• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Nita Mukesh Ambani Cultural Centre: ಭಾರತದ ಶ್ರೀಮಂತ ಕಲೆ-ಸಂಸ್ಕೃತಿಯ ಹೆಗ್ಗುರುತು ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್

Nita Mukesh Ambani Cultural Centre: ಭಾರತದ ಶ್ರೀಮಂತ ಕಲೆ-ಸಂಸ್ಕೃತಿಯ ಹೆಗ್ಗುರುತು ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್

ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ

ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ

ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್ ಈಗ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ಗೆ (ಎನ್‌ಎಂಎಸಿಸಿ) ನೆಲೆಯಾಗಲಿದೆ, ಇದು ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪ್ರದರ್ಶಿಸಲು ಮತ್ತು ಗಮನ ಸೆಳೆಯಲು ಹೆಚ್ಚು ಬೇಡಿಕೆಯಿರುವ ರಂಗವಾಗಲಿದೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Mumbai, India
 • Share this:

ಮುಂಬೈ: ಉದ್ಯಮದ ಮೂಲಕ ಅಸಂಖ್ಯಾತ ಜನರಿಗೆ ಉದ್ಯೋಗ ನೀಡಿರುವ ರಿಲಯನ್ಸ್ ಇಂಡಸ್ಟ್ರೀಸ್ (Reliance Industries), ಸಮಾಜಸೇವೆಯಲ್ಲೂ (social service) ಸದಾ ಮುಂದಿದೆ. ಇದೀಗ ಕಲೆ ಮತ್ತು ಸಾಂಸ್ಕೃತಿಕ ಲೋಕಕ್ಕೂ (art and culture) ಕೊಡುಗೆ ನೀಡಲು ರಿಲಯನ್ಸ್ ಗ್ರೂಪ್ ಮುಂದಾಗಿದೆ. ಉದ್ಯಮಿ ಮುಕೇಶ್ ಅಂಬಾನಿಯವರ (Mukesh Ambani) ಪತ್ನಿ ನೀತಾ ಮುಕೇಶ್ ಅಂಬಾನಿ (Nita Mukesh Ambani) ಅವರ ದೂರದೃಷ್ಟಿಯಿಂದ ಮುಂಬೈನಲ್ಲಿ (Mumbai) ಬೃಹತ್ ಸಾಂಸ್ಕೃತಿಕ ಕಲಾ ಕೇಂದ್ರ ತಲೆ ಎತ್ತಿದೆ. ‘ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC)’ ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್ನಲ್ಲಿ (Jio World Centre) ನಿರ್ಮಾಣವಾಗಿದೆ. ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪ್ರದರ್ಶಿಸಲು ಮತ್ತು ಜಗತ್ತನ್ನು ಭಾರತಕ್ಕೆ ತರಲು ಈ ಕೇಂದ್ರ ತನ್ನ ಕೊಡುಗೆ ನೀಡಲಿದೆ.


ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್


ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್ ಈಗ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್‌ಗೆ (ಎನ್‌ಎಂಎಸಿಸಿ) ನೆಲೆಯಾಗಲಿದೆ, ಇದು ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪ್ರದರ್ಶಿಸಲು ಮತ್ತು ಗಮನ ಸೆಳೆಯಲು ಹೆಚ್ಚು ಬೇಡಿಕೆಯಿರುವ ರಂಗವಾಗಲಿದೆ.
ನೀತಾ ಅಂಬಾನಿಯವರ ಕನಸಿನ ಕೂಸು


ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆಯಾಗಿರುವ ನೀತಾ ಅಂಬಾನಿ ಅವರ ಕನಸಿನ ಕೂಸು ಈ ನೀತಾ ಅಂಬಾನಿ ಕಲ್ಚರಲ್ ಸೆಂಟರ್. ಮುಂಬೈನ ಮಧ್ಯಭಾಗದಲ್ಲಿರುವ ಇದು, ದೇಶದ ಹೆಗ್ಗುರುತಾಗಲಿದೆ. ಭಾರತದ ಅತ್ಯಂತ ಅತ್ಯಾಧುನಿಕ, ಅಪ್ರತಿಮ ಮತ್ತು ವಿಶ್ವ-ದರ್ಜೆಯ ಸಾಂಸ್ಕೃತಿಕ ಕೇಂದ್ರ ಇದಾಗಿದೆ. ಕಲೆ ಪ್ರದರ್ಶನ ಮತ್ತು ದೃಶ್ಯ ಕಲೆಗಳ ಕೇಂದ್ರವು ಭವ್ಯವಾದ ಚೊಚ್ಚಲ ಪ್ರದರ್ಶನಕ್ಕೆ ಸಿದ್ಧವಾಗಿದೆ.


ಇದನ್ನೂ ಓದಿ: Nita Mukesh Ambani Cultural Centre: ಭಾರತದ ಹೊಸ ಸಾಂಸ್ಕೃತಿಕ ತಾಣ, 'ನೀತಾ ಮುಕೇಶ್​ ಅಂಬಾನಿ ಸಾಂಸ್ಕೃತಿಕ ಕೇಂದ್ರ' ಓಪನಿಂಗ್!


ಕಲಾಕೇಂದ್ರದ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?


ಈ ಸಂದರ್ಭದಲ್ಲಿ ಮಾತನಾಡಿದ ನೀತಾ ಅಂಬಾನಿ, “ಈ ಸಾಂಸ್ಕೃತಿಕ ಕೇಂದ್ರವನ್ನು ಜೀವಂತಗೊಳಿಸುವುದು ಪವಿತ್ರ ಪ್ರಯಾಣವಾಗಿದೆ. ಸಿನಿಮಾ ಮತ್ತು ಸಂಗೀತ, ನೃತ್ಯ ಮತ್ತು ನಾಟಕ, ಸಾಹಿತ್ಯ ಮತ್ತು ಜಾನಪದ, ಕಲೆ ಮತ್ತು ಕರಕುಶಲ ಮತ್ತು ವಿಜ್ಞಾನ ಮತ್ತು ಆಧ್ಯಾತ್ಮಿಕತೆಯಲ್ಲಿ ನಮ್ಮ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು ಮತ್ತು ಆಚರಿಸಲು ನಾವು ಉತ್ಸುಕರಾಗಿದ್ದೇವೆ. ಇದು ನಾವು ಭಾರತದ ಅತ್ಯುತ್ತಮವಾದದ್ದನ್ನು ಜಗತ್ತಿಗೆ ಪ್ರದರ್ಶಿಸುವ ಮತ್ತು ವಿಶ್ವದ ಅತ್ಯುತ್ತಮವಾದದ್ದನ್ನು ಭಾರತಕ್ಕೆ ಸ್ವಾಗತಿಸುವ ಜಾಗವಾಗಿದೆ ಅಂತ ಶ್ಲಾಫಿಸಿದ್ದಾರೆ.


ಸಾಂಸ್ಕೃತಿಕ ಕೇಂದ್ರ ಹೇಗಿದೆ?


ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಬಗ್ಗೆ ಇದರ ರೂವಾರಿ ನೀತಾ ಮುಕೇಶ್ ಅಂಬಾನಿ ಅವರೇ ಮಾತನಾಡಿದ್ದಾರೆ. ಇದನ್ನು 'ಭಾರತದ ಅದ್ಭುತ ಪರಂಪರೆ, ಸಂಪ್ರದಾಯಗಳು ಮತ್ತು ಪರಂಪರೆಗೆ ಗೌರವ ನೀಡುವ ಪ್ರಯತ್ನ' ಎಂದು ಅವರು ಬಣ್ಣಿಸಿದ್ದಾರೆ. ಇದು ಕಲಾ ಪ್ರದರ್ಶಕರು ಮತ್ತು ಸಂದರ್ಶಕರಿಗೆ ನಿಜವಾದ ಅಂತರ್ಗತ ಕೇಂದ್ರ ಎಂದು ಕರೆದಿದ್ದಾರೆ. ಕನಸುಗಾರರು ಮತ್ತು ರಚನೆಕಾರರಿಗೆ ಇದು ಅತ್ಯುತ್ತಮ ಸ್ಥಾನವಾಗಲಿದ್ದು, ವಿಶ್ವ ದರ್ಜೆಯ ಮೂಲಸೌಕರ್ಯದೊಂದಿಗೆ ಕಲೆಗಳನ್ನು ಎಲ್ಲರೂ ಆಸ್ವಾದಿಸುವಂತೆ ಮಾಡುವುದೇ ನಮ್ಮ ಗುರಿ ಎಂದಿದ್ದಾರೆ.


ಇದನ್ನೂ ಓದಿ: Radhika Merchant: ರಾಧಿಕಾ ಮರ್ಚೆಂಟ್‌ಗೆ ಭರತನಾಟ್ಯದ ಮೇಲೆ ಆಸಕ್ತಿ ಬಂದಿದ್ದು ಹೇಗೆ?


ಇದು ಅತ್ಯದ್ಬುತ ಕಲಾಕೇಂದ್ರ


NMACC ಯು ಅಮೆರಿಕಾ ಅಥವಾ ಯೂರೋಪ್‌ನಂತಹ ಪ್ರದೇಶಗಳಲ್ಲಿ ಲಭ್ಯವಿರುವುದಕ್ಕಿಂತ ಉತ್ತಮವಾದ ವೇದಿಕೆಯಾಗಿದೆ. ಭಾರತೀಯ ಸ್ಥಳೀಯ ಕಲೆ, ಕಲಾವಿದರು, ಪ್ರದರ್ಶಕರು ಮತ್ತು ರಚನೆಕಾರರಿಗೆ ಭಾರತದಲ್ಲಿ ಅಂತರರಾಷ್ಟ್ರೀಯ ತಾಣವನ್ನು ರಚಿಸಲು ಈ ವೇದಿಕೆ ಸೂಕ್ತವಾಗಿದೆ. ಇದು ನೀತಾ ಅಂಬಾನಿಯವರ ಕನಸಿನ ಯೋಜನೆಯಾಗಿದೆ.

First published: