HOME » NEWS » Entertainment » IN KANNADA FILM INDUSTRY ONLY HALF OF THE THEATER WILL OPEN FROM FRIDAY HTV RMD

ಥಿಯೇಟರ್ ತೆರೆಯಲು ಮೂಡದ ಒಮ್ಮತ; ರಾಜ್ಯಾದ್ಯಂತ ಅರ್ಧದಷ್ಟು ಚಿತ್ರಮಂದಿರಗಳು ಮಾತ್ರ ಓಪನ್

ಕೆಲ ಥಿಯೇಟರ್​​ಗಳಲ್ಲಿ ಸ್ಯಾನಿಟೈಸ್ ಕೆಲಸ, ಕ್ಲೀನಿಂಗ್ ಕೆಲಸ ಆಗಿಲ್ಲ. ಯುಎಫ್ಓ, ಕ್ಯೂಬ್​ನವರು ಇನ್ನೂ ಕೆಲ ಸಿಂಗಲ್ ಥಿಯೇಟರ್ ಮಾಲೀಕರನ್ನು ಸಂಪರ್ಕ ಮಾಡಿಲ್ಲ. ಹೀಗಾಗಿ, ಅಕ್ಟೋಬರ್ 23ರವರೆಗೂ ಎಲ್ಲಾ ಸಿಂಗಲ್ ಸ್ಕ್ರೀನ್ ತೆರೆಯುವುದು ಕಷ್ಟ ಎನ್ನಲಾಗುತ್ತಿದೆ.

news18-kannada
Updated:October 14, 2020, 11:43 AM IST
ಥಿಯೇಟರ್ ತೆರೆಯಲು ಮೂಡದ ಒಮ್ಮತ; ರಾಜ್ಯಾದ್ಯಂತ ಅರ್ಧದಷ್ಟು ಚಿತ್ರಮಂದಿರಗಳು ಮಾತ್ರ ಓಪನ್
theater
  • Share this:
ಭಾರತದಲ್ಲಿ ಕೊರೋನಾ ವೈರಸ್​ ನಿಯಂತ್ರಣಕ್ಕೆ ಮಾರ್ಚ್​ ತಿಂಗಳಲ್ಲಿ ಲಾಕ್​​ಡೌನ್​ ಘೋಷಣೆ ಮಾಡಲಾಗಿತ್ತು. ಇದು ಎಲ್ಲ ಕ್ಷೇತ್ರಗಳ ಮೇಲೆ ಭಾರೀ ಪರಿಣಾಮ ಬೀರಿತ್ತು. ಅದರಲ್ಲೂ ಮನರಂಜನಾ ಕ್ಷೇತ್ರಕ್ಕೆ ಭಾರೀ ಹೊಡೆತ ಉಂಟಾಗಿತ್ತು. ಕಳೆದ ಏಳು ತಿಂಗಳಿಂದ ಚಿತ್ರಮಂದಿರಗಳು ತೆರೆದಿಲ್ಲ. ಕೊನೆಗೂ ಅನ್​ಲಾಕ್​ 5.0ನಲ್ಲಿ ಚಿತ್ರ ಮಂದಿರ ರೀ ಓಪನ್​ಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.  ನಾಳೆಯಿಂದ ಚಿತ್ರಮಂದಿರ ಓಪನ್​ ಆದರೂ ಶುಕ್ರವಾರದಿಂದ ಚಿತ್ರಪ್ರದರ್ಶನ ಶುರು ಆಗಲಿದೆ. ಆದರೆ, ಥಿಯೇಟರ್ ತೆರೆಯಲು ಒಮ್ಮತ ಮೂಡದ ಕಾರಣ ರಾಜ್ಯಾದ್ಯಾಂತ ಅರ್ಧದಷ್ಟು ಚಿತ್ರಮಂದಿರಗಳು ಮಾತ್ರ ತೆರೆಯಲಿವೆ.

ನಾಳೆ ಬೆಂಗಳೂರು, ಮೈಸೂರು, ಶಿವಮೊಗ್ಗ, ರಾಮನಗರ, ಮಳವಳ್ಳಿ ಸೇರಿದಂತೆ ರಾಜ್ಯಾದ್ಯಂತ ಇರೋ ಪ್ರಮುಖ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ತೆರೆಯುತ್ತಿವೆ. ಆದರೆ ಕೆಲ ಚಿತ್ರ ಮಂದಿರದ ಮಾಲೀಕರು ಥಿಯೇಟರ್ ತೆರೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಅರ್ಧದಷ್ಟು ಚಿತ್ರಮಂದಿರಗಳು ಮಾತ್ರ ಓಪನ್​ ಆಗುತ್ತಿವೆ.

ಕೆಲ ಥಿಯೇಟರ್​​ಗಳಲ್ಲಿ ಸ್ಯಾನಿಟೈಸ್ ಕೆಲಸ, ಕ್ಲೀನಿಂಗ್ ಕೆಲಸ ಆಗಿಲ್ಲ. ಯುಎಫ್ಓ, ಕ್ಯೂಬ್​ನವರು ಇನ್ನೂ ಕೆಲ ಸಿಂಗಲ್ ಥಿಯೇಟರ್ ಮಾಲೀಕರನ್ನು ಸಂಪರ್ಕ ಮಾಡಿಲ್ಲ. ಸಿನಿಮಾ ಮರು ಬಿಡುಗಡೆ ಮಾಡುತ್ತಿರೋ ನಿರ್ಮಾಪಕರು ಕೂಡ ಕೆಲ ಪ್ರದರ್ಶಕರನ್ನ ಕಾಂಟ್ಯಾಕ್ಟ್​ ಮಾಡಿಲ್ಲ. ಹೀಗಾಗಿ, ಅಕ್ಟೋಬರ್ 23ರವರೆಗೂ ಎಲ್ಲಾ ಸಿಂಗಲ್ ಸ್ಕ್ರೀನ್ ತೆರೆಯುವುದು ಕಷ್ಟ ಎನ್ನಲಾಗುತ್ತಿದೆ.

ಚಿರಂಜೀವಿ ಸರ್ಜಾ ನಟನೆಯ ನಟಿಸಿರುವ ಶಿವಾರ್ಜುನ ಸಿನಿಮಾ ಅಕ್ಟೋಬರ್ 16ಕ್ಕೆ ಬಿಡುಗಡೆ ಆಗುತ್ತಿದೆ. ಈಗಾಗಲೇ ಮಲ್ಟಿಪ್ಲೆಕ್ಸ್​​ಗಳು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿವೆ. ಹೀಗಾಗಿ ಎಲ್ಲಾ ಮಲ್ಟಿಪ್ಲೆಕ್ಸ್​​​ಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. 150 ಸಿಂಗಲ್ ಥಿಯೇಟರ್​​ಗಳಲ್ಲಿ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕೆಲ ಚಿತ್ರಮಂದಿರಗಳು ಇನ್ನೂ ಪ್ರದರ್ಶನಕ್ಕೆ ಸಿದ್ಧರಿಲ್ಲದ ಕಾರಣ 50 ರಿಂದ 60 ಚಿತ್ರಮಂದಿರಗಳಲ್ಲಿ ಮಾತ್ರ ಶಿವಾರ್ಜುನ ಬಿಡುಗಡೆ ಆಗುತ್ತಿದೆ.
Youtube Video

ಲಾಕ್​ಡೌನ್​ಗೂ ಮೊದಲು ದೊಡ್ಡ ಮಟ್ಟದ ಹವಾ ಸೃಷ್ಟಿ ಮಾಡಿದ್ದ ಲವ್​ ಮಾಕ್ಟೇಲ್​ ಸಿನಿಮಾ ಕೂಡ ರಿರೀಲಿಸ್​ ಆಗುತ್ತಿದೆ. 5 ಅಡಿ 7 ಅಂಗುಲ, ದಿಯಾ, ಕಾಣದಂತೆ ಮಾಯವಾದನು ಸಿನಿಮಾಗಳೂ ಕೂಡ ಮತ್ತೆ ಥಿಯೇಟರ್​ ಮೆಟ್ಟಿಲು ಹತ್ತುತ್ತಿವೆ. ಈ ಎಲ್ಲ ಚಿತ್ರಗಳಿಗೂ ಇದೇ ಪರಿಸ್ಥಿತಿ ಬಂದೊದಗಿದೆ.
Published by: Rajesh Duggumane
First published: October 14, 2020, 11:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories