Kurukshetra: ಕರ್ನಾಟಕಕ್ಕೆ ಇರುವುದು ಒಬ್ಬನೇ ದುರ್ಯೋಧನ ಎಂದು ಡಿಬಾಸ್​ರನ್ನು ಕೊಂಡಾಡಿದ ರವಿಮಾಮ

Kurukshetra: ಕೌರವಾಧಿಪತಿಯಾಗಿ ತೆರೆಮೇಲೆ ಅಬ್ಬರಿಸಲು ಸಿದ್ಧರಾಗಿರುವ ಡಿಬಾಸ್​ಗೆ ಅವರೇ ಸರಿಸಾಟಿ. ಸಿನಿಮಾದ ಟೀಸರ್​, ಟ್ರೈಲರ್ ಹಾಗೂ ಹಾಡುಗಳ್ನು ನೋಡಿದವರು ದರ್ಶನ್​ರನ್ನು ಕಂಡು ಹೊಗಳದೇ ಇರಲಾರರು. ಆ ಪಾತ್ರಕ್ಕೆ ಹೇಳಿ ಮಾಡಿಸಿದಂತಿರುವ ಅವರ ಗತ್ತು, ಅಭಿನಯ ಪ್ರೇಕ್ಷಕರನ್ನು ಮಾತ್ರವಲ್ಲ ಸಿನಿ ರಂಗದ ಸೆಲೆಬ್ರಿಟಿಗಳನ್ನೇ ಮೋಡಿ ಮಾಡಿದೆ. 

Anitha E | news18
Updated:August 1, 2019, 2:43 PM IST
Kurukshetra: ಕರ್ನಾಟಕಕ್ಕೆ ಇರುವುದು ಒಬ್ಬನೇ ದುರ್ಯೋಧನ ಎಂದು ಡಿಬಾಸ್​ರನ್ನು ಕೊಂಡಾಡಿದ ರವಿಮಾಮ
ದರ್ಶನ್​ರನ್ನು ಕೊಂಡಾಡಿದ ರವಿಮಾಮ ಹಾಗೂ ದರ್ಶನ್​
Anitha E | news18
Updated: August 1, 2019, 2:43 PM IST
ಡಿಬಾಸ್ ದರ್ಶನ್ ಈ ಹಿಂದೆ ಐತಿಹಾಸಿಕ ಪಾತ್ರಗಳಲ್ಲಿ ಅಭಿನಯಿಸಿರುವುದನ್ನು ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ 'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನನಾಗಿ ಪೌರಾಣಿಕ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಕೌರವಾಧಿಪತಿಯಾಗಿ ತೆರೆಮೇಲೆ ಅಬ್ಬರಿಸಲು ಸಿದ್ಧರಾಗಿರುವ ಡಿಬಾಸ್​ಗೆ ಅವರೇ ಸರಿಸಾಟಿ. ಸಿನಿಮಾದ ಟೀಸರ್​, ಟ್ರೈಲರ್ ಹಾಗೂ ಹಾಡುಗಳ್ನು ನೋಡಿದವರು ದರ್ಶನ್​ರನ್ನು ಕಂಡು ಹೊಗಳದೇ ಇರಲಾರರು. ಆ ಪಾತ್ರಕ್ಕೆ ಹೇಳಿ ಮಾಡಿಸಿದಂತಿರುವ ಅವರ ಗತ್ತು, ಅಭಿನಯ ಪ್ರೇಕ್ಷಕರನ್ನು ಮಾತ್ರವಲ್ಲ ಸಿನಿ ರಂಗದ ಸೆಲೆಬ್ರಿಟಿಗಳನ್ನೇ ಮೋಡಿ ಮಾಡಿದೆ.ಹೌದು, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 'ಕುರುಕ್ಷೇತ್ರ' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್​ ರವಿಮಾವ ದರ್ಶನ್​ ಅವರನ್ನು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: KGF Chapter 2: ಅಧೀರ... ಅವೆಂಜರ್ಸ್​: ಎಂಡ್​ ಗೇಮ್​ನ ಥ್ಯಾನೋಸ್​ ಅಷ್ಟೇ ಪವರ್​ಫುಲ್​ ಪಾತ್ರವಂತೆ..!

'ಕುರುಕ್ಷೇತ್ರ'ದಲ್ಲಿ ಕೃಷ್ಣನ ಪಾತ್ರಧಾರಿಯಾಗಿರುವ ರವಿಚಂದ್ರನ್​ ಅವರು ಮೊದಲ ಬಾರಿಗೆ ಚಿತ್ರೀಕರಣದ ಸೆಟ್​ಗೆ ಕಾಲಿಟ್ಟಾಗ ದರ್ಶನ್​ ಅವರನ್ನು ದುಯೋರ್ಧನನ ವೇಷದಲ್ಲಿ ನೋಡಿ ಒಮ್ಮೆ ದಂಗಾಗಿದ್ದರಂತೆ. ಆಗ ಅವರಿಗೆ ದರ್ಶನ್​ ಅವರನ್ನು ಬಿಟ್ಟರೆ ಮತ್ತಾರೂ ಈ ಪಾತ್ರಕ್ಕೆ ಸಾಟಿಯೇ ಇಲ್ಲ ಎಂದೆನಿಸಿತತ್ಂತೆ. ಹೀಗೆಂದು ಅವರೇ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಸಜ್ಜಾಗಿದ್ದಾರೆ.. ದರ್ಶನ್ ಮಾಡಿರೋ ದುರ್ಯೋಧನ ಪಾತ್ರದ ಝಲಕ್ ಅನ್ನ ಟೀಸರ್-ಟ್ರೈಲರ್‍ನಲ್ಲಿ ಕಂಡೇ ಸ್ಯಾಂಡಲ್‍ವುಡ್ ಉಘೇ ಉಘೇ ಅಂತಿದೆ.. ಇದ್ರ ಜೊತೆ ನಿನ್ನನ್ನ ಬಿಟ್ರೆ ಇನ್ಯಾರಿಗೆ ಇದು ಸಾಧ್ಯ ಅಂತ ಚಾಲೆಂಜಿಂಗ್ ಸ್ಟಾರ್‍ನನ್ನ ಹಾಡಿಹೊಗಳಿದ್ದಾರೆ ಕ್ರೇಜಿಸ್ಟಾರ್...
Loading...

ಆ ಮಟ್ಟಿಗೆ ದುರ್ಯೋಧನನ ಗತ್ತು, ಗೈರತ್ತು ದರ್ಶನ್ ಮೂಲಕ ಅನಾವರಣಗೊಂಡಿದೆ.. ಆನೆಯಂತಹ ಹೆಜ್ಜೆ, ರಾಜಗಾಂಭಿರ್ಯದ ಲುಕ್ಕು, ಅಹಂಕಾರದಿ, ಗರ್ವದಿ ಗಹಗಹಿಸಿ ನಗುವ ರೀತಿ, ಹೀಗೆ ಎಲ್ಲವೂ ದುರ್ಯೋಧನನ ಸ್ವಾಭಾವಕ್ಕೆ ಹಿಡಿದ ಕನ್ನಡಿಯಂತಿದೆ.

ಇದನ್ನೂ ಓದಿ: RX100: ಇಷ್ಟಪಟ್ಟ ಹುಡುಗಿಗಾಗಿ ತಲೆ ಬೋಳಿಸಿಕೊಂಡಿದ್ದರಂತೆ ಆರ್​ಎಕ್ಸ್​100 ನಾಯಕ ಕಾರ್ತಿಕೇಯ

ಇನ್ನು ಕಿಚ್ಚ ಸುದೀಪ್​ ಸಹ ಈ ಹಿಂದೆಯೇ ದರ್ಶನ್​ ಅವರ ಈ ಪಾತ್ರದ ಬಗ್ಗೆ ಬರೆದುಕೊಂಡಿದ್ದರು. 'ಕುರುಕ್ಷೇತ್ರ' ಚಿತ್ರದ ಬಗ್ಗೆ ಚರ್ಚೆಗಳು ಆರಂಭವಾಗಿ, ಅದರಲ್ಲಿ ದರ್ಶನ್​ ದುರ್ಯೋಧನನ ಪಾತ್ರ ಮಾಡಲಿದ್ದಾರೆ ಎಂದು ಪ್ರಕಟವಾಗುತ್ತಿದ್ದಂತೆಯೇ ಸುದೀಪ್​ ಚಿತ್ರತಂಡಕ್ಕೆ ಶುಭ ಕೋರುವುದರೊಂದಿಗೆ ದರ್ಶನ್ ಮಾತ್ರ ದುಯೋರ್ಧನನ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ನಟ ಅಂತ ಟ್ವೀಟ್ ಮಾಡಿದ್ರು.

kichcha tweet bout  kurukshetra
ಕುರುಕ್ಷೇತ್ರ ಸಿನಿಮಾದ ಬಗ್ಗೆ ಸುದೀಪ್​ ಟ್ವೀಟ್​


ಇನ್ನು ಇತ್ತೀಚೆಗಷ್ಟೆ ನಟ ನಿಖಿಲ್​ ಕುಮಾರಸ್ವಾಮಿ ಸಹ 'ಕುರುಕ್ಷೇತ್ರ' ಸಿನಿಮಾದಲ್ಲಿ ದರ್ಶನ್​ ಅವರೇ ವಿಶೇಷ ಎಂದಿದ್ದರು. ಇದು ದಚ್ಚು ಅಭಿನಯದ 50ನೇ ಚಿತ್ರವಾಗಿದ್ದು, ಇದರಲ್ಲಿ ದರ್ಶನ್​ ಅವರು ಇರುವುದೇ ವಿಶೇಷ ಎಂದು ನಿಖಿಲ್​ ಹೊಗಳಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: 'ಕೆ.ಜಿ.ಎಫ್'. ನಂತರ ತೆಲುಗಿನ ಸ್ಟಾರ್​ ನಿರ್ದೇಶಕನೊಂದಿಗೆ ಕೆಲಸ ಮಾಡಲಿರುವ ರಾಕಿಂಗ್​ ಸ್ಟಾರ್ ಯಶ್​..!

ದರ್ಶನ್​ ಜೊತೆ ಜೊತೆಗೆ ರವಿಚಂದ್ರನ್​, ಅರ್ಜುನ್​ ಸರ್ಜಾ, ಸೋನು ಸೂದ್​ ಸೇರಿದಂತೆ ಸಾಕಷ್ಟು ದೊಡ್ಡ ತಾರಾ ಬಳಗವೇ ಇರುವ 'ಕುರುಕ್ಷೇತ್ರ' ಇದೇ 9ಕ್ಕೆ ತೆರೆಗಪ್ಪಳಿಸಲು ಸಜ್ಜಾಗಿದೆ.

HBD Kiara Advani: 27ನೇ ವಸಂತಕ್ಕೆ ಕಾಲಿಟ್ಟ ನಟಿ ಕಿಯಾರ ಅಡ್ವಾಣಿಯ ಹಾಟ್​ ಹಾಗೂ ಬೋಲ್ಡ್​ ಚಿತ್ರಗಳು..!


 
First published:August 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...