ಪಶುವೈದ್ಯೆಯ ಅತ್ಯಾಚಾರ ಪ್ರಕರಣಕ್ಕೆ ಕಂಬನಿ ಮಿಡಿದ ಭಾರತೀಯ ಚಿತ್ರರಂಗ; ನ್ಯಾಯಕ್ಕಾಗಿ ಧ್ವನಿಗೂಡಿಸಿದ ಸಿನಿ ತಾರೆಯರು

Hyderabad vet rape-murder: ಹಲವಾರು ನಟ-ನಟಿಯರು ಪಶುವೈದ್ಯೆಯ ಸಾವಿಗೆ ನ್ಯಾಯ ದೊರಕಿಸುವಂತೆ ಕೋರಿಕೊಂಡಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ. ಯಾವೆಲ್ಲಾ ನಟರು ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ.

ಸಿನಿ ತಾರೆಯರು

ಸಿನಿ ತಾರೆಯರು

 • Share this:
  ತೆಲಂಗಾಣದ ಶಂಶಾಬಾದ್​ನಲ್ಲಿ ಕಳೆದ ವಾರ ನಡೆದ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶವನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಮಹಿಳೆಯ ಮೇಲೆ ನಡೆಯುವ ಇಂತಹ ದುರ್ಘಟನೆಯ ಬಗ್ಗೆ ಭಾರತೀಯ ಚಿತ್ರರಂಗ ಖಂಡನೆ ವ್ಯಕ್ತಪಡಿಸಿದೆ.  ಹಲವಾರು ನಟ-ನಟಿಯರು ಪಶುವೈದ್ಯೆಯ ಸಾವಿಗೆ ನ್ಯಾಯ ದೊರಕಿಸುವಂತೆ ಕೋರಿಕೊಂಡಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ. ಯಾವೆಲ್ಲಾ ನಟರು ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ.

  ಜಗ್ಗೇಶ್​

  ಸ್ಯಾಂಡಲ್​ವುಡ್​ ನಟ ಜಗ್ಗೇಶ್​ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಎಂದು ನಮ್ಮ ದೇಶದಲ್ಲಿ ಇಂತಹ ಹೇಯಕೃತ್ಯದ ರಾಕ್ಷಸರಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ಬರುತ್ತದೋ ಅಲ್ಲಿಯವರೆಗೂ ಇಂಥ ಕೃತ್ಯ ತಡೆಯಲಾಗದು ಎಂದಿದ್ದಾರೆ.  ಅಕ್ಷಯ್​ ಕುಮಾರ್​

  ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪಶುವೈದ್ಯೆ ಸಾವಿಗೆ ಖಂಡನೆ ವ್ಯಕ್ತ ಪಡಿಸಿದ್ದು, ಇಂತಹ ದುರ್ಘಟನೆ ನಿಲ್ಲಿಸಲು ಕಠಿಣ ಕಾನೂನಿನ ಅವಶ್ಯಕತೆ ಇದೆ ಎಂದಿದ್ದಾರೆ.  ಸಲ್ಮಾನ್​ ಖಾನ್​

  ಇಂತಹ ಸೈತಾನರನ್ನು ನಾಶ ಮಾಡದೆ ಬಿಡಬಾರದು. ಎಲ್ಲರೂ ಒಟ್ಟಾಗಿ ಹೋರಾಡುವ ಸಮಯ ಬಂದಿದೆ ಎಂದಿದ್ದಾರೆ.  ಯಾಮಿ ಗೌತಮ್​

  ಕೋಪ, ಅಚ್ಚರಿ, ದುಃಖ ಎಲ್ಲವೂ ಆಗುತ್ತಿದೆ. ಮಹಿಳೆಯ ಮೇಲೆ ಯಾಕೆ ಇಂತಹ ಘಟನೆಗಳು ನಡಿಯುತ್ತಿದೆ ಎಂದಿದ್ದಾರೆ ಯಾಮಿ ಗೌತಮ್​  ರಾಕುಲ್​ ಪ್ರೀತ್​ ಸಿಂಗ್​

  ಜನರು ಅಪರಾಧ ಕೃತ್ಯ ಎಸಗುವುದಿರಲಿ ಅದರ ಬಗ್ಗೆ ಚಿಂತಿಸಲು ಭಯ ಪಡಬೇಕು. ಆ ರೀತಿಯ ವ್ಯವಸ್ಥೆ ಬೇಕಿದೆ ಎಂದಿದ್ದಾರೆ.  ಆಶಿಕಾ ರಂಗನಾಥ್​

  ನಮ್ಮ ಸುತ್ತ ಮುತ್ತ ಇಂತಹ ದಾರುಣ ಘಟಣೆಗಳು ನಡೆದ ಮೇಲೂ ನಮ್ಮ ದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಇದೆ ಎಂದು ಹೇಗೆ ಹೇಳಲಿ ಎಂದು ಪ್ರಶ್ನಿಸಿದ್ದಾರೆ.  ರಶ್ಮಿಕಾ ಮಂದಣ್ಣ

  ಸುರಕ್ಷತೆ ಎಲ್ಲಿದೆ? ಕೆಟ್ಟ ವಿಚಾರಗಳನ್ನು ಮತ್ತು ಹಿಂಸಾಚಾರವನ್ನು ನಿರ್ಲಕ್ಷ್ಯಿಸುವುದರಿಂದ ಪರಿಹಾರ ಸಿಗುವುದಿಲ್ಲ. ನೀವು ಸುರಕ್ಷತೆ ಇಲ್ಲ ಎಂದು ಭಾವಿಸಿದಾಗ ದಯವಿಟ್ಟು ಸಹಾಯಕ್ಕಾಗಿ ಕರೆ ಮಾಡಿ ಎಂದು ಪೊಲೀಸ್ ಇಲಾಖೆಯ ದೂರವಾಣಿ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ ರಶ್ಮಿಕಾ.  ಅನುಷ್ಕಾ ಶೆಟ್ಟಿ

  ಹುಡುಗಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಇದು ಮನುಕುಲವನ್ನೇ ಕದಲಿಸುವ ವಿಷಯ. ಈ ಪಾಪಿಗಳು ಮಾಡಿರುವ ಕೃತ್ಯ ಕಂಡು ವನ್ಯಜೀವಿಗಳೇ ಅಹಸ್ಯ ಪಡುತ್ತವೆ. ನಮ್ಮ ಸಮಾಜದಲ್ಲಿ ಮಹಿಳೆಯಾಗಿರುವುದೇ ಅಪರಾಧವೇ? ಆರೋಪಿಗಳಿಗೆ ಶಿಕ್ಷೆ ಕೊಡಿಸುವ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ' ಎಂದು ಅನುಷ್ಕಾ ಶೆಟ್ಟಿ ಮನವಿ ಮಾಡಿದ್ದಾರೆ.  ಕೀರ್ತಿ ಸುರೇಶ್​​

  ಯುವತಿಯ ಮೇಲೆ ಅತ್ಯಾಚರವೆಸಗಿ, ಜೀವಂತವಾಗಿ ಸುಟ್ಟಿರುವುದು ಹೃದಯ ವಿದ್ರಾವಕ ಘಟನೆ. ದಿನ ಕಳೆದಂತೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸುರಕ್ಷಿತ ನಗರ ಎಂದುಕೊಂಡಿದ್ದ ಹೈದರಾಬಾದಿನಲ್ಲೇ ಈ ಘಟನೆ ನಡೆದಿರುವುದಕ್ಕೆ ಯಾರನ್ನು ಹೊಣೆಯಾಗಿಸುವುದು. ಯಾವಾಗ ನಮ್ಮ ದೇಶದಲ್ಲಿ ಮಹಿಳೆಯರು ಯಾವಾಗ ಬೇಕಾದರೂ ಸುರಕ್ಷಿತವಾಗಿ ಓಡಾಡುವಂತಹ ಪರಿಸ್ಥಿತಿ ಯಾವಾಗ ನಿರ್ಮಾಣವಾಗುತ್ತದೆ. ಎಲ್ಲಾ ಸೈಕೋಗಳನ್ನು ಹಾಗೂ ಇಂತಹ ಕ್ರೂರಿಗಳನ್ನು ಬೇಟೆಯಾಡಬೇಕು' ಎಂದು ಕೀರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.   

  ನಿಧಿ ಅಗರ್​ ವಾಲ್​

  ಪುರುಷನಾಗಲಿ, ಮಹಿಳೆಯಾಗಲಿ ಪ್ರತಿಯೊಬ್ಬರನ್ನು ಗೌರವದಿಂದ ನೋಡಬೇಕಿದೆ. ಈ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದಿದ್ಧಾರೆ ನಿಧಿ.  ಅಲ್ಲು ಸಿರೀಶ್​

  ಈ ಘಟನೆಯಿಂದ ತುಂಬಾ ಸಿಟ್ಟು ಮತ್ತು ಕೋಪ ಬರುತ್ತಿದೆ. ನಾನು ಅಸಹಾಯಕ ಎನಿಸುತ್ತಿದೆ ಎಂದಿದ್ದಾರೆ.  ಅಖಿಲ್​ ಅಕ್ಕಿನೇನಿ

  ನಮ್ಮ ದೇಶದಲ್ಲಿ ಇಂತಹ ದುರ್ಘಟನೆಗಳು ನಿಲ್ಲಬೇಕು. ನಮ್ಮ ಮಹಿಳೆಯರಿಗೆ ಸುರಕ್ಷಿತೆ ಬೇಕಾಗಿದೆ ಎಂದಿದ್ದಾರೆ.  ಇದನ್ನೂ ಓದಿ: ನ್ಯೂಸ್​ ಪೇಪರಿಂದ ಮೈ ಮುಚ್ಚಿಕೊಂಡ ಸ್ಯಾಂಡಲ್​ವುಡ್ ಬೆಡಗಿ; ಫೋಟೋ ವೈರಲ್

  ಇದನ್ನೂ ಓದಿ: Odeya Trailer: ಯೂಟ್ಯೂಬ್​​​ನಲ್ಲಿ ‘ಒಡೆಯ‘ನ ಆರ್ಭಟ; ಟ್ರೇಲರ್ ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಎಷ್ಟು ವೀಕ್ಷಣೆ ಗೊತ್ತಾ?


  First published: