news18-kannada Updated:January 18, 2020, 12:32 PM IST
ನಟಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ನಟನೆಯ 'ಸರಿಲೇರು ನೀಕೆವ್ವರು ' ಸಿನಿಮಾಗೆ ಭಾರೀ ಮೆಚ್ಚುಗೆ ಕೇಳಿ ಬರುತ್ತಿರುವ ಮಧ್ಯೆಯೇ ಐಟಿ ಅಧಿಕಾರಿಗಳು ಅವರಿಗೆ ಶಾಕ್ ನೀಡಿದ್ದಾರೆ. ಕೊಡಗು ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರೀಶಿಲನೆ ನಡೆಸಿದ್ದರು. ಈಗ ಈ ಪ್ರಕರಣಕ್ಕೆ ಸಂಬಂಧಿಸಿ ರಶ್ಮಿಕಾಗೆ ನೋಟಿಸ್ ಜಾರಿಯಾಗಿದೆ.
ರಶ್ಮಿಕಾ ಮಂದಣ್ಣ ಹುಟ್ಟೂರು ವಿರಾಜಪೇಟೆಯಲ್ಲಿರುವ ಮನೆಗೆ ಗರುವಾರ ಬೆಳಗ್ಗೆ ಟ್ಯಾಕ್ಸಿ ಮೂಲಕ ಆಗಮಿಸಿದ ಅಧಿಕಾರಿಗಳು ದಿಢೀರ್ ಭೇಟಿ ನಿಡಿ ಕುಟುಂಬಸ್ಥರಿಗೆ ಶಾಕ್ ನೀಡಿದ್ದರು. 3 ಕಾರಿನಲ್ಲಿ ಬಂದಿದ್ದ 9 ಅಧಿಕಾರಿಗಳು ರಶ್ಮಿಕಾ ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಶುಕ್ರವಾರ ಕೂಡ ಶೋಧ ಮುಂದುವರಿದಿತ್ತು.
‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ರಶ್ಮಿಕಾ ಮಂದಣ್ಣ, ನಂತರ ಟಾಲಿವುಡ್ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡರು. ಆಫರ್ಗಳು ಹೆಚ್ಚಿದಂತೆ ಅವರ ಸಂಭಾವನೆಯೂ ಹೆಚ್ಚಿದೆ. ಈ ಕಾರಣಕ್ಕೆ ಐಟಿ ದಾಳಿ ನಡೆದಿದೆ ಎನ್ನಲಾಗಿತ್ತು. ಶೋಧ ಕಾರ್ಯ ಪೂರ್ಣಗೊಂಡಿದ್ದು, ಐಟಿ ನೋಟಿಸ್ ನೀಡಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮನೆ ಮೇಲಿನ ಐಟಿ ರೇಡ್ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಮೂಲಗಳ ಪ್ರಕಾರ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ರಶ್ಮಿಕಾಗೆ ನೋಟಿಸ್ ನೀಡಿದ್ದಾರೆ. ವಿಚಾರಣೆ ವೇಳೆ ಐಟಿ ಅಧಿಕಾರಿಗಳು ಕೇಳುವ ಪ್ರಶ್ನೆಗೆ ಉತ್ತರ ನೀಡಬೇಕಿದೆ.
First published:
January 18, 2020, 12:29 PM IST