ್ರಿ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದರು.

  Published by:Savitha Savitha
  First published: