Top Heroes: ದಾಖಲೆ ಬರೆದ ರಾಕಿಂಗ್ ಸ್ಟಾರ್! ಭಾರತದ ಟಾಪ್​ ಹೀರೋಗಳ ಪಟ್ಟಿಯಲ್ಲಿ ಯಶ್​ಗೆ ಎಷ್ಟನೇ ಸ್ಥಾನ?

ಬಾಲಿವುಡ್​​ ನಟರಿಗಿಂತ ಹೆಚ್ಚಾಗಿ ಸೌತ್​ ನಟರ ಸೌಂಡ್​ ಜೋರಾಗಿದೆ. ಇತ್ತ ಭಾರತದ ಎಲ್ಲಾ ಸ್ಟಾರ್ಸ್​​ಗಳಿಗೆ ರ್ಯಾಂಕಿಂಗ್ ನೀಡಲಾಗಿದೆ. Ormax ಮೀಡಿಯಾ ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಪಟ್ಟಿ ಬಿಡುಗಡೆ ಮಾಡಿದೆ.

ಭಾರತದ ಟಾಪ್ ಹೀರೋ ಲಿಸ್ಟ್​

ಭಾರತದ ಟಾಪ್ ಹೀರೋ ಲಿಸ್ಟ್​

  • Share this:
ಭಾರತ ಅಷ್ಟೇ ಅಲ್ಲ ದೇಶ-ವಿದೇಶದಲ್ಲೂ ಸೌತ್​ ಸಿನಿಮಾಗಳ ಭಾರೀ ಸದ್ದು ಮಾಡ್ತಿದೆ. ಕನ್ನಡ, ತೆಲುಗು, ತಮಿಳಿನಲ್ಲಿ ಅತ್ಯುತ್ತಮ ಚಿತ್ರಗಳು ಬಿಡುಗಡೇ ಭಾರತದಾದ್ಯಂತ ಸೂಪರ್​ ಸಕ್ಸಸ್​ ಕಂಡಿದೆ. ಕನ್ನಡದ ಕೆಜಿಎಫ್ 2 (KGF Chapter 2), ‘777 ಚಾರ್ಲಿ’ ಹವಾ ಎಲ್ಲೆಡೆ ಹಬ್ಬಿದೆ. ಇತ್ತ ತೆಲುಗಿನ  ‘ಆರ್​ಆರ್​ಆರ್​’ ಚಿತ್ರ ವಿದೇಶಗಳಲ್ಲೂ ಗೆದ್ದು ಬೀಗಿದೆ. ಇದೀಗ ಬಾಲಿವುಡ್​​ ನಟರಿಗಿಂತ ಹೆಚ್ಚಾಗಿ ಸೌತ್​ ನಟರ ಸೌಂಡ್​ ಜೋರಾಗಿದೆ. ಇತ್ತ ಭಾರತದ ಎಲ್ಲಾ ಸ್ಟಾರ್ಸ್​​ಗಳಿಗೆ ರ್ಯಾಂಕಿಂಗ್ ನೀಡಲಾಗಿದೆ. Ormax ಮೀಡಿಯಾ ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಪಟ್ಟಿ ಬಿಡುಗಡೆ ಮಾಡಿದೆ.

ಭಾರತದ ಟಾಪ್ 10 ಜನಪ್ರಿಯ ನಟರ ಪಟ್ಟಿ ರಿಲೀಸ್​

2022ರ ಜುಲೈ ಅವಧಿಯ ಭಾರತದ ಟಾಪ್ 10 ಜನಪ್ರಿಯ ನಟರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ತಮಿಳಿನ ದಳಪತಿ ವಿಜಯ್ ಅವರ ಇತ್ತೀಚಿನ ಚಿತ್ರ ‘ಬೀಸ್ಟ್​’ ಅಷ್ಟೇನೂ ಸಕ್ಸಸ್​ ಆಗಿಲ್ಲ, ಆದ್ರೂ ವಿಜಯ್​ ನಂಬರ್ ಒನ್​ ಸ್ಥಾನದಲ್ಲೇ ಇದ್ದಾರೆ. ವಿಜಯ್​ ಅವರು ಮುಂದಿನ ಚಿತ್ರ  ‘ವಾರಿಸು’  ಶೂಟಿಂಗ್​ನಲ್ಲಿ ಇದೀಗ ಬ್ಯುಸಿ ಆಗಿದ್ದಾರೆ.

2ನೇ ಸ್ಥಾನದಲ್ಲಿ ಪ್ರಭಾಸ್​, 3ನೇ ಸ್ಥಾನದಲ್ಲಿ ಜ್ಯೂ.NTR

ಇತ್ತ ಟಾಲಿವುಡ್​​ ಬಾಹುಬಲಿ ಸತತ ಸೋಲಿನಿಂದ ಕಂಗೆಟ್ಟಿದ್ದಾರೆ. ಆದ್ರೂ ಪ್ರಭಾಸ್ ಖ್ಯಾತಿ ಕಡಿಮೆಯಾಗಿಲ್ಲ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಜ್ಯೂ.ಎನ್​ಟಿಆರ್ ಇದ್ದಾರೆ. ‘ಆರ್​ಆರ್​ಆರ್’ ಚಿತ್ರದ ಮೂಲಕ ಅವರು ದೊಡ್ಡ ಯಶಸ್ಸು ಕಂಡಿದ್ದಾರೆ.

4ನೇ ಸ್ಥಾನದಲ್ಲಿ ಅಲ್ಲು ಅರ್ಜುನ್, 5ನೇ ಸ್ಥಾನದಲ್ಲಿ ಯಶ್​

‘ಪುಷ್ಪ’ ಚಿತ್ರದಿಂದ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ಅಲ್ಲು ಅರ್ಜುನ್​​ಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ‘ಕೆಜಿಎಫ್ 2’ ಚಿತ್ರದ ಮೂಲಕ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಖ್ಯಾತಿ ಯಶ್​ಗೆ ಸಲ್ಲುತ್ತದೆ. ಅವರು ಈ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

ದಾಖಲೆ ಬರೆದ ರಾಕಿಂಗ್ ಸ್ಟಾರ್ 

ಕನ್ನಡ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ತೀರಾ ಕಡಿಮೆ. ಯಶ್​ ಅಭಿನಯದ ಕೆಜಿಎಫ್​ ಹಾಗೂ ಕೆಜಿಎಫ್​​ 2 ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಟಾಪ್ 10 ಪಟ್ಟಿಯಲ್ಲಿ ಕನ್ನಡ ಚಿತ್ರರಂಗದಿಂದ ಸ್ಥಾನ ಪಡೆದ ಏಕೈಕ ನಟ ಎಂಬ ಹೆಗ್ಗಳಿಕೆ ರಾಕಿಂಗ್ ಸ್ಟಾರ್​ಗೆ ಸಿಕ್ಕಿದೆ.

ಕಡಿಮೆಯಾಗ್ತಿದೆ ಬಾಲಿವುಡ್ ಕ್ರೇಜ್​​​

ರಾಮ್ ಚರಣ್​ (6), ಅಕ್ಷಯ್ ಕುಮಾರ್ (7), ಮಹೇಶ್ ಬಾಬು (8), ಸೂರ್ಯ (9), ಅಜಿತ್ ಕುಮಾರ್ (10) ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳು ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ ಹೀಗಾಗಿ, ಬಾಲಿವುಡ್​ನಿಂದ ಸ್ಥಾನ ಪಡೆದ ಏಕೈಕ ಹೀರೋ ಎಂಬ ಖ್ಯಾತಿ ಅಕ್ಷಯ್ ಕುಮಾರ್​ಗೆ ಸಲ್ಲುತ್ತದೆ.

ಇದನ್ನೂ ಓದಿ: Puneeth Rajkumar: ಇದಪ್ಪಾ ಪವರ್ ಸ್ಟಾರ್ ಪವರ್; ಇವ್ರಿಂದ ‘ಲಕ್ಕಿಮ್ಯಾನ್’ಗೆ ಸಿಕ್ಕಾಪಟ್ಟೆ ಲಕ್​

ಸ್ಯಾಂಡಲ್​ವುಡ್​ನ  ರಾಕಿಂಗ್ ಸ್ಟಾರ್​ ಯಶ್ ಅವರು ಕೆಜಿಎಫ್  2 ಚಿತ್ರದ ಮೂಲಕ ನ್ಯಾಷನಲ್​ ಸ್ಟಾರ್ ಆಗಿದ್ದಾರೆ. ಕೆಜಿಎಫ್  ಚಿತ್ರ ಸೂಪರ್​ ಡೂಪರ್ ಹಿಟ್​ ಆದ್ಮೇಲೆ, ರಾಕಿ ಭಾಯ್ ಅವರ ಮುಂದಿನ ಚಿತ್ರ ಯಾವುದು ಅನ್ನೋ ಕುತೂಹಲ ಹೆಚ್ಚಾಗಿತ್ತು. ಅಭಿಮಾನಿಗಳು ಸಹ ಯಶ್​, ಮುಂದೆ ಯಾವ ರೀತಿ ಚಿತ್ರ ಮಾಡ್ತಾರೆ ಎಂದು ಕಾಯುತ್ತಿದ್ದಾರೆ. ಆದ್ರೆ ಮಾಧ್ಯಮಗಳು ಹಲವು ಬಾರಿ ಪ್ರಶ್ನೆ ಮಾಡಿದ್ರು ಯಶ್ ಮಾತ್ರ ಯಾವುದೇ ಸುಳಿವು ನೀಡಿಲ್ಲ. ರಾಕಿಂಗ್​ ಸ್ಟಾರ್​ ಅವರ ಮುಂದಿನ ಚಿತ್ರ ಯಾವುದು? ಮತ್ತೆ ಯಶ್​ ಅವರನ್ನು ಬೆಳ್ಳಿ ತೆರೆ ಮೇಲೆ ನೋಡೋದು ಯಾವಾಗ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
Published by:Pavana HS
First published: