ಸೇನೆಯ ಬಗ್ಗೆ ಸಿನಿಮಾ ಮಾಡುವಾಗ ಎಚ್ಚರ: ಓಟಿಟಿ ರಿಲೀಸ್​ಗೂ ಮೂಗುದಾರ ಹಾಕಿದ ರಕ್ಷಣಾ ಸಚಿವಾಲಯ

ಸೇನೆ ಕುರಿತ ಅಥವಾ ಸೈನಿಕರ ಬಗೆಗಿನ ಸಿನಿಮಾ, ವೆಬ್​ ಸರಣಿ ಅಥವಾ ಸಾಕ್ಷ್ಯಚಿತ್ರಗಳನ್ನು ಮಾಡುವ ಮೊದಲು ರಕ್ಷಣಾ ಸಚಿವಾಲಯದ ಅನುಮತಿ ಪಡೆಯಬೇಕೆಂದು ಸಲಹೆ ನೀಡಿದೆ.

news18-kannada
Updated:July 31, 2020, 11:14 PM IST
ಸೇನೆಯ ಬಗ್ಗೆ ಸಿನಿಮಾ ಮಾಡುವಾಗ ಎಚ್ಚರ: ಓಟಿಟಿ ರಿಲೀಸ್​ಗೂ ಮೂಗುದಾರ ಹಾಕಿದ ರಕ್ಷಣಾ ಸಚಿವಾಲಯ
ಸಾಂದರ್ಭಿಕ ಚಿತ್ರ
  • Share this:
ಇತ್ತೀಚಿನ ದಿನಗಳಲ್ಲಿ ಸೇನೆ ಕುರಿತ ಸಿನಿಮಾಗಳು ಹಾಗೂ ವೆಬ್​ ಸರಣಿಗಳು ಹೆಚ್ಚಾಗಿ ನಿರ್ಮಾಣವಾಗುತ್ತಿವೆ. ಕೆಲವು ಸೈನಿಕರ ಹಾಗೂ ಭಾರತೀಯ ಸೇನೆಯ ಸಾಹಸದ ಕುರಿತ ಕಥೆ ಹೇಳಿದರೆ, ಇನ್ನೂ ಕೆಲವು ಇಲ್ಲದ ವಿವಾದಗಳನ್ನು ಕೆದಕುತ್ತಿವೆ. ಕ್ರಿಯೇಟಿವ್ ಕಂಟೆಂಟ್ ಹೆಸರಲ್ಲಿ ಸೇನೆಯ ತೇಜೋವಧೆ ಮಾಡುವಂತಹ ವೆಬ್​ ಸರಣಿಗಳೂ ಇವೆ.

ಕೆಲ ದಿನಗಳ ಹಿಂದಷ್ಟೆ ಓಟಿಟಿ ಮೂಲಕ ಸೇನೆಯ ಹಿನ್ನೆಲೆಯಲ್ಲಿ ನಿರ್ಮಾಣವಾಗಿರುವ ವೆಬ್​ ಸರಣಿಯೊಂದು ಲಾಂಚ್ ಆಗಿತ್ತು. ರಿಲೀಸ್ ಆದ ಕೆಲವೇ ದಿನಗಳಲ್ಲಿ ಭಾರತೀಯ ಸೇನೆ ಹಾಗೂ ಸೈನಿಕರ ಬಗ್ಗೆ ಕೆಟ್ಟದಾಗಿ ಚಿತ್ರೀಕರಿಸಿರುವ ಕುರಿತು ಹಲವಾರು ದೂರುಗಳು ಬರಲಾರಂಭಿಸಿದವು.

In future any movie to be made on the subject of military or defence needs consultation or approval from ministry ae
ಸಾಂದರ್ಭಿಕ ಚಿತ್ರ


ಸಾಮಾಜಿಕ ಜಾಲತಾಣದಲ್ಲಿ ಈ ವೆಬ್​ ಸರಣಿ, ಅದರ ನಟರು, ನಿರ್ದೇಶಕ, ನಿರ್ಮಾಪಕರು ಹಾಗೂ ತಂಡದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ರಕ್ಷಣಾ ಸಚಿವಾಲಯ ಎಚ್ಚೆತ್ತುಕೊಂಡಿದೆ. ಸೇನೆ ಕುರಿತ ಅಥವಾ ಸೈನಿಕರ ಬಗೆಗಿನ ಸಿನಿಮಾ, ವೆಬ್​ ಸರಣಿ ಅಥವಾ ಸಾಕ್ಷ್ಯಚಿತ್ರಗಳನ್ನು ಮಾಡುವ ಮೊದಲು ರಕ್ಷಣಾ ಸಚಿವಾಲಯದ ಅನುಮತಿ ಪಡೆಯಬೇಕೆಂದು ಸಲಹೆ ನೀಡಿದೆ.

ಈ ಕುರಿತು ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಸುದರ್ಶನ್ ಕುಮಾರ್, ಸೆಂಟರ್ಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಫ್ಸಿ)  ಪ್ರಾದೇಶಿಕ ಅಧಿಕಾರಿ ಕಮರ್ಕರ್ ತುಷಾರ್ ಅವರಿಗೆ ಪತ್ರ ಬರೆದಿದ್ದಾರೆ. ಕೆಲ ನಿರ್ಮಾಣ ಸಂಸ್ಥೆಗಳು ಸೇನಾ ಹಿನ್ನೆಲೆಯ ಸಿನಿಮಾಗಳನ್ನು ಮಾಡಿದ್ದು, ಅದರಲ್ಲಿ ಸೈನಿಕರು ಹಾಗೂ ಸೇನೆಯನ್ನು ಕೀಳಾಗಿ ಚಿತ್ರೀಕರಿಸಿರುವುದು ರಕ್ಷಣಾ ಸಚಿವಾಲಯದ ಗಮನಕ್ಕೆ ಬಂದಿದೆ. ಹೀಗಾಗಿಯೇ ಇನ್ನುಮುಂದೆ ಪ್ರೊಡಕ್ಷನ್ ಹೌಸ್​ಗಳು ಆರ್ಮಿ ಥೀಮ್​ನಲ್ಲಿ ಸಿನಿಮಾ ಅಥವಾ ಡಾಕ್ಯುಮೆಂಟರಿಗಳನ್ನು ಪ್ರಸಾರ ಮಾಡುವ ಮುನ್ನ ರಕ್ಷಣಾ ಸಚಿವಾಲಯದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವಂತೆ ಸಲಹೆ ನೀಡಲಾಗಿದೆ.

ಇದನ್ನೂ ಓದಿ: ಸುಶಾಂತ್ ಸಿಂಗ್​ ಸಾವಿನ ಪ್ರಕರಣ: ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ

ಹಾಗೆಯೇ, ಸೇನೆಯ ತೇಜೋವಧೆ ಮಾಡುವ ಸೈನಿಕರ  ಭಾವನೆಗಳಿಗೆ ಧಕ್ಕೆ ತರುವ ಸನ್ನಿವೇಶಗಳನ್ನು ಚಿತ್ರೀಕರಿಸದಿರಲು ರಕ್ಷಣಾ ಸಚಿವಾಲಯ ಸಲಹೆ ನೀಡಿದೆ. ನ್ಯೂಸ್ 18 ಕನ್ನಡಕ್ಕೆ ಆ ಪತ್ರ ದೊರಕಿದ್ದು, ಭಾರತೀಯ ಸೇನೆ, ಪತ್ರಿಕಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಗಳಿಗೂ ಈ ಕುರಿತು ಮಾಹಿತಿ ನೀಡಲಾಗಿದೆ. ಇನ್ನು ಭಾರತ ಸರ್ಕಾರ ಇದೇ ಮಾರ್ಚ್​ನಲ್ಲಿಯೇ ಸುಮಾರು 100 ಪ್ರಮುಖ ಓಟಿಟಿ ಹಾಗೂ ಡಿಜಿಟಲ್ ವೇದಿಕೆಗಳಿಗೆ ಡಿಜಿಟಲ್ ಕಂಟೆಂಟ್ ಕಂಪ್ಲೇಂಟ್ ಕೌನ್ಸಿಲ್ ನಿಯಮಗಳನ್ನು ಪಾಲಿಸಲು 100 ದಿನಗಳ ಕಾಲಾವಕಾಶ ನೀಡಿತ್ತು. ಜೂನ್ ಅಂತ್ಯಕ್ಕೆ ನೀಡಿದ್ದ ಸಮಯ ಪೂರ್ಣಗೊಂಡಿತ್ತು.
In future any movie to be made on the subject of military or defence needs consultation or approval from ministry ae
ರಕ್ಷಣಾ ಸಚಿವಾಲಯದ  ಪತ್ರ


ಆ ಬಳಿಕವೂ ಓಟಿಟಿಯಲ್ಲೇ ನೇರವಾಗಿ ರಿಲೀಸ್ ಆದ ಕೆಲ ವೆಬ್​ ಸರಣಿಗಳು ಹಾಗೂ ಸಿನಿಮಾಗಳಲ್ಲಿ ಸೇನೆಯ ತೇಜೋವಧೆ ಮಾಡುವಂತಹ ಸನ್ನಿವೇಶಗಳಿರುವುದು ಕಂಡುಬಂದಿದೆ. ಈ ಕಾರಣದಿಂದಾಗಿ ರಕ್ಷಣಾ ಸಚಿವಾಲಯವೇ ಅಖಾಡಕ್ಕೆ ಇಳಿದಿದೆ. ಜೊತೆಗೆ ಡಿಜಿಟಲ್ ವೇದಿಕೆಗಳಿಗೆ ಮೂಗುದಾರ ಹಾಕಲು ಮುಂದಾಗಿದೆ.
Published by: Anitha E
First published: July 31, 2020, 11:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading