Rajkummar Rao: ಮದುವೆಯಲ್ಲಿ ತನ್ನ ಹಣೆಗೂ ಸಿಂಧೂರ ಇಡಿಸಿಕೊಂಡ ಬಾಲಿವುಡ್​ ನಟ, ವಿಡಿಯೋ ವೈರಲ್​!

Rajkummar Rao: ಮಂಟಪದಲ್ಲಿ ವರನಾಗಿ ನಿಂತ ರಾಜ್‍ಕುಮಾರ್ ರಾವ್, ತನ್ನೆಡೆಗೆ ವಧುವಿನ ರೂಪದಲ್ಲಿ ನಡೆದುಕೊಂಡು ಬರುತ್ತಿರುವ ಪತ್ರಲೇಖಾರನ್ನು ನೋಡುವ ದೃಶ್ಯದಿಂದ ಈ ವಿಡಿಯೋ(Video) ಆರಂಭವಾಗುತ್ತದೆ. ರಾಜ್‍ಕುಮಾರ್ ಅವರು ಆಕೆಯನ್ನು ಶಿಳ್ಳೆಯ ಮೂಲಕ ಸ್ವಾಗತಿಸಿ, ಕೈ ಸನ್ನೆಗಳ ಮೂಲಕ ‘ಐ ಲವ್ ಯೂ’(I love you) ಹೇಳುತ್ತಾರೆ.

ರಾಜ್‍ಕುಮಾರ್ ರಾವ್ ಹಾಗೂ ಪತ್ರಲೇಖಾ

ರಾಜ್‍ಕುಮಾರ್ ರಾವ್ ಹಾಗೂ ಪತ್ರಲೇಖಾ

  • Share this:

ಬಾಲಿವುಡ್ ನಟ ರಾಜ್‍ಕುಮಾರ್ ರಾವ್(Rajkummar Rao) ಮತ್ತು ಪತ್ರಲೇಖಾ(Patralekhaa) ತಮ್ಮ ಮದುವೆಯ ವಿಡಿಯೋ(Marriage Video) ಬಿಡುಗಡೆ ಮಾಡಿದ್ದು, ಅದರಲ್ಲಿ ಪ್ರೀತಿಯ ಭಾವನೆಗಳ ಮಹಾಪೂರವನ್ನು ಕಾಣಬಹುದು. ಮಂಟಪದಲ್ಲಿ ವರನಾಗಿ ನಿಂತ ರಾಜ್‍ಕುಮಾರ್ ರಾವ್, ತನ್ನೆಡೆಗೆ ವಧುವಿನ ರೂಪದಲ್ಲಿ ನಡೆದುಕೊಂಡು ಬರುತ್ತಿರುವ ಪತ್ರಲೇಖಾರನ್ನು ನೋಡುವ ದೃಶ್ಯದಿಂದ ಈ ವಿಡಿಯೋ(Video) ಆರಂಭವಾಗುತ್ತದೆ. ರಾಜ್‍ಕುಮಾರ್ ಅವರು ಆಕೆಯನ್ನು ಶಿಳ್ಳೆಯ ಮೂಲಕ ಸ್ವಾಗತಿಸಿ, ಕೈ ಸನ್ನೆಗಳ ಮೂಲಕ ‘ಐ ಲವ್ ಯೂ’(I love you) ಹೇಳುತ್ತಾರೆ. ಅವರ ಪಕ್ಕ ನಿಂತ ಬಳಿಕ “ರಾಜ್ , ಕೇವಲ 11 ವರ್ಷಗಳಷ್ಟೇ ಆಗಿವೆ , ಆದರೆ ನಾನು ಜನ್ಮದಿಂದಲೇ ಬಲ್ಲೆ ಎಂದೆನಿಸುತ್ತದೆ ಮತ್ತು ಈ ಜನ್ಮದಿಂದ ಮಾತ್ರವಲ್ಲ. ಹಲವು ಜನ್ಮಗಳಿಂದ ಎಂಬುವುದು ನನಗೆ ಖಾತರಿ ಇದೆ” ಎಂದು ಹೇಳುತ್ತಾರೆ ಪತ್ರಲೇಖಾ.


ರಾಜ್​ಕುಮಾರ್​ ರಾವ್​ ಮದುವೆಯ ವಿಡಿಯೋ ವೈರಲ್​


ಈ ಸಮಾರಂಭದ ಮಾಂಟೇಜನ್ನು ಪ್ಲೇ ಮಾಡಲಾಗುತ್ತದೆ, ಆಗ ರಾಜ್‍ಕುಮಾರ್ ಪತ್ರಲೇಖಾ ಜೊತೆಗಿನ ಸಂಬಂಧದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಾರೆ : “ಪ್ರಾಮಾಣಿಕವಾಗಿ, 10-11 ವರ್ಷಗಳಾಯಿತು, ಆದರೆ ನಾವು ಈಗಷ್ಟೇ ಡೇಟಿಂಗ್ ಮಾಡಲು ಆರಂಭಿಸಿದ್ದೇವೆ ಎಂದು ಅನಿಸುತ್ತದೆ. ನಾವು ಪರಸ್ಪರರ ಸಾಂಗತ್ಯವನ್ನು ಬಹಳ ಇಷ್ಟಪಡುತ್ತೇವೆ, ಇದನ್ನು ಮಾಡಿಯೇ ಬಿಡೋಣ ಎಂದು ನಾವು ಆಲೋಚಿಸಿದೆವು. ನಾವಿಬ್ಬರು ಪತಿ ಪತ್ನಿಯರಾಗಿರೋಣ” ಎನ್ನುತ್ತಾರೆ ರಾಜ್‍ಕುಮಾರ್. ಕೂಡಲೇ , ವರವಧು ಒಬ್ಬರಿಗೊಬ್ಬರು ಮಾಲೆ ಹಾಕುವ ದೃಶ್ಯವನ್ನು ತೋರಿಸಲಾಗುತ್ತದೆ.







‘ನನಗೆ ಪತ್ನಿಯಾಗಿದ್ದಕ್ಕೆ ಧನ್ಯವಾದಗಳು’

ಸಪ್ತಪದಿ ತುಳಿಯುವಾಗ ರಾಜ್‍ಕುಮಾರ್ ಕುಣಿಯುತ್ತಿರುತ್ತಾರೆ, ವಿಧಿಗಳು ಮುಗಿದ ಬಳಿಕ ಅವರು ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಾರೆ. “ನಾವು ಇದನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಲೇ ಇದ್ದೇವೆ, ಆದರೆ ನಾವಿಬ್ಬರು ಆತ್ಮಬಂಧುಗಳು ಮತ್ತು ನಾನು ಅದನ್ನು ನಿಜಕ್ಕೂ, ನಿಜಕ್ಕೂ ನಂಬುತ್ತೇನೆ. ನನ್ನ ಪತ್ನಿಯಾಗಿದ್ದಕ್ಕೆ ಧನ್ಯವಾದಗಳು” ಎಂದು ಮದುವೆಯಲ್ಲಿ ರಾಜ್‍ಕುಮಾರ್ ಪತ್ರಲೇಖಾಗೆ ಹೇಳುತ್ತಾರೆ. ಪತ್ರಲೇಖಾ ಹಣೆಗೆ ಸಿಂಧೂರ ಇಡುವ ರಾಜ್‍ಕುಮಾರ್, ತನ್ನ ಹಣೆಗೂ ಪತ್ರಲೇಖಾರಿಂದ ಸಿಂಧೂರ ಹಾಕಿಸಿಕೊಳ್ಳುವ ದೃಶ್ಯದ ಮೂಲಕ ಈ ವಿಡಿಯೋ ಮುಕ್ತಾಯವಾಗುತ್ತದೆ.

ಇದನ್ನು ಓದಿ : 11 ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಿದ ಜೋಡಿ: ಇಲ್ಲಿದೆ ಫೋಟೋ ಅಲ್ಬಂ

ಈ ವಿಡಿಯೋವನ್ನು ರಾಜ್‍ಕುಮಾರ್ ‘ನಾವು’ ಎಂಬ ಅಡಿಬರಹದ ಜೊತೆಗೆ ಒಂದು ಹೃದಯದ ಇಮೋಜಿ ಹಾಕುವ ಮೂಲಕ ಹಂಚಿಕೊಂಡಿದ್ದರೆ, ಪತ್ರಲೇಖಾ, “ನಮ್ಮ ಜೀವನದ ಅತ್ಯಂತ ಸುಂದರವಾದ ದಿನದ ನೋಟವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ” ಎಂಬ ಅಡಿಬರಹದೊಂದಿಗೆ ಹಂಚಿಕೊಂಡಿದ್ದಾರೆ.ಈ ವಿಡಿಯೋ ಹಲವರಿಂದ ಮೆಚ್ಚುಗೆ ಪಡೆದಿದೆ. “ಅತ್ಯಂತ ಸುಂದರ” ಎಂದು ಕೃತಿ ಸನನ್ ಪ್ರತಿಕ್ರಿಯಿಸಿದ್ದರೆ, “ಆಹಾ, ಬಹಳ ಸುಂದರ” ಎಂದು ಭೂಮಿ ಪಡ್ನೇಕರ್ ಬರೆದುಕೊಂಡಿದ್ದಾರೆ. ಈ ಸಮಾರಂಭದಲ್ಲಿ ಅತಿಥಿಯಾಗಿಯೂ ಭಾಗವಹಿಸಿದ್ದ ಫರಾ ಖಾನ್, “ಮತ್ತೆ ಮತ್ತೆ ನನ್ನ ಕಣ್ತುಂಬಿ ಬಂದಿದೆ” ಎಂದು ಬರೆದಿದ್ದಾರೆ.

ಇದನ್ನು ಓದಿ : ಕಿರಿಕ್ ಬ್ಯೂಟಿ ಹೆಸರಲ್ಲಿ 'ದಿ ರಶ್ಮಿಕಾ ಮೀಲ್' ಪರಿಚಯಿಸಿದ ಮ್ಯಾಕ್ ಡೊನಾಲ್ಡ್ಸ್

ಅಭಿಮಾನಿಗಳ ಮನಗೆದ್ದ ಮದುವೆ ವಿಡಿಯೋ

ಅಭಿಮಾನಿಗಳು ಕೂಡ ಈ ವಿಡಿಯೋಗೆ ಪ್ರೀತಿಯ ಸುರಿಮಳೆ ಸುರಿಸಿದ್ದಾರೆ. “ಬಹಳ ಪ್ರೀತಿಯ ಆನಂದಭಾಷ್ಪ” ಎಂದು ಒಬ್ಬ ಅಭಿಮಾನಿ ಪ್ರತಿಕ್ರಿಯಿಸಿದ್ದರೆ, “ ಒಬ್ಬ ಸಿನಿಮಾದ ವ್ಯಕ್ತಿ, ಹೆಚ್ಚು ಸಿನಿಮೀಯ ಮದುವೆ ಹೊಂದಲು ಸಾಧ್ಯವಾಗಲಿಲ್ಲ, ಅಭಿನಂದನೆಗಳು” ಎಂದು ಇನ್ನೊಬ್ಬರು ಪತ್ರಿಕ್ರಿಯೆ ನೀಡಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮದುವೆಯ ಚಿತ್ರೀಕರಣ ನಡೆಸಿದ್ದ ದಿ ವೆಡ್ಡಿಂಗ್ ಫಿಲ್ಮರ್ ತಂಡವೇ ಈ ಮದುವೆಯ ಚಿತ್ರೀಕರಣ ಮಾಡಿದೆ. ನವೆಂಬರ್ 15 ರಂದು ಪತ್ರಲೇಖಾ ಮತ್ತು ರಾಜ್‍ಕುಮಾರ್ ಚಂಡೀಘಡದಲ್ಲಿ ಮದುವೆಯಾಗಿದ್ದಾರೆ.
Published by:Vasudeva M
First published: