• Home
  • »
  • News
  • »
  • entertainment
  • »
  • Rashmika Mandanna: ರಶ್ಮಿಕಾ ಮಂದಣ್ಣ​ ಕ್ರೇಜ್​; ಎದೆ ಮೇಲೆ ಆಟೋಗ್ರಾಫ್ ಬೇಕೇ ಬೇಕು ಎಂದ ಫ್ಯಾನ್!

Rashmika Mandanna: ರಶ್ಮಿಕಾ ಮಂದಣ್ಣ​ ಕ್ರೇಜ್​; ಎದೆ ಮೇಲೆ ಆಟೋಗ್ರಾಫ್ ಬೇಕೇ ಬೇಕು ಎಂದ ಫ್ಯಾನ್!

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

ರಶ್ಮಿಕಾ ಅವರಿಗೆ ಅಭಿಮಾನಿಯೊಬ್ಬ, ಮೇಡಂ ನಿಮ್ಮ ಆಟೋಗ್ರಾಫ್ ಬೇಕು ಎನ್ನುತ್ತಾನೆ. ಹಾಕಲು ಹೋದ್ರೆ, ಎದೆ ಮೇಲೆ ಆಟೋಗ್ರಾಫ್ ಬೇಕೇ ಬೇಕು ಎನ್ನುತ್ತಾನೆ. ಕೊನೆಗೆ ರಶ್ಮಿಕಾ ಅಭಿಮಾನಿ ಎದೆ ಮೇಲೆ ಆಟೋಗ್ರಾಫ್ ಹಾಕಿ ಹೋಗ್ತಾರೆ.

  • Share this:

    ಸ್ಯಾಂಡಲ್‍ವುಡ್ (Sandalwood) ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಬಾಲಿವುಡ್‍ನಲ್ಲಿ (Bollywood) ತುಂಬಾ ಬ್ಯುಸಿಯಾಗಿದ್ದಾರೆ. ತಮ್ಮ ನಟನೆಯ ಮೂಲಕ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಕಿರಿಕ್ ಪಾರ್ಟಿಯ ಸಾನ್ವಿ ಅದೆಷ್ಟೋ ಅಭಿಮಾನಿಗಳ (Fans) ಬಳಗವೇ ಇದೆ. ರಶ್ಮಿಕಾ ಮಂದಣ್ಣ ಅಂದ್ರೆ ಕ್ರೇಜ್, ಹೋದ ಕಡೆಯೆಲ್ಲಾ ಅಭಿಮಾನಿಗಳು ರಶ್ಮಿಕಾ ನೋಡಿ ಖಷಿಯಾಗ್ತಿದ್ದಾರೆ. ಕನ್ನಡ ಚಿತ್ರರಂಗದ ಮೂಲಕ ತಮ್ಮ ವೃತ್ತಿ ಜೀವನ ಶುರು ಮಾಡಿದಾಕೆ, ಬಾಲಿವುಡ್, ಟಾಲಿವುಡ್‍ನಲ್ಲಿ ಬಹುಬೇಡಿಯ ನಟಿ ಆಗಿದ್ದಾರೆ. ಸದಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವುದರಿಂದ, ಬೇರೆ ಬೇರೆ ಕಡೆ ಶೂಟಿಂಗ್ ಗಾಗಿ ತೆರಳುತ್ತಾರೆ. ಈಗ ಹೋಗುವಾಗ ಹುಚ್ಚು ಅಭಿಮಾನಿ ಒಬ್ಬ ತನ್ನ ಎದೆ ಮೇಲೆ ಆಟೋಗ್ರಾಫ್ (Autograph) ಹಾಕಿ ಎಂದು ಹಠ ಹಿಡಿದು ಹಾಕಿಸಿಕೊಂಡು ಹೋಗಿದ್ದಾನೆ.


    ಗುಡ್ ಬೈ ಚಿತ್ರದ ಪ್ರಚಾರ
    ಪುಷ್ಪ ಚಿತ್ರ ಹಿಟ್ ಆಗಿದ್ದೇ ತಡ ರಶ್ಮಿಕಾಗೆ ಲಕ್ ಮೇಲೆ ಲಕ್. ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಜೊತೆ ಗುಡ್ ಬೈ ಚಿತ್ರ ಮಾಡಿದ್ದಾರೆ. ಸದ್ಯ ಅದರ ಪ್ರಚಾರದಲ್ಲಿ ತೊಡಗಿದ್ದಾರೆ. ಅಕ್ಟೋಬರ್ 7ರಂದು ಆ ಚಿತ್ರ ಬಿಡುಗಡೆ ಆಗಲಿದೆ. ಟ್ರೇಲರ್ ನೋಡಿ ಜನ ಹೀಗಾಗಲೇ ಮೆಚ್ಚಿಕೊಂಡಿದ್ದಾರೆ. ಯಾವಾಗ ಸಿನಿಮಾ ಬರುತ್ತೆ ಅಂತ ಕಾತುರರಾಗಿದ್ದಾರೆ.


    ಹೆಚ್ಚಾದ ಅಭಿಮಾನಿಗಳು
    ನಟಿ ರಶ್ಮಿಕಾ ಮಂದಣ್ಣ ಅವರಿಗೆ ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲಿ ಹೋದ್ರೂ ಕ್ರೇಜ್ ಹಚ್ಚಿಸಿದ್ದಾರೆ ರಶ್ಮಿಕಾ. ರಶ್ಮಿಕಾ ಮಂದಣ್ಣ ನೋಡಿದ್ರೆ ಖುಷಿ. ಸಿಳ್ಳೆ, ಚಪ್ಪಾಳೆ ತಟ್ಟುತ್ತಾರೆ. ಅವರ ಕೈಯಿಂದ ಒಂದು ಆಟೋಗ್ರಾಫ್ ಹಾಕಿಸಿಕೊಂಡ್ರೆ ನಾವೇ ಪುಣ್ಯವಂತರು ಎನ್ನುತ್ತಾರೆ. ಅಷ್ಟು ಜನಪ್ರಿಯತೆ ಈಗ ರಶ್ಮಿಕಾ ಅವರದ್ದು.


    ಇದನ್ನೂ ಓದಿ: Rashmika Mandanna: ಸ್ಟೈಲಿಶ್ ಲುಕ್‍ನಲ್ಲಿ ರಶ್ಮಿಕಾ ಮಂದಣ್ಣ, ವಾವ್ ಸೂಪರ್ ಎಂದ ನೆಟ್ಟಿಗರು


    ಎದೆ ಮೇಲೆ ಆಟೋಗ್ರಾಫ್
    ಗುಡ್ ಬೈ ಚಿತ್ರದ ಪ್ರಮೋಶನ್‍ಗೆ ಹೋಗಿದ್ದ ರಶ್ಮಿಕಾ ಅವರಿಗೆ ಅಭಿಮಾನಿಯೊಬ್ಬ ಗೋಗರೆದು ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ನೀವು ಅಂದ್ರೆ ತುಂಬಾ ಇಷ್ಟ . ನಾನು ನಿಮ್ಮ ದೊಡ್ಡ ಅಭಿಮಾನಿ ಎಂದಿದ್ದಾನೆ. ರಶ್ಮಿಕಾಗೂ ಅದನ್ನು ಕಂಡು ಖುಷಿಯಾಗಿದೆ. ಮೇಡಂ ನಿಮ್ಮ ಆಟೋಗ್ರಾಫ್ ಬೇಕು ಎನ್ನುತ್ತಾನೆ. ಹಾಕಲು ಹೋದ್ರೆ, ಎದೆ ಮೇಲೆ ಆಟೋಗ್ರಾಫ್ ಬೇಕೇ ಬೇಕು ಎನ್ನುತ್ತಾನೆ. ಕೊನೆಗೆ ರಶ್ಮಿಕಾ ಅಭಿಮಾನಿ ಎದೆ ಮೇಲೆ ಆಟೋಗ್ರಾಫ್ ಹಾಕಿ ಹೋಗ್ತಾರೆ.



    ರಶ್ಮಿಕಾ ಮದಣ್ಣ ಮುಂದಿನ ಚಿತ್ರಗಳು
    ನಟಿ ರಶ್ಮಿಕಾ ಮಂದಣ್ಣ ಇನ್ನೂ ಹಲವು ಸಿನಿಮಾಗಳಲ್ಲಿ ಅಭಿನಯಿಸಲಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಚಿತ್ರದಲ್ಲಿ ಅವರು ನಟಿಸಿದ್ದಾರೆ. ರಣಬೀರ್ ಕಪೂರ್ ನಟನೆಯ ಅನಿಮಲ್ ಚಿತ್ರಕ್ಕೂ ರಶ್ಮಿಕಾ ನಾಯಕಿ. ದಕ್ಷಿಣ ಭಾರತದ ಸ್ಟಾರ್ ಹೀರೋಗಳಿಗೆ ಈಗ ರಶ್ಮಿಕಾನೇ ನಾಯಕಿ.


    ಇದನ್ನೂ ಓದಿ: Gaalipata 2: ದಸರಾ ಧಮಾಕಾ! ಒಟಿಟಿಯಲ್ಲಿ ಗಾಳಿಪಟ 2 ಹಂಗಾಮಾ ಶುರು ಯಾವಾಗ?


    ರಶ್ಮಿಕಾಗೆ  ಮೊಣಕಾಲಿನ ನೋವು 


    ಬ್ಯಾಕ್ ಟು ಬ್ಯಾಕ್ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಕಾರಣದಿಂದ ರಶ್ಮಿಕಾ ಮೊಣಕಾಲಿನ ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗುತ್ತಿದೆ. ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ಅವರು ರಶ್ಮಿಕಾಗೆ ಚಿಕಿತ್ಸೆ  ನೀಡಿದ್ದಾರೆ. ಕೆಲ ಕಾಲ ಜಿಮ್ ಬಿಡುವಂತೆಯೂ ಹಾಗು ಮೊಣಕಾಲಿಗೆ ಭಾರ ಆಗುವಂತಹ ಕೆಲಸಗಳನ್ನು ಮಾಡದಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಕಾಲ ಜಿಮ್ ನಿಂದ ದೂರ ಇರಲಿದ್ದಾರೆ ರಶ್ಮಿಕಾ.

    Published by:Savitha Savitha
    First published: