ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಇತ್ತೀಚೆಗೆ ಪ್ರಾರಂಭಗೊಂಡ ರಾಜಿ (Raaji) ಧಾರಾವಾಹಿ ಸೇರ್ಪಡೆಗೊಂಡಿದೆ. ಪ್ರತಿದಿನ ಹೊಸ ಹೊಸ ತಿರುವುಗಳ ಮೂಲಕ ಧಾರಾವಾಹಿಯು ಪ್ರೇಕ್ಷಕರನ್ನು ಮನರಂಜಿಸುತ್ತಿದೆ. ಕರ್ಣ (Karna) ಮತ್ತು ರಾಜೇಶ್ವರಿಯ (Rajeshwari) ಪ್ರೀತಿ ಮತ್ತು ಸ್ನೇಹದ ಕುರಿತಾದ ಧಾರಾವಾಹಿ ಇದಾಗಿದೆ. ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಧಾರಾವಾಹಿಯಲ್ಲಿ ನಾಯಕನ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಭಿನ್ನ ಕಥಾವಸ್ತುವನ್ನಿಟ್ಟುಕೊಂಡು ಜೊತೆಗೆ ಹಳ್ಳಿಯ ಸೊಗಡನ್ನು ಇಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಜನಪ್ರಿಯಗೊಂಡ ವಿಜಯ್ ಸೂರ್ಯ (Vijay Suriya) ಇದೀಗ ಮತ್ತೆ ಕಿರುತೆರೆಗೆ ರಾಜಿ ಧಾರಾವಾಹಿಗೆ ಎಂಟ್ರಿಕೊಟ್ಟಿದ್ದಾರೆ.
ಸಣ್ಣದೊಂದು ಗ್ಯಾಪ್ ಬಳಿಕ ಮತ್ತೆ ಕಿರುತೆರೆಗೆ ಸ್ಟಾರ್ ಸುವರ್ಣ ಮೂಲಕವೇ ಎಂಟ್ರಿ
ಅಗ್ನಿಸಾಕ್ಷಿ ಧಾರಾವಾಹಿ ಬಳಿಕ ನಟ ವಿಜಯ್ ಸೂರ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದ್ದ ಪ್ರೇಮಲೋಕ ಧಾರಾವಾಹಿಯಲ್ಲಿ ನಟಿಸಿದ್ದರು. ಇದೀಗ ಸಣ್ಣದೊಂದು ಗ್ಯಾಪ್ ಬಳಿಕ ಮತ್ತೆ ಕಿರುತೆರೆಗೆ ಸ್ಟಾರ್ ಸುವರ್ಣ ಮೂಲಕವೇ ಎಂಟ್ರಿ ಆಗುತ್ತಿದ್ದಾರೆ.
ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿಯಾದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಇವರು ಗೆಸ್ಟ್ ರೋಲ್ ನಲ್ಲಿ ಎಂಟ್ರಿ ಕೊಟ್ಟಿದ್ದರು. ಅನು ಸಿರಿಮನೆ ಮದುವೆಯ ನಿಶ್ಚಯವಾದ ಹುಡುಗನ ಪಾತ್ರದಲ್ಲಿ ಬಂದು ಹೋಗಿದ್ದರು. ರಾಜಿ ಧಾರಾವಾಹಿಯಲ್ಲಿ ಅವರ ಪಾತ್ರ ಯಾವುದೆಂದು ಇನ್ನು ತಿಳಿದಿಲ್ಲ.
ಇದನ್ನೂ ಓದಿ: Actress Shalini: ಪಾಪ ಪಾಂಡು ಶಾಲಿನಿಯ ಡಿಸೈನ್ ಡಿಸೈನ್ ಬ್ಲೌಸ್ಗಳು! ಶಾಲಿವುಡ್ನಲ್ಲಿ ಏನೆಲ್ಲಾ ಇದೆ ಗೊತ್ತಾ?
ರಾಜಿಗೆ ಕರ್ಣನ ಬಗ್ಗೆ ಸ್ನೇಹಕ್ಕೂ ಮಿಗಿಲಾದ ಭಾವ
ಭಾಸ್ಕರ್ ಶಾನುಭೋಗರ ಕಿರಿಯ ಮಗ ಕರ್ಣ ಲಂಡನ್ನಿಗೆ ವಿದ್ಯಾಭ್ಯಾಸಕ್ಕಾಗಿ ಹೋಗಿರುತ್ತಾನೆ. ಈ ಕರ್ಣ ಮತ್ತು ರಾಜಿ ಬಾಲ್ಯದ ಗೆಳೆಯರು, ಕರ್ಣನಿಗೆ ಇದು ಸ್ನೇಹವಾಗಿದ್ದರೂ ರಾಜಿಗೆ ಕರ್ಣನ ಬಗ್ಗೆ ಸ್ನೇಹಕ್ಕೂ ಮಿಗಿಲಾದ ಭಾವವಿರುತ್ತದೆ.
ಶಾಂಭವಿಯ ಕುತಂತ್ರದಿಂದ ರಾಜಿಗೆ ಒಬ್ಬ ಬುದ್ಧಿಮಾಂದ್ಯ ಹುಡುಗನೊಂದಿಗೆ ಮದುವೆ ಯಾಗುವ ಸಾಧ್ಯತೆ ಇತ್ತು. ಆದರೆ ಕರ್ಣ ಅದನ್ನು ತಪ್ಪಿಸಿದ್ದಾನೆ. ಅದೇ ರೀತಿ ರಾಜಿಗೆ ಒಳ್ಳೆಯ ಹುಡುಗನನ್ನು ತಂದು ಮದುವೆ ಮಾಡಿಸುವ ಜವಾಬ್ದಾರಿಯನ್ನು ಕರ್ಣ ತೆಗೆದುಕೊಂಡಿದ್ದಾನೆ. ಕರ್ಣನ ಮೇಲೆ ರಾಜಿಗೆ ಪ್ರೀತಿಯ ಭಾವನೆ ಇದ್ದರು ಅವನ ಸಂತೋಷಕ್ಕೆ ಇವಳು ಅಡ್ಡಿ ಬಂದವಳಲ್ಲ. ಕರ್ಣನ ಕುಷಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಲು ತಯಾರಿದ್ದಾಳೆ ರಾಜಿ.
ಇದೀಗ ವಿಜಯ್ ಸೂರ್ಯ ಕರ್ಣ ಕರೆದುಕೊಂಡು ಬಂದ ರಾಜಿಯ ಮದುವೆಯ ಗಂಡು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Jothe Jotheyali: ಶಾನುಭೋಗರಿಗೆ ಖಡಕ್ ಆಗಿ ಎಚ್ಚರಿಕೆ ಕೊಟ್ಟ ಜೇಂಡೆ! ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮತ್ತೆ ಟ್ವಿಸ್ಟ್
ಪ್ರೀತಿಯಿಂದ ಸಾಕುತ್ತಿರುವ ಮನೆಗೆ ರಾಜಿ ಸದಾ ಚಿರಋಣಿ
ತನಗೆ ಕೆಲಸಕೊಟ್ಟು ಪ್ರೀತಿಯಿಂದ ಸಾಕುತ್ತಿರುವ ಮನೆಗೆ ರಾಜಿ ಸದಾ ಚಿರಋಣಿ ಆಗಿದ್ದಾಳೆ. ಮನೆಯ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವ ರಾಜಿಗೆ ತನಗೆ ಕೆಡುಕು ಬಯಸುವವರ ಮೇಲೆ ಕೂಡ ಅತಿಯಾದ ಗೌರವ. ಭಾಸ್ಕರ್ ಶಾನುಭೋಗರು ರಾಜಿಯನ್ನು ತಮ್ಮ ಮನೆ ಮಗಳಂತೆ ಕಂಡರೂ, ಸರಸ್ವತಿ ಮತ್ತು ಶಾನುಭೋಗರ ಕಿರಿ ಮಗ ಕರ್ಣನನ್ನು ಹೊರತುಪಡಿಸಿ ಅವರ ಕುಟುಂಬದವರಿಗೆ ರಾಜಿ ಮನೆಕೆಲಸದಾಕೆ ಮಾತ್ರ. ತಂದೆ ತಾಯಿ ಇಲ್ಲದ ಮುಗ್ಧ ಹುಡುಗಿ ರಾಜಿಯನ್ನು ಭಾಸ್ಕರ್ ಮತ್ತು ಸರಸ್ವತಿ ಶಾನುಭೋಗ ದಂಪತಿ ತಮ್ಮ ಮನೆಯಲ್ಲೇ ಬೆಳಸಿರುತ್ತಾರೆ.
ಭಾಸ್ಕರ್ ಶಾನುಭೋಗರ ಮಗಳು ರೇಣು ಆಗಾಗ ತಂದೆಯ ಆಸ್ತಿಯಲ್ಲಿ ತನ್ನ ಪಾಲಿನ ಬಗ್ಗೆ ತಕರಾರು ಮಾಡುತ್ತಿರುತ್ತಾಳೆ. ರೇಣು ಪತಿ ಮನೋಜ್ ಆರ್ಥಿಕವಾಗಿ ಶ್ರೀಮಂತನಲ್ಲದಿದ್ದರೂ ಒಳ್ಳೆಯ ಮನಸಿನವನಾಗಿರುತ್ತಾನೆ.ಸಾನ್ವಿ, ವಿರಾಟ್ ಮತ್ತು ಲಚ್ಚಜ್ಜಿಯ ಪಾತ್ರಗಳು, ʻರಾಜಿ' ಧಾರಾವಾಹಿಯ ಕತೆಯ ತಿರುವಿಗೆ ಕಾರಣವಾಗುತ್ತವೆ.
ರಾಜಿ ಪಾತ್ರದಲ್ಲಿ ಸೌಂದರ್ಯ ಎನ್ನುವ ಹೊಸ ಪ್ರತಿಭೆ ತೆರೆಮೇಲೆ ಬಂದಿದ್ದಾರೆ. ಕರ್ಣನ ಪಾತ್ರದಲ್ಲಿ ಈಗಾಗಲೇ ಧಾರಾವಾಹಿಗಳಲ್ಲಿ ಸದ್ದು ಮಾಡಿರುವ ಕಾರ್ತಿಕ್ ನಟನೆ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ